Author: admin

ತುರುವೇಕೆರೆ: ದಂಡಿನಶಿವರ ವಿ. ಎಸ್.ಎಸ್.ಎನ್. ಗೆ ಶುಕ್ರವಾರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಕೆ.ಸಿದ್ದಗಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಕುಮಾರ್ ಕೆ.ಆರ್.  ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಇಲಾಖೆಯ ಚುನಾವಣಾಧಿಕಾರಿ ಶಿವಕುಮಾರ್ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ  ಕೆ .ಸಿದ್ದಗಂಗಯ್ಯ,  ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪನವರ ಹಾಗೂ ಸಂಘದ ಸದಸ್ಯರ ಬೆಂಬಲದಿಂದ  ನಾನು ಇಂದು ಅಧ್ಯಕ್ಷನಾಗಿದ್ದು, ನನ್ನ ಆಯ್ಕೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.  ಇಂದಿನಿಂದ  ಸಂಘದ ವತಿಯಿಂದ ಸಿಗುವ ಸರ್ಕಾರಿ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಜನರಿಗೆ  ತಲುಪುವಂತೆ ಮಾಡುತ್ತೇವೆ. ಸಂಘವನ್ನು ಉತ್ತಮ ರೀತಿಯಲಿ ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಎಂದರು . ಬಳಿಕ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿಯನ್ನು ಹಂಚಿ, ಸಂಭ್ರಮ ಆಚರಿಸಿದರು. ಈ ವೇಳೆ  ಬೀಚನಹಳ್ಳಿ ರಾಮಣ್ಣ, ತೋವಿನಕೆರೆ ರಂಗಸ್ವಾಮಿ , ಮಾಜಿ ಅಧ್ಯಕ್ಷರಾದ ಶಿವರಾಜು, ಹೊನ್ನೆನಹಳ್ಳಿ ಕೃಷ್ಣಪ್ಪ , ಗಂಗಣ್ಣ,ರೋಹಿತ್, ಪದ್ಮರೋಹಿತ್ , ಮಾಚೆನಹಳ್ಳಿ ಲೋಕೇಶ್, ಸಿ. ಇ. ಓ.ಪ್ರಕಾಶ್ ಮತ್ತಿತರರು ಅಧ್ಯಕ್ಷ ಉಪಾಧ್ಯಕ್ಷರಿಗೆ…

Read More

ತುಮಕೂರು: ಮಾತಂಗ ಮಹರ್ಷಿ ಸೇವಾಶ್ರಮ ಹಂಪಿ  ಪರಮಪೂಜ್ಯ ಗುರುಗಳಾದ ಶ್ರೀ ಭಾರತಿ ಪೂರ್ಣನಂದ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಆದಿಜಾಂಬವ ಕೊಂಕಲ ಬೃಹನ್ಮಠ ಮಧುಗಿರಿಯ ಶ್ರೀ ಓಂಕಾರ ಮುನಿ ಸ್ವಾಮೀಜಿಗಳ  ಸಾನಿಥ್ಯದಲ್ಲಿ ಜಿಲ್ಲಾ ಮಾದಿಗರ ಸಮಾವೇಶ, ಮಾದಿಗ ಸಮುದಾಯದ  ನಾಯಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ  ಪ್ರಸ್ತುತ ರಾಜಕಾರಣದಲ್ಲಿ  ಮಾದಿಗ ಸಮುದಾಯ ಪಾತ್ರ,  ಕಡ್ಡಾಯ ಮತದಾನ ಜಾಗೃತಿ  ಸಮಾರಂಭ ತುಮಕೂರಿನ ಬಾಲಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಮಾಜಿ ಶಾಸಕ  ಕೆ.ಎನ್.ರಾಜಣ್ಣ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ  ರಫೀಕ್ ಅಹಮ್ಮದ್ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದಾಪುರ ರಂಗಶಾಮಣ್ಣ, ಕೊಟ್ಟ ಶಂಕರ್,  JCB ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿ ನಿವಾಸದ ಮೇಲೆ ಐಟಿ ದಾಳಿ ಬಳಿಕ ವಿದೇಶಕ್ಕೆ ತೆರಳದಂತೆ ಕೋರ್ಟ್ ನೀಡಿದ್ದ ಸೂಚನೆಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಮಾರ್ಚ್ 28ರಿಂದ ಏ.3 ರವರೆಗೆ ಎಕ್ಸ್ ಪೋನಲ್ಲಿ ಭಾಗವಹಿಸಲು ದುಬೈಗೆ ತೆರಳಲು ಅನುಮತಿ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ, ದುಬೈಗೆ ತೆರಳಲು ಅನುಮತಿ ನೀಡಿದೆ. ಐಟಿ ದಾಳಿ ಪ್ರಕರಣದ ಬಳಿಕ ವಿದೇಶಕ್ಕೆ ತೆರಳದಂತೆ ಕೋರ್ಟ್ ಸೂಚಿಸಿತ್ತು. ಅಲ್ಲದೇ ಒಂದು ವೇಳೆ ವಿದೇಶ ಪ್ರಯಾಣ ಮಾಡಬೇಕೆಂದರೆ ಕೋರ್ಟ್ ಅನುಮತಿ ಪಡೆಯುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್, ಇದೀಗ ಎಲ್ ಪಿ ಎಫ್ ಎಲ್ ಇ ಎಕ್ಸ್ ಬೇಸ್ ಇಂಡಸ್ಟ್ರಿ ಆಹ್ವಾನದ ಮೇರೆಗೆ ವಿಶೇಷ ಅತಿಥಿಯಾಗಿ ದುಬೈನಲ್ಲಿ ನಡೆಯುತ್ತಿರುವ ಎಕ್ಸ್ ಪೋದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೇ 2021, ಸೆ.22 ರಂದು ಪಾಸ್ ಪೋರ್ಟ್ ಅವಧಿ ಮುಕ್ತಾಯವಾಗಿದ್ದು, ನವೀಕರಿಸಲು ಅನುಮತಿ ನೀಡುವಂತೆಯೂ ಕೋರಿದ್ದರು. ಎರಡೂ ಅರ್ಜಿಗಳಿಗೆ ಸಮ್ಮತಿ ನೀಡಿರುವ…

Read More

ಹಿರಿಯೂರು: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಿರಿಯೂರು ಘಟಕ ಮತ್ತು ತಾಲ್ಲೂಕಿನ ವಾಲ್ಮೀಕಿ ನಾಯಕ ಸಮುದಾಯದಿಂದ ಎಲ್.ಜಿ.ಹಾವನೂರುರವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಹಿರಿಯೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರು, ಹಿಂದುಳಿದ ವರ್ಗಗಳ ನೇತಾರರು, ದಕ್ಷಿಣ ಆಫ್ರಿಕಾ ಸಂವಿಧಾನ ಸಲಹೆಗಾರರು, ಕಾನೂನು ಪಂಡಿತರು ಆಗಿರುವ ಎಲ್. ಹಾವನೂರು ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಗುಣಗಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಘಟಕ ತಾಲ್ಲೂಕು ಅಧ್ಯಕ್ಷರಾದ ಎಸ್ ಜೋಗಪ್ಪ, ಉಪಾಧ್ಯಕ್ಷರುಗಳಾದ ನೀಲಕಂಠಪ್ಪ, ಚಿದಾನಂದ ಸ್ವಾಮಿ ಆರ್., ಭರತೇಶ್, ನಿಜಲಿಂಗಪ್ಪ, ಯೋಗಾನಂದ ಮೂರ್ತಿ, ಪ್ರಧಾನ ಕಾರ್ಯದರ್ಶಿಯಾದ ಎನ್.ಕುಮಾರ್, ಖಜಾಂಚಿ ಕೆ.ನಾಗರಾಜು ಸೊಂಡೆಕೆರೆ, ಕಾರ್ಯದರ್ಶಿಗಳಾದ ಗಿರೀಶ್ ಕುಮಾರ್, ಜುಂಜಾರಾಮ್ ನಾಯಕ, ತಿಪ್ಪೇಸ್ವಾಮಿ ಮಿಲ್ಕ್, ಅರುಣ್ ಕುಮಾರ್, ಕಾನೂನು ಸಲಹೆಗಾರರು ಪಿ.ರಮೇಶ್ ವಕೀಲರು, ಲೋಕೇಶ್ ವಕೀಲರು, ಅಜಯ್ ಕುಮಾರ್ ಹರ್ತಿಕೋಟೆ, ಓಬಳೇಶ್ ತಾವಂದಿ, ನಾಗಣ್ಣ, ರಂಗಯ್ಯ ವದ್ದಿಕೆರೆ, ಲೋಕೇಶ್ ಭರಮಗಿರಿ, ಜಯರಾಮಪ್ಪ ಭರಮಗಿರಿ, ಓಬಳೇಶ್, ಸಿದ್ದಮ್ಮ ಕೊಟ್ಟಿಗೆ, ಕೆಂಜಾಡಿಯಪ್ಪ,…

Read More

ಸರಗೂರು:  ಸಮೀಪದ ಹಂಪಾಪುರ ಗ್ರಾಮ ಪಂಚಾಯಿತಿಯ ಕೋಹಳ್ಳ ಗ್ರಾಮದಲ್ಲಿ 2021-2022 ನೇ ಸಾಲಿನಲ್ಲಿ ನರೇಗಾದಡಿಯಲ್ಲಿ ನಡೆಸಲಾದ ಮೇಟ್ಲಿಂಗ್ ಕಾಮಗಾರಿ ರಸ್ತೆ ಕಾಮಗಾರಿಕಳಪೆಯಿಂದ ಕೂಡಿದ್ದು. ಸೂಕ್ತ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಅಗ್ರಹಸಿದ್ದಾರೆ ಕೋಹಳ್ಳ ಗ್ರಾಮದ ದೇವಪ್ಪನ ಜಮೀನಿಂದ ಶಿವಜಂನಯ್ಯನ ಜಮೀನುವರೆಗೆ ಮೆಟ್ಟಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸವನ್ನು 2021 ರ ನವೆಂಬರ್ ನಲ್ಲಿ ಶುರುಮಾಡಲಾಗಿದ್ದು. ಆರಂಭದಿಂದಲೇ ಕಳಪೇ ಕಾಮಗಾರಿ ಮಾಡಲಾಗಿದೆ. ಇದಲ್ಲದೆ ನರೇಗಾದಡಿ ಕೆಲಸವನ್ನು ಜೆಸಿಬಿ ಯಂತ್ರದಿಂದ ಬಳಸಿಕೊಂಡು ಕೆಲಸ ಮಾಡಲಾಗಿದ್ದು. ಸಮರ್ಪಕವಾಗಿ ಕೆಲಸ ಮಾಡಿಲ್ಲ. ಪಂಚಾಯಿತಿ ಸದಸ್ಯರು ತಮ್ಮ ಮನಬಂದಂತೆ ಕೆಲಸ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಮಗಾರಿ ಗೆ ಪಂಚಾಯಿತಿಯಿಂದ 3 ಲಕ್ಷ ಅನುದಾನ ಮಂಜೂರಾಗಿದ್ದು, ಮೆಟ್ಲಿಂಗ್  ಗೆ ಬಳಸಿದ ಜಲ್ಲಿ ಮಣ್ಣನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ರಸ್ತೆಯು ಹಳ್ಳ ದಿಣ್ಣೆಗಳಿಂದ ಕೂಡಿದ್ದು, ನೆನ್ನೇ ಸುರಿದ ಬಾರಿ ಮಳೆಗೆ ಮಳೆ ನೀರು ರಸ್ತೆಯನ್ನು ಕೊಚ್ಚಿಕೊಂಡು ಹೋಗಿದೆ. ಅಲ್ಲದೆ ನೀರು ಹೋಗಲು ಮೋರಿ ಹಾಕಲಾಗಿದ್ದು, ಕಳಪೆ ಗುಣಮಟ್ಟದ ಪೈಪುಗಳನ್ನು ಮೊರಿಗೆ ಅಳವಡಿಸಲಾಗಿದೆ.…

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಪನೋಂದಣಿ ಕಚೇರಿಯಲ್ಲಿ ಸ್ಟಾಂಪ್ ವೆಂಡರ್ ಗಳದ್ದೆ ಹಾವಳಿಯಾಗುತ್ತಿದ್ದು ಜನ ಸಾಮಾನ್ಯರ ಬಳಿ ಹಣವನ್ನು ದೋಚಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಪ್ರತಿದಿನ ಹಿರಿಯೂರು ತಾಲ್ಲೂಕಿನ ಉಪನೋಂದಣಿ ಕಛೇರಿಗೆ ಸಾವಿರಾರು ಜನರು ತಮ್ಮ ಕೆಲಸಗಳಿಗಾಗಿ ಆಗಮಿಸುತ್ತಾರೆ.  ಆದರೆ ಇಲ್ಲಿನ ಸ್ಟಾಂಪ್ ವೆಂಡರ್ ಗಳು ಉಪನೋಂದಣಿ ಕಛೇರಿಗೆ ಬರುವ ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಿ ಅವರಿಂದ ಹಣ ಸುಳಿಗೆ ಮಾಡಲಾಗುತ್ತಿದೆ. ಈ ಘಟನೆಗಳನ್ನು ಸರ್ಕಾರಿ ಆಡಳಿತ ಮಂಡಳಿ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಿರಿಯೂರು ತಾಲ್ಲೂಕಿನ ಉಪನೋಂದಣಿ ಕಛೇರಿಯಲ್ಲಿ ಎಲ್ಲೆಂದರಲ್ಲಿ ಬರಿ ಸ್ಟಾಂಪ್ ವೆಂಡರ್ ಹೆಸರನ್ನು ಬಳಸಿ‌ ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರವೇ ಪತ್ರಗಳು ಸಿಗುತ್ತವೆ ಎನ್ನಲಾಗುತ್ತಿದೆ. ಸಾರ್ವಜನಿಕರ ಹಣದೋಚುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.   ಇಂದಿನ ದಿನಗಳಲ್ಲಿ ಎಲ್ಲವೂ ಆನ್ ಲೈನ್ ಆಗಿರುವುದರಿಂದ ಸ್ಟಾಂಪ್ ವೆಂಡರ್ ಗಳ ಅವಶ್ಯಕತೆ ಸಹ ಬೇಕಾಗಿಲ್ಲ. ಆದರೆ ಇಲ್ಲಿ ಅಧಿಕಾರಿಗಳು ಸಹ ಸ್ಟಾಂಪ್…

Read More

ತುಮಕೂರು: ಭೂಮಿ ಮತ್ತು ವಸತಿ ಹೋರಾಟ ಸಮಿತಿ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತುಮಕೂರು ಜಿಲ್ಲಾ ಘಟಕ ಹಂದ್ರಾಳ್ ನಾಗಭೂಷಣ್ ಅವರ ನೇತೃತ್ವದಲ್ಲಿ ಭೂಮಿ ವಸತಿಗಾಗಿ ಅಹೋರಾತ್ರಿ ಧರಣಿಯನ್ನು ಮಾರ್ಚ್ 21 ರಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದು, ಧರಣಿ  ನಡೆಯುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭೇಟಿಯಾಗಿ ನನೆಗುದಿಗೆ ಬಿದ್ದಿರುವ ಭೂಮಿ ಮತ್ತು ವಸತಿ ಕಡತಗಳ ಪರಿಶೀಲನೆ ನಡೆಸಿ ಆಡಳಿತಾತ್ಮಕವಾಗಿ ಆಗಬೇಕಾದ ಎಲ್ಲಾ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿ ಜಿಲ್ಲಾಡಳಿತವು ಮಾಡಿ ಕೊಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿ ಧರಣಿ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಮುಖಂಡರಾದ  ಹಂದ್ರಾಳ್ ನಾಗಭೂಷಣ್ ಅವರು, ಈ ಹಿಂದೆ ಜಿಲ್ಲಾಧಿಕಾರಿಗಳು ನೀಡಿರುವ ಭೂಮಿಗೆ ಹಕ್ಕು ಪತ್ರ ನೀಡಲು  ಆದೇಶದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ, ಈ ಹಿಂದಿನ ಬ್ಯಾಲ್ಯ ಗ್ರಾಮ ಪಂಚಾಯ್ತಿಯ ಪಿಡಿಓ ಸಂತೋಷ್ ಸಿಂಗ್, ಹಾಲಿ ಪಿಡಿಓ ಮುದ್ದುರಾಜ್ ರವರನ್ನು ಕೂಡಲೇ ಅಮಾನತು ಗೊಳಿಸಬೇಕು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ…

Read More

ಕುಣಿಗಲ್:  ತಾಲ್ಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಮಡಿಕೆಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಯುತ್ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ನೇತೃತ್ವದಲ್ಲಿ ರಾಯೊಗೊನಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ನರೇಗಾ ಯೋಜನೆ ಅಡಿಯಲ್ಲಿ ನಕಲಿ ಜಾಬ್ ಕಾರ್ಡ್ ಆಗೂ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ನಡೆಸದೆ ಅಕ್ರಮವಾಗಿ ಬಿಲ್ ಮಾಡುವ ಮೂಲಕ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಹಾಗೂ ಮಡಿಕೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಯಗೋನಹಳ್ಳಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಅನುಮತಿ ಇಲ್ಲದೆ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗ್ರಾಮದಲ್ಲಿ ನರೇಗಾ ಯೊಜನೆಯಡಿಯಲ್ಲಿ ಕೆಲಸ ಮಾಡಬೇಕಾದರೆ ಗ್ರಾಮ ಪಂಚಾಯಿತಿ ಸದಸ್ಯರ ಅನುಮತಿ ಪಡೆದು ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಗ್ರಾಮ…

Read More

ತುಮಕೂರು: ತಾಲ್ಲೂಕು ಅಜ್ಜಿಪ್ಪನಹಳ್ಳಿ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧಪಟ್ಟ ಭೂ ದಾಖಲೆಗಳ ನೀಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲಕ್ಷ್ಮಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪತ್ರಕರ್ತ ಟೈಗರ್ ನಾಗ್  ಜೆಟ್ಟಿ ಅಗ್ರಹಾರ ನಾಗರಾಜು ಅವರ ದೂರಿನನ್ವಯ ರೆಡ್ ಹ್ಯಾಂಡ್ ಆಗಿ ಎಸಿಬಿ ಪೊಲೀಸರು  ಆರೋಪಿಯನ್ನು ಬಂಧಿಸಿದ್ದಾರೆ. ಲಕ್ಷ್ಮಯ್ಯ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 1,000 ಮುಂಗಡವಾಗಿ ಪಡೆದು ಇನ್ನುಳಿದ 4,000 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಇದೀಗ ಎಸಿಬಿ ಅಧಿಕಾರಿಗಳ ಅತಿಥಿಯಾಗಿದ್ದಾನೆ ತುಮಕೂರು ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಮತ್ತು ತಂಡಕ್ಕೆ ಜಿಲ್ಲೆಯ ನಾಗರಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರೆಕಾರ್ಡ್ ರೂಂ ಶಿರಸ್ತೆದಾರ ಮತ್ತು ತಹಸೀಲ್ದಾರ್ ಮೋಹನ್ ತಾಲ್ಲೂಕು ಕಛೇರಿಯಲ್ಲಿ ನೆಡೆಯುತ್ತಿರುವ ಈ ಭ್ರಷ್ಟಾಚಾರ ಅಕ್ರಮಗಳಿಗೆ ಕಾರಣ ಎಂದಿದ್ದಾರೆ ಲಕ್ಷಕ್ಕೂ ಅಧಿಕ…

Read More

ತುಮಕೂರು: ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರು ಕ್ಷೇತ್ರದ ತುಯಾಲಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡು ಹಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದ್ದಾರೆ. ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರು ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ ಎನ್ನುವ ಹಾಡು ಮತ್ತು ಇದು ಸೋಮನ ಅವತಾರ ರಾಮನ ಅವತಾರ ಎನ್ನುವ ಹಾಡುಗಳನ್ನು ಹಾಡುತ್ತ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದರು. ಗುಬ್ಬಿ ತಾಲೂಕಿನ ಹಿಂಡಿಸಿಗೆರೆ ಗ್ರಾಮದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಸಹ ಶಾಸಕರ ಮಸಾಲ ಜಯರಾಮ್ ಬಡ್ಡಿ ಹಾಡುವ ಮೂಲಕವೇ ವಿಶೇಷವಾಗಿ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ. ಇನ್ನೂ ಶಾಸಕರ ಹಾಡಿರುವ ಹಾವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವರದಿ: ಮಾರುತಿ ಪ್ರಸಾದ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More