ತುರುವೇಕೆರೆ: ನಾಡಪ್ರಭು ಕೆಂಪೇಗೌಡರು ಒಂದೇ ಜಾತಿಗೆ ಅಥವಾ ಸಮುದಾಯದ ಒಂದೇ ಸಮಾಜಕ್ಕೆ ಸೀಮಿತರಾಗದೆ ಜಾತ್ಯತೀತವಾಗಿ ಆಡಳಿತ ನಡೆಸಿದ್ದರು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ, ಒಕ್ಕಲಿಗ ನೌಕರರ ಸಂಘ, ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘ ಹಾಗೂ ಶ್ರೀ ಕೆಂಪೇಗೌಡ ಯುವಸೇನೆ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಕೆಂಪೇಗೌಡರ 517ನೇ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಭಾಷಣಕಾರ ಉಪನ್ಯಾಸಕರಾದ ಎಸ್.ಎಲ್.ವಿಜಯ್ ಕುಮಾರ್ ಕೆಂಪೇಗೌಡರ ಕುರಿತು ಮಾತನಾಡುತ್ತಾ, ಕೆಂಪೇಗೌಡರು ನಾಡಿನಲ್ಲಿ ವಿಶಿಷ್ಟ ಸ್ಥಾನ ಪಡೆದವರು. ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದೆ ಎಂದರೆ ನಾಡಪ್ರಭು ಕೆಂಪೇಗೌಡರ ಪಾತ್ರ ಅಪಾರ. ಅವರ ಸಾಮಾಜಿಕ ಕಳಕಳಿ ಹಾಗೂ ಜನಪರ ಕಾರ್ಯಗಳೇ ಸಾಕ್ಷಿಯಾಗಿವೆ ಎಂದರು.
ಪಟ್ಟಣ ತಾಲ್ಲೂಕು ಕಚೇರಿಯಿಂದ ಬೈಕ್ ರ‍್ಯಾಲಿ ಹಾಗೂ ಕೆಂಪೇಗೌಡರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಬಿಜಿಎಸ್ ವೇದಿಕೆವರೆಗೂ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಾಂಡವಪುರ ಅಂಕೇಗೌಡ್ರು, ಐಎಎಸ್ ಅಧಿಕಾರಿ ರಾಜೇಶ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಚಂದ್ರಮೂರ್ತಿ, ಧ್ರುವಕುಮಾರ್, ಚಂದ್ರೇಗೌಡ, ಹೇಮಂತ್ ಕುಮಾರ್, ಡಾ.ಹರ್ಷಿತ್ ಹಾಗೂ ಡಾ.ಕವನ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 25ಕ್ಕೂ ಹೆಚ್ಚು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಸಂವಿಧಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಡಗರಹಳ್ಳಿ ತ್ಯಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ತಹಶೀಲ್ದಾರ್ ಕುಂಞ ಅಹಮದ್, ಇಒ ಅನಂತ್ ರಾಮ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಎ.ಬಿ.ಜಗದೀಶ್, ತುಮುಲ್ ಮಹಾಲಿಂಗಪ್ಪ, ಗುಡ್ಡೆನಹಳ್ಳಿ ಪ್ರಸನ್ನಕುಮಾರ್, ಡಿ.ಪಿರಾಜು, ಎಚ್.ಸಿ.ಪಾಪಣ್ಣ, ಎಚ್.ಆರ್.ರಂಗನಾಥ್, ಡಾ.ಚಿನ್ನಿ ನಾಗೇಶ್, ಎನ್.ಆರ್ ಜಯರಾಮ್, ವಿಜಯಲಕ್ಷ್ಮಿ, ಎಚ್.ಆರ್.ರಾಮೇಗೌಡ, ರಾಜೀವ್, ಶ್ರೀನಿವಾಸ್ ಗೌಡ, ಗಂಗಣ್ಣ, ಸಿದ್ದೇಗೌಡ, ಬಸವರಾಜು, ವಿಜಿ, ಗಂಗಾಧರ್, ಪ್ರಹ್ಲಾದ್ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಗೂ ಸಮುದಾಯದ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಕೆಂಪೇಗೌಡರು ಕೇವಲ ಒಂದೇ ಸಮುದಾಯಕ್ಕೆ ಸೀಮಿತರಲ್ಲ. ಕೆಂಪೇಗೌಡರು 400 ವರ್ಷಗಳ ಹಿಂದೆಯೇ ಬೆಂಗಳೂರು ಎಂಬ ಸುಂದರವಾದ ನಗರವನ್ನು ನಿರ್ಮಿಸಿದ್ದರಿಂದ ನಾವಿಂದು ಉಳಿಯಲು ಸಾಧ್ಯವಾಯಿತು. ಎಲ್ಲ ಸಮುದಾಯದವರಿಗೂ 64 ಪೇಟೆಗಳನ್ನು ನಿರ್ಮಾಣ ಮಾಡಿ ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಿದ್ದರು. ಅಂತಹ ಮಹಾನುಭಾವರ ಜಯಂತಿಯನ್ನು ನಾವಿಂದು ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
— ಎಂ.ಟಿ.ಕೃಷ್ಣಪ್ಪ, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




