ಸರಗೂರು: ಸಮೀಪದ ಹಂಪಾಪುರ ಗ್ರಾಮ ಪಂಚಾಯಿತಿಯ ಕೋಹಳ್ಳ ಗ್ರಾಮದಲ್ಲಿ 2021-2022 ನೇ ಸಾಲಿನಲ್ಲಿ ನರೇಗಾದಡಿಯಲ್ಲಿ ನಡೆಸಲಾದ ಮೇಟ್ಲಿಂಗ್ ಕಾಮಗಾರಿ ರಸ್ತೆ ಕಾಮಗಾರಿಕಳಪೆಯಿಂದ ಕೂಡಿದ್ದು. ಸೂಕ್ತ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಅಗ್ರಹಸಿದ್ದಾರೆ
ಕೋಹಳ್ಳ ಗ್ರಾಮದ ದೇವಪ್ಪನ ಜಮೀನಿಂದ ಶಿವಜಂನಯ್ಯನ ಜಮೀನುವರೆಗೆ ಮೆಟ್ಟಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲಸವನ್ನು 2021 ರ ನವೆಂಬರ್ ನಲ್ಲಿ ಶುರುಮಾಡಲಾಗಿದ್ದು. ಆರಂಭದಿಂದಲೇ ಕಳಪೇ ಕಾಮಗಾರಿ ಮಾಡಲಾಗಿದೆ. ಇದಲ್ಲದೆ ನರೇಗಾದಡಿ ಕೆಲಸವನ್ನು ಜೆಸಿಬಿ ಯಂತ್ರದಿಂದ ಬಳಸಿಕೊಂಡು ಕೆಲಸ ಮಾಡಲಾಗಿದ್ದು. ಸಮರ್ಪಕವಾಗಿ ಕೆಲಸ ಮಾಡಿಲ್ಲ. ಪಂಚಾಯಿತಿ ಸದಸ್ಯರು ತಮ್ಮ ಮನಬಂದಂತೆ ಕೆಲಸ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಮಗಾರಿ ಗೆ ಪಂಚಾಯಿತಿಯಿಂದ 3 ಲಕ್ಷ ಅನುದಾನ ಮಂಜೂರಾಗಿದ್ದು, ಮೆಟ್ಲಿಂಗ್ ಗೆ ಬಳಸಿದ ಜಲ್ಲಿ ಮಣ್ಣನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ರಸ್ತೆಯು ಹಳ್ಳ ದಿಣ್ಣೆಗಳಿಂದ ಕೂಡಿದ್ದು, ನೆನ್ನೇ ಸುರಿದ ಬಾರಿ ಮಳೆಗೆ ಮಳೆ ನೀರು ರಸ್ತೆಯನ್ನು ಕೊಚ್ಚಿಕೊಂಡು ಹೋಗಿದೆ.
ಅಲ್ಲದೆ ನೀರು ಹೋಗಲು ಮೋರಿ ಹಾಕಲಾಗಿದ್ದು, ಕಳಪೆ ಗುಣಮಟ್ಟದ ಪೈಪುಗಳನ್ನು ಮೊರಿಗೆ ಅಳವಡಿಸಲಾಗಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಕಾಮಗಾರಿ ಕಳಪೆಯಿಂದ ಕೂಡಿದ್ದರೂ ಅಧಿಕಾರಿಗಳು ಕಾಮಗಾರಿ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡದೇ ಬಿಲ್ ಮಾಡಿದ್ದಾರೆ. ಕಳಪೆ ಕಾಮಗಾರಿ ಮಾಡಲಾದ 3 ಪಂಚಾಯಿತಿ ಸದಸ್ಯರೊಂದಿಗೆ ಶಾಮೀಲಾಗಿದ್ದಾರೆ ಹೀಗಾಗಿ ಸೂಕ್ತ ತನಿಖೆ ನಡೆಸಿ.ತಪ್ಪಿದಸ್ಥರಿಗೆ ಸೂಕ್ತ ಕ್ರಮವಹಿಸಬೇಕು ಇಲ್ಲವಾದಲ್ಲಿ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5