ತುಮಕೂರು: ಜಿಲ್ಲೆ ತುರುವೇಕೆರೆ ತಾಲೂಕಿನ ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಊರಿನ ಯುವಕರು ಹಾಗೂ ಹಿರಿಯರೆಲ್ಲ ಸೇರಿ ಪಂಚಾಯ್ತಿ ವೃತ್ತದಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಅರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ಸಿಲ್ ವಿತರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನೂರಾರು ಜನರು ಅನ್ನದಾನವನ್ನ ಸ್ವೀಕರಿಸಿದರು.
ಎಸ್.ಎಲ್.ವಿ.ಪ್ರಾವಿಷನ್ ಸ್ಟೋರ್ ಮಾಲಿಕರಾದ ಎಂ.ಜಿ.ಕುಮಾರ್, ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಬೀರ್ ಹುಸೇನ್, ಉಪಾಧ್ಯಕ್ಷೆಯಾದ ಶಶಿಕಲಾ ಹನುಮೇಗೌಡ, ಸದಸ್ಯರಾದ ಸುರೇಶ್, ಕೆರೆವಳಗೆರೆ ಗ್ರಾಮದ ಸಂದೇಶ್, ಹೊಣಕೆರೆ ಗ್ರಾಮದ ಗೀತಾ ಅರುಣ್ , ಸೊರವನಹಳ್ಳಿ ಸುಶೀಲಮ್ಮ, ಶಿಕ್ಷಕರಾದ ಬಸವರಾಜು ಟಿ.ಬಿ.ಕ್ರಾಸ್ ಶಿವರಾಜು, ರಂಜಿತ್, ರವಿ, ವಿನಯ್ (ಗಾಟಿ) ಮಂಜುನಾಥ್ , ಹೆಚ್.ನಾರಾಯಣಪ್ಪ, ದಾಸಿಹಳ್ಳಿ ಪಾಳ್ಯದ ಯಲ್ಲೇಗೌಡ, ಸದಸ್ಯರಾದ ಜಿತೇಂದ್ರ, ನಾಗೇಶ್, ಟಿ.ಬಿ.ಕ್ರಾಸ್ ಗ್ರಾಮಸ್ಥರು ಹಾಗೂ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy