ತುಮಕೂರು: ತಾಲ್ಲೂಕು ಅಜ್ಜಿಪ್ಪನಹಳ್ಳಿ ಸರ್ವೇ ನಂಬರ್ ನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧಪಟ್ಟ ಭೂ ದಾಖಲೆಗಳ ನೀಡಲು 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಲಕ್ಷ್ಮಯ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅಕ್ರಮ ಗಣಿಗಾರಿಕೆಯ ವಿರುದ್ಧ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಪತ್ರಕರ್ತ ಟೈಗರ್ ನಾಗ್ ಜೆಟ್ಟಿ ಅಗ್ರಹಾರ ನಾಗರಾಜು ಅವರ ದೂರಿನನ್ವಯ ರೆಡ್ ಹ್ಯಾಂಡ್ ಆಗಿ ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಲಕ್ಷ್ಮಯ್ಯ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 1,000 ಮುಂಗಡವಾಗಿ ಪಡೆದು ಇನ್ನುಳಿದ 4,000 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಇದೀಗ ಎಸಿಬಿ ಅಧಿಕಾರಿಗಳ ಅತಿಥಿಯಾಗಿದ್ದಾನೆ
ತುಮಕೂರು ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಮತ್ತು ತಂಡಕ್ಕೆ ಜಿಲ್ಲೆಯ ನಾಗರಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ರೆಕಾರ್ಡ್ ರೂಂ ಶಿರಸ್ತೆದಾರ ಮತ್ತು ತಹಸೀಲ್ದಾರ್ ಮೋಹನ್ ತಾಲ್ಲೂಕು ಕಛೇರಿಯಲ್ಲಿ ನೆಡೆಯುತ್ತಿರುವ ಈ ಭ್ರಷ್ಟಾಚಾರ ಅಕ್ರಮಗಳಿಗೆ ಕಾರಣ ಎಂದಿದ್ದಾರೆ ಲಕ್ಷಕ್ಕೂ ಅಧಿಕ ಹಣ ಪಡೆದು ತಹಸೀಲ್ದಾರ್ ಕೊರ್ಟ್ ನಲ್ಲಿ ಆದೇಶ ಮಾಡುತ್ತಿದ್ದಾರೆ ತನಿಖೆ ಮಾಡಲು ಸಾಮಾಜಿಕ ಕಾರ್ಯಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಎಸಿಬಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ
ಭ್ರಷ್ಟ ಲಕ್ಷ್ಮಯ್ಯ ಒಂದು ಮೀನು ಅಷ್ಟೇ ಇನ್ನೂ ದೊಡ್ಡ ದೊಡ್ಡ ಭ್ರಷ್ಟ ತಿಮಿಂಗಿಲಗಳು ಇದ್ದಾವೆ ಅತಿ ಶೀಘ್ರದಲ್ಲೇ ಬೇಟೆ ಆಡುವುದೇ ನಮ್ಮ ತಂಡದ ಕೆಲಸ ಪ್ರತಿಯೋಬ್ಬ ಭ್ರಷ್ಟ ಅಧಿಕಾರಿಗಳಿಗೆ ಕೆಲವು ಭ್ರಷ್ಟ ರಾಜಕಾರಣಿಗಳ ಬೆಂಬಲವಿದೆ. ಆದರೆ ನಾವು ಅದು ಯಾವುದಕ್ಕೂ ಹೆದರುವವರಲ್ಲ ನ್ಯಾಯಬದ್ಧ ಸಂವಿಧಾನಾತ್ಮಕವಾಗಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಡೆ ತೀರುತ್ತೇವೆ ಎಂದರು ಈ ಸಮಯದಲ್ಲಿ ಉಪಾಧ್ಯಕ್ಷ ಸುರೇಶ್ ಇದ್ದರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5