ಬೆಂಗಳೂರು: ನೆರೆಯ ತೆಲಂಗಾಣ ರಾಜ್ಯವು ಅನುಷ್ಠಾನಗೊಳಿಸಿರುವ ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ ಕಾಳೇಶ್ವರಂ ಯೋಜನೆಯನ್ನು ರಾಜ್ಯದ ಚಾಮರಾಜನಗರ ರೈತರು ಕಂಡು ಹರ್ಷ ವ್ಯಕ್ತಪಡಿಸಿದ್ದು, ಯೋಜನೆಯ ಜಾರಿಯಿಂದ ರೈತರಿಗೆ ಆಗಿರುವ ಅನುಕೂಲಗಳನ್ನು ಪರಾಮರ್ಶಿಸಿದರು.
ಕಾಳೇಶ್ವರಂ ಯೋಜನಾ ಪ್ರದೇಶದ ಪ್ರವಾಸ ಕೈಗೊಂಡಿರುವ ರೈತರು 2014ರಲ್ಲಿ ಚಾಮರಾಜನಗರದಲ್ಲಿ ಮೆಘಾ ಇಂಜಿನಿಯರಿಂಗ್ ಅಂಡ್ ಇನಾಸ್ಟ್ರಕ್ಚರ್ ಸಂಸ್ಥೆಯು ಯಶಸ್ವಿಯಾಗಿ ಜಾರಿ ಮಾಡಿರುವ ಆಲಂಬೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ ನೀರು ಅಭಿವೃದ್ಧಿ ಸಂರಕ್ಷಣಾ ಸಮಿತಿ ಸದಸ್ಯರುಗಳಾಗಿದ್ದು, ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.ಚಾಮರಾಜನಗರದ ಆಲಂಬೂರ್ ಸಮೀಪ ಅನುಷ್ಠಾನಗೊಂಡಿರುವ ಕೆರೆ ತುಂಬಿಸುವ ಯೋಜನೆ ಯಶಸ್ವಿನಿಂದ ಲಾಭ ಪಡೆದುಕೊಂಡಿರುವ ಇಲ್ಲಿನ ರೈತರ ತಂಡವು ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಮತ್ತು ಭೂತಲದಲ್ಲಿ ನಿರ್ಮಾಣಗೊಂಡಿರುವ ಗಾಯಿತ್ರಿ ಪಂಪ್‍ಹೌಸ್ ಸೇರಿದಂತೆ ಯೋಜನೆಯ ಅಳತೆ- ಆಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಯೋಜನೆ ಜಾರಿಯಿಂದ ಗುರುತ್ವಾಕರ್ಷಣ ದಿಕ್ಕಿಗೆ ಹರಿಯುತ್ತಿದ್ದ ಗೋದಾವರಿ ನದಿ ನೀರನ್ನು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಭೂತಲದ ಪಂಪ್‍ಹೌಸ್‍ಗಳಿಗೆ ಹರಿಸಿ 600 ಅಡಿಗಳಷ್ಟು ಎತ್ತರಕ್ಕೆ ಪಂಪ್ ಮಾಡುವ ಮೂಲಕ ವ್ಯರ್ಥವಾಗುತ್ತಿದ್ದ ನೀರಿನ ಸದ್ಬಳಕೆಯನ್ನು ಸಾಧ್ಯವಾಗಿಸಲಾಗಿದೆ.
ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಜಾರಿಯಾಗಿರುವ ಕಾಳೇಶ್ವರಂ ಯೋಜನೆ ಮುಂದಿನ 10 ವರ್ಷಗಳಲ್ಲಿ ತೆಲಂಗಾಣ ರಾಜ್ಯದ ಚಿತ್ರಣವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯನ್ನು ಖುದ್ದು ಕಂಡ ರಾಜ್ಯದ ರೈತರು ಕರ್ನಾಟಕವೂ ಸೇರಿದಂತೆ ದೇಶದ ಇತರೆಡೆಗಳನ್ನೂ ಇಂತಹ ಯೋಜನೆ ಮೂಲಕ ಕೃಷಿಗೆ ಒತ್ತು ನೀಡಬೇಕೆಂದು ಆಗ್ರಹಿಸಿದ್ದಾರೆ.
ಚಾಮರಾಜನಗರದಲ್ಲೂ 2014ರಿಂದ ಆಲಂಬೂರು ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದ್ದು, ಅನುಕೂಲವೂ ಆಗಿದೆ. ಆದರೆ ಇಲ್ಲಿ ಪ್ರತಿ ನಿತ್ಯ 2 ಟಿಎಂಸಿ ನೀರನ್ನು ನದಿಯಿಂದ ಎತ್ತುವುದು ಸಾಮಾನ್ಯವಾದ ಕೆಲಸವಲ್ಲ, ಇಂತಹ ಬೃಹತ್ ಕೆಲಸ ಇಲ್ಲಿ ಆಗಿದೆ. ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕಾಳೇಶ್ವರಂನಂತಹ ಯೋಜನೆಗಳನ್ನು ರೂಪಿಸುವ ಮೂಲಕ ಕೃಷಿಗೆ ಆದ್ಯತೆ ನೀಡಬೇಕು ಎಂಬುದು ರೈತ ಗುರುಮೂರ್ತಿ ಅವರ ಅಭಿಪ್ರಾಯವಾಗಿದೆ. ಕಾಳೇಶ್ವರಂ ಯೋಜನೆಯನ್ನು ರಾಜ್ಯದ ಸಚಿವರೂ ಬಂದು ನೋಡಿ, ನಮ್ಮ ರಾಜ್ಯದಲ್ಲೂ ಇಂತಹ ಯೋಜನೆಗಳನ್ನು ಜಾರಿ ಮಾಡಿದರೆ ರೈತ ಸಮುದಾಯಕ್ಕೆ ಒಳಿತಾಗಲಿದೆ. ದೇಶದ ಆಹಾರ ಸಮಸ್ಯೆಯೂ ನೀಗಲಿದೆ ಎಂದು ರೈತ ಎಂ. ಗುರುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy