Author: admin

ಸರಗೂರು: ನಾನು ಶಾಸಕನಾಗಿ ಆಯ್ಕೆಯಾದಗಿನಿಂದಲೂ ಕಾಡಂಚಿನ ಭಾಗದ ಗ್ರಾಮಗಳಿಗೆ ಹೆಚ್ಚಿನ ಅನುದಾನಗಳನ್ನು ತಂದು ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ ವ್ಯಕ್ತಪಡಿಸಿದರು. ತಾಲ್ಲೂಕಿನ ಎಂ.ಸಿ.ತೊಳಲು ಗ್ರಾಮದ ಸಮೀಪ ನುಗು ಏತನೀರಾವರಿ ಯೋಜನೆ ಮೂಲಕ ಗುಡಕಟ್ಟೆ, ಬಾಲನಕಟ್ಟೆ, ಹತ್ತಿಕೆರೆಗಳಿಗೆ ನೀರು ತುಂಬಿಸುವ ಮತ್ತು ಗಿರಿಜನ ಹಾಗೂ ಸ್ಥಳೀಯರ ಜಮೀನುಗಳಿಗೆ ನೀರು ಒದಗಿಸುವ ಸುಮಾರು 9 ಕೋಟಿ ರೂ ಅನುಧಾನದ ಏತನೀರಾವರಿ ಯೋಜನೆ ಮತ್ತು ಮೊಳೆಯೂರು ಗ್ರಾಮದ ಸುಮಾರು 65 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನನ್ನ ಅವಧಿಯಲ್ಲಿ ಮೂರು ವರ್ಷ ಮುಗಿದ ಬಳಿಕ ಮೊದಲ ಬಾರಿ ಶಾಶ್ವತವಾಗಿ ಉಳಿಯುವ ಒಂದು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿರುವುದು ಸಂತಸದ ವಿಚಾರವಾಗಿದೆ.  ಸಮಿಶ್ರ ಸರ್ಕಾರವಿದ್ದಾಗ ಸತತ ಪ್ರಯತ್ನ ಮಾಡಿ ಅನುದಾನಗಳನ್ನು ಹೆಚ್ಚಾಗಿ ತರುತ್ತಿದ್ದೆ ಆದರೆ ಈಗ ಬಿಜೆಪಿ ಸರ್ಕಾರ ಇರುವ ಕಾರಣ ಅನುದಾನದ…

Read More

ಡಿಸೆಂಬರ್  24 ರಂದು ತೆರೆ ಕಂಡ  ಗುರುಶಂಕರ್’ರವರ ನಿರ್ದೇಶನದ ಹಾಗೂ ಡಾಲಿ ಧನಂಜಯ್ ಅಭಿನಯದ ” ಬಡವ ರಾಸ್ಕಲ್ ” ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತುಂಬಾ ದಿನಗಳ ನಂತರ ಕನ್ನಡ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಕಾರಣ “ಬಡವ ರಾಸ್ಕಲ್ ”  ಕೌಟುಂಬಿಕ ಹಾಗೂ ಮನರಂಜನಾ ಕಥಾಹಂದರವುಳ್ಳ ಈ ಚಿತ್ರ ಚಿಕ್ಕವರಿಂದ ಹಿಡಿದು ದೊಡ್ಡ ವಯಸ್ಸಿನ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದೆ. ಈ ಯಶಸ್ಸನ್ನು ಆಚರಿಸಲೆಂದೇ ತುಮಕೂರು ಜಿಲ್ಲೆಯ ತುರುವೇಕೆರೆಯ ಪೂರ್ಣಿಮ ಚಿತ್ರಮಂದಿರಕ್ಕೆ ಆಗಮಿಸಿದ್ದ ” ಬಡವ ರಾಸ್ಕಲ್ ” ಚಿತ್ರದ ನಾಯಕ ನಟ ಡಾಲಿ ಧನಂಜಯ್’ ರವರನ್ನು ಅವರ ಅಭಿಮಾನಿಗಳು ಹೃತ್ಪೂರ್ವಕಾಗಿ ಬರಮಾಡಿಕೊಂಡರು. ನೋಡ ನೋಡುತ್ತಲೇ ಪೂರ್ಣಿಮ ಚಿತ್ರಮಂದಿರದ ಮುಂದಿರುವ ರಸ್ತೆ ತುಂಬೆಲ್ಲ ಜನ ಸಾಗರದಂತೆ ತುಂಬಿಕೊಂಡರು. ಅಭಿಮಾನಿಗಳನ್ನು ಮಾತನಾಡಿಸಿದ ಡಾಲಿ ನೃತ್ಯವನ್ನೂ ಸಹ ಮಾಡಿ ಚಿತ್ರದ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ…

Read More

ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಹರಪ್ಪನ ಪಾಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ  ಪೌಷ್ಠಿಕ  ಆಹಾರ ಮೇಳ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದಾ ಜಮ್ ಜಮ್ ರವರು ಮಾತನಾಡಿ,  ಮಕ್ಕಳಲ್ಲಿ ಎಷ್ಟು ಪೋಷಕಾಂಶ ಅವಶ್ಯಕತೆ ಇರುತ್ತದೋ ಅಷ್ಟು ಅವರು ಚಟುವಟಿಕೆಯಿಂದ ಇರುತ್ತಾರೆ. ಬೆಳವಣಿಗೆ ಹೊಂದುತ್ತಿರುವ ಮಕ್ಕಳಿಗೆ ಪೋಷಕಾಂಶದ ಅಗತ್ಯ ಹೆಚ್ಚು ಇರುತ್ತದೆ. ಸಂಸ್ಕರಿಸಿದ ಆಹಾರ ಹೊರತು ಪಡಿಸಿ, ಪೌಷ್ಟಿಕತೆಯ ಹೆಚ್ಚಿನ ಆಹಾರವನ್ನು ಸೇವಿಸಲು ನಿಮ್ಮ ಮಗುವಿಗೆ ಉತ್ತೇಜನ ನೀಡುವುದರ ಮೂಲಕ ಅತ್ಯುತ್ತಮ ಆರೋಗ್ಯವನ್ನು ಉತ್ತೇಜಿಸುವ ಒಂದು ಸರಳ ಮಾರ್ಗವಾಗಿದೆ ಎಂದರು. ನಿಮ್ಮ ಮಗುವಿಗೆ ಪೌಷ್ಠಿಕಾಂಶ-ಸಮೃದ್ಧ, ಸಮತೋಲಿತ ಆಹಾರವನ್ನು ಒದಗಿಸುವುದು ಅವರ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ಪ್ರತಿಯಾಗಿ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ  ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷ ರಮೇಶ್, ಸದಸ್ಯ ಗಂಗಾಧರ್, ಆರೋಗ್ಯ ಇಲಾಖೆ ಸಿಬ್ಬಂದಿ ವರಲಕ್ಷ್ಮೀ, ಮೇಲ್ವಿಚಾರಕ ನಾಗರಾಜು, ಜ್ಞಾನ ವಿಕಾಸ…

Read More

ಕೊರಟಗೆರೆ: ಪಟ್ಟಣದ 3 ನೇ ವಾರ್ಡ್‌ನ ಮನೆಯೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಚಾಮರಾಜು ಬಿನ್ ಲೇ ನಾಗಪ್ಪ, ಕುಂಭಾರ ಬೀದಿ ಕೊರಟಗೆರೆ ಟೌನ್ ಇವರ ಮನೆಯಲ್ಲಿ 8.280 ಲೀ. ಅಕ್ರಮವಾಗಿ ಮಾರಾಟ ಮಾಡಲು ಶೇಖರಣೆ ಮಾಡಿದ ಮಧ್ಯವನ್ನು ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕಿ ಶ್ರೀಲತಾರವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕಿ ವೈಷ್ಣವಿ ಕುಲಕರ್ಣಿ ತಂಡ ಸ್ಥಳದಲ್ಲಿಯೇ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕಿ ವೈಷ್ಣವಿ ಕುಲಕರ್ಣಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನಮೊರಖಂಡಿ, ಮಂಜುಳ, ಮಧು ಇದ್ದರು. ವರದಿ: ಸಿದ್ದರಾಜು ಟಿ.ಹೆಚ್.ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವು ಸಹ ಅಯ್ಯಪ್ಪ ಸ್ವಾಮಿಯ ಭಕ್ತರಿಂದ ಮಂಡಳ ಪೂಜೆ ಪ್ರಯುಕ್ತವಾಗಿ ಅಯ್ಯಪ್ಪಸ್ವಾಮಿ  ಭಕ್ತಾಧಿಗಳಿಂದ ವಿಶೇಷ ಪೂಜೆ ನಡೆಯಿತು. ಮಂಡಳ ಪೂಜೆಯಲ್ಲಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರು ಡಿ.ಸುಧಾಕರ್  ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ದೇವಸ್ಥಾನದ ಗುರು ಸ್ವಾಮಿಗಳಾದ ಶ್ರೀ ಸದಾನಂದ ಸ್ವಾಮೀಜಿ ಯವರು ಮಾಜಿ ಶಾಸಕರು ಹಾಗೂ ಸಚಿವರಾಗಿದ್ದ  ಡಿ.ಸುಧಾಕರ್ ರವರಿಗೆ ಶಾಲು ಹೊದಿಸಿ, ಸನ್ಮಾನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್ , ಜ್ಞಾನೇಶ್ ಕುಮಾರ್ , ಶಿವಕುಮಾರ್, ಮಧು, ಲಕ್ಷ್ಮಿಕಾಂತ್ , ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಅಧ್ಯಕ್ಷೆ ಶಂಶದ್ ಉನ್ನಿಸಾ, ಸಾದತ್ ಉಲ್ಲಾ  ಹಾಗೂ ತರಕಾರಿ ಚಂದ್ರಶೇಖರ್ ಬಾಬು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,  ಮುಖಂಡರುಗಳು  ಹಾಗೂ ಅಯ್ಯಪ್ಪಸ್ವಾಮಿಯ  ಭಕ್ತರು ಉಪಸ್ಥಿತರಿದ್ದರು. ವರದಿ: ಮುರುಳೀಧರನ್ ಆರ್., ಹಿರಿಯೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ತುಮಕೂರು: ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟ ಗ್ರಾಮದ “ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ” ನೂತನ ಅಧ್ಯಕ್ಷರಾಗಿ ಆಯ್ಕೆಯಾದ “ನಟರಾಜು.ಎಸ್” ರವರನ್ನು  ಅಭಿನಂದಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತವನ್ನು ನಟರಾಜು.ಎಸ್  ಅವರು ತಮ್ಮ ಅಧ್ಯಕ್ಷತೆಯಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುವಂತಾಗಲಿ ಎಂದು ಇದೇ ವೇಳೆ ಹಾರೈಸಲಾಯಿತು. ಈ ವೇಳೆ ಮತಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹೇಶ್, ಎಸ್.ಡಿ.ಎಂ.ಸಿ(ಜಿ.ಎಚ್.ಪಿ.ಎಸ್)ಯ ಅಧ್ಯಕ್ಷರಾದ ಚಂದ್ರಶೇಖರಯ್ಯ.ಎಸ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರಂಜರ್ ಮೂರ್ತಿ,  ಜೈ ಕರ್ನಾಟಕ ವಾಹನ ಮಾಲೀಕರು ಮತ್ತು ಚಾಲಕರ ಸಂಘ (ರಿ) ರಕ್ತ ದಾನ ಜೀವ ದಾನ ಸಂಘದ ತುಮಕೂರು ಘಟಕದ ಜಿಲ್ಲಾಧ್ಯಕ್ಷರಾದ ಸುಬ್ಬು ಎನ್ ಮೂರ್ತಿ ಹಾಗೂ ಊರಿನ ಪ್ರಮುಖರು ಮತ್ತು ಆಜುಬಾಜಿನ ಗ್ರಾಮಸ್ಥರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ಜಿಲ್ಲೆ ತುರುವೇಕೆರೆ ತಾಲೂಕಿನ ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ  ನಡೆಯಿತು. ಊರಿನ  ಯುವಕರು ಹಾಗೂ ಹಿರಿಯರೆಲ್ಲ ಸೇರಿ ಪಂಚಾಯ್ತಿ ವೃತ್ತದಲ್ಲಿ ಪುನೀತ್ ರವರ  ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಅರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು  ಪೆನ್ಸಿಲ್ ವಿತರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ  ನೂರಾರು ಜನರು ಅನ್ನದಾನವನ್ನ ಸ್ವೀಕರಿಸಿದರು. ಎಸ್.ಎಲ್.ವಿ.ಪ್ರಾವಿಷನ್ ಸ್ಟೋರ್ ಮಾಲಿಕರಾದ ಎಂ.ಜಿ.ಕುಮಾರ್, ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಬೀರ್ ಹುಸೇನ್, ಉಪಾಧ್ಯಕ್ಷೆಯಾದ ಶಶಿಕಲಾ ಹನುಮೇಗೌಡ, ಸದಸ್ಯರಾದ ಸುರೇಶ್, ಕೆರೆವಳಗೆರೆ ಗ್ರಾಮದ ಸಂದೇಶ್, ಹೊಣಕೆರೆ ಗ್ರಾಮದ ಗೀತಾ ಅರುಣ್ , ಸೊರವನಹಳ್ಳಿ ಸುಶೀಲಮ್ಮ, ಶಿಕ್ಷಕರಾದ ಬಸವರಾಜು ಟಿ.ಬಿ.ಕ್ರಾಸ್ ಶಿವರಾಜು, ರಂಜಿತ್, ರವಿ, ವಿನಯ್ (ಗಾಟಿ) ಮಂಜುನಾಥ್ , ಹೆಚ್.ನಾರಾಯಣಪ್ಪ, ದಾಸಿಹಳ್ಳಿ ಪಾಳ್ಯದ ಯಲ್ಲೇಗೌಡ, ಸದಸ್ಯರಾದ ಜಿತೇಂದ್ರ, ನಾಗೇಶ್,  ಟಿ.ಬಿ.ಕ್ರಾಸ್…

