Subscribe to Updates
Get the latest creative news from FooBar about art, design and business.
- ದಲಿತ ಗೃಹಮಂತ್ರಿ, ಡಿಸಿಎಂ, ಉಸ್ತುವಾರಿ ಸಚಿವರಿದ್ದರೂ ಮಧುಗಿರಿಯಲ್ಲಿ ದಲಿತರ ಕಗ್ಗೊಲೆ!: ಸಿಂಹಾದ್ರಿ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ
- ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆ ಇತ್ಯರ್ಥ ಪ್ರಯತ್ನ: ರೈಲು ಪ್ರಯಾಣಿಕರ ವೇದಿಕೆ ಮಹಾಸಭೆ
- ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್ ನೇಮಕ: ಗಣ್ಯರಿಂದ ಅಭಿನಂದನೆ
- ಖೇಣಿ ‘ಚಿನ್ನದ ಕರಡಿಗೆ’ ಹೇಳಿಕೆ ಸುಳ್ಳು: ಸಿದ್ಧಗಂಗಾ ಮಠ ಸ್ಪಷ್ಟನೆ
- ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್
- ರೇಣುಕಾಸ್ವಾಮಿ ಕೊಲೆ ಕೇಸ್: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!
- ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
- ಪೊಲೀಸ್ ಠಾಣೆ ಮುಂದೆ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನ ಬ್ಯಾಟರಿ ಕಳವು!
Author: admin
ಸಿರಾ: ತಾಲೂಕಿನ ಹುಲಿಕುಂಟೆ ಗೇಟ್ ನಿಂದ ವಾಜರಹಳ್ಳಿ ಗೇಟ್ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ ಹೀಗಾಗಿ ಜನ ಸಾಮಾನ್ಯರು ಈ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡುವಂತಾಗಿದೆ. ರಸ್ತೆ ಕಾಮಗಾರಿ ಆರಂಭಗೊಂಡ ವೇಳೆ ಇಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದರು. ಅತೀ ಶೀಘ್ರವೇ ಸುಸಜ್ಜಿತ ರಸ್ತೆಯಾಗುತ್ತದೆ ಎನ್ನುವ ಭರವಸೆಯಿಂದಿದ್ದರು. ಆದರೆ, ಇದೀಗ ರಸ್ತೆ ಜಲ್ಲಿ ಕಲ್ಲುಗಳ ರಾಶಿಯಾಗಿದ್ದು, ಈ ರಸ್ತೆ ನರಕಕ್ಕೆ ದಾರಿ ಎಂಬಂತಿದೆ ಎನ್ನುವ ಆಕ್ರೋಶ್ ಮಾತುಗಳು ಕೇಳಿ ಬಂದಿದೆ. ಈ ರಸ್ತೆಯಲ್ಲಿ ಮಹಿಳೆಯರು ಮಕ್ಕಳು, ಹಿರಿಯ ನಾಗರಿಕರು ಎನ್ನದೇ ದಿನ ನಿತ್ಯ ಸಾರ್ವಜನಿಕರು ಪ್ರಯಾಣಿಸುತ್ತಿದ್ದಾರೆ. ಇವರ ಪಾಡು ಹೇಳತೀರದು. ಇದೀಗ ಈ ರಸ್ತೆ ಅವ್ಯವಸ್ಥೆಯಿಂದ ಬೇಸತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎಷ್ಟು ವರ್ಷ ಕಾಯಬೇಕು ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಸ್ಥಳೀಯ ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡ ಅವರು ಈ ಬಗ್ಗೆ ಗಮನ ಹರಿಸಬೇಕು. ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ…
ತುಮಕೂರು: ಮೇಕೆದಾಟು ಪಾದಯಾತ್ರೆಯ ಲೋಗೋವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಡುಗಡೆಗೊಳಿಸಿದರು. ಇದೇ ವೇಳೆ ಪಾದಯಾತ್ರೆಯಲ್ಲಿ ಭಾಗವಹಿಸುವವರು ಕೂಡಲೇ MekedatuNammaHakku.org ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಲು ಇದೇ ವೇಳೆ ಮನವಿ ಮಾಡಿದರು. ಈ ಐತಿಹಾಸಿಕ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಜೊತೆಗೆ ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಟೀ ಶರ್ಟ್ ಹಾಗೂ ಟೋಪಿಯನ್ನು ನೀಡಲಾಗುವುದು. ನೀವೂ ಸಹ ರಾಜ್ಯದ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟದ ಭಾಗವಾಗಿ, ನೀರಿನ ಹಕ್ಕಿಗಾಗಿ ಮೊಳಗುತ್ತಿರುವ ಈ ಧ್ವನಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೇಳುವಷ್ಟು ಗಟ್ಟಿಯಾಗಿರಲಿ, ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯನ್ನು ಶೀಘ್ರವೇ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಕಾಂಗ್ರೆಸ್ ನಾಯಕರು ಕರೆ ನೀಡಿದರು. ಮೇಕೆದಾಟು ಯೋಜನೆಯ ಪ್ರಯೋಜನ ಏನು? ಬೆಂಗಳೂರು…
ತುರುವೇಕೆರೆ: ಕಲ್ಪತರು ನಾಡು ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳು ಎಲ್ಲೆಂದರಲ್ಲಿ ಗೋಚರಿಸುತ್ತಿದ್ದು, ತಾಲ್ಲೂಕಿನ ಶಾಸಕರಾದ ಮಸಾಲ ಜಯರಾಮ್ ರವರ ಭಾವಚಿತ್ರಗಳಿರುವ ಫ್ಲೆಕ್ಸ್ ಗಳು ತಾಲ್ಲೂಕಿನ ತುಂಬೆಲ್ಲಾ ರಾರಾಜಿಸುತ್ತಿವೆ. ತುರುವೇಕೆರೆ ಪಟ್ಟಣದ ತುಂಬೆಲ್ಲಾ ಎಗ್ಗಿಲ್ಲದೇ ಫ್ಲಕ್ಸ್ ಗಳು ಎದ್ದು ಕಾಣಿಸುತ್ತಿವೆ. ಈ ಹಿಂದೆಯೇ ಪಟ್ಟಣ ಪಂಚಾಯ್ತಿಯು ಫ್ಲಕ್ಸ್ ಬಳಕೆಗೆ ನಿಷೇಧ ಹೇರಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದೇ ಫ್ಲಕ್ಸ್ ಗಳನ್ನು ಪಟ್ಟಣದ ತುಂಬೆಲ್ಲಾ ಹಾಕಿಸಿದ್ದಾರೆ. ಪಟ್ಟಣ ಪಂಚಾಯ್ತಿಯು ಇವುಗಳನ್ನು ಕಂಡೂ ಕಾಣದಂತಿದೆ ಎನ್ನುವ ಮಾತುಗಳು ಆಕ್ರೋಶದ ಮಾತುಗಳು ಕೇಳಿ ಬಂದಿವೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದ್ದರೆ, ಇತ್ತ ತುರುವೇಕರೆಯಲ್ಲಿ ಮಾತ್ರ ಪ್ಲಾಸ್ಟಿಕ್ ಫ್ಲೆಕ್ಸ್ ಗಳು, ಬಣ್ಣದ ಪ್ಲಾಸ್ಟಿಕ್ ಬಂಟಿಕ್ಸ್ ಗಳು ರಾರಾಜಿತ್ತಿವೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ. ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಹೆಚ್.ಡಿ.ಕೋಟೆ/ ಸರಗೂರು: ಮೈಸೂರು ಜಿಲ್ಲೆಯ ಚರ್ಮ ರೋಗ ತಜ್ಞರ ಸಂಘದ ವತಿಯಿಂದ ಚರ್ಮ ರೋಗ ತಪಾಸಣೆ ಶಿಬಿರವನ್ನು ಭಾನುವಾರ ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಹಾಡಿಯಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದಯಾನಂದ್, ಡಾ.ನಂಜುಂಡ ಸ್ವಾಮಿ, ಡಾ.ಬಂಗಾರು, ಡ.ಸುರೇಂದ್ರನಾಥ, ಡಾ.ಸತೀಶ್, ಡಾ.ನವೀನ್ ಹಾಗೂ ಕೆ.ಆರ್.ಆಸ್ಪತ್ರೆಯ ಇತರ ವೈದ್ಯರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿ ಕುಮಾರ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚರ್ಮ ರೋಗ ತಪಾಸಣೆ ನಡೆಸಿ ಎಲ್ಲರಿಗೂ ಔಷಧಿ, ಪೆನ್ನು, Ointments, Shampoo, ಪ್ರೋಟೀನ್ ಪೌಡರ್ ವಿತರಿಸಲಾಯಿತು. ಇದರ ಜೊತೆಗೆ ಹಿರಿಯರಿಗೆ ರಕ್ತದೊತ್ತಡ(BP) ಮತ್ತು ರಕ್ತ ಪರೀಕ್ಷೆ ಮಾಡಲಾಯಿತು. ಮಾರನಹಾಡಿ ಮತ್ತು ದಮ್ಮನಕಟ್ಟೆ ಹಾಡಿಯಲ್ಲಿ ಸುಮಾರು 250ರಿಂದ 300 ಜನರಿಗೆ ತಪಾಸಣೆ ನಡೆಸಿ ಸ್ಥಳದಲ್ಲೇ ಔಷಧಿಗಳನ್ನು ವಿತರಿಸಲಾಯಿತು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪರಿಶೆಯ ಕಳ್ಳೇಪುರಿಯಂತೆ ನಕಲಿ ಗೌರವ ಡಾಕ್ಟರೇಟ್ ಪದವಿಗಳನ್ನು ಮಾರುವ ಫೇಕ್ ಯೂನಿವರ್ಸಿಟಿಗಳು ಹುಟ್ಟಿಕೊಂಡಿವೆ. ಕರ್ನಾಟಕಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿಯೂ ಗೌರವ ಡಾಕ್ಟರೇಟ್ ಪದವಿಯನ್ನು ಮಾರುವ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ. ಗೌಡಾ ಪದವಿ ನೀಡುವ ಈ ಫೇಕ್ ಯೂನಿವರ್ಸಿಟಿಗಳಲ್ಲಿ ಕುಲಪತಿ, ಡೀನ್, ಪ್ರೊಫೆಸರ್, ರೀಸರ್ಚ್ ಸ್ಕಾಲರ್ಸ್, ಸ್ಟೂಡೆಂಟ್ಸ್ ಯಾವುದೂ ಇರುವುದಿಲ್ಲ. ಕುಲಪತಿ -ಶಿಕ್ಷಕ ವರ್ಗ- ವಿದ್ಯಾರ್ಥಿಗಳು – ಸಂಶೋಧಕರುಗಳೇ ಇಲ್ಲದಿರುವ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಸಂಸ್ಥೆ, ವರ್ಚುಯಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಹೆಸರಿನ ಫೇಕ್ ವಿಶ್ವವಿದ್ಯಾನಿಲಯಗಳು ಫೇಕ್ ‘ಗೌಡಾ’ ನೀಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ದಂಧೆ ಇಲ್ಲಿ ನಡೆಯತ್ತಿದೆ. ಸರ್ಕಾರದಿಂದ ಅಂಗೀಕಾರ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗಾಗಿ ನೋಂದಾಯಿಸಿ ಸಂಶೋಧನೆ ನಡೆಸದಿರುವ ಅಥವಾ ಯಾವುದೇ ನಿರ್ದಿಷ್ಟ ಕ್ಷೇತ್ರದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡದಿರುವ ಹಾದಿಬೀದಿಯ ಜನರೆಲ್ಲರಿಗೂ ರಮಾರುಮಿಯಾಗಿ ಡಾಕ್ಟರೇಟ್ ಪದವಿಯನ್ನು ಕೊಡುವ ಇಂತಹ ಫೇಕ್ ವಿವಿಗಳಲ್ಲಿ ಕಕಾಕಿಕೀ ತಿಳಿಯದಿರುವ ಅನಕ್ಷರಸ್ಥರು ಕೂಡಾ ಗೌಡಾ ಖರೀದಿಸುತ್ತಿದ್ದಾರೆ. ತುಮಕೂರು…
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 28ರಿಂದ 10 ದಿನಗಳವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊಸ ವರ್ಷ ಆಚರಿಸುವಂತಿಲ್ಲ. ಸಭೆ ಸಮಾರಂಭಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಹಗಲಿನಲ್ಲೂ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ ಎಂದು ತಿಳಿಸಿದರು. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ 50:50 ನಿಯಮ ಜಾರಿಗೊಳಿಸಿದ ಕರ್ನಾಟಕ ಸರ್ಕಾರ, ಸಿನಿಮಾ ಥಿಯೇಟರ್ಗಳಿಗೆ ಸದ್ಯ ಈ ನಿಮಯ ಅನ್ವಯವಾಗುವುದಿಲ್ಲ ಎಂದು ಸುಧಾಕರ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರದಲ್ಲಿ ಜಿಲ್ಲೆಯ 240 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಹಾಗೂ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 6 ಸಾವಿರ ಜನರಿಗೆ ಹಕ್ಕು ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಎಂ.ಬಿ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೀತಾ ಜಲಾಶಯಕ್ಕೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಗಂಗೆ ಪೂಜೆ ಮಾಡಿ ಬಾಗಿನ ಸಮರ್ಪಣೆ ಮಾಡಿದರು. ಸುಮಾರು ವರ್ಷಗಳ ನಂತರ ವರುಣನ ಕೃಪೆಯಿಂದ ತುಂಬಿದ ಜಲಾಶಯಕ್ಕೆ ತೀತಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ದೇವರುಗಳನ್ನು ಉತ್ಸವ ಮಾಡುವುದರ ಮೂಲಕ ಮತ್ತು ಜಲಾಶಯದ ಕೊಡಿ ಹತ್ತಿರ ಗದ್ದಿಗೆ ಮಾಡಿ ಪೂಜೆ ಮಾಡಿ ಡಾ.