nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ

    July 21, 2026

    ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ

    July 21, 2026

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026
    Facebook Twitter Instagram
    ಟ್ರೆಂಡಿಂಗ್
    • ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ
    • ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ
    • ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ
    • ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ: ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು
    • ಸರಗೂರು: ತಾಲೂಕು ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷರಾಗಿ ಪಿ. ಚಿನ್ನಣ್ಣ ಹಳೆಯೂರು ಸರ್ವಾನುಮತದಿಂದ ಆಯ್ಕೆ
    • ವಿಕಲಚೇತನರು ದ್ವಿಚಕ್ರ ವಾಹನ ಪಡೆದರೆ ಚಾಲನಾ ಪರವಾನಗಿ ಕಡ್ಡಾಯ: ಶಾಸಕ ಅನಿಲ್ ಚಿಕ್ಕಮಾದು
    • ಅರ್ಹ ಫಲಾನುಭವಿಗಳಿಗೆ ಸಾಗುವಾಳಿ ಪತ್ರ ತಲುಪಿಸುವುದು ಸರ್ಕಾರದ ಬದ್ಧತೆ: ಶಾಸಕ ಅನಿಲ್ ಚಿಕ್ಕಮಾದು
    • ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
    ತುಮಕೂರು June 29, 2026

    ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ

    By adminJune 29, 2026No Comments2 Mins Read

    ತುಮಕೂರು: ರೈತರು ಕೇವಲ ಜಮೀನು ಅಥವಾ ಭೂಮಿಯನ್ನು ಹೊಂದಿರುವುದಷ್ಟೇ ಪ್ರಮುಖವಲ್ಲ. ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಹಾಗೂ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಯೋಜನೆಗಳ ದಾಖಲಾತಿಗಳ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕು. ತಮ್ಮ ಹಕ್ಕನ್ನು ತಾವೇ ಪಡೆದುಕೊಳ್ಳುವ ಸಾಮರ್ಥ್ಯ ಬಂದಾಗ ಮಾತ್ರ ಭೂ ಒಡೆತನಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ತಿಳಿಸಿದರು.

    ಸಿರಾ ತಾಲ್ಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನಾಯಕತ್ವ ಶಿಬಿರದಲ್ಲಿ ‘ಭೂಮಿ ಮತ್ತು ಭೂ ಕಂದಾಯ ಕಾನೂನುಗಳು, ರೈತರ ಹಕ್ಕುಗಳು ಮತ್ತು ಪರಿಹಾರ’ ವಿಷಯದ ಕುರಿತು ಅವರು ಮಾತನಾಡಿದರು.

    ಭೂಕಂದಾಯ ಇತಿಹಾಸವು ಕೇವಲ ತೆರಿಗೆ ಸಂಗ್ರಹದ ಕಥೆಯಲ್ಲ, ಅದು ಸಮಾಜದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಕಾಸದ ಪ್ರತಿಬಿಂಬವಾಗಿದೆ ಎಂದ ಲಿಂಗಪ್ಪ ಅವರು, ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಆಗಮನದಿಂದಾಗಿ ಕಂದಾಯ ಆಡಳಿತದಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು.

    “ಕರ್ನಾಟಕದಲ್ಲಿ ‘ಭೂಮಿ’ ಯೋಜನೆಯಂತಹ ಡಿಜಿಟಲೀಕರಣ ಉಪಕ್ರಮಗಳು ಭೂ ದಾಖಲೆಗಳ ನಿರ್ವಹಣೆಯಲ್ಲಿ ಕ್ರಾಂತಿ ಸೃಷ್ಟಿಸಿವೆ. ಇ-ಆಡಳಿತದ ವೇದಿಕೆಗಳು ಪಾರದರ್ಶಕತೆ ಹೆಚ್ಚಿಸಿ, ಭ್ರಷ್ಟಾಚಾರ ಕಡಿಮೆ ಮಾಡಿವೆ. ರೈತರಿಗೆ ಸುಲಭವಾಗಿ ದಾಖಲೆಗಳು ಸಿಗುವಂತಾಗಿದ್ದು, ಅವರ ಸಬಲೀಕರಣಕ್ಕೆ ಕಾರಣವಾಗಿದೆ. ಆದಾಗ್ಯೂ, ಭೂ ಅತಿಕ್ರಮಣ ಮತ್ತು ನಗರೀಕರಣದ ಸವಾಲುಗಳು ಇನ್ನೂ ಇವೆ,” ಎಂದು ಅವರು ವಿವರಿಸಿದರು. ಇದೇ ವೇಳೆ ಕಂದಾಯ ಇಲಾಖೆಯ ಲಾಗಾಯ್ತಿನಿಂದ ಸಮಕಾಲೀನದವರೆಗಿನ ವಿಷಯಗಳನ್ನು ಕ್ರೋಢೀಕರಿಸಿ ತಾವು ತಂದಿರುವ ಪುಸ್ತಕ ಇಲಾಖೆಗೆ ತಮ್ಮ ‘ಅಳಿಲು ಸೇವೆ’ ಎಂದು ವಿನಮ್ರವಾಗಿ ಸ್ಮರಿಸಿದರು.

    ಒಂದು ವರ್ಷದೊಳಗೆ ‘ಇ-ಜಮಾಬಂದಿ’ ಪೂರ್ಣ:

    ವಿಧಾನಪರಿಷತ್‌ನಲ್ಲಿ ಕಂದಾಯ ಸಚಿವರು ನೀಡಿದ ಭರವಸೆಯಂತೆ, ಗ್ರಾಮ ಮತ್ತು ತಾಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ‘ಇ-ಜಮಾಬಂದಿ’ ತಂತ್ರಾಂಶ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಜಮಾಬಂದಿ ಎಂಬುದು ವಾರ್ಷಿಕ ಭೂ ದಾಖಲೆಗಳ ಪರಿಶೀಲನೆಯ ಸರ್ಕಾರಿ ಪ್ರಕ್ರಿಯೆಯಾಗಿದ್ದು, ಇ-ಜಮಾಬಂದಿ ಮೂಲಕ ಆನ್‌ಲೈನ್‌ನಲ್ಲೇ ಹಕ್ಕುಗಳ ದಾಖಲೆಗೆ ಅಧಿಕೃತ ಧೃಢೀಕರಣ ಸಿಗಲಿದೆ. ಹರಿಯಾಣ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಇದನ್ನು ಯಶಸ್ವಿಯಾಗಿ ಜಾರಿಗೊಳಿಸಿವೆ ಎಂದು ಮಾಹಿತಿ ನೀಡಿದರು.

    ಗ್ರಾಮ ಲೆಕ್ಕಿಗರು ನೀಡುವ ಆರ್.ಟಿ.ಸಿ. ನಕಲುಗಳಲ್ಲಿನ ವಿಸ್ತೀರ್ಣ ಮತ್ತು ಗ್ರಾಮದ ಆಕಾರಬಂದ್ ವಹಿಯಲ್ಲಿನ ವಿಸ್ತೀರ್ಣ ಪರಸ್ಪರ ತಾಳೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಭೂಸ್ವಾಮ್ಯ ವಾರಸು ಹಕ್ಕು, ದಾಖಲೆ ತಿದ್ದುಪಡಿ ಮಾಡಲು ಈ ಜಮಾಬಂದಿ ಪ್ರಕ್ರಿಯೆ ಸಹಕಾರಿಯಾಗಿದೆ.

    ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ದರೋಡೆಯಾಗುತ್ತಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದರು. ಶಿಬಿರದಲ್ಲಿ ಆಶಯ ನುಡಿಗಳನ್ನಾಡಿದ ಅವರು, “ಅಭಿವೃದ್ಧಿ ಅಂದಕೂಡಲೇ ರೈತರನ್ನು ಒಕ್ಕಲೆಬ್ಬಿಸುವುದು ಎಂಬಂತಾಗಿದೆ. ರೈಲ್ವೆ, ಹೆದ್ದಾರಿ, ರಸ್ತೆ ಅಥವಾ ಕೈಗಾರಿಕೆಗಳಿಗೆ ಜಾಗ ಕೊಡುವ ವಿಚಾರ ಬಂದಾಗ ರೈತರನ್ನೇ ಏಕೆ ಗುರಿ ಮಾಡಬೇಕು? ಇದಕ್ಕೆ ಬೇರೆ ಪರಿಹಾರಗಳಿಲ್ಲವೇ? ರೈತರನ್ನು ಒಕ್ಕಲೆಬ್ಬಿಸಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀರಿ?” ಎಂದು ಪ್ರಶ್ನಿಸಿದರು.

    ಇದುವರೆಗೆ ಕೈಗಾರಿಕಾ ಪ್ರದೇಶಗಳಿಗಾಗಿ ಎಷ್ಟು ರೈತರನ್ನು ಒಕ್ಕಲೆಬ್ಬಿಸಲಾಗಿದೆ? ಆ ಭೂಮಿ ಈಗ ಯಾರ ಒಡೆತನದಲ್ಲಿದೆ? ಭೂಮಿ ಕಳೆದುಕೊಂಡ ರೈತರ ಬದುಕೇನಾಗಿದೆ? ಆ ಅಮೂಲ್ಯ ಭೂಮಿಯನ್ನು ಯಾರಿಗೆ ನೀಡಲಾಗಿದೆ ಎಂಬುದರ ಕುರಿತು ಸರ್ಕಾರ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು.  ಸಮಗ್ರ ಮಾಹಿತಿಯನ್ನು ರಾಜ್ಯದ ರೈತರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವವರೆಗೂ ಸರ್ಕಾರ ಯಾವುದೇ ಹೊಸ ಭೂಸ್ವಾಧೀನ ಪ್ರಕ್ರಿಯೆಗೆ ಕೈಹಾಕಬಾರದು. ಇದರ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಸಮಾಜದ ಮುಂದಿಡಬೇಕು ಎಂದು ಅವರು ಒತ್ತಾಯಿಸಿದ್ರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಸಿರಾ ತಹಶೀಲ್ದಾರ್ ಅವರು, ತಾಲೂಕಿನಲ್ಲಿ ಈಗಾಗಲೇ 8 ಸಾವಿರಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಖಾತೆ, ಸಾಗುವಳಿ ಚೀಟಿ, ಪೋತಿ ಖಾತೆ ಸೇರಿದಂತೆ ಭೂ ಒಡೆತನದ ಹಲವು ಕಂದಾಯ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.

    ಈ ಉನ್ನತ ಮಟ್ಟದ ಶಿಬಿರದಲ್ಲಿ ಪ್ರಮುಖ ರೈತ ಹೋರಾಟಗಾರರಾದ ಅನುಸೂಯಮ್ಮ, ದೊ.ರಂಗನಾಥಗೌಡ, ಪೂಜಾರಪ್ಪ, ಕೆ.ಟಿ.ಗಂಗಾಧರ್, ರಾಮಕೃಷ್ಣ ನೀರಕಲ್ಲು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    July 19, 2026

    Leave A Reply Cancel Reply

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Food

    ಒಂದು ಪ್ಲೇಟ್ ಟೊಮೆಟೊ ಮೊಟ್ಟೆ ಬುರ್ಜಿಗೆ ₹7,300! | ರೆಸ್ಟೋರೆಂಟ್ ವಿರುದ್ಧ ನೆಟ್ಟಿಗರ ಆಕ್ರೋಶ

    July 21, 2026

    ಟೊಮೆಟೊ ಮತ್ತು ಮೊಟ್ಟೆಯ ಸ್ಕ್ರ್ಯಾಂಬಲ್ (Tomato Scrambled Eggs) ಎನ್ನುವುದು ಚೀನಾದ ಮನೆಗಳಲ್ಲಿ ಅತ್ಯಂತ ಸುಲಭವಾಗಿ ಮತ್ತು ಅಗ್ಗವಾಗಿ ಮಾಡುವ…

    ಕೀಟನಾಶಕ ಸಿಂಪಡಿಸಿದ ಜಮೀನಿನಲ್ಲಿ ಜಾನುವಾರು ಮೇಯಿಸದಂತೆ ಕೃಷಿ ಇಲಾಖೆ ಎಚ್ಚರಿಕೆ

    July 21, 2026

    ವೃತ್ತಿ ಧರ್ಮ ಪಾಲಿಸುವವರು ನಿಜವಾದ ಪತ್ರಕರ್ತರು: ಟಿ.ಬಿ.ಜಯಚಂದ್ರ

    July 21, 2026

    ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಬಲ ಅಸ್ತ್ರ: ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು

    July 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.