ತುರುವೇಕೆರೆ: ಆಟೋದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದವರನ್ನು ಪಟ್ಟಣದ ಪ್ರವಾಸಿ ಮಂದಿರ ಬಳಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಸೇರಿ ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಚಕ್ರದ ಆಟೋದಲ್ಲಿ ಮೂಲಕ ಒರಿಸ್ಸಾ ಮೂಲದವರು ಎನ್ನಲಾಗಿದ್ದ ಮೂವರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಆಧರಿಸಿ ಗಸ್ತುನಲ್ಲಿದ್ದ ಅಬಕಾರಿ ಅಧಿಕಾರಿಗಳು ಆಟೋವನ್ನು ತಡೆದು ಪರಿಶೀಲಿಸಿದ್ದು, ಈ ವೇಳೆ ಚೀಲಗಳಲ್ಲಿ ಗಾಂಜಾ ಇರುವುದು ಕಂಡು ಬಂದಿದೆ.
ಅಬಕಾರಿ ಅಧಿಕಾರಿಗಳು ಕೂಡಲೇ ಆಟೋ ಹಾಗೂ ಸಾಗಣೆ ಮಾಡುತ್ತಿದ್ದ ಸುಮಾರು 6 ಕೆ.ಜಿ. 200 ಗ್ರಾಮ್ ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಒರಿಸ್ಸಾ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರಿನಿಂದ ಆಟೋದಲ್ಲಿ ಪಟ್ಟಣದಲ್ಲಿ ವಿತರಿಸಲು ಗಾಂಜಾ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ತಿಳಿದಿದ್ದು, ಪಟ್ಟಣದಲ್ಲಿಯೂ ಗಾಂಜಾ ಸರಬರಾಜು ನಡೆಯುತ್ತಿತ್ತು ಎಂಬ ಅನುಮಾನ ಹುಟ್ಟಿದೆ. ಅಬಕಾರಿ ಇಲಾಖೆಯವರ ಹೆಚ್ಚಿನ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.
ದಾಳಿಯಲ್ಲಿ ತಿಪಟೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್, ಅಬಕಾರಿ ಅಧಿಕಾರಿಗಳಾದ ದಿಲಿಪ್ ಕುಮಾರ್, ಗಂಗರಾಜು, ಮಂಜುನಾಥ್ ಸೇರಿ ಸಿಬ್ಬಂದಿಗಳು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q