nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ

    July 21, 2026

    ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ

    July 21, 2026

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026
    Facebook Twitter Instagram
    ಟ್ರೆಂಡಿಂಗ್
    • ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ
    • ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ
    • ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ
    • ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ: ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು
    • ಸರಗೂರು: ತಾಲೂಕು ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷರಾಗಿ ಪಿ. ಚಿನ್ನಣ್ಣ ಹಳೆಯೂರು ಸರ್ವಾನುಮತದಿಂದ ಆಯ್ಕೆ
    • ವಿಕಲಚೇತನರು ದ್ವಿಚಕ್ರ ವಾಹನ ಪಡೆದರೆ ಚಾಲನಾ ಪರವಾನಗಿ ಕಡ್ಡಾಯ: ಶಾಸಕ ಅನಿಲ್ ಚಿಕ್ಕಮಾದು
    • ಅರ್ಹ ಫಲಾನುಭವಿಗಳಿಗೆ ಸಾಗುವಾಳಿ ಪತ್ರ ತಲುಪಿಸುವುದು ಸರ್ಕಾರದ ಬದ್ಧತೆ: ಶಾಸಕ ಅನಿಲ್ ಚಿಕ್ಕಮಾದು
    • ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ
    ತುರುವೇಕೆರೆ June 30, 2026

    ಹೊಸ ಮೊಬೈಲ್ ಆಪ್ ನಿಂದ ಗೊಂದಲ: ಹಳೇ ರಸಗೊಬ್ಬರ ಮಾರಾಟ ವ್ಯವಸ್ಥೆ ಮುಂದುವರಿಸಲು ಕೃಷಿ ಪರಿಕರ ಮಾರಾಟಗಾರರ ಒತ್ತಾಯ

    By adminJune 30, 2026No Comments1 Min Read
    turuvekere.jpg (1)

    ತುರುವೇಕೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ಜಾರಿಗೆ ತಂದಿರುವ ಎಫ್.ಎಫ್.ಎಸ್ (FFS) ಮೊಬೈಲ್ ಆಪ್ನಿಂದಾಗಿ ರೈತರಿಗೆ ಮತ್ತು ರಸಗೊಬ್ಬರ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ವತಿಯಿಂದ ತಹಶೀಲ್ದಾರ್ ಕುಂಞಿ ಅಹಮದ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಹೆಚ್.ಆರ್.ರಂಗನಾಥ್, “ಹೊಸ ಪಿಒಎಸ್ (POS) ಮಿಷನ್ಗೆ ಅಳವಡಿಸಲಾಗಿರುವ ಎಫ್.ಎಫ್.ಎಸ್ ಮೊಬೈಲ್ ಆಪ್ನಲ್ಲಿನ ನಿಯಮಗಳು ಮತ್ತು ಮಾಹಿತಿ ಎಲ್ಲಾ ರೈತರಿಗೂ ಸಮರ್ಪಕವಾಗಿ ತಿಳಿದಿರುವುದಿಲ್ಲ. ಒಂದು ವೇಳೆ ನಿಯಮಗಳ ಅರಿವಿದ್ದರೂ, ಆಪ್ ಬಳಸಲು ಬೇಕಾದ ಆಂಡ್ರಾಯ್ಡ್ ಮೊಬೈಲ್ ಫೋನ್ಗಳು ಬಹುತೇಕ ಗ್ರಾಮೀಣ ಭಾಗದ ರೈತರಲ್ಲಿ ಇರುವುದಿಲ್ಲ. ಇದರಿಂದಾಗಿ ಪ್ರತಿನಿತ್ಯ ರೈತರು ಹಾಗೂ ಮಾರಾಟಗಾರರ ಮಧ್ಯೆ ಅನಗತ್ಯ ವಾಗ್ವಾದಗಳು ನಡೆಯುತ್ತಿದ್ದು, ರೈತರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದು ಕಷ್ಟಸಾಧ್ಯವಾಗಿದೆ,” ಎಂದು ಅಳಲು ತೋಡಿಕೊಂಡರು.

    “ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ರೈತರು ಗೊಬ್ಬರಕ್ಕಾಗಿ ಮುಗಿಬೀಳುತ್ತಿದ್ದಾರೆ. ಈ ಸಂದರ್ಭದಲ್ಲಿ ಗೊಬ್ಬರದ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸುಸೂತ್ರವಾಗಿ ನಡೆಯಬೇಕಾದರೆ, ಸದ್ಯದ ಎಫ್.ಎಫ್.ಎಸ್ ಆಪ್ ಜೊತೆಗೆ ಹಳೆಯ ರಸಗೊಬ್ಬರ ಪಿಒಎಸ್ ಮಾರಾಟ ವ್ಯವಸ್ಥೆಯನ್ನೂ ಮುಂದುವರಿಸಲು ಸರ್ಕಾರಗಳು ಅನುಮತಿ ನೀಡಬೇಕು,” ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೈಲಾಸ್, ಕಾರ್ಯದರ್ಶಿ ಬಸವರಾಜು, ಖಜಾಂಚಿ ದೇವರಾಜು, ಪ್ರಮುಖ ಸದಸ್ಯರುಗಳಾದ ರಿಯಾಜ್, ದಿನೇಶ್, ಬಸವರಾಜು, ರುದ್ರೇಶ್, ಪೃಥ್ವಿ ಸೇರಿದಂತೆ ತಾಲ್ಲೂಕಿನ ಹಲವಾರು ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಬೆಳೆ ವಿಮೆ ನೋಂದಣಿ: ರೈತರಿಗೆ ಸಲಹೆ

    July 10, 2026

    ಹಸಿರು ಶಾಲು ರೈತರಿಗೆ ನ್ಯಾಯ ಕೊಡಿಸುವ ಅಸ್ತ್ರ: ಇಂದುವಾಳು ಚಂದ್ರಶೇಖರ್

    July 7, 2026

    ತುರುವೇಕೆರೆ: ವಿದ್ಯುತ್ ಖಾಸಗಿಕರಣ ತಿರಸ್ಕರಿಸಲು ಒತ್ತಾಯಿಸಿ ರೈತ ಸಂಘದಿಂದ ಮನವಿ

    June 30, 2026

    Leave A Reply Cancel Reply

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Food

    ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ

    July 21, 2026

    ಟೊಮೆಟೊ ಮತ್ತು ಮೊಟ್ಟೆಯ ಸ್ಕ್ರ್ಯಾಂಬಲ್ (Tomato Scrambled Eggs) ಎನ್ನುವುದು ಚೀನಾದ ಮನೆಗಳಲ್ಲಿ ಅತ್ಯಂತ ಸುಲಭವಾಗಿ ಮತ್ತು ಅಗ್ಗವಾಗಿ ಮಾಡುವ…

    ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ

    July 21, 2026

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026

    ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ: ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು

    July 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.