ಕೊರಟಗೆರೆ: ಸಾರ್ವಜನಿಕರು ಕಚೇರಿಗಳಿಗೆ ಅಲೆಯ ಬಾರದು ಎನ್ನವ ಉದ್ದೇಶದಿಂದ ಸರ್ಕಾರ ಪ್ರಜಾ ಸೇವಾ ಎನ್ನವ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತುಮಕೂರು ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜನೆ ಮಾಡಲಾಗಿದ್ದ ಪ್ರಜಾ ಸೇವಾ ಅಭಿಯಾನದ ಜನಸಭೆಯನ್ನ ಉದ್ದೇಶಿಸಿ ಮಾತನಾಡಿದರು.
ಪ್ರಜಾ ಸೇವಾ ಅಭಿಯಾನ ಎನ್ನವುದು ಗ್ರಾಮೀಣ ಭಾಗದ ಬಡವರ, ಕೂಲಿ ಕಾರ್ಮಿಕರ, ರೈತರು ಸೇರಿದಂತೆ ಅನೇಕ ಸಮಸ್ಯೆಗಳನ್ನ ಹೊತ್ತು ತಾಲೂಕು ಕಚೇರಿಗಳಲ್ಲಿ ಅಲೆಯುವುದನ್ನ ತಪ್ಪಿಸಲು ಈ ಕಾರ್ಯಕ್ರಮವನ್ನ ಹೋಬಳಿ ಮಟ್ಟದಲ್ಲಿ ಪ್ರಜಾ ಸೇವಾ ಅಭಿಯಾನ ಆಯೋಜನೆ ಮಾಡಲಾಗಿದ್ದು, ಪ್ರತಿಯೊಬ್ಬರು ತಮ್ಮ ಸಮಸ್ಯೆಗಳನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವ ಮೂಲಕ ಪರಿಹಾರ ಕಂಡುಕೊಳ್ಳಿ ಎಂದರು.
ಒಟ್ಟು 75 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಗೆ 35, ತಾಪಂ 12, ಸರ್ವೆ ಇಲಾಖೆಗೆ 8, ಪುರಸಭೆಗೆ 4, ಸಿಡಿಪಿಒ 4, ಬಿಸಿಎಂ 3, ಆಹಾರ ಇಲಾಖೆ 2, ಸಮಾಜ ಕಲ್ಯಾಣ ಇಲಾಖೆ 2 ಕೆಎಸ್ ಆರ್ ಟಿಸಿ 2, ಪಿಆರ್ ಐಡಿ 1, ಅರಣ್ಯ ಇಲಾಖೆ 1, ಬೆಸ್ಕಾಂ ಇಲಾಖೆಗೆ 1 ಅರ್ಜಿಯನ್ನ ಸಾರ್ವಜನಿಕರು ತುಮಕೂರು ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ.
ಇದೆ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಮಂಜುನಾಥ್, ಇಒ ಅಪೂರ್ವ, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಪಿಎಸ್ ಐ ತೀರ್ಥೇಶ್, ಅಧಿಕಾರಿಗಳಾದ ಪ್ರಸನ್ನ ಕುಮಾರ್, ಯಮುನಾ, ಗುರುಮೂರ್ತಿ, ಮಧುಸೂದನ್, ಅನಂತರಾಜು, ಗಂಗಾಧರ್, ಬಸವರಾಜು, ಪ್ರತಾಪ್, ಸಲ್ಮಾನ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
