ಸಿರಾ: ಇಲ್ಲಿನ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 79.81 ರಷ್ಟು ಮತದಾನ ನಡೆದಿದೆ. ನಗರದ 31 ವಾರ್ಡ್ ಗಳಲ್ಲಿ 30 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 45,357 ಜನರ ಪೈಕಿ 36,198 ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
14 ವಾರ್ಡ್ ಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನ ನಡೆದಿದ್ದರೆ, 11 ವಾರ್ಡ್ ಗಳಲ್ಲಿ ಶೇ. 75ರಿಂದ 80ರಷ್ಟು ಮತದಾನ ನಡೆದಿದೆ. 5 ವಾರ್ಡ್ ಗಳಲ್ಲಿ ಶೇಕಡ 70ರಿಂದ 75ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
7ನೇ ವಾರ್ಡಿನಲ್ಲಿ ಅತಿ ಹೆಚ್ಚು 88.44ರಷ್ಟು ಮತದಾನ ನಡೆದಿದ್ದರೆ, 11ನೇ ವಾರ್ಡಿನಲ್ಲಿ ಅತಿ ಕಡಿಮೆ ಶೇಕಡ 70.33ರಷ್ಟು ಮತದಾನ ನಡೆದಿದೆ.
ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ, ಯಾವುದೇ ನಗರಾದ್ಯಂತ ಶಾಂತಿಯುತವಾದ ಮತದಾನ ನಡೆದಿದೆ. ವಾರ್ಡ್ ನಂಬರ್ 23ರಲ್ಲಿ ಮೃತ ಮತದಾರರ ಪರವಾಗಿ ಮತ ಚಲಾಯಿಸಲು ಬಂದಿದ್ದ ವ್ಯಕ್ತಿಯನ್ನು ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ವಾರ್ಡ್ ನಂಬರ್ 3ರ ಮತಗಟ್ಟೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ತಮ್ಮ ಪತ್ನಿಯೊಡಗೂಡಿ ಮತಚಲಾಯಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy