nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ

    July 5, 2025

    ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025
    Facebook Twitter Instagram
    ಟ್ರೆಂಡಿಂಗ್
    • ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ
    • ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್
    • ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್
    • ವೈ.ಎನ್.ಹೊಸಕೋಟೆ:  “ಓರಿಗಾಮಿಯಲ್ಲಿ ಗಣಿತ ಕಾರ್ಯಾಗಾರ”
    • ಯುವ ಜನತೆ ಕಾನೂನು ಸುರಕ್ಷತೆ ಪಾಲನೆ, ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಬೇಕು: ಪ್ರಸನ್ನ ಕುಮಾರ್ ಸಲಹೆ
    • ಮೇಕೆದಾಟು ಯೋಜನೆ: ಕಾಂಗ್ರೆಸ್ ಗೆ ಮತ್ತೆ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ
    • ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು
    • ಹಿಂದೂ ಮುಖಂಡನ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಾಳೆಯಿಂದ ಬೆಂಗಳೂರಲ್ಲಿ ಚಿತ್ರಸಂತೆ
    ರಾಜ್ಯ ಸುದ್ದಿ March 26, 2022

    ನಾಳೆಯಿಂದ ಬೆಂಗಳೂರಲ್ಲಿ ಚಿತ್ರಸಂತೆ

    By adminMarch 26, 2022No Comments2 Mins Read
    chithra sante

    ಬೆಂಗಳೂರಿನಲ್ಲಿ ಸಂತೆಗಳೆಂದರೆ ಏನೋ ಆಕರ್ಷಣೆ ಜನರು ಹೊಸತನ್ನು ಬಯಸಿ ಆ ಕಡೆಗೆ ಹೋಗಿ ಬರೋಣವೆಂದು ಸಾಗುವುದು ಸಹಜ. ಅದರಲ್ಲಿಯೂ ನವನವೀನ ಚಿತ್ರಗಳನ್ನು ಬಿಂಬಿಸುವ ಚಿತ್ರಸಂತೆಯ ಸೌಂದರ್ಯ ಸವಿಯಲು ವಾರದ ಕೊನೆಯ ದಿನದ ತಮ್ಮ ಹಾಜರಿಯನ್ನು ಅಲ್ಲಿ ಹಾಕಿಬಿಡುತ್ತಾರೆ.

    ಏಕೆಂದರೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ 19ನೆಯ ಚಿತ್ರಸಂತೆಗೆ ಇನ್ನೂ ಬೆರಳೆಣಿಕೆಯಷ್ಟು ದಿನ ಇರುವುದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಮ್ಮಿಕೊಂಡಿರುವ ವಾರ್ಷಿಕ ಚಿತ್ರಸಂತೆಗೆ ಹಲವಾರು ಕಲಾವಿದರು ಕಲಾಸಕ್ತರು ಕಾಯುತ್ತಿರುವುದು ವಿಶೇಷವಲ್ಲ. ಚಿತ್ರಸಂತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ.


    Provided by

    ಅಧ್ಯಕ್ಷತೆಯನ್ನು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ವಹಿಸಲಿದ್ದಾರೆ. ಪ್ರತಿವರ್ಷ ನಡೆಯುವ ಚಿತ್ರಸಂತೆಯ ಒಂದೊಂದು ವಿಷಯವನ್ನು ಆಧರಿಸಿ ಆಯೋಜನೆ ಮಾಡಲಾಗುತ್ತದೆ.ಈ ವರ್ಷ ನಮಗೆಲ್ಲ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ಕ್ಷಣಕ್ಕಾಗಿ 19ನೇ ಚಿತ್ರಸಂತೆಯನ್ನು ಹಲವಾರು ಸ್ವತಂತ್ರ ಯೋಧರಿಗಾಗಿ ಆಯೋಜನೆ ಮಾಡುತ್ತಿದೆ. ಚಿತ್ರಕಲಾ ಪರಿಷತ್ ನಾಡಿನ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಚಿತ್ರಕಲಾ ಸಮ್ಮಾನ್ ಮತ್ತು ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರಧಾನ ಮಾಡುತ್ತಾ ಬಂದಿದೆ.ಈ ವರ್ಷ ಎಂಎಸ್ ನಂಜುಂಡ ರಾವ್ ಪ್ರಶಸ್ತಿ ರತನ್ ಪರಿಮು ರವರಿಗೆ , ಕೆ.ಕೆ.ಕೆಜ್ರಿವಾಲ ಪ್ರಶಸ್ತಿಯನ್ನು ಕಲಾವಿದ ವಿಶ್ವಂಬರ ರವರಿಗೆ, ಆರ್ಯ ಮೂರ್ತಿ ಪ್ರಶಸ್ತಿಯನ್ನು ಬಸವರಾಜ್ ಮು.ಸಾ ವಳಗಿ ಅವರಿಗೆ, ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಪುಷ್ಪಮಾಲಾ ರವರಿಗೆ, ವೈ.ಸುಬ್ರಹ್ಮಣ್ಯರಾಜು ಪ್ರಶಸ್ತಿಯನ್ನು ಕಲಾವಿದ ನರೇಂದ್ರ ರವರಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರಧಾನ ಮಾಡಲಾಗುತ್ತಿದೆ.

     ಹೇಗೆ ಮೂಡಿತು ಚಿತ್ರ ಸಂತೆ ಕಲ್ಪನೆ:

    ನಮ್ಮಲ್ಲಿ ಬಹಳಷ್ಟು ಕಲಾವಿದರಿದ್ದು, ಅವರಿಗೆ ತಾವು ರಚಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲು ಅಥವಾ ಮಾರಾಟ ಮಾಡಲು ಸೂಕ್ತ ವೇದಿಕೆ ಇರಲಿಲ್ಲ. ಗ್ಯಾಲರಿಗಳಲ್ಲಿ ಹಣಕೊಟ್ಟು ಪ್ರದರ್ಶನ ಮಾಡಲು ಸಾಮಥ್ರ್ಯವಿಲ್ಲದೆ ಇರುವಂತಹ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಚಿತ್ರಸಂತೆಯ ಮೂಲಕ ಕರ್ನಾಟಕ ಚಿತ್ರಕಲಾ ಪರಿಷತ್ತು ಅವಕಾಶ ಮಾಡಿಕೊಟ್ಟಿತು.ಸಂತೆ ವೇಳೆ ಹಲವಾರು ಕಲಾವಿದರು ಮತ್ತು ಕಲಾಸಕ್ತರಿಗೆ ಉತ್ತಮ ಬಾಂಧವ್ಯ ಮೂಡುತ್ತದೆ. ಸಾಮಾನ್ಯವಾಗಿ ಸಂತೆಯ ಮಾದರಿಯಲ್ಲಿಯೇ ಚಿತ್ರಸಂತೆಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರ ಕೃಪಾ ರಸ್ತೆಯಲ್ಲಿ ಆಯೋಜನೆ ಮಾಡುತ್ತದೆ. ಚಿತ್ರ ಕಲಾವಿದರಿಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಕಲಾವಿದರು ತಾವು ರಚಿಸಿದ ಶಿಲ್ಪಗಳು, ಚಿತ್ರಗಳು ಅದರಲ್ಲಿ ವಿಭಿನ್ನ ರೀತಿಯ ಕಲಾತ್ಮಕ ಚಿತ್ರಗಳು ಕೂಡ ಈ ಸಂತೆಯಲ್ಲಿ ನಮಗೆ ನೋಡಲು ಸಿಗುತ್ತದೆ. ಅಂದು ದಿನವಿಡೀ ಕಲಾ ಲೋಕವೇ ಧರೆಗಿಳಿದು ಬಂದಂತೆ ಗೋಚರವಾಗುತ್ತದೆ.
    ನಮ್ಮ ನಾಡಿನ ಈ ಚಿತ್ರಸಂತೆಗೆ ದೇಶದ ಬೇರೆ ಬೇರೆ ಕಡೆಯಿಂದ ಕಲಾವಿದರು ಬರುವುದರಿಂದ ಒಂದೇ ಸೂರಿನಲ್ಲಿ ವಿಭಿನ್ನ ಕಲಾವಿದರನ್ನು ನೋಡುವ, ಕಲಾತ್ಮಕ ವಿಷಯಗಳನ್ನು ಚರ್ಚೆ ಮಾಡುವ ಅವಕಾಶ, ವಿಚಾರವಿನಿಮಯ ಎಲ್ಲವೂ ಇಲ್ಲಿ ನಡೆಯುತ್ತದೆ ನಮಗೆ ಗೊತ್ತಿರದ ಹಲವಾರು ಕಲೆಗಳನ್ನು, ಕಲಾಪ್ರಕಾರಗಳನ್ನು ಇಲ್ಲಿ ಬರುವ ಕಲಾವಿದರು ಪರಿಚಯ ಮಾಡಿಕೊಡುತ್ತಾರೆ .

    ಅಂಗವಿಕಲ / ವಯಸ್ಸಾದ ಕಲಾವಿದರಿಗಾಗಿ ಸ್ಟಾಲ್:

    ಚಿತ್ರಸಂತೆಗೆ ಸಾಮಾನ್ಯವಾಗಿ ಪ್ರತಿಭಾವಂತ ಅಂಗವಿಕಲ ಮತ್ತು ವಯಸ್ಸಾದ ಚಿತ್ರಕಲಾವಿದರು ಬರುವುದರಿಂದ ಅವರ ಹಿತದೃಷ್ಟಿಯಿಂದ ಅವರಿಗೆ ಅಂಗಡಿಗಳನ್ನು ಹಾಕಿ ಕಲಾಕೃತಿಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.

    ಈ ಚಿತ್ರಸಂತೆಯಲ್ಲಿ ನೂರು ರೂ.ನಿಂದ ಚಿತ್ರಗಳು ಮಾರಾಟವಾಗುತ್ತದೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಕಲಾಕೃತಿಗಳು ಸಿಗುವಂತಾಗಬೇಕು ಎಲ್ಲರ ಮನೆ ಮನೆಗೆ ಒಂದೊಂದು ಕಲಾಕೃತಿಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಚಿತ್ರ ಸಂತೆ ಆಯೋಜಿಸಲಾಗಿದೆ ಚಿತ್ರಸಂತೆಯ ದಿನ ಚಿತ್ರಕಲೆ. ಶಿಲ್ಪಕಲೆ ಗ್ರಾಫಿಕ್ ಅಲ್ಲದೆ ವಿವಿಧ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ನೋಡಬಹುದು.

    ವರದಿ: ಆಂಟೋನಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025

    ಮೇಕೆದಾಟು ಯೋಜನೆ: ಕಾಂಗ್ರೆಸ್ ಗೆ ಮತ್ತೆ ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ

    July 5, 2025

    ನದಿಗೆ ಹಾರಿದ್ದ ಯುವತಿ ಮರಕ್ಕೆ ಸಿಲುಕಿ ರಾತ್ರಿಯಿಡೀ ಒದ್ದಾಟ!

    July 5, 2025
    Our Picks

    ಮದುವೆ ದಿಬ್ಬಣದ ಕಾರು ಭೀಕರ ಅಪಘಾತ: ವರ ಸಹಿತ 8 ಮಂದಿ ಸಾವು

    July 5, 2025

    ಪತಿಯಿಂದಲೇ ಮಹಿಳಾ ಕೌನ್ಸಿಲರ್‌ ಬರ್ಬರ ಹತ್ಯೆ!

    July 4, 2025

    ಪ್ರಧಾನಿ ಮೋದಿಗೆ ಘಾನಾದ ರಾಷ್ಟ್ರೀಯ ಗೌರವ ಪ್ರದಾನ

    July 3, 2025

    ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ ಐ) ಯೋಜನೆಗೆ ಸಚಿವ ಸಂಪುಟದ ಅನುಮೋದನೆ

    July 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್ | ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ

    July 5, 2025

    ಬೀದರ್ : ಜಿಲ್ಲೆಯ ಘೋಡಂಪಳ್ಳಿ ಗ್ರಾಮದಲ್ಲಿ ಇರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ…

    ಲವ್, ಸೆಕ್ಸ್ ದೋಖಾ: ಬಿಜೆಪಿ ಮುಖಂಡನ ಮಗ ಅರೆಸ್ಟ್

    July 5, 2025

    ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕುಗಳೂ ನನಗೆ ಮುಖ್ಯ: ಡಿ.ಕೆ.ಶಿವಕುಮಾರ್

    July 5, 2025

    ವೈ.ಎನ್.ಹೊಸಕೋಟೆ:  “ಓರಿಗಾಮಿಯಲ್ಲಿ ಗಣಿತ ಕಾರ್ಯಾಗಾರ”

    July 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.