ಲಂಡನ್: ಪಂಜಾಬ್ ನ ಅಮೃತ್ ಸರದ ಜಲಿಯನ್ ವಾಲಾಭಾಗ್ ನಲ್ಲಿ 1919ರಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತಿಕಾರವಾಗಿ ಬ್ರಿಟನ್ ರಾಣಿ ಎಲಿಜಬೆತ್ (95) ಅವರನ್ನು ಹತ್ಯೆ ಮಾಡಲು ಯತ್ನಿಸಿದ ಯುವಕನನ್ನು ಸ್ಕಾಟ್ ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಈ ಯುವಕ ತಾನು ಭಾರತೀಯ. ಸಿಖ್ ಮತ್ತು ತನ್ನ ಹೆಸರು ಜಸ್ವಂತ್ ಸಿಂಗ್ ಬೋಯಲ್ ಎಂದು ಹೇಳಿಕೊಂಡಿದ್ದಾನೆ.
ಆರೋಪಿ ಮುಖವಾಡ ಧರಿಸಿದ್ದು, ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ರಾಣಿಯನ್ನು ಹತ್ಯೆ ಮಾಡಲು ಮುಂದಾಗಿದ್ದಾಗಿ ವಿಡಿಯೋ ಮೂಲಕ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈತನ ಮಾನಸಿಕ ಪರಿಸ್ಥಿತಿ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮನೋವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಕ್ರಿಸ್ ಮಸ್ ಆಚರಿಸಲು ರಾಣಿ ಎಲಿಜಬೆತ್ ವಿಂಡ್ಸರ್ ಕ್ಯಾಸೆಲ್ ಗೆ ಆಗಮಿಸಿದ್ದರು. ಆಗ ಸ್ಥಳಕ್ಕೆ ಹೋಗಿದ್ದ ಆರೋಪಿ ತನ್ನ ಕೈಯಲ್ಲಿ ಬಿಲ್ಲಿನಂತಹ ಆಯುಧವನ್ನು ಹಿಡಿದುಕೊಂಡಿದ್ದ. ರಾಣಿಯು ನಿವಾಸಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿ ಅವನ ಬಳಿ ಇದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
ನಾನು ಎಲಿಜಬೆತ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದೇನೆ. ನನ್ನನ್ನು ಕ್ಷಮಿಸಿ. ಇದು ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ. ಈ ವಿಡಿಯೋ ನಿಮಗೆ ಬಂದಿದ್ದರೆ ನನ್ನ ಸಾವು ಖಚಿತ. ಸಾಧ್ಯವಾದರೆ ಶೇರ್ ಮಾಡಿ. ಈ ಸುದ್ದಿಯನ್ನು ಪ್ರಸಾರ ಕೂಡ ಮಾಡಿ ಎಂದು ಅವನು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy