nammatumakuru

    Subscribe to Updates

    Get the latest creative news from FooBar about art, design and business.

    What's Hot

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026
    Facebook Twitter Instagram
    ಟ್ರೆಂಡಿಂಗ್
    • 7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ
    • e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು
    • ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?
    • ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!
    • ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ
    • ಬಿಜೆಪಿಗೆ ಮತ ಹಾಕಿದರೆ ಐದೂ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಬಂದ್: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
    • ಕಾಲು ಮುರಿದರೂ ನಿಲ್ಲದ ಕಾಯಕ: ತರಗತಿಯಲ್ಲೇ ಹಾಸಿಗೆ ಹಾಕಿ ಪಾಠ ಮಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್!
    • ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ
    ರಾಜ್ಯ ಸುದ್ದಿ November 13, 2026

    ಮೇಕೆದಾಟು ಯೋಜನೆಗೆ ಅನುಮತಿ ನೀಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ

    By Ganesh TumkuruNovember 13, 2026No Comments2 Mins Read
    dk shivakumar

    ಮೈಸೂರು: ಮೇಕೆದಾಟು ಅಣೆಕಟ್ಟು ಯೋಜನೆಗೆ ಅಗತ್ಯವಿರುವ ಶಾಸನಬದ್ಧ ಅನುಮತಿಗಳನ್ನು ಶೀಘ್ರವೇ ನೀಡುವಂತೆ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

    ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘CoSMOS’ (ಕಾಸ್ಮೊಸ್) ತಾರಾಲಯದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟರು.

    ಮೇಕೆದಾಟು ಜಲಾಶಯದಿಂದ ತಮಿಳುನಾಡಿಗೂ ಲಾಭ:

    ಮೇಕೆದಾಟು ಯೋಜನೆಯ ಕುರಿತು ಪ್ರಸ್ತಾಪಿಸಿದ ಸಿಎಂ, “ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯನ್ನು ನಿರ್ಮಿಸಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟ ತೀರ್ಪು ನೀಡಿದ್ದು, ಕಾನೂನು ತೊಡಕುಗಳು ಇತ್ಯರ್ಥಗೊಂಡಿವೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕುಡಿಯುವ ನೀರಿನ ಈ ಸಮತೋಲನ ಜಲಾಶಯದಿಂದ ಕರ್ನಾಟಕ, ಬೆಂಗಳೂರು ಮಾತ್ರವಲ್ಲದೆ ತಮಿಳುನಾಡು, ಪುದುಚೇರಿ ಹಾಗೂ ಕೇರಳಕ್ಕೂ ಅನುಕೂಲವಾಗಲಿದೆ. ಆದ್ದರಿಂದ ಯೋಜನೆಗೆ ಅಗತ್ಯವಿರುವ ಅಂತಿಮ ಅನುಮತಿಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರ ನಮಗೆ ಸಹಕರಿಸಬೇಕು,” ಎಂದು ಕೋರಿದರು.

    ಕಸ್ತೂರಿರಂಗನ್ ವರದಿ ತಿರಸ್ಕಾರಕ್ಕೆ ಒತ್ತಾಯ:

    ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಬಗ್ಗೆ ಮಾತನಾಡಿದ ಅವರು, “ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವ್ಯಾಪಕ ಸಾರ್ವಜನಿಕ ಸಮಾಲೋಚನೆ ನಡೆಸಿದ ನಂತರ, ಈ ವರದಿಯ ಶಿಫಾರಸುಗಳನ್ನು ವಿರೋಧಿಸಿ ಕರ್ನಾಟಕ ವಿಧಾನಮಂಡಲವು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಜನವಿರೋಧಿಯಾಗಿರುವ ಈ ವರದಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು,” ಎಂದು ಒತ್ತಾಯಿಸಿದರು.

    ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗ್ರಾಮೀಣ ಭಾಗದಿಂದ ನಗರಗಳತ್ತ ವಲಸೆ ಹೋಗುತ್ತಿರುವವರ ಪ್ರಮಾಣ 2002ರಲ್ಲಿ ಶೇ. 31ರಷ್ಟಿದ್ದದ್ದು, 2026ರ ವೇಳೆಗೆ ಶೇ. 47ಕ್ಕೆ ಏರಿಕೆಯಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ಎರಡು ದಶಕಗಳಲ್ಲಿ ಶೇ. 70ಕ್ಕೆ ತಲುಪುವ ಆತಂಕವಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು.

    “ಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದ ಮಾದರಿಯ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನೀತಿಯನ್ನು ರಾಜ್ಯದ ಮಾರ್ಗಸೂಚಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಂದ್ರವು ಸಲಹಾ ಸೂಚನೆ ನೀಡಬೇಕು,” ಎಂದು ಮನವಿ ಮಾಡಿದರು.

    ಪರಂಪರೆ ಮತ್ತು ಸಂಸ್ಕೃತಿಗೆ ಹೆಸರಾದ ಮೈಸೂರಿಗೆ ‘CoSMOS’ ತಾರಾಲಯವು ಒಂದು ಹೊಸ ವೈಜ್ಞಾನಿಕ ಹೆಗ್ಗುರುತಾಗಿದೆ ಎಂದು ಬಣ್ಣಿಸಿದ ಶಿವಕುಮಾರ್, ಈ ಯೋಜನೆಯನ್ನು ಮೈಸೂರಿಗೆ ತಂದಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಅರ್ಪಿಸಿದರು.

    ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದಿಂದ ಹಿಡಿದು ಚಂದ್ರಯಾನ, ಆದಿತ್ಯ-ಎಲ್1 ಹಾಗೂ ಮುಂಬರುವ ಗಗನಯಾನದವರೆಗೂ ದೇಶದ ಬಾಹ್ಯಾಕಾಶ ಯಶಸ್ಸಿನಲ್ಲಿ ಕರ್ನಾಟಕದ ವಿಜ್ಞಾನಿಗಳು ಮತ್ತು ಸಂಸ್ಥೆಗಳ ಪಾತ್ರ ಅವಿಸ್ಮರಣೀಯವಾಗಿದೆ ಎಂದು ಶ್ಲಾಘಿಸಿದರು.

    ಉತ್ತರ ಕರ್ನಾಟಕಕ್ಕೂ ತಾರಾಲಯ: ವಿಜ್ಞಾನದ ಸೌಲಭ್ಯಗಳು ಕೇವಲ ಬೆಂಗಳೂರು ಅಥವಾ ಪ್ರಮುಖ ನಗರಗಳಿಗೆ ಸೀಮಿತವಾಗಬಾರದು. ಉತ್ತರ ಕರ್ನಾಟಕದಲ್ಲೂ CoSMOS ಮಾದರಿಯ ತಾರಾಲಯ ಸ್ಥಾಪಿಸುವ ಕುರಿತು ಪರಿಶೀಲಿಸುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ರಾಜ್ಯದ ‘ಮೊಬೈಲ್ ಡಿಜಿಟಲ್ ಪ್ಲಾನೆಟೇರಿಯಮ್’ ಯೋಜನೆಯಿಂದ ಈಗಾಗಲೇ 19.21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯೋಜನ ಪಡೆದಿದ್ದಾರೆ. ಅಲ್ಲದೆ, ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-30’ರ ಮೂಲಕ ನವೋದ್ಯಮ (Startups) ಮತ್ತು ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!

    November 13, 2026

    Leave A Reply Cancel Reply

    Our Picks

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026

    ಡಬ್ಬಿಂಗ್ ಲೋಕದಲ್ಲಿ ಹೊಸ ಕ್ರಾಂತಿ; ‘ರಾಮಾಯಣ’ ಚಿತ್ರದಲ್ಲಿ ಬ್ರಹ್ಮ ಎಐ ಮ್ಯಾಜಿಕ್! ಏನಿದರ ವಿಶೇಷತೆ ?

    November 13, 2026

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    ಬೆಂಗಳೂರು: ರಾಜಾಜಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಒಂದೇ ಕುಟುಂಬದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು…

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!

    November 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.