ತುಮಕೂರು: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ 2026–27ನೇ ಸಾಲಿಗೆ ಅಧಿಸೂಚನೆ ಹೊರಡಿಸಿರುವ ಬೆಳೆಗಳನ್ನು ವಿಮಾ ಸೌಲಭ್ಯಕ್ಕೊಳಪಡಿಸಬೇಕೆಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಾರದಮ್ಮ ರೈತರಲ್ಲಿ ಮನವಿ ಮಾಡಿದ್ದಾರೆ.
ವಿಮಾ ಸೌಲಭ್ಯವು ಸಾಲ ಪಡೆದಿರುವ ಪಡೆಯುವ ರೈತರಿಗೆ ಕಡ್ಡಾಯ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿರುತ್ತದೆ. ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗದಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನಲ್ಲಿ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿಯೊಂದಿಗೆ ಆಯಾ ತಾಲ್ಲೂಕಿನ ಯಾವುದಾದರೂ ರಾಷ್ಟ್ರೀಯ ಅಧಿಕೃತ ಬ್ಯಾಂಕು/ಗ್ರಾಮ ಒನ್/ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದಾಗಿದೆ.
ಬೆಳೆವಿಮೆ ಯೋಜನೆಯಡಿ 2026ರ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ ಮತ್ತು ಮೇಘ ಸ್ಫೋಟ ಸಂದರ್ಭದಲ್ಲಿ ಟರ್ಮ್ ಶೀಟ್‌ನಲ್ಲಿ ನಮೂದಿಸಿರುವ ರಿಸ್ಕ್ ಅವಧಿಯೊಳಗೆ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿರುವ ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸುವ ವಿಮಾ ಸಂಸ್ಥೆಗಳ ಕಚೇರಿ (Agriculture Insurance Company Toll Free No: 1800–425-0505)ಗೆ 72 ಗಂಟೆಯೊಳಗೆ ತಿಳಿಸಬೇಕು.
ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು ನಿಗದಿತ ಸಮಯದೊಳಗೆ ತಿಳಿಸಬೇಕು. ಅಡಕೆ, ದಾಳಿಂಬೆ ಮತ್ತು ಪರಂಗಿ ಬೆಳೆಗಳಿಗೆ ನೋಂದಾಯಿಸಿಕೊಳ್ಳಲು ಜೂನ್ 30 ಹಾಗೂ ಮಾವು ಬೆಳೆಗೆ ನೋಂದಾಯಿಸಿಕೊಳ್ಳಲು ಜುಲೈ 31 ಕಡೆಯ ದಿನವಾಗಿದೆ.
ಬೆಳೆ ವಿಮೆಯಲ್ಲಿ ಒಳಪಟ್ಟ ಬೆಳೆಗಳ ವಿಮಾಕಂತಿನ ವಿವರ:
ವಿಮಾ ಯೋಜನೆಗೊಳಪಟ್ಟ ವಿವಿಧ ಬೆಳೆಗಳ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತದ ವಿವರ ಇಂತಿದ್ದು, ಆವರಣದಲ್ಲಿ ಶೇ.5ರಂತೆ ರೈತರು ಪಾವತಿಸಬೇಕಾದ ವಿಮಾ ಕಂತಿನ ದರದ ವಿವರವನ್ನು ನೀಡಲಾಗಿದೆ.
ಅಡಕೆ ಬೆಳೆ–128000 ರೂ.(ವಿಮಾ ಕಂತಿನ ದರ 6400 ರೂ.), ದಾಳಿಂಬೆ–127000 ರೂ.(6350 ರೂ.), ಪರಂಗಿ–134000 ರೂ.(6700 ರೂ.), ಮಾವು–80000 ರೂ.(4000 ರೂ.). ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳ ಮೊ.ಸಂ. ತುಮಕೂರು- 8095042988 / 9686503500, ಗುಬ್ಬಿ-9535781963 / 7022679182, ಶಿರಾ-9611789551 / 9844229157, ಕುಣಿಗಲ್-8884984999 / 9980073909, ತಿಪಟೂರು-8022225169 / 9164840484, ಚಿಕ್ಕನಾಯಕನಹಳ್ಳಿ-9686056705 / 9538272964, ಮಧುಗಿರಿ-9611789551 / 9964968020, ತುರುವೇಕೆರೆ-8088688759 / 8073095727, ಕೊರಟಗೆರೆ-9448001644 / 9342255556, ಪಾವಗಡ-9845268382 / 9480243429ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




