ಡಿಸೆಂಬರ್ 24 ರಂದು ತೆರೆ ಕಂಡ ಗುರುಶಂಕರ್’ರವರ ನಿರ್ದೇಶನದ ಹಾಗೂ ಡಾಲಿ ಧನಂಜಯ್ ಅಭಿನಯದ ” ಬಡವ ರಾಸ್ಕಲ್ ” ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ತುಂಬಾ ದಿನಗಳ ನಂತರ ಕನ್ನಡ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಕಾರಣ “ಬಡವ ರಾಸ್ಕಲ್ ” ಕೌಟುಂಬಿಕ ಹಾಗೂ ಮನರಂಜನಾ ಕಥಾಹಂದರವುಳ್ಳ ಈ ಚಿತ್ರ ಚಿಕ್ಕವರಿಂದ ಹಿಡಿದು ದೊಡ್ಡ ವಯಸ್ಸಿನ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದೆ.
ಈ ಯಶಸ್ಸನ್ನು ಆಚರಿಸಲೆಂದೇ ತುಮಕೂರು ಜಿಲ್ಲೆಯ ತುರುವೇಕೆರೆಯ ಪೂರ್ಣಿಮ ಚಿತ್ರಮಂದಿರಕ್ಕೆ ಆಗಮಿಸಿದ್ದ ” ಬಡವ ರಾಸ್ಕಲ್ ” ಚಿತ್ರದ ನಾಯಕ ನಟ ಡಾಲಿ ಧನಂಜಯ್’ ರವರನ್ನು ಅವರ ಅಭಿಮಾನಿಗಳು ಹೃತ್ಪೂರ್ವಕಾಗಿ ಬರಮಾಡಿಕೊಂಡರು.
ನೋಡ ನೋಡುತ್ತಲೇ ಪೂರ್ಣಿಮ ಚಿತ್ರಮಂದಿರದ ಮುಂದಿರುವ ರಸ್ತೆ ತುಂಬೆಲ್ಲ ಜನ ಸಾಗರದಂತೆ ತುಂಬಿಕೊಂಡರು. ಅಭಿಮಾನಿಗಳನ್ನು ಮಾತನಾಡಿಸಿದ ಡಾಲಿ ನೃತ್ಯವನ್ನೂ ಸಹ ಮಾಡಿ ಚಿತ್ರದ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.
ವರದಿ: ವೆಂಕಟೇಶ ಜೆ.ಎಸ್. ( ವಿಕ್ಕಿ ) ಮಾಯಸಂದ್ರ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy