ಸರಗೂರು: ನಾನು ಶಾಸಕನಾಗಿ ಆಯ್ಕೆಯಾದಗಿನಿಂದಲೂ ಕಾಡಂಚಿನ ಭಾಗದ ಗ್ರಾಮಗಳಿಗೆ ಹೆಚ್ಚಿನ ಅನುದಾನಗಳನ್ನು ತಂದು ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಎಂ.ಸಿ.ತೊಳಲು ಗ್ರಾಮದ ಸಮೀಪ ನುಗು ಏತನೀರಾವರಿ ಯೋಜನೆ ಮೂಲಕ ಗುಡಕಟ್ಟೆ, ಬಾಲನಕಟ್ಟೆ, ಹತ್ತಿಕೆರೆಗಳಿಗೆ ನೀರು ತುಂಬಿಸುವ ಮತ್ತು ಗಿರಿಜನ ಹಾಗೂ ಸ್ಥಳೀಯರ ಜಮೀನುಗಳಿಗೆ ನೀರು ಒದಗಿಸುವ ಸುಮಾರು 9 ಕೋಟಿ ರೂ ಅನುಧಾನದ ಏತನೀರಾವರಿ ಯೋಜನೆ ಮತ್ತು ಮೊಳೆಯೂರು ಗ್ರಾಮದ ಸುಮಾರು 65 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನನ್ನ ಅವಧಿಯಲ್ಲಿ ಮೂರು ವರ್ಷ ಮುಗಿದ ಬಳಿಕ ಮೊದಲ ಬಾರಿ ಶಾಶ್ವತವಾಗಿ ಉಳಿಯುವ ಒಂದು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿರುವುದು ಸಂತಸದ ವಿಚಾರವಾಗಿದೆ. ಸಮಿಶ್ರ ಸರ್ಕಾರವಿದ್ದಾಗ ಸತತ ಪ್ರಯತ್ನ ಮಾಡಿ ಅನುದಾನಗಳನ್ನು ಹೆಚ್ಚಾಗಿ ತರುತ್ತಿದ್ದೆ ಆದರೆ ಈಗ ಬಿಜೆಪಿ ಸರ್ಕಾರ ಇರುವ ಕಾರಣ ಅನುದಾನದ ಕೊರತೆ ಹೆಚ್ಚಾಗಿದೆ. 200 ಕೋಟಿ ಅನುದಾನವನ್ನು ತಂದು ಹೆಚ್ಚಿನ ಅಭಿವೃದ್ಧಿ ಮಾಡಬೇಕಾಗಿತ್ತು ಆದರೆ ಈಗಿನ ಸರ್ಕಾರದಲ್ಲಿ 1 ಕೋಟಿ ತರುವುದು ಸಹ ಕಷ್ಟವಾಗಿದೆ ಎಂದು ಅವರು ಹೇಳಿದರು.
ಕ್ಷೇತ್ರಕ್ಕೆ ಸಾಕಷ್ಟು ಮನೆಗಳು ಬೇಕು ಎಂದು ಸಹ ಮನವಿ ಮಾಡಿದರು ಮನೆಗಳು ಕಡಿಮೆ ಸಂಖ್ಯೆಯಲ್ಲಿ ಬರುತ್ತಿವೆ ಇದರಿಂದ ಮನೆಗಳ ಹಂಚಿಕೆ ಕಡಿಮೆಯಾಗುತ್ತಿದೆ. ಅಲ್ಲದೇ, ನಮ್ಮ ಭಾಗದಲ್ಲಿ ಪ್ರಮುಖ 3 ಜಲಾಶಯಗಳಿದ್ದು, 24-25ಟಿಎಂಸಿ ನೀರು ನಮ್ಮಲ್ಲಿದೇ ಆದರೆ ನಮ್ಮ ಕ್ಷೇತ್ರ ಬಳಕೆಗೆ ಕೇವಲ 2-3 ಟಿಎಂಸಿ ಬಳಕೆಯಾಗುತಿದೆ ಉಳಿಕೆ ನೀರು ಮೈಸೂರು ಬೆಂಗಳೂರು ಸೇರಿದಂತೆ ಬೇರೆ ಭಾಗಕ್ಕೆ ಹೋಗುತಿದೆ. ಆದ್ದರಿಂದ ಹೆಚ್ಚಿನ ಏತನೀರಾವರಿ ಯೋಜನೆಗಳು ಜಾರಿಯಾದರೆ ಹೆಚ್ಚಿನ ನೀರನ್ನು ನಮ್ಮ ಭಾಗಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಯಶವಂತಪುರ ಗ್ರಾಮದ ವರೆಗೆ ಆಗಿರುವ ಏತನೀರಾವರಿ ಯೋಜನೆಯನ್ನು ಮುಂದುವರೆಸಿ ಹಾದನೂರು ಗ್ರಾಮಕ್ಕೂ ನೀಡಿ ಆ ಭಾಗದ ರೈತರಿಗೆ ಅನುಕೂಲ ಮಾಡಬೇಕು ಎಂದು ಹಾದನೂರು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಸ್ಥಳದಲ್ಲಿ ಎಂ.ಸಿ.ತೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಕಾರ್ಯದರ್ಶಿ ಚಲುವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನರಸೀಪುರ ರವಿ, ಟಿಪಿಎಂಸಿ ಅಧ್ಯಕ್ಷ ಅಣ್ಣಯ್ಯ ಸ್ವಾಮಿ, ತಾಲ್ಲೂಕು ಕಾರ್ಮಿಕ ಸಂಘದ ಅಧ್ಯಕ್ಷ ಕುಮಾರ್, ಕುರುಬ ಸಮಾಜದ ಅಧ್ಯಕ್ಷ ಆನಂದ್, ಮುಖಂಡರಾದ ದೇವದಾಸ್, ರೂಪಾಬಾಯಿ ಮಲ್ಲೇಶ್ ನಾಯಕ, ಗುಣಪಾಲ್, ಶಿವಪ್ಪ, ದೇವರಾಜು, ಪುಟ್ಟಸ್ವಾಮಿ, ಹೇಮಾಜಿನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿಕ್ಕಕ್ಯಾತ, ಪ್ರಕಾಶ್, ಕುಮಾರ್, ಬೆಟ್ಟಸ್ವಾಮಿ, ಅಜಿತ್ ಕುಮಾರ್, ರತ್ನಮ್ಮ ರಾಜೇಶ್, ಶಿವರಾಜ್ ಅರಸ್, ಭಾಗ್ಯ ಕೆಂಪಸಿದ್ದ, ಪಿಡಿಒಗಳಾದ ಶಿಲ್ಪ, ಅಂಜದ್ ಪಾಷ, ಇಂಜಿನಿಯರ್ ಗಳಾದ ಸಿ.ಎಸ್.ಯೋಗೇಶ್,ಸೋಮಣ್ಣ, ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜು ಮುಂತಾದವರು ಹಾಜರಿದ್ದರು.
ವರದಿ: ಚಂದ್ರಹಾದನೂರು