ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಹರಪ್ಪನ ಪಾಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪೌಷ್ಠಿಕ ಆಹಾರ ಮೇಳ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಹೀದಾ ಜಮ್ ಜಮ್ ರವರು ಮಾತನಾಡಿ, ಮಕ್ಕಳಲ್ಲಿ ಎಷ್ಟು ಪೋಷಕಾಂಶ ಅವಶ್ಯಕತೆ ಇರುತ್ತದೋ ಅಷ್ಟು ಅವರು ಚಟುವಟಿಕೆಯಿಂದ ಇರುತ್ತಾರೆ. ಬೆಳವಣಿಗೆ ಹೊಂದುತ್ತಿರುವ ಮಕ್ಕಳಿಗೆ ಪೋಷಕಾಂಶದ ಅಗತ್ಯ ಹೆಚ್ಚು ಇರುತ್ತದೆ. ಸಂಸ್ಕರಿಸಿದ ಆಹಾರ ಹೊರತು ಪಡಿಸಿ, ಪೌಷ್ಟಿಕತೆಯ ಹೆಚ್ಚಿನ ಆಹಾರವನ್ನು ಸೇವಿಸಲು ನಿಮ್ಮ ಮಗುವಿಗೆ ಉತ್ತೇಜನ ನೀಡುವುದರ ಮೂಲಕ ಅತ್ಯುತ್ತಮ ಆರೋಗ್ಯವನ್ನು ಉತ್ತೇಜಿಸುವ ಒಂದು ಸರಳ ಮಾರ್ಗವಾಗಿದೆ ಎಂದರು.
ನಿಮ್ಮ ಮಗುವಿಗೆ ಪೌಷ್ಠಿಕಾಂಶ-ಸಮೃದ್ಧ, ಸಮತೋಲಿತ ಆಹಾರವನ್ನು ಒದಗಿಸುವುದು ಅವರ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ಪ್ರತಿಯಾಗಿ ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಹುಲಿಕುಂಟೆ ಗ್ರಾ.ಪಂ. ಅಧ್ಯಕ್ಷ ರಮೇಶ್, ಸದಸ್ಯ ಗಂಗಾಧರ್, ಆರೋಗ್ಯ ಇಲಾಖೆ ಸಿಬ್ಬಂದಿ ವರಲಕ್ಷ್ಮೀ, ಮೇಲ್ವಿಚಾರಕ ನಾಗರಾಜು, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶೃತಿ, ಪ್ರತಿನಿಧಿ ಅನುಸೂಯಮ್ಮ ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy