ಬೇಡತ್ತೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಣದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಒಂಬುಡ್ಸ್ ಮೇನ್(ಭ್ರಷ್ಟಾಚಾರ ಪ್ರಕರಣಗಳ ಮೇಲ್ವಿಚಾರಕ) ಕಾಟಾಚಾರಕ್ಕೆ ಸ್ಥಳ ತನಿಖೆ ನಡೆಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯಿತಿ ವತಿಯಿಂದ ವೆಂಕಟೇಶ್ ರಾವ್ ನೇತೃತ್ವದ ತಂಡ ತನಿಖೆಗಾಗಿ ಆಗಮಿಸಿದ್ದು, ಗ್ರಾಮ ಪಂಚಾಯಿತಿ ಸಂತೋಷ್ ಸಿಂಗ್ PDO, ರವರ ಮೇಲೆ ಒಂಬುಡ್ಸ್ಮನ್ ತಂಡದವರು ನಾವುಗಳು ನರೇಗ ಪರಿಶೀಲನೆಗೆ ಬಂದಾಗ ಸಕ್ರಮವಾಗಿ ಮೂಲ ದಾಖಲಾತಿಗಳು ಫೈಲ್ ಒದಗಿಸಬೇಕೆಂದು ಆದೇಶಿಸಿದರು.
ತುಮಕೂರು ಜಿಲ್ಲಾ ಪಂಚಾಯಿತಿ ನರೇಗ ಯೋಜನೆಗೆ ಬೇಡತ್ತೂರು ಗ್ರಾಮ ಪಂಚಾಯತಿಯಲ್ಲಿ ವಾಸವಾಗಿರುವ ರಾಮಚಂದ್ರಪ್ಪ S/o ಸಣ್ಣಪ್ಪ ರವರು 2021ರ ಅಕ್ಟೋಬರ್ ನಲ್ಲಿ ಇವರು ಬೇಡತ್ತೂರು ಗ್ರಾಮ ಪಂಚಾಯತಿಯಲ್ಲಿ ಅಕ್ರಮ ಕಾಮಗಾರಿಗಳು ಎಂದು ಆರೋಪದ ದೂರು ಮನವಿ ಸಲ್ಲಿಸಿದರು. ಈ ಮನವಿ ಆಧಾರದ ಮೇಲೆ ಡಿಸೆಂಬರ್ 27 ರಂದು ಸ್ಥಳ ಪರಿಶೀಲನೆ ಮಾಡಿದ ನಂತರ ಇವರ ಮನವಿಯ ಮೇಲೆ ಒತ್ತಡ ಬಂದಿರುವ ಕಾರಣವೂ,ಅಥವಾ ಇವರ ವೈಯಕ್ತಿಕ ಕಾರಣವೂ ಗೊತ್ತಿಲ್ಲ,ಆದರೆ,ಇವರ ಮನವಿ ವಾಪಸ್ ಪಡೆದಿರುತ್ತಾರೆ, ಆದರೆ ಗ್ರಾಮಸ್ಥರು ಮಾತ್ರ ಅಧಿಕಾರಿಗಳು ಕಾಟಾಚಾರಕ್ಕೆ ಸ್ಥಳ ಪರಿಶೀಲನೆ ಮಾಡಿದರು ಎಂದು ಆರೋಪ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾ ವೆಂಕಟ ರಂಗಪ್ಪ, ರಂಗಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ಬೇಡತ್ತೂರು ತಿಪ್ಪೇಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy