ಬೆಂಗಳೂರು: 2026ನೇ ಸಾಲಿನ ಆಯುರ್ವೇದ ಮತ್ತು ಹೋಮಿಯೋಪತಿ ಪದವಿ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸಿಹಿಸುದ್ದಿ ನೀಡಿದೆ. ಇದುವರೆಗೆ ಚಾಯ್ಸ್ ದಾಖಲಿಸದ ಹಾಗೂ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶ ಕಲ್ಪಿಸಿ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಪರಿಷ್ಕೃತ ವೇಳಾಪಟ್ಟಿ ವಿವರ:
ಚಾಯ್ಸ್ ಆಯ್ಕೆಗೆ ಅಂತಿಮ ಗಡುವು:
ಮೊದಲ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಪೋಷಕರೊಂದಿಗೆ ಸಮಾಲೋಚಿಸಿ ತಮಗೆ ಸೂಕ್ತವಾದ ‘ಚಾಯ್ಸ್’ (Choice) ಆಯ್ಕೆ ಮಾಡಲು ಅಕ್ಟೋಬರ್ 23ರ ರಾತ್ರಿ 11:59 ರವರೆಗೆ ಕಾಲಾವಕಾಶ ನೀಡಲಾಗಿದೆ.
ಶುಲ್ಕ ಪಾವತಿ ಹಾಗೂ ಸ್ಲಿಪ್ ಡೌನ್ ಲೋಡ್:
‘Choice-1’ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ, ಸೀಟ್ ಕನ್ಫರ್ಮೇರ್ಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಅಕ್ಟೋಬರ್ 24ರ ಬ್ಯಾಂಕಿಂಗ್ ಕೆಲಸದ ಅವಧಿಯವರೆಗೆ ಅವಕಾಶವಿದೆ.
ಕಾಲೇಜು ಪ್ರವೇಶಕ್ಕೆ ಕೊನೆಯ ದಿನ:
‘Choice-1’ ಆಯ್ಕೆ ಮಾಡಿರುವ ವಿದ್ಯಾರ್ಥಿಗಳು ತಮ್ಮ ಪರಿಶೀಲನಾ ಪ್ರಮಾಣಪತ್ರದಲ್ಲಿ (Verification Slip) ತಿಳಿಸಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ, ತಮಗೆ ಹಂಚಿಕೆಯಾದ ಕಾಲೇಜುಗಳಿಗೆ ತೆರಳಿ ವರದಿ ಮಾಡಿಕೊಳ್ಳಲು ಅಕ್ಟೋಬರ್ 24ರ ಸಂಜೆ 5:30 ಕೊನೆಯ ಸಮಯವಾಗಿದೆ.
ಕೆಇಎ ಎಚ್ಚರಿಕೆ:
ಇದು ಅಭ್ಯರ್ಥಿಗಳಿಗೆ ನೀಡಲಾಗಿರುವ ಅಂತಿಮ ಅವಕಾಶವಾಗಿದ್ದು, ನಿಗದಿತ ಸಮಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸೀಟು ರದ್ದಾಗುವ ಸಾಧ್ಯತೆಯಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್ ಸೈಟ್ kea.kar.nic.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆ 080-23460460 ಅನ್ನು ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
