ಮಧುಗಿರಿ: ತಾಲೂಕಿನ ಕಸಬಾ ಕೆರೆಗಳ ಪಾಳ್ಯ ರಸ್ತೆಯಲ್ಲಿರುವ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಐ.ಎಸ್.ಐ. ಮಾರ್ಕ್ ಇಲ್ಲದೆ ಬಿಸ್ಲೇರಿ ನೀರನ್ನು ತಯಾರಿಸುತ್ತಾರೆ ಎಂದು ದೂರಿನ ಆಧಾರದ ಮೇಲೆ ತಹಸಿಲ್ದಾರ್ ಹಾಗೂ ಆಹಾರ ಶಿರಸ್ತೆದರ್ ಮತ್ತು ಅಧಿಕಾರಿಗಳು ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಅರುಂಧತಿ ಕೆ. ಮಾತನಾಡಿ, ಬಿಸ್ಲೇರಿ ಅಂತ ಹೆಸರು ಹಾಕಿಕೊಂಡು ಐ.ಎಸ್.ಐ. ಮಾರ್ಕ್ ಇಲ್ಲದೆ, ನೀರನ್ನು ತಯಾರಿಸುತ್ತಿದ್ದಾರೆ ಎಂದು ದೂರು ಬಂತು, ಅದರ ಆಧಾರದ ಮೇಲೆ ನಾವು ಮತ್ತು ಆಹಾರ ಶಿರಸ್ತೇದಾರ್ ಹಾಗೂ ಅಧಿಕಾರಿಗಳು ಬಂದು ತಪಾಸಣೆ ಮಾಡಿದ್ದೇವೆ ಎಂದರು.
ತಪಾಸಣೆ ವೇಳೆ ನಮಗೆ ಯಾರು ಕಂಡುಬಂದಿಲ್ಲ. ಈ ಜಾಗದ ಮಾಲೀಕರನ್ನು ವಿಚಾರಿಸಿದಾಗ, ನಾವು ಐಎಸ್ ಐ ಮಾರ್ಕ್ ಗೆ ಅಪ್ಲೈ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಮಗೆ ಬಾಟಲಿಗಳು ಸಿಕ್ಕಿವೆ, ಲೇಬಲ್ ಗಳು ಸಿಕ್ಕಿಲ್ಲ, ದೂರಿನ ಆಧಾರದ ಮೇಲೆ ದಾಖಲಾತಿಗಳು ಕೊಡಿ ಎಂದು ನೋಟಿಸ್ ಕೊಟ್ಟಿದ್ದೇವೆ, ದಾಖಲಾತಿಗಳು ತರಿಸಿಕೊಂಡು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy