Author: admin

ಹೆಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಡಾ.ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಎಲ್ಲಾಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕೃಷ್ಣಮೂರ್ತಿ ಚಾಮರಂ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನದ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾನತೆಯನ್ನ ಕಾಣಲು ಸಾಧ್ಯ. ಹಗಲು ರಾತ್ರಿ ಎನ್ನದೇ ಪರಿಶ್ರಮಪಟ್ಟು ಬಹಳ ಉತ್ತಮವಾದ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಇದರ ಪೀಠಿಕೆಯನ್ನ ಬರೆಯಬೇಕಾದರೆ ಬಹಳ ಜ್ಞಾನರ್ಜನೆಯಿಂದ ರಚಿಸಿದ್ದಾರೆ ಎಂದರು. ನಾವು ಭಾರತವನ್ನ ಅಖಂಡ ರಾಷ್ಟವಾಗಿ ಕಟ್ಟಲು ನಾವು ಧರ್ಮನಿರಾಪೇಕ್ಷೆಯಿಂದ ಜೀವಿಸಬೇಕು. ಯುವ ಜನರನ್ನ ಜಾತಿ ಧರ್ಮವನ್ನು ಪ್ರೀತಿಸಲು ತಿಳಿಹೇಳದ ರಕ್ತ ರಹಿತ ದೇಶವನ್ನು ಕಟ್ಟಲು ತಿಳಿಹೇಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಸಹ ಈ ತಾಲ್ಲೂಕಿನಲ್ಲಿ ಒಬ್ಬ ಶಾಸಕನಾಗಲೂ ಕಾರಣ ಅಂಬೇಡ್ಕರ್ ನೀಡಿದ ಸಂವಿಧಾನ. ನಾವೆಲ್ಲಾ ಏಕತೆಯಿಂದ…

Read More

ಹೆಚ್.ಡಿ.ಕೋಟೆ: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಪ್ರಾರಂಭವಾಗಲಿದೆ ಎಲ್ಲಾರು ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಮುಂದಾಗಬೇಕು ಎಂದು ವೃತ್ತ ನಿರೀಕ್ಷಕ ಶಬ್ಬೀರ್ ಹುಸೇನ್ ಹೇಳಿದರು. ಹೆಚ್.ಡಿ.ಕೋಟೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಎಲ್ಲಾ ಸಮಾಜದ ಮುಖಂಡರನ್ನು ಹಾಗೂ ನಾಗರಿಕರನ್ನು ಕರೆಯಿಸಿ ಶಾಂತಿ ಸೌಹಾರ್ದತೆಯಿಂದ ಗೌರಿಗಣೇಶ ಹಬ್ಬವನ್ನು ಆಚರಿಸುವಂತೆ ಅವರು ಮನವಿ ಮಾಡಿಕೊಂಡರು. ಹೆಚ್ ಡಿ ಕೋಟೆಯಲ್ಲಿ ಸರ್ವಜನಾಂಗವು ಜೀವನ ನಡೆಸುತ್ತಿದ್ದಾರೆ ಯಾವುದೇ ಧರ್ಮದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಕೂರಿಸುವವರು ನಿಮ್ಮ ನಿಮ್ಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪೂರ್ವನುಮತಿಯನ್ನು ಪಡೆದು ಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ಸ್ ಅಳವಡಿಸಬಾರದೆಂದು ಕಿವಿಮಾತು ಹೇಳಿದರು. ಗಣಪತಿಯನ್ನು ವಿಸರ್ಜನೆಯನ್ನು ಸಂಜೆ ಆರು ಘಂಟೆಯೊಳಗೆ ನೆರವೇರಿಸಿದರೆ ಉತ್ತಮ ಎಂದು ತಿಳಿಸಿದರಲ್ಲದೇ, ಅಹಿತಕರ ಘಟನೆಗಳು ಸಂಭವಿಸಿದರೆ, ಅಂತವರ ವಿರುದ್ದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು. ವರದಿ: ಮಲಾರ ಮಹದೇವಸ್ವಾಮಿ

Read More

ಶುಕ್ರವಾರದಿಂದ ಎರಡು ದಿನಗಳ ಕಾಲ ಕಾಲೇಜಿನಲ್ಲಿ ನಡೆಯಲಿರುವ ಕಲ್ಪ ಜ್ಞಾನ ದರ್ಪಣ ಕೆ.ಸಿ. ಎಸ್ ಎಜುಕೇಶನ್ ಫೇರ್ ಕಾರ್ಯಕ್ರಮದಲ್ಲಿ ಮೈಸೂರು ಆನೆ, ಅಂಬಾರಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಖ್ಯಾತ ವೈದ್ಯರಾದ ಡಾ. ಜಿ ಎಸ್ ಶ್ರೀಧರ್ ಅವರು, ಈ ವಸ್ತು ಪ್ರದರ್ಶನದ ಅಂಗವಾಗಿ ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿಯ ಪ್ರತಿಕೃತಿ ಮಾಡಿಸಿ ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಮೈಸೂರಿನ ಕುಕ್ಕರಹಳ್ಳಿಯ ಕಲಾವಿದ ಮಂಜು ಈ ಆನೆ, ಅಂಬಾರಿ ಪ್ರತಿಕೃತಿ ರಚಿಸಿದ್ದು, ಸುಮಾರು ಎಂಟು ಅಡಿ ಉದ್ದ, ಆರು ಅಡಿ ಅಗಲ ಮತ್ತು ಹತ್ತು ಅಡಿ ಎತ್ತರದ ಈ ಪ್ರತಿಕೃತಿ ಅತ್ಯಂತ ಆಕೃರ್ಷಕವಾಗಿದ್ದು ನೋಡುಗರ ಗಮನ ಸೆಳೆಯುತ್ತದೆ. ಸುಮಾರು ಹತ್ತು ಜನ ಕಲಾವಿದರು 11 ದಿನಗಳ ಕಾಲ ನಿರ್ಮಿಸಿರುವ ಆನೆ, ಅಂಬಾರಿಯ ಪ್ರತಿಕೃತಿ ಸಾರ್ವಜನಿಕ ಪ್ರದರ್ಶನಕ್ಕೂ ಇರಲಿದೆ. ವರದಿ: ಆನಂದ್ ತಿಪಟೂರು

Read More

ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಪೀಠಿಕೆ ಓದುವ ಬೃಹತ್ ಸಾಮೂಹಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾವಿರಾರು ಶಾಲಾ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಮೂಲಕ ಕಾರ್ಯಕ್ರಮವನ್ನು ಮುಂದುವರಿಸಿದರು.

Read More

ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಿಂದೂ ಸಂಘಟನೆಗೂ ಇದಕ್ಕೂ ತಳಕು ಹಾಕುವುದು ಸರಿಯಲ್ಲ. ಹಿಂದೂ ಪರ ಭಾಷಣ ಮಾಡಿರುವುದನ್ನು ನಾನೂ ನೋಡಿದ್ದೇನೆ. ಆದರೆ ಈ ವಿಚಾರವನ್ನು ಸಂಘಟನೆಗೆ ಸೇರಿಸುವುದು ಸರಿಯಲ್ಲ. ಇದೊಂದು ಪ್ರತ್ಯೇಕ ಪ್ರಕರಣ ಅಂತಲೇ ಪರಿಗಣಿಸಬೇಕಾಗುತ್ತದೆ ಎಂದರು.

