nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ

    July 21, 2026

    ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ

    July 21, 2026

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026
    Facebook Twitter Instagram
    ಟ್ರೆಂಡಿಂಗ್
    • ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ
    • ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ
    • ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ
    • ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ: ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು
    • ಸರಗೂರು: ತಾಲೂಕು ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷರಾಗಿ ಪಿ. ಚಿನ್ನಣ್ಣ ಹಳೆಯೂರು ಸರ್ವಾನುಮತದಿಂದ ಆಯ್ಕೆ
    • ವಿಕಲಚೇತನರು ದ್ವಿಚಕ್ರ ವಾಹನ ಪಡೆದರೆ ಚಾಲನಾ ಪರವಾನಗಿ ಕಡ್ಡಾಯ: ಶಾಸಕ ಅನಿಲ್ ಚಿಕ್ಕಮಾದು
    • ಅರ್ಹ ಫಲಾನುಭವಿಗಳಿಗೆ ಸಾಗುವಾಳಿ ಪತ್ರ ತಲುಪಿಸುವುದು ಸರ್ಕಾರದ ಬದ್ಧತೆ: ಶಾಸಕ ಅನಿಲ್ ಚಿಕ್ಕಮಾದು
    • ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇಂದಿರಾ ಗಾಂಧಿ ವಸತಿ ಶಾಲೆ ದುರವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ ಕಂಡು ವಿದ್ಯಾರ್ಥಿಗಳು, ಪೋಷಕರು ಕಂಗಾಲು
    ಪಾವಗಡ June 30, 2026

    ಇಂದಿರಾ ಗಾಂಧಿ ವಸತಿ ಶಾಲೆ ದುರವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ ಕಂಡು ವಿದ್ಯಾರ್ಥಿಗಳು, ಪೋಷಕರು ಕಂಗಾಲು

    By adminJune 30, 2026No Comments2 Mins Read
    pavagada.jpg

    ಪಾವಗಡ: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನು ತೆರೆದು ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಸಲುವಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ ಇಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ನಾನಾ ಕಷ್ಟಗಳನ್ನು ಅನುಭವಿಸುವಂತಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ತಾಲ್ಲೂಕಿನ ವೆಂಕಟಾಪುರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಸರ್ಕಾರ ನೀಡುವ ಸೌಲಭ್ಯಗಳು ಸಿಗದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಂದಿರಾ ಗಾಂಧಿ ವಸತಿ (ಪ್ರ.ವರ್ಗ) ಶಾಲೆಯ ವಿದ್ಯಾರ್ಥಿ ಕೊಠಡಿಗಳು ಹಾಗೂ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ, ಶಾಲೆ ಪ್ರಾರಂಭವಾಗಿ ಒಂದು ತಿಂಗಳಾಗಿದೆ, ಮಕ್ಕಳಿಗೆ ಬೆಡ್, ದಿನಚರಿ ಕಿಟ್ ನೀಡಿಲ್ಲ, ವಸತಿ ಕೊಠಡಿಗಳಲ್ಲಿ ಫ್ಯಾನ್ ಕೆಲವು ಕೆಟ್ಟು ನಿಂತಿದ್ದರೂ ವಸತಿ ಶಾಲೆಯ ಪ್ರಾಂಶುಪಾಲರು ಮಾತ್ರ ನಿರ್ಲಕ್ಷ್ಯ ಭಾವನೆ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ವಸತಿ ಶಾಲೆಯ ಅಕ್ಕ ಪಕ್ಕದಲ್ಲಿ ಗಿಡ ಗಂಟೆಗಳು ಬೆಳೆದು ಸೊಳ್ಳೆಗಳ ತಾಣವಾಗಿದೆ. ಒಳಗೆ ಮತ್ತು ಹೊರಗೆ ಸ್ವಚ್ಛತೆಯಿಲ್ಲದ ಕಾರಣ ರೋಗರುಜನಗಳಿಗೆ ತುತ್ತಾಗುವುದರಲ್ಲಿ ಯಾವುದೇ ಸಂಶಯವಿಲ್ಲ, 5-6 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ ಕೊಟ್ಟಿಲ್ಲ. ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ಸರ್ಕಾರದಿಂದ ಬಂದಿಲ್ಲ, ಹೆಣ್ಣು ಮಕ್ಕಳಿಗೆ ಹಿಂದಿನ ವರ್ಷ ಬಂದಿದ್ದ ಸೊಳ್ಳೆ ಪರದೆ ಕೊಟ್ಟಿದ್ದೇವೆ ಎಂದರು.

    ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಊಟ ಗುಣಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಇಲ್ಲಿ ಮಾತ್ರ ರುಚಿಯಿಲ್ಲದ ಊಟ ನೀಡುತ್ತಿದ್ದಾರೆ. 220 ವಿದ್ಯಾರ್ಥಿಗಳು ಇದ್ದು, ಶನಿವಾರ ಮಾತ್ರ 120 ಜನ ಮಕ್ಕಳು ಹಾಜರಿದ್ದರು. ಕಡಿಮೆ ಮಕ್ಕಳು ಇದ್ದರೂ ಸಹ ಅನ್ನ ಸಾಂಬಾರ್ ರುಚಿಯಿರಲಿಲ್ಲ. ಅಡುಗೆಯವರನ್ನು ಕೇಳಿದಾಗ ವಾರ್ಡನ್ ಕೊಟ್ಟರೆ ನಾವು ಮಾಡುತ್ತೇವೆ ಸಾರ್ ಎಂದು ಹೇಳುತ್ತಿದ್ದಾರೆ.

    ಇಲ್ಲಿನ ವಸತಿ ಶಾಲಿಗಿಂತ ಸರ್ಕಾರಿ ಶಾಲೆಗಳೇ ಮೇಲು:

    ವಸತಿ ನಿಲಯಗಳಿಗೆ ಬೇಡಿಕೆ ಇದೆ, ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು ಎಂಬ ದೃಷ್ಟಿಯಲ್ಲಿ ತಂದೆ ತಾಯಿಗಳು ಮೊರಾರ್ಜಿ ವಸತಿ ಶಾಲೆಗಳಿಗೆ ಸೇರಿಸಲು ಹರಸಾಹಸ ಪಟ್ಟು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳ ಕಾಲ ಹರಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಗಾಂಧಿ ವಸತಿ ಶಾಲೆ(ಪರಿಶಿಷ್ಟ ಪಂಗಡ) ಮಕ್ಕಳ ಮೀಸಲಾತಿ ವಸತಿ ಶಾಲೆಯಲ್ಲಿ 220 ವಿದ್ಯಾರ್ಥಿಗಳಿದ್ದು, ಇಷ್ಟು ಜನ ಮಕ್ಕಳಿಗೂ 4 ಜನ ಶಿಕ್ಷಕರಿದ್ದಾರೆ, ಕಂಪ್ಯೂಟರ್ ಶಿಕ್ಷಕರಿಲ್ಲದೆ ಕಂಪ್ಯೂಟರ್ಗಳು ಧೂಳು ಹಿಡಿದಿವೆ, ಆಟದ ಉಪಕರಣಗಳನ್ನು ಕೊಠಡಿಯಲ್ಲಿ ಕೂಡಿಟ್ಟಿದ್ದಾರೆ. ಇದುವರೆಗೂ ದೈಹಿಕ ಶಿಕ್ಷಕರಿಲ್ಲ, ಇನ್ನೂ ಮೂರು ಪಠ್ಯಕ್ರಮಗಳಿಗೆ ಶಿಕ್ಷಕರ ಕೊರತೆ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.

    ವಿದ್ಯಾರ್ಥಿಗಳ ಕೊಠಡಿಗಳಲ್ಲಿ ಫ್ಯಾನ್ ಇದ್ದರೂ ಇಲ್ಲಂತಾಗಿದೆ. ಕೆಲವು ಫ್ಯಾನ್ ಕೆಟ್ಟು ನಿಂತಿವೆ, ವಿದ್ಯುತ್ ಕೈ ಕೊಟ್ಟರೆ ಜನರೇಟರ್ ಇಲ್ಲ, ಕೆಟ್ಟುನಿಂತು ವರ್ಷಗಳೇ ಕಳೆದಿವೆ, ಜನರೇಟರ್ ರಿಪೇರಿ ಮಾಡಿಸಿಲ್ಲ, ಮಕ್ಕಳಿಗೆ ಬಿಸಿನೀರು ಇಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

    ಪಾವಗಡ ತಾಲ್ಲೂಕಿನ ಸುಮಾರು 8 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು ಪ್ರತಿಭಾವಂತ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗುವ ನಿಟ್ಟಿನಲ್ಲಿ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಸೇರಿ ದುರುಪಯೋಗ ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದರೂ ತಾಲ್ಲೂಕಿನ ಜನಪ್ರತಿನಿಧಿಗಳು ಹಾಗೂ ಮೇಲುಸ್ತುವಾರಿ ಅಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ನೀಡದೆ ಅಧೋಗತಿಗೆ ಜಾರುತ್ತಿವೆ ಎಂದು ಪೋಷಕರು ಆರೋಪಿಸಿದ್ದು, ಪ್ರಾಂಶುಪಾಲರು ಮತ್ತು ವಾರ್ಡನ್ ಮಾತ್ರ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು: ಪಾವಗಡ ಶಾಸಕ ಎಚ್.ವಿ. ವೆಂಕಟೇಶ್

    July 7, 2026

    ಪಾವಗಡ: ಶಾಲೆಗಳಲ್ಲಿ ಅಣುಕು ಮತದಾನ: ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪರಿಣಾಮಕಾರಿ ಪ್ರಯೋಗ

    July 4, 2026

    ಪಾವಗಡ: ನುಡಿದಂತೆ ನಡೆದ ಸ್ವತಂತ್ರ ಅಭ್ಯರ್ಥಿ ಚೇತನ್ ಬಾಬು; ಬಸ್ ನಿಲ್ದಾಣಕ್ಕೆ ಆಸನಗಳ ಕೊಡುಗೆ!

    June 28, 2026

    Leave A Reply Cancel Reply

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Food

    ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ

    July 21, 2026

    ಟೊಮೆಟೊ ಮತ್ತು ಮೊಟ್ಟೆಯ ಸ್ಕ್ರ್ಯಾಂಬಲ್ (Tomato Scrambled Eggs) ಎನ್ನುವುದು ಚೀನಾದ ಮನೆಗಳಲ್ಲಿ ಅತ್ಯಂತ ಸುಲಭವಾಗಿ ಮತ್ತು ಅಗ್ಗವಾಗಿ ಮಾಡುವ…

    ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ

    July 21, 2026

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026

    ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ: ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು

    July 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.