ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ವಿವಾದ ಮತ್ತು ಚರ್ಚೆ ಮುನ್ನೆಲೆಗೆ ಬಂದಿದೆ. ನಟ ದರ್ಶನ್ ಅವರ ಆಪ್ತ ಸಹಾಯಕ (ಮ್ಯಾನೇಜರ್) ನಾಗರಾಜ್, ನಟ ಧನ್ವೀರ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್. ನಗರ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ನಾಗರಾಜ್ ಆರೋಪಿಸಿದ್ದು, ನಾಗರಾಜ್ ನೀಡಿದ ದೂರಿನ ಆಧಾರದ ಮೇಲೆ ಆರ್.ಆರ್. ನಗರ ಪೊಲೀಸರು ನಟ ಧನ್ವೀರ್ ವಿರುದ್ಧ NCR (Non–Cognizable Report) ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಧನ್ವೀರ್ ಅವರನ್ನು ವಿಚಾರಣೆಗೆ ಒಳಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ.
ವೈರಲ್ ಆಗಿದ್ದ ಸೋಶಿಯಲ್ ಮೀಡಿಯಾ ಪೋಸ್ಟ್!
ಈ ದೂರು ದಾಖಲಾಗುವ ಮುನ್ನ ನಟ ಧನ್ವೀರ್ ಗೌಡ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದ ರಹಸ್ಯಮಯ ಸ್ಟೋರಿಯೊಂದು ಭಾರೀ ವೈರಲ್ ಆಗಿತ್ತು. ಚಿತ್ರರಂಗದ ಪ್ರಸ್ತುತ ಬೆಳವಣಿಗೆಗಳು, ಹಬ್ಬದ ವಾತಾವರಣ ಹಾಗೂ ನಟ ದರ್ಶನ್ ತೂಗುದೀಪ ಅವರ ಅಭಿಮಾನಿ ಬಳಗದಲ್ಲಿ ಈ ಪೋಸ್ಟ್ ಭಾರೀ ಸಂಚಲನ ಉಂಟುಮಾಡಿತ್ತು.
ಧನ್ವೀರ್ ತಮ್ಮ ಪೋಸ್ ನಲ್ಲಿ: “ಕೆಲವರಿರುತ್ತಾರೆ ಶಕುನಿ ಅಂತವರು… ಕೊನೆವರೆಗೂ ಆಟವಾಡಿ ಕೊನೆಗೆ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಸತ್ಯಕ್ಕೆ ಯಾವತ್ತೂ ಸಾಕ್ಷಿ ಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ.” ಎಂದು ಬರೆದುಕೊಂಡಿದ್ದರು.
ಧನ್ವೀರ್ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ನೆಟ್ಟಿಗರು ನಾನಾ ರೀತಿಯ ವ್ಯಾಖ್ಯಾನಗಳನ್ನು ನೀಡಲು ಶುರುಮಾಡಿದ್ದಾರೆ. “ಧನ್ವೀರ್ ಈ ಟಾಂಗ್ ಕೊಟ್ಟಿದ್ದು ಯಾರಿಗೆ?”, “ಶಕುನಿ ಎಂದು ಉಲ್ಲೇಖಿಸಿದ್ದು ಯಾರನ್ನು ಉದ್ದೇಶಿಸಿ?” ಎಂಬ ಪ್ರಶ್ನೆಗಳು ಗಾಂಧಿನಗರ ಹಾಗೂ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