Read More

ತುಮಕೂರು: ಜಿಲ್ಲೆಯ  ತುರುವೇಕೆರೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯ ಯೋಜನಾಧಿಕಾರಿಗಳಾದ ಅನಿತಾ ಶೆಟ್ಟಿ ಅವರ ನೇತೃತ್ವದಲ್ಲಿ ಕಿಟ್ ವಿತರಣೆ ಮಾಡಲಾಯಿತು. ಮಾಯಸಂದ್ರ ವಲಯದ ಜಡೆಯ ಗ್ರಾಮ ಹಾಗೂ ಬೈತರಹೊಸಹಳ್ಳಿ ಗ್ರಾಮದಲ್ಲಿ ತಮ್ಮ ಸಂಸ್ಥೆಯ ಯೋಜನೆಯಾದ ವಾತ್ಸಲ್ಯ ಯೋಜನೆಯಲ್ಲಿ ಅರ್ಹ ಅಶಕ್ತ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್  ವಿತರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಮಾಯಸಂದ್ರ ವಲಯದ ಮೇಲ್ವಿಚಾರಕಿಯರಾದ ಅಕ್ಷತಾ ಹಾಗೂ ವಲಯದ  ಸೇವಾಪ್ರತಿನಿಧಿಗಳು  ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು. ವರದಿ: ಸುರೇಶ್ ಬಾಬು. ಎಂ. ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಲಂಡನ್: ಪಂಜಾಬ್‍ ನ ಅಮೃತ್‍ ಸರದ ಜಲಿಯನ್ ವಾಲಾಭಾಗ್‍ ನಲ್ಲಿ 1919ರಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತಿಕಾರವಾಗಿ ಬ್ರಿಟನ್ ರಾಣಿ ಎಲಿಜಬೆತ್ (95) ಅವರನ್ನು ಹತ್ಯೆ ಮಾಡಲು ಯತ್ನಿಸಿದ ಯುವಕನನ್ನು ಸ್ಕಾಟ್‍ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಈ ಯುವಕ ತಾನು ಭಾರತೀಯ. ಸಿಖ್ ಮತ್ತು ತನ್ನ ಹೆಸರು ಜಸ್ವಂತ್‍ ಸಿಂಗ್ ಬೋಯಲ್ ಎಂದು ಹೇಳಿಕೊಂಡಿದ್ದಾನೆ. ಆರೋಪಿ ಮುಖವಾಡ ಧರಿಸಿದ್ದು, ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ರಾಣಿಯನ್ನು ಹತ್ಯೆ ಮಾಡಲು ಮುಂದಾಗಿದ್ದಾಗಿ ವಿಡಿಯೋ ಮೂಲಕ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈತನ ಮಾನಸಿಕ ಪರಿಸ್ಥಿತಿ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮನೋವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಕ್ರಿಸ್‍ ಮಸ್ ಆಚರಿಸಲು ರಾಣಿ ಎಲಿಜಬೆತ್ ವಿಂಡ್ಸರ್ ಕ್ಯಾಸೆಲ್‍ ಗೆ ಆಗಮಿಸಿದ್ದರು. ಆಗ ಸ್ಥಳಕ್ಕೆ ಹೋಗಿದ್ದ ಆರೋಪಿ ತನ್ನ ಕೈಯಲ್ಲಿ ಬಿಲ್ಲಿನಂತಹ ಆಯುಧವನ್ನು ಹಿಡಿದುಕೊಂಡಿದ್ದ. ರಾಣಿಯು ನಿವಾಸಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿ ಅವನ ಬಳಿ ಇದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ನಾನು ಎಲಿಜಬೆತ್…

Read More

ತಿಪಟೂರು: ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಾಲಯದಲ್ಲಿ ಕಾಲಭೈರವ ಜನ್ಮಾಷ್ಟಮಿಯ ಪ್ರಯುಕ್ತ ಕಾಲಭೈರವ ಮೂರ್ತಿಯ ಉತ್ಸವವನ್ನು ಮಠದ ಕಾರ್ಯದರ್ಶಿ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು. ಬಳಿಕ ಕಾಲಭೈರವಸ್ವಾಮಿ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು, ರುದ್ರಾಭಿಷೇಕ, ಗಂಧದ ಅಭಿಷೇಕ, ದೀಪಾರಾಧನೆಯನ್ನು ಕೈಗೊಂಡರು. ಈ ಸಂದರ್ಭದಲ್ಲಿ ದೇವಾಲಯದ ಗುಡಿಗೌಡರುಗಳಾದ ಹುಚ್ಚೇಗೌಡ, ಕೃಷ್ಣಸ್ವಾಮಿ, ಜಗದೀಶ್, ದೊರೆಸ್ವಾಮಿ, ಲಿಂಗರಾಜು, ಹೆಚ್.ವಿ.ಕುಮಾರಸ್ವಾಮಿ ಸೇರಿದಿಂತೆ ಭಕ್ತಾಧಿಗಳು ಇದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More