Read More

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲೇ ಒಟ್ಟು 13,000 ಸಿಬ್ಬಂದಿ ನೇಮಕ ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಿಜೆಪಿ ಶಾಸಕ S.T.ಸೋಮಶೇಖರ್ ನೇತೃತ್ವದಲ್ಲಿ ಯಶವಂತಪುರ ಕ್ಷೇತ್ರದ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿದ್ದಾರೆ. ನಗರದಲ್ಲಿ ಬಸ್ ಸಮಸ್ಯೆ, ಟಿಟಿಎಂಸಿಯಲ್ಲಿ ಇರಬೇಕಾದ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಖಾಸಗಿ ಬಸ್ ಗಳಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ವಿಚಾರವಾಗಿ ಮಾತನಾಡಿ, ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದರೆ ಕಾನೂನು ಕ್ರಮದ ಎಚ್ಚರಿಕೆ‌ ನೀಡಿದ್ದೇವೆ. ಗೌರಿ ಗಣೇಶ ಹಬ್ಬಕ್ಕೆ ಹೆಚ್ಚುವರಿ ಬಸ್ಗಳನ್ನು ಬಿಡಲು ನಿರ್ಧರಿಸಿದ್ದೇವೆ. ಶಾಸಕ ಎಸ್.ಟಿ.ಸೋಮಶೇಖರ್ ಜತೆ ರಾಜಕೀಯ ಚರ್ಚೆ ಮಾಡಿಲ್ಲ. ಸೋಮಶೇಖರ್ ಮರುಸೇರ್ಪಡೆ ಆಗುತ್ತೇನೆ ಅಂದರೆ ಯೋಚಿಸೋಣ ಎಂದು ಹೇಳಿದ್ದಾರೆ.

Read More

ಅಕ್ಟೋಬರ್ 1 ರಿಂದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಮಾಹಿತಿ ನೀಡಿದ್ದಾರೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡಿಕೆ, ಮತದಾರರ ಪಟ್ಟಿ ಉದ್ದೇಶಕ್ಕೆ ಜನನ ಪ್ರಮಾಣಪತ್ರ ಒಂದೇ ದಾಖಲೆಯಾಗಿ ಬಳಸಲು ಈ ಕಾನೂನು ಅನುಮತಿಸುತ್ತದೆ.

Read More

ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಅಧ್ಯಕ್ಷ ಡಾ. ಪೀಟರ್ ಮಚಾದೊ ಅವರ ನೇತೃತ್ವದ ಧರ್ಮಾಧ್ಯಕ್ಷರ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದಿಸಿ, ಹಲವು ಶೈಕ್ಷಣಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ಮುಂದಿಟ್ಟಿತು. ನಿಯೋಗದಲ್ಲಿ ಧರ್ಮಾಧ್ಯಕ್ಷರುಗಳಾದ ಡಾ. ಚಿರಾಲ್ಡ್ ಐಸಾಕ್ ಲೋಬೋ, ಡಾ.ಗೀವರ್ಗೀಸ್ ಮಕಾರಿಯೋಸ್, ಡಾ.ಪೀಟರ್ ಪೌಲ್ ಸಲ್ದಾನಾ, ಡಾ. ಡೆರಿಕ್ ಫೆರ್ನಾಂಡೀಸ್, ಡಾ. ರಾಬರ್ಟ್ ಮಿರಾಂಡ, ಡಾ. ಫ್ರಾನ್ಸಿಸ್ ಸೆರಾವೋಗಳಿದ್ದರು.

Read More

ಬೆಂಗಳೂರು: ಹೆಂಡತಿ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ ತನ್ನ ಸ್ನೇಹಿತನನ್ನೇ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿಶೀಟರ್ ಕೆಂಪೇಗೌಡನನ್ನು ಬಂಧಿಸಿದ್ದಾರೆ. ರಮೇಶ್ ಹಾಗೂ ಕೆಂಪೇಗೌಡ ಸ್ನೇಹಿತರಾಗಿದ್ದರು. ಬಾರ್ ‌ನಲ್ಲಿ ಒಟ್ಟಿಗೆ ಕುಳಿತು ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದರು. ಈ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ ರಮೇಶ್ ಕಪಾಳಕ್ಕೆ ಹೊಡೆದಿದ್ದಾನೆ.

Read More

ಬೆಂಗಳೂರು: ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಗೊಲ್ಲರಹಟ್ಟಿ ನಿವಾಸಿ ಆರ್. ಮೈಲಾರಿ, ನವೀನ್ ಕುಮಾರ್, ಶಿವರಾಜ ಬಂಧಿತ ಆರೋಪಿಗಳು. ಸೋಮಶೇಖರ್ ಮತ್ತು ಕೀರ್ತಿರಾಜ್ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಆರೋಪಿಗಳು 24ರಂದು ರಾತ್ರಿ ಅಶುತೋಷ್ ಸಿಂಗ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರು.

Read More