ಜಿ.ಪರಮೇಶ್ವರ್ ಬಾಗಿನ ಅರ್ಪಿಸಿದರು. ಈ ವೇಳೆ ಸಹಸ್ರಾರು ರೈತಬಾಂಧವರು, ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು. ವರದಿ: ಸಿದ್ದರಾಜು ಟಿ. ಹೆಚ್.ಕೊರಟಗೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ: ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿಎಂ ಬಾಲಸುಬ್ರಮಣ್ಯಂ ಅವರು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಪಟ್ಟಣ ಮಾಡಲು ಪ್ರತಿಯೊಬ್ಬರೂ ಸಹಕರಿಸಬೇಕು. ಪ್ಲಾಸ್ಟಿಕ್ ಕವರ್ ಪ್ಲಾಸ್ಟಿಕ್ ಲೋಟಗಳಲ್ಲಿ ಬಿಸಿ ಪದಾರ್ಥಗಳನ್ನು ಹಾಕುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್ ನಹಿಮ್ ಉನ್ನಿಸ್ಸಾ ಮಾತನಾಡಿ, ಎಲ್ಲಾ ಕಚೇರಿ ಮತ್ತು ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮಾಡದಂತೆ ಆದೇಶಿಸಬೇಕು ಎಂದು ಹೇಳಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಸುರಕ್ಷತೆ ಸಂರಕ್ಷಣೆಯ ಪರವಾಗಿ ಪರವಾನಗಿಯನ್ನು ತಾಲೂಕು ಆರೋಗ್ಯ ಅಧಿಕಾರಿ ಅವರಿಂದ ಅಧಿಕೃತವಾಗಿ ಪಡೆದು ಸಂಬಂಧಪಟ್ಟ ಬಿಲ್ಲುಗಳನ್ನು ಇಟ್ಟುಕೊಳ್ಳುವುದಕ್ಕೆ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವರ್ತಕರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಆಹಾರ ಶಿರಸ್ತೆದಾರರಾದ ಪ್ರೇಮ ಆಹಾರ ನಿರೀಕ್ಷಕ ಕೃಷ್ಣೇಗೌಡ ಸಂಪನ್ಮೂಲ ವ್ಯಕ್ತಿ ಪ್ರಾಧ್ಯಾಪಕ ಗಂಗಾಧರ್ ಉಪಾಧ್ಯಕ್ಷ ಜಗನ್ನಾಥ್…
ತಿಪಟೂರು: ಆರ್ಥಿಕವಾಗಿ ಸಬಲರಾಗಿದ್ದರೆ ಮಾತ್ರವೇ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಡಾ.ಶ್ರೀಧರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಗರದ ಶಿಕ್ಷಕರ ಭವನದಲ್ಲಿ ಶ್ರೀ ಆದಿಜಾಂಬವ ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರಿ ಸಂಘ ಹಮ್ಮಿಕೊಂಡಿದ್ದ 7 ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಸಿ ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಮೂಲ ಆಶಯದಂತೆ ಸಹಕಾರಿ ಕ್ಷೇತ್ರದಲ್ಲಿ “ಎಲ್ಲರಿಗಾಗಿ ಒಬ್ಬರು, ಒಬ್ಬರಿಗಾಗಿ ಎಲ್ಲರೂ” ಎಂಬ ಸಹಕಾರಿ ಮಂತ್ರದಂತೆ ನಾವು ನಡೆಯಬೇಕು. ನಿತ್ಯ ದುಡಿದು ಬದುಕುವ ವರ್ಗಕ್ಕೆ ನಮ್ಮದೆ ಆದಂತಹ ಸಹಕಾರಿ ಬ್ಯಾಂಕ್ ಇದ್ದಾಗ ನಮಗೆ ಸಹಕಾರಿಯಾಗುತ್ತದೆ ಎಂದರು. ಈ ದೇಶಕ್ಕೆ ಒಂದು ಸಂವಿಧಾನವಿಲ್ಲದೆ ಇದ್ದಾಗ ಆಶಾಕಿರಣವಾಗಿ ಬಂದವರು ಡಾ.ಬಿ.ಆರ್. ಅಂಬೇಡ್ಕರ್, ಅವರು ತಳ ಸಮುದಾಯಗಳ ಅಭಿವೃದ್ದಿಗಾಗಿ ಅಂದೇ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸಿದ್ದರು, ಅದನ್ನು ಪ್ರತಿಯೊಬ್ಬರು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು. ಜನರು ಆರ್ಥಿಕವಾಗಿ ಸಬಲರಾಗದಿದ್ದರೆ ಮಾತ್ರ ಸಮಾಜ ಅವರನ್ನ…