Subscribe to Updates
Get the latest creative news from FooBar about art, design and business.
- ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆ ಇತ್ಯರ್ಥ ಪ್ರಯತ್ನ: ರೈಲು ಪ್ರಯಾಣಿಕರ ವೇದಿಕೆ ಮಹಾಸಭೆ
- ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್ ನೇಮಕ: ಗಣ್ಯರಿಂದ ಅಭಿನಂದನೆ
- ಖೇಣಿ ‘ಚಿನ್ನದ ಕರಡಿಗೆ’ ಹೇಳಿಕೆ ಸುಳ್ಳು: ಸಿದ್ಧಗಂಗಾ ಮಠ ಸ್ಪಷ್ಟನೆ
- ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್
- ರೇಣುಕಾಸ್ವಾಮಿ ಕೊಲೆ ಕೇಸ್: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!
- ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
- ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನ ಬ್ಯಾಟರಿ ಕಳವು!
- ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
Author: admin
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು 136ನೇ ಕಾಂಗ್ರೆಸ್ ಸ್ಥಾಪನಾ ದಿನಾಚರಣೆಯನ್ನು ನಡೆಸಲಾಯಿತು. ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕೆಪಿಸಿಸಿ ಸದಸ್ಯರಾದ ಅಮೃತ ಸ್ವಾಮಿ, ನಗರಸಭೆ ಅಧ್ಯಕ್ಷೆ ಶಂಶದ್ ಉನ್ನಿಸಾ, ಶಿವಕುಮಾರ್, ಚನ್ನಯ್ಯ, ತಿಪ್ಪೇಸ್ವಾಮಿ, ನವೀನ, ರಾಜೇಶ್, ಚಿಲ್ಲಹಳ್ಳಿ ಶರಣಪ್ಪ, ದಾದಾಪೀರ್, ಸೈಫುಲ್ಲಾ, ಲಕ್ಷ್ಮಿಕಾಂತ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೇಡತ್ತೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಣದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಒಂಬುಡ್ಸ್ ಮೇನ್(ಭ್ರಷ್ಟಾಚಾರ ಪ್ರಕರಣಗಳ ಮೇಲ್ವಿಚಾರಕ) ಕಾಟಾಚಾರಕ್ಕೆ ಸ್ಥಳ ತನಿಖೆ ನಡೆಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲಾ ಪಂಚಾಯಿತಿ ವತಿಯಿಂದ ವೆಂಕಟೇಶ್ ರಾವ್ ನೇತೃತ್ವದ ತಂಡ ತನಿಖೆಗಾಗಿ ಆಗಮಿಸಿದ್ದು, ಗ್ರಾಮ ಪಂಚಾಯಿತಿ ಸಂತೋಷ್ ಸಿಂಗ್ PDO, ರವರ ಮೇಲೆ ಒಂಬುಡ್ಸ್ಮನ್ ತಂಡದವರು ನಾವುಗಳು ನರೇಗ ಪರಿಶೀಲನೆಗೆ ಬಂದಾಗ ಸಕ್ರಮವಾಗಿ ಮೂಲ ದಾಖಲಾತಿಗಳು ಫೈಲ್ ಒದಗಿಸಬೇಕೆಂದು ಆದೇಶಿಸಿದರು. ತುಮಕೂರು ಜಿಲ್ಲಾ ಪಂಚಾಯಿತಿ ನರೇಗ ಯೋಜನೆಗೆ ಬೇಡತ್ತೂರು ಗ್ರಾಮ ಪಂಚಾಯತಿಯಲ್ಲಿ ವಾಸವಾಗಿರುವ ರಾಮಚಂದ್ರಪ್ಪ S/o ಸಣ್ಣಪ್ಪ ರವರು 2021ರ ಅಕ್ಟೋಬರ್ ನಲ್ಲಿ ಇವರು ಬೇಡತ್ತೂರು ಗ್ರಾಮ ಪಂಚಾಯತಿಯಲ್ಲಿ ಅಕ್ರಮ ಕಾಮಗಾರಿಗಳು ಎಂದು ಆರೋಪದ ದೂರು ಮನವಿ ಸಲ್ಲಿಸಿದರು. ಈ ಮನವಿ ಆಧಾರದ ಮೇಲೆ ಡಿಸೆಂಬರ್ 27 ರಂದು ಸ್ಥಳ ಪರಿಶೀಲನೆ ಮಾಡಿದ ನಂತರ ಇವರ ಮನವಿಯ ಮೇಲೆ ಒತ್ತಡ ಬಂದಿರುವ ಕಾರಣವೂ,ಅಥವಾ ಇವರ ವೈಯಕ್ತಿಕ ಕಾರಣವೂ…
ತಿಪಟೂರು: ಕಾಂಗ್ರೆಸ್ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನವು ಸಂಸತ್ ನಲ್ಲಿ ದಾಖಲಾಗಿದೆ ಭಾರತ ರತ್ನ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಂವಿಧಾನವನ್ನು ರಚನೆ ಮಾಡುವ ಯೋಗ್ಯತೆ ಇಲ್ಲ ಎಂದು ಹೀಯಾಳಿಸಿದ ಕಾಂಗ್ರೆಸ್ ಪಕ್ಷವು, ದಲಿತರ ಮತ್ತು ಹಿಂದುಳಿದ ಪರವಾಗಿ ಮಾತನಾಡುವ ನೈತಿಕತೆ ಕಳೆದುಕೊಂಡಿದೆ ಎಂದು ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಅಗ್ನಿಶಾಮಕ ಠಾಣೆ ಎದುರು ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ರವರು ಸಂಸತ್ತನ್ನು ಪ್ರವೇಶಿಸಬಾರದೆಂದು ಕಾಂಗ್ರೆಸ್ ಪಕ್ಷವು ಹಲವಾರು ತಂತ್ರಗಳನ್ನು ಹೆಣೆದು ಸಂಸತ್ತಿನಿಂದ ದೂರವಿಟ್ಟರು. ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕನಿಷ್ಠ ಪಕ್ಷ ಭೂಮಿಯನ್ನು ನೀಡದೆ ಜೀವನದ ಪ್ರತಿಯೊಂದು ಹಾದಿಯಲ್ಲಿ ಕಾಂಗ್ರೆಸ್ ಅವಮಾನವನ್ನು ಮಾಡಿಕೊಂಡು ಬಂತು ಎಂದು ಅವರು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರಾರ್ಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ ಸಿ ನಾಗೇಶ್, ಸಮಾಜ ಕಲ್ಯಾಣ ಇಲಾಖೆ…
ಬೆಂಗಳೂರು: ಕೊವಿಡ್ 19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ಸಾರ್ವಜನಿಕರ, ವ್ಯಾಪಾರಿಗಳ ತೀವ್ರ ವಿರೋಧಗಳ ನಡುವೆಯೇ ಸರ್ಕಾರ ನೈಟ್ ಕರ್ಫ್ಯೂ ನಡೆಸಲು ಮುಂದಾಗಿದೆ.’ ಇಂದಿನಿಂದ ರಾಜ್ಯಾದ್ಯಂತ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಡಿಸಿಪಿಗಳ ಜೊತೆಗೆ ಬೆಂಗಳೂರು ಪೊಲೀಸರು ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ನೈಟ್ ಕರ್ಪ್ಯೂ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಹೊಸ ವರ್ಷದ ಸಂದರ್ಭದಲ್ಲಿಯೇ ನೈಟ್ ಕರ್ಫ್ಯೂ ಜಾರಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ವರ್ಷದಲ್ಲಿ ಸಾಕಷ್ಟು ಲಾಭಗಳಿಸುತ್ತಿದ್ದ, ಹೊಟೇಲ್, ಪಬ್ ಮೊದಲಾದ ಉದ್ಯಮಗಳಿಗೆ ತೀವ್ರ ಏಟು ಬಿದ್ದಿದೆ. ಜೊತೆಗೆ ಬೀದಿ ವ್ಯಾಪಾರಿಗಳಿಂದ ಹಿಡಿದು, ಪ್ರತಿಯೊಬ್ಬರಿಗೂ ನೈಟ್ ಕರ್ಫ್ಯೂನಿಂದ ತೊಂದರೆಯಾಗಲಿದೆ. ಆದರೆ ಕೊವಿಡ್ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಎಲ್ಲ ಚರ್ಚೆಗಳ ನಡುವೆಯೇ…
ಸಿರಾ: ಇಲ್ಲಿನ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 79.81 ರಷ್ಟು ಮತದಾನ ನಡೆದಿದೆ. ನಗರದ 31 ವಾರ್ಡ್ ಗಳಲ್ಲಿ 30 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 45,357 ಜನರ ಪೈಕಿ 36,198 ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. 14 ವಾರ್ಡ್ ಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನ ನಡೆದಿದ್ದರೆ, 11 ವಾರ್ಡ್ ಗಳಲ್ಲಿ ಶೇ. 75ರಿಂದ 80ರಷ್ಟು ಮತದಾನ ನಡೆದಿದೆ. 5 ವಾರ್ಡ್ ಗಳಲ್ಲಿ ಶೇಕಡ 70ರಿಂದ 75ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 7ನೇ ವಾರ್ಡಿನಲ್ಲಿ ಅತಿ ಹೆಚ್ಚು 88.44ರಷ್ಟು ಮತದಾನ ನಡೆದಿದ್ದರೆ, 11ನೇ ವಾರ್ಡಿನಲ್ಲಿ ಅತಿ ಕಡಿಮೆ ಶೇಕಡ 70.33ರಷ್ಟು ಮತದಾನ ನಡೆದಿದೆ. ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ, ಯಾವುದೇ ನಗರಾದ್ಯಂತ ಶಾಂತಿಯುತವಾದ ಮತದಾನ ನಡೆದಿದೆ. ವಾರ್ಡ್ ನಂಬರ್ 23ರಲ್ಲಿ ಮೃತ ಮತದಾರರ ಪರವಾಗಿ ಮತ ಚಲಾಯಿಸಲು ಬಂದಿದ್ದ ವ್ಯಕ್ತಿಯನ್ನು ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ವಾರ್ಡ್ ನಂಬರ್ 3ರ ಮತಗಟ್ಟೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ತಮ್ಮ…
ತಿಪಟೂರು: ಎಲ್ಲರಿಗೂ ಶಿಕ್ಷಣ ಸಿಕ್ಕರೆ ಸಮಾಜ ಸರಿಹೋಗುತ್ತದೆ ಎಂಬ ಕಲ್ಪನೆ ಇದೆ. ಆದರೆ ಮೌಲ್ಯಯುತ ಗುಣಾತ್ಮಕ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲಾ ಶಿಕ್ಷಣದಲ್ಲಿ ಗುಣಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ ಎನ್ ಇ ಪಿ- 2020 ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಪದ್ಧತಿಯಲ್ಲಿ ಕರ್ನಾಟಕ ರಾಜ್ಯ ತಂದಷ್ಟು ಬದಲಾವಣೆಗಳನ್ನು ಭಾರತದಲ್ಲಿ ಯಾವ ರಾಜ್ಯವು ತಂದಿಲ್ಲ. ಅದಕ್ಕೆ ಶಿಕ್ಷಕರಾದ ನೀವುಗಳೇ ಕಾರಣ. ಯಾವುದೇ ಸರ್ಕಾರಿ ವ್ಯವಸ್ಥೆಯಲ್ಲಿ ಶಿಕ್ಷಣ ಇಲಾಖೆ ಎಷ್ಟು ಪಾರದರ್ಶಕ ಇಲಾಖೆ ಇನ್ಯಾವುದೂ ಇಲ್ಲ ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಮಾತನಾಡಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರ ವರ್ಗಾವಣೆ ನಿರ್ಧಾರದಿಂದ 16,000 ಶಿಕ್ಷಕರು ತಮ್ಮ ಬೇಡಿಕೆಯ ಊರುಗಳಿಗೆ ವರ್ಗಾವಣೆಯಾಗಿದ್ದಾರೆ ಎಂದರು. ಸಮಾರಂಭದಲ್ಲಿ ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ…
ಹಾಸನ: ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ಕಾಂಗ್ರೆಸ್ ನಡೆಸಲಿರುವ ಪಾದಯಾತ್ರೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಪರೋಕ್ಷ ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇವರೇ(ಡಿ.ಕೆ.ಶಿವಕುಮಾರ್) ನೀರಾವರಿ ಸಚಿವರಾಗಿದ್ದರು. ಆಗ ಯಾಕೆ ಮೇಕೆದಾಟು ಯೋಜನೆ ಮಾಡಿಸಲಿಲ್ಲ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಈ ಯೋಜನೆ ಜಾರಿ ಮಾಡಬಹುದು ಎಂದು ಆಗ ಏಕೆ ಇವರಿಗೆ ಅನ್ನಿಸಲಿಲ್ಲ ಎಂದು ಅವರು ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು. ರಾಜ್ಯದಲ್ಲಿ 19 ತಿಂಗಳು ಕುಮಾರಸ್ವಾಮಿ ಅಧಿಕಾರ ಮಾಡಿದ್ದರು. ಆಗ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡಿಗೆ ಜೋಡೆತ್ತು ಎಂದು ಹೇಳುತ್ತಿದ್ದರು. ಈಗ ಇದರಲ್ಲಿ ಒಂದು ಎತ್ತು ಮೇಕೆದಾಟು ಕಡೆಗೆ ಹೋಗಿದೆ. ನಾವು ಏನು ಮಾಡೋಣ ಸ್ವಾಮಿ ಎಂದು ರೇವಣ್ಣ ಪ್ರಶ್ನಿಸಿದರು. ಕುಮಾರಸ್ವಾಮಿ ಎಲ್ಲರನ್ನು ನಂಬುತ್ತಾರೆ, ಪಾಪ ಹೃದಯವಂತರು ಅವರು. ನಮ್ಮ ಹತ್ತಿರ ಬಂದರೆ ಯಾವುದು ಒದೆಯುತ್ತವೆ ಗೊತ್ತಾಗುತ್ತದೆ. ಕುಮಾರಣ್ಣ ಏನ್ಮಾಡ್ತಾರೆ ಒದೆಯುವುದಕ್ಕೂ ಮೇವು ಹಾಕ್ತಾರೆ ಎಂದು ಡಿ.ಕೆ.ಶಿವಕುಮಾರ್ ಗೆ ಚುಚ್ಚಿದರು. ಕೃಷ್ಣಾ ನದಿ ಕೊಳ್ಳದ…
ಬೆಂಗಳೂರು: ಕೋವಿಡ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ವತಿಯಿಂದ ನ್ಯಾಪನಲ್ ಕಾಲೇಜು ಮೈದಾನದಲ್ಲಿ ಕೋವಿಡ್ ನಿಂದದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ಕೊವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬ ಸದಸ್ಯರಿಗೆ 1 ಲಕ್ಷ ರೂ. ಪರಿಹಾರ ನೀಡುವ ಯೋಜನೆಗೆ 300 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ರೂ.50,000 ಗಳ ಪರಿಹಾರವನ್ನು ಡಿಬಿಟಿ ಮಾಡಲಾಗಿದೆ. ಪರಿಹಾರ ನೀಡುವ ಮೂಲಕ ಸರ್ಕಾರ ಈ ಕುಟುಂಬಗಳ ಜೊತೆ ಇದೆ ಎಂಬ ಭರವಸೆಯನ್ನು ನೀಡಲಾಗಿದೆ ಎಂದು ತಿಳಿಸಿದರು. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆರೋಗ್ಯವಾಗಿದ್ದಂತಹ ಕುಟುಂಬದ ಸದಸ್ಯರು ಹಠಾತ್ತನೇ ಮೃತಪಟ್ಟಲ್ಲಿ ಬಹಳ ದು:ಖ ಕಾಡುತ್ತದೆ. ಈ ಸಾಂಕ್ರಾಮಿಕ ಬಹಳ ಕುಟುಂಬಗಳನ್ನು ಅನಾಥರನ್ನಾಗಿ ಮಾಡಿದೆ. ಆಧುನಿಕ ವೈದ್ಯಕೀಯ ಚಿಕಿತ್ಸೆಯ ಕಾಲಘಟ್ಟದಲ್ಲಿ ಕರೋನಾ ಸಾಂಕ್ರಾಮಿಕ…
ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ – ಎನ್ ಇಟಿ ಪರೀಕ್ಷೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಹೇಳಿದರು. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಎಂದು ಹೇಳಿದ್ದಾರೆ. ನಿನ್ನೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಯುಜಿಸಿ – ಎನ್ ಇಟಿ ಕನ್ನಡ ಐಚ್ಛಿಕ ಭಾಷಾ ಪಶ್ನೆ ಪತ್ರಿಕೆಯ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲೇ ಇದ್ದವು. ಅದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿ ಪರೀಕ್ಷೆಯನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಇದು ಕನ್ನಡದ ಮೇಲಿನ ತಾತ್ಸಾರ ಹಾಗೂ ಹಿಂದಿ ಹೇರಿಕೆಯ ವಿಪರೀತ.…
ಬೆಂಗಳೂರು: ಪರಸ್ಪರ ನಿಂದನೆ ಮಾಡಿಕೊಂಡು ಕನ್ನಡ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ. ಎಂಇಎಸ್ ನಿಷೇಧಿಸಬೇಕೆಂದು ಒತ್ತಾಯಿಸಿ ಕರೆ ಕೊಟ್ಟಿರುವ ಡಿ.31ರ ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಮೂಲಕ ಕನ್ನಡಿಗ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಎಂದು ವಾಟಾಳ್ ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ. ಎಂಇಎಸ್ ನಿಷೇಧಿಸಬೇಕೆಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಆಗ್ರಹಿಸಿ ಕನ್ನಡ ಒಕ್ಕೂಟದ ಮುಖಂಡರಾದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ.ಗೋವಿಂದ್, ಕನ್ನಡ ಸೇನೆ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶಿವರಾಮೇಗೌಡ, ಪ್ರವೀಣ್‍ಶೆಟ್ಟಿ ನೇತೃತ್ವದಲ್ಲಿ ಮಲ್ಲೇಶ್ವರಂ ವೃತ್ತದಲ್ಲಿ ಉರುಳುಸೇವೆ ಹಾಗೂ ಗೊರಗುಂಟೆಪಾಳ್ಯ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಎಂಇಎಸ್ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಕನ್ನಡ ಧ್ವಜ ಸುಟ್ಟು ಅಪಮಾನ ಮಾಡಿದ್ದಾರೆ. ಬಸವಣ್ಣನ ಪ್ರತಿಮೆಗೆ ಮಸಿ ಹಚ್ಚಿದ್ದಾರೆ. ಸರ್ಕಾರದ ವಾಹನಗಳಿಗೆ ಬೆಂಕಿ ಹಚ್ಚಿ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ. ಈ ಎಲ್ಲವನ್ನೂ ನಾವು ಸಹಿಸಿಕೊಂಡಿರಬೇಕೆ? ಎಂದು…