Author: admin

ಶಿವಮೊಗ್ಗ: ಶಾಲೆಯೊಂದರಲ್ಲಿ ಬ್ರಾಹ್ಮಣ ಬಾಲಕಿಗೆ ಒತ್ತಾಯಪೂರ್ವಕವಾಗಿ ಮೊಟ್ಟೆ ತಿನ್ನಿಸಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೋಷಕರು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ಶಾಲೆಯೊಂದರಲ್ಲಿ 2ನೇ ತರಗತಿ ಒದುತ್ತಿರುವ ವಿದ್ಯಾರ್ಥಿನಿಗೆ ಶಿಕ್ಷಕರು ಒತ್ತಾಯ ಮಾಡಿ ಮೊಟ್ಟೆ ತಿನ್ನಿಸಿದ್ದಾರೆ. ಒಲ್ಲದೆ ಮೊಟ್ಟೆ ತಿಂದಿದ್ದರಿಂದ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ಮನಸ್ಸಿಗೂ ಘಾಸಿಯಾಗಿದೆ ಎಂದು ವಿದ್ಯಾರ್ಥಿನಿಯ ಪೋಷಕರು ತಿಳಿಸಿದ್ದಾರೆ.

Read More

ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆಗಳ ಹೆಸರಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಮೋದಿಯನ್ನು ಜೇಬುಗಳ್ಳ ಎಂದು ಲೇವಡಿ ಮಾಡಿದ್ದರು. ವಯನಾಡ್ ಸಂಸದರ ವಿರುದ್ಧ ಬಿಜೆಪಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಆಯೋಗದ ಕ್ರಮ ಕೈಗೊಳ್ಳಲಾಗಿದೆ. ದೂರಿನಲ್ಲಿನ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಕೋರಲಾಗಿದೆ. ಶುಕ್ರವಾರ ಸಂಜೆ 6 ಗಂಟೆಯೊಳಗೆ ವಿವರಣೆಯನ್ನು ಸಲ್ಲಿಸುವಂತೆಯೂ ಆಯೋಗವು ರಾಹುಲ್‌ಗೆ ಸೂಚಿಸಿದೆ. ರಾಜಕೀಯ ವಿರೋಧಿಗಳ ವಿರುದ್ಧ ಸುಳ್ಳು ಆರೋಪ ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗ ನೋಟಿಸ್‌ ನಲ್ಲಿ ತಿಳಿಸಿದೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಆರೋಪಿಸಲಾಗಿದೆ.

Read More

ಮಹಿಳೆಯರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ ಕಮಿಷನರ್ ಕಚೇರಿ ಬಳಿ ಕಮಾಂಡ್ ಕೇಂದ್ರ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರ ನಿರ್ಭಯಾ ನಿಧಿಯಡಿ ರೂಪಿಸಲಾದ ₹ 450 ಕೋಟಿ ವೆಚ್ಚದ ಬಹುಮಹಡಿ ಕಟ್ಟಡದಲ್ಲಿ ಕಮಾಂಡ್ ಕೇಂದ್ರ ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಿರ್ಭಯಾ ಯೋಜನೆಯಡಿ ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಲಖನೌ, ಮುಂಬೈ ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಜಾರಿಯಾಗುತ್ತಿದೆ. ಕಮಾಂಡ್ ಸೆಂಟರ್‌ನ್ನೂ ಅನುಷ್ಠಾನಗೊಳಿಸಲಾಗುತ್ತಿದೆ. ವರದಿ: ಆಂಟೋನಿ

Read More

ತೆಲಂಗಾಣ ಚುನಾವಣೆ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ಖಾನ್ ತಂಗಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಹೈದರಾಬಾದ್ ಪಾರ್ಕ್ ಹಟ್ ಹೋಟೆಲ್ ಮೇಲೆ ಈ ದಾಳಿ ನಡೆದಿದೆ. ತಡರಾತ್ರಿ ರೇಡ್ ಮಾಡಿದ್ದಕ್ಕೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ನಡೆಸಿ ಯಾವುದೇ ಕುರುಹು ಇಲ್ಲದೆ ಪೊಲೀಸರು ಹಿಂತಿರುಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಹಾಗೂ ಬಿಎಸ್ಆರ್ ಸೋಲುವ ಭಯದಿಂದ ದಾಳಿ ಮಾಡಿಸಿದೆ ಎಂದು ಜಮೀರ್ ಆರೋಪಿಸಿದ್ದಾರೆ.

Read More

ವಿದ್ಯುತ್ ಸಂಪರ್ಕ ಬದಲಾವಣೆ ಮಾಡಲು ₹7.50 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್ ಹಾಗೂ ಕಾರು ಚಾಲಕ ಮುರುಳಿಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ‘ಬೆಸ್ಕಾಂ ಕಾರ್ಯಾಚರಣೆ (ಎಲೆಕ್ನಿಕಲ್) ವಿಭಾಗದ ಎಂ.ಎಲ್. ನಾಗರಾಜ್ ಪರವಾಗಿ ಚಾಲಕ ಮುರುಳಿಕೃಷ್ಣ ₹7.50 ಲಕ್ಷ ಲಂಚ ಪಡೆಯುತ್ತಿದ್ದರು. ಅದೇ ಸಂದರ್ಭದಲ್ಲಿ ದಾಳಿ ಮಾಡಿ ಪುರಾವೆ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.

Read More

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿದ್ದರು. ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮುಲು ಅವರು, ಈ ಭೇಟಿ ಯಾವುದೇ ರಾಜಕೀಯ ಕಾರಣಕ್ಕಲ್ಲ. ಮಗಳ ಮದುವೆ ಸಮಾರಂಭ ನಿಮಿತ್ತ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಬಂದಿದ್ದೇನೆ. ಇದು ಖಾಸಗಿ ಭೇಟಿ ಎಂದು ಸ್ಪಷ್ಟಪಡಿಸಿದರು. ಇನ್ನೂ ಮುಂದಿನ ತಿಂಗಳು ಡಿಸೆಂಬರ್ 7ರಂದು ಮಗಳ ಮದುವೆ ಇದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

Read More

ಡೀಪ್‌ ಫೇಕ್‌ ಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಡೀಪ್‌ಫೇಕ್‌ ಗಳನ್ನು ನಿಯಂತ್ರಿಸಲು ಸರ್ಕಾರ ಶೀಘ್ರದಲ್ಲೇ ಹೊಸ ಕಾನೂನುಗಳನ್ನು ಪರಿಚಯಿಸಲಿದೆ. ಡೀಪ್‌ ಫೇಕ್ ‌ಗಳನ್ನು ಗುರುತಿಸುವುದು, ವರದಿ ಮಾಡುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಮತ್ತು ಬಳಕೆದಾರರ ಜಾಗೃತಿಯನ್ನು ಹೆಚ್ಚಿಸುವಂತಹ ತಡೆಗಟ್ಟುವ ಪ್ರಯತ್ನಗಳನ್ನು ಬಲಪಡಿಸಲಾಗುವುದು. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಶೀಘ್ರದಲ್ಲೇ ಕರಡು ನಿಯಮಾವಳಿ ಸಿದ್ಧಪಡಿಸಲಾಗುವುದು. ಅಸ್ತಿತ್ವದಲ್ಲಿರುವ ಚೌಕಟ್ಟನ್ನು ತಿದ್ದುಪಡಿ ಮಾಡುವುದು ಅಥವಾ ಹೊಸ ನಿಯಮಗಳನ್ನು ಪರಿಚಯಿಸುವುದು ಪರಿಗಣನೆಯಲ್ಲಿದೆ. ಮುಂದಿನ ಹಂತ ಡಿಸೆಂಬರ್ ಮೊದಲ ವಾರದಲ್ಲಿಯೇ ಜಾರಿಗೆ ಬರಲಿದೆ. ಇದು ನಿರ್ಧಾರಗಳ ಅನುಸರಣೆ ಮತ್ತು ಕರಡು ನಿಯಂತ್ರಣದಲ್ಲಿ ಏನನ್ನು ಸೇರಿಸಬೇಕು ಎಂಬುದನ್ನು ಚರ್ಚಿಸುತ್ತದೆ. ಇತ್ತೀಚೆಗಷ್ಟೇ ಸೆಲೆಬ್ರಿಟಿ ಡೀಪ್‌ ಫೇಕ್‌ ಗಳು ವ್ಯಾಪಕವಾಗಿ ಹರಡಿವೆ. ಪ್ರಧಾನಿ ನರೇಂದ್ರ ಮೋದಿ, ನಟಿ ರಶ್ಮಿಕಾ ಮಂದನಾ ಮತ್ತು ಸಾರಾ ತೆಂಡೂಲ್ಕರ್ ಅವರ ಡೀಪ್ ನಕಲಿಗಳು ವೈರಲ್ ಆಗಿವೆ. ಇದರ ವಿರುದ್ಧ…

Read More

ರಾಜಸ್ಥಾನದ ಜನತೆ ನಾಳೆ ಮತಗಟ್ಟೆ ತಲುಪಲಿದ್ದಾರೆ. ಮೌನ ಪ್ರಚಾರದ ದಿನವಾದ ಇಂದು ಅಭ್ಯರ್ಥಿಗಳು ಮತದಾರರನ್ನು ಖುದ್ದಾಗಿ ಭೇಟಿ ಮಾಡಿ, ದೂರವಾಣಿ ಕರೆ ಮಾಡಿ ಮತ ಭದ್ರಪಡಿಸಿಕೊಳ್ಳಲು ನಿರತರಾಗಿದ್ದಾರೆ. 200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ. ರಾಜ್ಯದಲ್ಲಿ 5 ಕೋಟಿ 25 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ರಾಜ್ಯದಲ್ಲಿ 51756 ಮತಗಟ್ಟೆಗಳಿಗೆ ವ್ಯವಸ್ಥೆ ಮಾಡಲಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಗುರ್ಮಿತ್ ಸಿಂಗ್ ಕೋಣೂರ್ ನಿಧನದಿಂದ ಒಂದು ಕ್ಷೇತ್ರದಲ್ಲಿ ಮತದಾನವನ್ನು ಮುಂದೂಡಲಾಗಿದೆ. ಸಮೀಕ್ಷೆಯ ಫಲಿತಾಂಶಗಳು ಮೊದಲ ಹಂತದಲ್ಲಿ ಬಿಜೆಪಿ ಪರ ಅಲೆಯ ಮುನ್ಸೂಚನೆ ನೀಡಿದ್ದರೂ, ಅಂತಿಮ ಹಂತದಲ್ಲಿ ಎರಡೂ ಪಕ್ಷಗಳು ಪ್ರಬಲ ಪೈಪೋಟಿ ಮುಂದುವರಿಸಿವೆ.

Read More

ಶೂಟಿಂಗ್ ವೇಳೆ ನಟ ಸೂರ್ಯ ಗಾಯಗೊಂಡಿದ್ದಾರೆ. ರೋಪ್ ಕ್ಯಾಮೆರಾ ಒಡೆದು ಗಾಯಗೊಂಡಿದ್ದರು. ಗಾಯ ಗಂಭೀರವಾಗಿಲ್ಲ. ಚಿತ್ರೀಕರಣ ಸ್ಥಗಿತಗೊಂಡಿದೆ ಕಂಕುವಾ ಚಿತ್ರದ ಶೂಟಿಂಗ್ ವೇಳೆ ರೋಪ್ ಕ್ಯಾಮರಾ ನಿಯಂತ್ರಣ ತಪ್ಪಿ ಸೂರ್ಯ ಮೇಲೆ ಬಿದ್ದಿದೆ ಎಂದು ವರದಿಯಾಗಿದೆ. ಕ್ಯಾಮರಾ ಭುಜಕ್ಕೆ ತಾಗಿ ಸೂರ್ಯ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಅವಘಡದ ಕಾರಣ ಶೂಟಿಂಗ್ ನಿಲ್ಲಿಸಲಾಗಿತ್ತು. ಶೂಟಿಂಗ್ ಸೆಟ್‌ನಲ್ಲಿರುವ ಅಧಿಕಾರಿಗಳು ಗಾಯ ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ. ‘ಕಂಗುವ’ ನಟ ಸೂರ್ಯ ಅವರ ವೃತ್ತಿಜೀವನದಲ್ಲಿ ಬಿಡುಗಡೆಯಾಗುವ ಪ್ರಮುಖ ಚಿತ್ರವಾಗಿದೆ. ಸಿರುತೈ ಶಿವ ನಿರ್ದೇಶನದ ಬಿಗ್ ಬಜೆಟ್ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ. ನಿರ್ಮಾಪಕರ ಪ್ರಕಾರ, ಪೀರಿಯಡ್ ಡ್ರಾಮಾ ಚಿತ್ರ 38 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 3ಡಿ ಹೊರತಾಗಿ, ಕಂಕುವಾ 2ಡಿ ಮತ್ತು ಐಮ್ಯಾಕ್ಸ್ ಸ್ಕ್ರೀನ್‌ ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಸಾವಿರ ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದೆ ಎಂಬ ವರದಿಗಳು ಈ ಹಿಂದೆ ಇದ್ದವು. ಕಂಕುವ ಚಿತ್ರದಲ್ಲಿ ಸೂರ್ಯ ಅವರಿಗೆ ಮೂರು ವಿಭಿನ್ನ ಗೆಟಪ್‌ ಗಳಿವೆ. ಇದುವರೆಗೂ…

Read More

ಕಾಂತರಾಜು ವರದಿಯನ್ನು ಸಿದ್ಧಪಡಿಸುತ್ತಿರುವ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ, ಹೊಸದೊಂದು ವಿಚಾರ ಬಾಯಿಬಿಟ್ಟಿದೆ. ಕಾಂತರಾಜು ವರದಿಯ ಮೂಲ ಪ್ರತಿ ಕಾಣೆಯಾಗಿದ್ದು, ವರ್ಕಶೀಟ್‌ ನಲ್ಲಿ ಕೆಲ ಅಂಶಗಳು ಸಿಗುತ್ತಿಲ್ಲ ಅಷ್ಟೇ ಎಂದು ಖುದ್ದು ಜಯಪ್ರಕಾಶ್ ಹೆಗ್ಡೆ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ವರ್ಕ್‌ಶೀಟ್ ನಲ್ಲಿ ಕೆಲ ಅಂಶಗಳು ಸಿಗುತ್ತಿಲ್ಲ. ಬಾಕಿಯಿರುವ ಎಲ್ಲಾ ದಾಖಲಾತಿಗಳು ಸೇಫಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ ಜಾತಿಗಣತಿ ವರದಿ ವಿಚಾರ ಕ್ಷಣಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ಜಾತಿಗಣತಿ ಸರ್ಕಾರದ ಕೈ ಸೇರುತ್ತದೆ ಎನ್ನುತ್ತಿದ್ದ ಆಯೋಗದ ಸದಸ್ಯರು, ಈಗ ಮೂಲ ಪ್ರತಿಯೇ ಇಲ್ಲ ಎಂದಿರುವುದು ಹೊಸ ಗೊಂದಲ ಸೃಷ್ಠಿಸಿದೆ. ಆದ್ರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೂಲ ಪ್ರತಿ ಇಲ್ಲ. ಆದ್ರೆ ದತ್ತಾಂಶಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದಿದ್ದಾರೆ. ಜಾತಿಗಣತಿಯ ಕಾಂತರಾಜು ವರದಿಯನ್ನು ಸರ್ಕಾರಕ್ಕೆ ಡಿಸೆಂಬ‌ರ್ ಅಥವಾ ಜನವರಿಯಲ್ಲಿ ಹಸ್ತಾಂತರ ಮಾಡುತ್ತೇವೆ ಎಂದು ಆಯೋಗದ…

Read More