nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ

    June 29, 2026

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ

    June 29, 2026

    ರೀಲ್ಸ್ ಹುಚ್ಚು: ಅಪಾಯಕಾರಿ ಬಂಡೆ ಹತ್ತಿ ಕೆಳಗೆ ಬಿದ್ದ ಉಪನ್ಯಾಸಕ

    June 28, 2026
    Facebook Twitter Instagram
    ಟ್ರೆಂಡಿಂಗ್
    • ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
    • ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ
    • ರೀಲ್ಸ್ ಹುಚ್ಚು: ಅಪಾಯಕಾರಿ ಬಂಡೆ ಹತ್ತಿ ಕೆಳಗೆ ಬಿದ್ದ ಉಪನ್ಯಾಸಕ
    • ಪಾವಗಡ: ನುಡಿದಂತೆ ನಡೆದ ಸ್ವತಂತ್ರ ಅಭ್ಯರ್ಥಿ ಚೇತನ್ ಬಾಬು; ಬಸ್ ನಿಲ್ದಾಣಕ್ಕೆ ಆಸನಗಳ ಕೊಡುಗೆ!
    • ವೈ.ಎನ್.ಹೊಸಕೋಟೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿ: ಬಸ್ ನಿಲ್ದಾಣ, ಮನೆ–ಮನೆಗೆ ತೆರಳಿ ಮಕ್ಕಳಿಗೆ ಹನಿ ಹಾಕಿದ ಆರೋಗ್ಯ ತಂಡ
    • ಕೆಂಪೇಗೌಡರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿ: ಶಾಸಕ ಬಿ.ಸುರೇಶ್‌ ಗೌಡ
    • ಸತ್ತಿ ದೇವರ ಮಹೋತ್ಸವ ಊಟ ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಪಾವಗಡದಲ್ಲಿ ಆತಂಕ
    • ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ
    ಜಿಲ್ಲಾ ಸುದ್ದಿ June 29, 2026

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ

    By adminJune 29, 2026No Comments1 Min Read

    Provided by
    Provided by

    ಕುಂದಾಪುರ (ಉಡುಪಿ): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ‘ಮಾಸ್ಟರ್ ಪ್ಲಾನ್’ (ಬೃಹತ್ ಯೋಜನೆ) ಸಿದ್ಧಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ಭಾನುವಾರ ತಮ್ಮ ಪತ್ನಿಯೊಂದಿಗೆ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ದೇವಸ್ಥಾನದ ಹಿರಿಯ ಅರ್ಚಕರಾದ ನರಸಿಂಹ ಅಡಿಗ ಮತ್ತು ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಪೂಜೆಯ ಬಳಿಕ ದೇವಸ್ಥಾನದ ಆಡಳಿತ ಮಂಡಳಿಯು ಉಪಮುಖ್ಯಮಂತ್ರಿಗಳಿಗೆ ದೇವಿಯ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಿತು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, “ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ದೇಶದ ವಿವಿಧೆಡೆಗಳಿಂದ ಬರುವ ಭಕ್ತಾದಿಗಳಿಗೆ ಸುಲಭ ದರ್ಶನ, ಸುಸಜ್ಜಿತ ಪಾರ್ಕಿಂಗ್ ಹಾಗೂ ವಸತಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ,” ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನಗಳ ಜಾಗ ಒತ್ತುವರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒತ್ತುವರಿಯಾಗಿರುವ ಎಲ್ಲಾ ಜಮೀನನ್ನು ಕೂಡಲೇ ತೆರವುಗೊಳಿಸಲು ಮುಜರಾಯಿ ಇಲಾಖೆಯ ಆಯುಕ್ತರಿಗೆ ಹಾಗೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಡಕ್ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.


    Provided by
    Provided by

    ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ರೀಲ್ಸ್ ಹುಚ್ಚು: ಅಪಾಯಕಾರಿ ಬಂಡೆ ಹತ್ತಿ ಕೆಳಗೆ ಬಿದ್ದ ಉಪನ್ಯಾಸಕ

    June 28, 2026

    ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ

    June 28, 2026

    ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ

    June 27, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ

    June 29, 2026

    ತುಮಕೂರು: ರೈತರು ಕೇವಲ ಜಮೀನು ಅಥವಾ ಭೂಮಿಯನ್ನು ಹೊಂದಿರುವುದಷ್ಟೇ ಪ್ರಮುಖವಲ್ಲ. ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಹಾಗೂ…

    ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ

    June 29, 2026

    ರೀಲ್ಸ್ ಹುಚ್ಚು: ಅಪಾಯಕಾರಿ ಬಂಡೆ ಹತ್ತಿ ಕೆಳಗೆ ಬಿದ್ದ ಉಪನ್ಯಾಸಕ

    June 28, 2026

    ಪಾವಗಡ: ನುಡಿದಂತೆ ನಡೆದ ಸ್ವತಂತ್ರ ಅಭ್ಯರ್ಥಿ ಚೇತನ್ ಬಾಬು; ಬಸ್ ನಿಲ್ದಾಣಕ್ಕೆ ಆಸನಗಳ ಕೊಡುಗೆ!

    June 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.