Author: admin

ಉಳ್ಳಾಲ: ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್‌ (52) ಎಂಬವರ ಮೃತದೇಹ ಸೋಮವಾರ ಬೆಳಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಪುತ್ರನ ಆತ್ಮಹತ್ಯೆ ನಡೆದ 32 ದಿನಗಳ ಅಂತರದಲ್ಲಿ ತಂದೆಯೂ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಪುತ್ರ ರಾಜೇಶ್‌ (26) ಕಳೆದ ಜು.10 ರಂದು ನಾಪತ್ತೆಯಾಗಿದ್ದು, ಬಳಿಕ ರಾಜೇಶ್‌ ನ ಮೃತದೇಹ 12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಂತ್ಯಕ್ರಿಯೆ ಕಳೆದ ಬಳಿಕ ತಂದೆ ಲೋಕೇಶ್‌ ನೊಂದು ಕೊಂಡಿದ್ದರು. ಅಲ್ಲದೆ ಮಗನ ಸಾವಿನ ಬಳಿಕ ಮಾನಸಿಕವಾಗಿ, ಕುಗ್ಗಿ ಹೋಗಿದ್ದರು. ಆ.13 ರಂದು ಬೆಳಗ್ಗೆ 9 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್‌ ರವರು ಮೊಬೈಲ್‌ ಮೂಲಕ ವಾಟ್ಸಾಪ್ ಸಂದೇಶ ಕಳುಹಿಸಿ ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು ನಾನು ಮೊಬೈಲ್‌ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ ಎಂದು ಹೇಳಿ ಮನೆಯಿಂದ…

Read More

ತುಮಕೂರು: ಬಟ್ಟೆ ತೊಳೆಯಲು ಕೆರೆ ಬಳಿ ಹೋಗಿದ್ದ ಮಹಿಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತ ಪಟ್ಟಿರುವ ಘಟನೆ ತುಮಕೂರು ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೌಂದರ್ಯ(26) ಮೃತ ಮಹಿಳೆಯಾಗಿದ್ದಾರೆ. ಗೋಕಟ್ಟೆಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದಿದ್ದರೆ, ಸ್ಥಳದಲ್ಲಿ ಯಾರು ಇಲ್ಲದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಗಿಲ್ಲ. ತಿಮ್ಮನಾಯಕನಹಳ್ಳಿಯ ತವರು ಮನೆಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಗುರುವಾರ ಮದ್ಯಾಹ್ನ ಬಟ್ಟೆತೊಳೆಯಲು ಗೋಕಟ್ಟೆಗೆ ಹೋಗಿದ್ದ ಸೌಂದರ್ಯ,  ಮನೆಗೆ ವಾಪಸ್ ಬಾರದೇ ಇದ್ದ ಕಾರಣ ಗಂಡನ ಮನೆಗೆ ಹೋಗಿರಬೇಕು ಎಂದು ಭಾವಿಸಿದ್ದರು. ಶುಕ್ರವಾರ ಬೆಳಿಗ್ಗೆ ಗ್ರಾಮಸ್ತರು ಗೋಕಟ್ಟೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸೌಂದರ್ಯ ಅವರ ಮೃತದೇಹ ಗೋಕಟ್ಟೆಯ ಬಳಿ ಪತ್ತೆಯಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಮಕೃಷ್ಣ ನಗರದ ಡಿ ಬ್ಲಾಕ್ ನಿವಾಸಿ ಸಮರ್ಥ್(25), ಗಿರಿದರ್ಶಿನಿ ಲೇಔಟ್ ನ ಉತ್ಸವ್ (19) ಬಂಧಿತರು. ಇವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು 2ಲಾಂಗ್, ಕಾರು ವಶಕ್ಕೆ ಪಡೆದಿದ್ದಾರೆ. ಜತೆಗೆ 7 ಮಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಇವರ ಸ್ನೇಹಿತರಾದ ರಾಹುಲ್, ಮನೋಜ್‌, ದರ್ಶನ್, ಅಭಿ ಮತ್ತು ಮರ್ಡಿನ್ ಎಂಬ ಯುವಕನನ್ನು ಹೆದರಿಸಲು ಕಾರಿನಲ್ಲಿ ಲಾಂಗ್‌ ಗಳನ್ನಿಟ್ಟುಕೊಂಡು ಕಾಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಪ್ಲೆಕ್ಸ್ ಬಳಿ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಕಾರನ್ನು ನಿಲ್ಲಿಸಿಕೊಂಡಿರುವ ಯುವಕರ ತಂಡ ಅನುಮಾನಾಸ್ಪದವಾಗಿ ವರ್ತಿಸುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದಾರೆ. ಪೊಲೀಸರು ಬರುವುದನ್ನು ಕಂಡು ಕೆಲ ಯುವಕರು ಓಡಿ ಹೋಗಿದ್ದಾರೆ. ಇವರಲ್ಲಿ ಸಮರ್ಥ ಮತ್ತು ಉತ್ತಮ್ ಮಾತ್ರ ಪೊಲೀಸರಿಗೆ ಸಿಕ್ಕಿದ್ದಾರೆ. ಲಾಂಗ್‌ ಗಳನ್ನು ತೋರಿಸಿ ಬೆದರಿಸಲು ಈ ಯುವಕರು ನಿಂತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ತನಿಖೆ ಮುಂದುವರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149…

Read More

ಗೃಹಪ್ರವೇಶ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದ ಅಪರಿಚಿತರು ಹಾಡಹಗಲೇ ಚಿನ್ನದ ವ್ಯಾಪಾರಿ ಮತ್ತು ಪತ್ನಿಯ ಮೇಲೆ ಚಾಕು ಇರಿದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೂಟಗಳ್ಳಿಯ ಕೆಎಚ್ ಬಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬಾಬುರಾವ್ (57), ಪತ್ನಿ ಕಮಲಬಾಯಿ (52) ಚಾಕು ಇರಿತಕ್ಕೆ ಒಳಗಾದವರು. ಅಪರಿಚಿತರಿಬ್ಬರು ಗೃಹಪ್ರವೇಶ ಆಹ್ವಾನ ಪತ್ರ ನೀಡುವ ನೆಪದಲ್ಲಿ ಬಂದು ಚಿನ್ನದ ವ್ಯಾಪಾರಿ ಬಾಬುರಾವ್ ರನ್ನ ನಿಮ್ಮ ಪುತ್ರ ಹರೀಶ್ ಎಲ್ಲಿ ಎಂದು ಕೇಳಿದ್ದಾರೆ. ಹರೀಶ್ ಮನೇಲಿ ಇಲ್ಲ ಎಂದು ಬಾಬುರಾವ್ ಎಂದು ಹೇಳಿದ್ದಾರೆ. ಈ ವೇಳೆ ಕುಪಿತಗೊಂಡ ಅಪರಿಚಿತರಿಬ್ಬರು ಬಾಬುರಾವ್ ಮತ್ತು ಪತ್ನಿ ಕಮಲಬಾಯಿಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe…

Read More

ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ವಿತರಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸುವ ಯೋಜನೆ ಆ.18ರಿಂದ ಜಾರಿಗೆ ಬರಲಿದೆ. ಮೊದಲು ಮಂಡ್ಯ ಜಿಲ್ಲೆಯಲ್ಲಿ ಈ ಯೋಜನೆ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ, ಈ ಯೋಜನೆಯನ್ನು 10ನೇ ತರಗತಿವರೆಗೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಧ್ಯಾಹ್ನದ ಊಟದ ಜತೆಗೆ ಮೊಟ್ಟೆ, ಬಾಳೆಹಣ್ಣು ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಹಿಂದೆ ಶಾಲಾ ಆವರಣದಲ್ಲಿ ಮೊಟ್ಟೆಗಳನ್ನು ವಿತರಿಸದಂತೆ ಒಂದು ವರ್ಗದಿಂದ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಉತ್ತರ ಪ್ರದೇಶದ ವಾರಣಾಸಿಯ ಜನ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ ಸಜೋಯ್ ಗ್ರಾಮದ ನಿವಾಸಿ ಧೀರಜ್ ಶ್ರೀವಾಸ್ತವ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸೋಮವಾರ ಹಿರಿಯ ಮಗನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಆಗ ಕಿರಿಯ ಮಗ ಫ್ರಾಂಜಾಲ್ (8) ಕೇಕ್ ತುಂಡು ತಿಂದಿದ್ದಾನೆ. ಆದರೆ ಕೇಕ್ ತುಂಡು ಗಂಟಲಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 2 ದಿನಗಳ ಚಿಕಿತ್ಸೆ ಬಳಿಕ ಬಾಲಕ ಮೃತಪಟ್ಟಿದ್ದಾನೆ. ಕೆಲ ದಿನಗಳ ಹಿಂದೆ ಹಿರಿಯ ಮಗನ ಹುಟ್ಟು ಹಬ್ಬವನ್ನು ಕುಟುಂಬ ಸಮೇತರಾಗಿ ಆಚರಿಸಿದ್ದು, ಇದೀಗ ಕಿರಿಯ ಮಗನ ಸಾವಿನಿಂದ ದುಃಖದಲ್ಲಿ ಮುಳುಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ಬೈಕ್ ಸವಾರ ದಾಸಪ್ಪ (42) ಅವರು ಮೃತಪಟ್ಟಿದ್ದು, ಈ ಸಂಬಂಧ ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಂಧ್ರಪ್ರದೇಶದ ಮಡಕಶಿರಾದ ದಾಸಪ್ಪ, ನಗರದ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ‘ಗುರುವಾರ ಮಧ್ಯಾಹ್ನ ಬೈಕ್‌ ನಲ್ಲಿ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸ್ ಮೂಲಗಳು ಹೇಳಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ಸರ್ಕಾರ ಅನುದಾನ ತಡೆಹಿಡಿದಿರುವುದನ್ನು ಖಂಡಿಸುತ್ತೇನೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿದ್ದೆವು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಎರಡನೇ ಕಂತು ಬಿಡುಗಡೆ ಆಗಿರಲಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ. ಗ್ಯಾರಂಟಿ ಯೋಜನೆ ಜಾರಿ ಮಾಡಿದರೂ ಅನುದಾನ ನಿಲ್ಲಿಸಬೇಡಿ ಎಂದು ಅವರು ಆಗ್ರಹಿಸಿದ್ದಾರೆ.

Read More

ತುಮಕೂರು ನಗರದಲ್ಲಿರುವ ಸರಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ 77ನೇ ಸ್ವಾತಂತ್ರೋತ್ಸವವನ್ನು ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಮೂಲಕ ಆಚರಿಸಲಾಯಿತು.  ಇದೇ ವೇಳೆ ಕಾಲೇಜಿನಲ್ಲಿ ಕಲಿಯುತ್ತಿರುವ ಬಿ.ವಿ.ಎ ಪದವಿ ವಿದ್ಯಾರ್ಥಿಗಳು ತಾವೇ ರಚಿಸಿದ ವಿವಿಧ ವರ್ಣ ಚಿತ್ರಗಳನ್ನು ಕಾಲೇಜಿನಲ್ಲಿ ಪ್ರದರ್ಶಿಸಲಾಯಿತು. ಕಾಲೇಜಿನ  ಪ್ರಾಂಶುಪಾಲರಾದ ಸಿ.ಸಿ.ಬಾರಕೇರರವರು, ಧ್ವಜಾರೋಹಣ ನೆರವೇರಿಸಿ ಮಾತನಾಡಿ,  ಸ್ವಾತಂತ್ರ್ಯ ನಮ್ಮ ಹಕ್ಕು ಹಾಗಂತ ಸ್ವೇಚ್ಛೆಯಿಂದ ಬಾಳದೆ ಪರಧರ್ಮ- ಸಹಿಷ್ಣುತೆ, ವಿವಿಧ ಭಾಷೆ,  ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಹಾಗೂ ದೇಶದ ಕಲಾ ಪರಂಪರೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು. ಚಿತ್ರಕಲಾ ಪ್ರದರ್ಶನದ ಉದ್ಘಾಟಕರಾಗಿ ಆಗಮಿಸಿದ ತುಮಕೂರಿನ ಹಿರಿಯ ಚಿತ್ರಕಲಾವಿದರು ಹಾಗೂ ನಿವೃತ್ತ ಶಿಕ್ಷಕರಾದ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ, ಕಲಾ ವಿದ್ಯಾರ್ಥಿಗಳು ಸಾಹಿತ್ಯಾಭ್ಯಾಸವನ್ನು ರೂಢಿಸಿಕೊಂಡು  ಅರ್ಥಪೂರ್ಣ ಕಲಾಕೃತಿಗಳನ್ನು ರಚಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು  ಹಾಗೂ  ನಮ್ಮತುಮಕೂರು ವಾಹಿನಿಯ ಸಂಸ್ಥಾಪಕರಾದ ನಟರಾಜು ಜಿ.ಎಲ್. ಮಾತನಾಡಿ,  ನಾನು ಸಹ ಇದೇ ಕಾಲೇಜಿನಲ್ಲಿ…

Read More

ಸಾಧ್ಯವಿಲ್ಲದ ಭಯಾನಕ ಘಟನೆಯೊಂದು ನಡೆದಿದೆ. ಇನ್ನೂ ಮಕ್ಕಳು ಎಂದು ನಾವೆಲ್ಲ ಪರಿಗಣಿಸುವ 9 ಮತ್ತು 10ನೇ ಕ್ಲಾಸಿನ ವಿದ್ಯಾರ್ಥಿಗಳು ತಮ್ಮದೇ ಗೆಳೆಯನೊಬ್ಬನನ್ನು ಸಲಿಂಗ ಕಾಮಕ್ಕೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ ಕ್ರೌರ್ಯವಿದು. ಇದು ನಡೆದಿರುವುದು ಎಲ್ಲೋ ದೂರದಲ್ಲಿ ಅಲ್ಲ. ನಮ್ಮದೇ ರಾಜ್ಯದ ತುಮಕೂರಿನ ಕೆಂಪೇಗೌಡ ವಸತಿ ಶಾಲೆಯಲ್ಲಿ. ಇಲ್ಲಿ ಲ್ಯಾಗಿಂಗ್ ಅಥವಾ ಸೆಕ್ಸ್ ಬಯಕೆಯ ಕ್ರೌರ್ಯ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಕೆಲವು ವಿದ್ಯಾರ್ಥಿಗಳು ಅತ್ಯಂತ ಅಸಹ್ಯ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಒಬ್ಬ ವಿದ್ಯಾರ್ಥಿಯ ಬಾಯಿಗೆ ಇತರ ಕೆಲವು ವಿದ್ಯಾರ್ಥಿಗಳು ತಮ್ಮ ಗುಪ್ತಾಂಗವನ್ನು ಇಟ್ಟು ಅಸಹ್ಯ ಪ್ರದರ್ಶನ ಮಾಡಿದ್ದಾರೆ. ಆತ ಅದಕ್ಕೆ ಒಪ್ಪದೆ ಇದ್ದದ್ದಕ್ಕೆ ಸಲಿಂಗ ಕಾಮಕ್ಕೆ ಸಹಕರಿಸದೆ ಇದ್ದದ್ದಕ್ಕೆ ಅವನಿಗೆ ಬ್ಲೇಡ್ ನಿಂದ ಕೊಯ್ದು, ಕೌರ್ಯ ನಡೆಸಿದ್ದಾರೆ. ತುಮಕೂರಿನ ಕೆಂಪೇಗೌಡ ವಸತಿ ಶಾಲೆಯಲ್ಲಿ ಈ ಭಯಾನಕ ಘಟನೆ ನಡೆದಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಒಂಬತ್ತನೇ ತರಗತಿ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿಗಳು ನಿತ್ಯ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎನ್ನಲಾಗಿದೆ. ಆತ ಹೋಮೋಸೆಕ್ಸ್ಗೆ ವಿರೋಧಿಸಿದ್ದಕ್ಕೆ ಸಿಗರೇಟ್…

Read More