ತುಮಕೂರು: ಮೇಕೆದಾಟು ಪಾದಯಾತ್ರೆಯ ಲೋಗೋವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಡುಗಡೆಗೊಳಿಸಿದರು. ಇದೇ ವೇಳೆ ಪಾದಯಾತ್ರೆಯಲ್ಲಿ ಭಾಗವಹಿಸುವವರು ಕೂಡಲೇ MekedatuNammaHakku.org ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಲು ಇದೇ ವೇಳೆ ಮನವಿ ಮಾಡಿದರು.
ಈ ಐತಿಹಾಸಿಕ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಜೊತೆಗೆ ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ನೋಂದಣಿಯಾಗಿ ಭಾಗವಹಿಸುವ ಎಲ್ಲರಿಗೂ ಟೀ ಶರ್ಟ್ ಹಾಗೂ ಟೋಪಿಯನ್ನು ನೀಡಲಾಗುವುದು. ನೀವೂ ಸಹ ರಾಜ್ಯದ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟದ ಭಾಗವಾಗಿ, ನೀರಿನ ಹಕ್ಕಿಗಾಗಿ ಮೊಳಗುತ್ತಿರುವ ಈ ಧ್ವನಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೇಳುವಷ್ಟು ಗಟ್ಟಿಯಾಗಿರಲಿ, ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯನ್ನು ಶೀಘ್ರವೇ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸೋಣ ಎಂದು ಕಾಂಗ್ರೆಸ್ ನಾಯಕರು ಕರೆ ನೀಡಿದರು.
ಮೇಕೆದಾಟು ಯೋಜನೆಯ ಪ್ರಯೋಜನ ಏನು?
- ಬೆಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಮುಂದಿನ 50-100 ವರ್ಷಗಳ ಅವಧಿಗೆ ಕುಡಿಯುವ ನೀರಿನ ಪೂರೈಕೆ.ಯೋಜನೆ ಅನುಷ್ಠಾನದಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ.
- ಬರಗಾಲದ ಸಂದರ್ಭದಲ್ಲೂ ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳಿಗೆ ಕಾಲಕ್ಕೆ ಸರಿಯಾಗಿ ನೀರು ಬಿಡುಗಡೆ ಸಾಧ್ಯವಾಗಲಿದೆ.
- ಕೆಆರ್‌ಎಸ್ , ಕಬಿನಿ, ಹಾರಂಗಿ ಹಾಗೂ ಹೇಮಾವತಿಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವ ಮೂಲಕ ಕಾವೇರಿ ಮಡಿಲಿನ ರೈತರಿಗೆ ಸಹಾಯಕವಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy