Subscribe to Updates
Get the latest creative news from FooBar about art, design and business.
- ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
- ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
- ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
- ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
- ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
- ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
- ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
- ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
Author: admin
ರಾಜ ಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ 150 ವರ್ಷ ಇತಿಹಾಸವುಳ್ಳ ಸಿ. ಕೃಷ್ಣಯ್ಯ ಶೆಟ್ಟಿ ಗ್ರೂಪ್ ಆಫ್ ಜುವೆಲರ್ಸ್ ನಿಂದ ಬೆಳಗಾವಿ ನಗರದಲ್ಲಿ ಆಭರಣಗಳ ಮಾರಾಟ ಹಾಗೂ ಆಭರಣಗಳ ಪ್ರದರ್ಶನ ನವೆಂಬರ್ 24 ರಿಂದ 26ರವರೆಗೆ ನಗರದ ಯುಕೆ 27 ಹೋಟೆಲ್ ನಲ್ಲಿ ಪ್ರದರ್ಶನ ಇಡಲಾಗಿದೆ. ಪ್ರದರ್ಶನ ಹಾಗೂ ಮಾರಾಟ ಮಳೆಗೆಯನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು(ಆಸಿಫ್ ) ಸೇಟ್ ಉದ್ಘಾಟಿಸಿದರು. ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ರಾಜಮನೆತನ ಕಾಲದಿಂದ ಕೃಷ್ಣಯ್ಯ ಶೆಟ್ಟಿ ಗ್ರೂಪ್ ಆಭರಣಗಳನ್ನು ತಯಾರು ಮಾಡುತ್ತಾ, ಮಾರಾಟ ಮಾಡುತ್ತಾ ಬಂದಿದೆ. ಇವರಿಗೆ 150 ವರ್ಷ ಕಾಲ ಐತಿಹಾಸಿಕ ವ್ಯಾಪಾರಿಗಳಾಗಿದ್ದಾರೆ ರಾಜ ಮನೆತನದ ಆಭರಣಗಳನ್ನು ನೋಡಲು ಹಾಗೂ ಖರೀದಿ ಮಾಡಲು ಇದೊಂದು ಸುವರ್ಣ ಅವಕಾಶವಿದೆ. ಬೆಳಗಾವಿ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಬೆಳಗಾವಿ ಜನತೆಗೆ ಕರೆ ನೀಡಿದರು. ಸಿ. ಕೃಷ್ಣಯ್ಯ ಗ್ರೂಪ್ ಬೆಳಗಾವಿ ಗ್ರಾಹಕರಿಗೆ ವಿಶೇಷವಾದ ವಿಶೇಷ ರಿಯಾಯಿತಿ ನೀಡಲಿದೆ. ಬೆಳ್ಳಿ ಆಭರಣಗಳ ಮೇಲೆ 2% ಪರ್ಸೆಂಟ್ ಚಿನ್ನದ ಮೇಲೆ 4%…
ರಾಜಸ್ಥಾನದಲ್ಲಿ ನಿರಂತರ ಸರ್ಕಾರ ಇರಲಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ. ಕಾಂಗ್ರೆಸ್ ಗೆ ಮತ್ತೊಂದು ಅವಕಾಶ ಸಿಗಲಿದೆ. ಸಾರ್ವಜನಿಕರ ಭಾವನೆ ಸರ್ಕಾರದ ಪರವಾಗಿಯೇ ಇದೆ. ಈ ಬಾರಿ ಸರಕಾರ ಬದಲಾಯಿಸುವ ಪ್ರವೃತ್ತಿ ಇರುವುದಿಲ್ಲ ಎಂದರು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆ ಅವಕಾಶ ಸಿಗುವ ವಿಶ್ವಾಸವಿದೆ. ಸರ್ಕಾರ ರಚನೆಗೆ ಬೇಕಾದ ಸದಸ್ಯರ ಸಂಖ್ಯೆ ಸಿಗಲಿದೆ. ಜನಸೇವೆಗೆ ಬದ್ಧರಾಗಿರುವವರಿಗೆ ಜನ ಮತ ಹಾಕುತ್ತಾರೆ. ಈ ಬಾರಿ ಸರ್ಕಾರ ಬದಲಿಸುವ ಪ್ರವೃತ್ತಿ ಇರುವುದಿಲ್ಲ. ಆಡಳಿತದ ನಿರಂತರತೆ ಇರುತ್ತದೆ’- ಸಚಿನ್ ಹೇಳಿದರು ಅದೇ ಸಮಯದಲ್ಲಿ, ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಸ್ಪಷ್ಟ ಭಿನ್ನಾಭಿಪ್ರಾಯದ ಬಗ್ಗೆಯೂ ಪ್ರತಿಕ್ರಿಯಿಸಿದರು. ನಾವು ಪಕ್ಷಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಇದು ಎರಡು ಅಥವಾ ಮೂರು ಜನರ ಬಗ್ಗೆ ಅಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಂಶ ಒಗ್ಗಟ್ಟಾಗಿದೆ’-ಪೈಲಟ್ ಸೇರಿಸಲಾಗಿದೆ. ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಚುನಾವಣೆ ಪ್ರಗತಿಯಲ್ಲಿದೆ. ಗಂಗಾನಗರದ ಕರಣ್‌ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ…
ಉತ್ತರಾಖಂಡದ ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಬಿಕ್ಕಟ್ಟಿಗೆ. ಕೊರೆಯುವ ಯಂತ್ರದ ಬ್ಲೇಡ್ ಗಳು ಪಾರುಗಾಣಿಕಾ ಪೈಪ್ ನಲ್ಲಿ ಸಿಲುಕಿಕೊಂಡಿವೆ. ಬ್ಲೇಡ್‌ಗಳನ್ನು ಚಲಿಸಿದರೆ ಮಾತ್ರ ಜನರು ಪೈಪ್‌ಗೆ ಹತ್ತಬಹುದು. ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ. ಕಾಂಕ್ರೀಟ್ ರಾಶಿಗಳ ನಡುವೆ ಹಲವು ಕಬ್ಬಿಣದ ಸರಳುಗಳು ಮತ್ತು ಉಕ್ಕಿನ ಪದರಗಳು ಸಿಲುಕಿಕೊಂಡಿದ್ದರಿಂದ ಆಗರ್ ಯಂತ್ರದ ಕಾರ್ಯಾಚರಣೆಯನ್ನು ನಿನ್ನೆ ರಾತ್ರಿ ಸ್ಥಗಿತಗೊಳಿಸಲಾಗಿದೆ. ಈ ಶಿಲಾಖಂಡರಾಶಿಯು ಕೊರೆಯುವ ಯಂತ್ರದ ಬ್ಲೇಡ್ ನಲ್ಲಿ ಸಿಲುಕಿ ಅಡಚಣೆಯನ್ನು ಉಂಟುಮಾಡುತ್ತದೆ. ನಂತರ ಪೈಪ್ ಮೂಲಕ ಜನರನ್ನು ಸಾಗಿಸಲು ಮತ್ತು ತಂತಿಗಳು ಮತ್ತು ಉಕ್ಕಿನ ಪದರಗಳನ್ನು ಕತ್ತರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕುಸಿದಿರುವ ಅವಶೇಷಗಳನ್ನು ತೆಗೆಯಲು ಜನರಿಗೆ ಕನಿಷ್ಠ 18-24 ಗಂಟೆಗಳು ಬೇಕಾಗುತ್ತದೆ. ಗುರುವಾರ ತಾಂತ್ರಿಕ ದೋಷದಿಂದ ಯಂತ್ರವು 24 ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತರಲು ಸುರಕ್ಷತಾ ಮೆದುಗೊಳವೆ ಕಾರ್ಮಿಕರಿಂದ ಕೇವಲ ಮೀಟರ್ ದೂರದಲ್ಲಿದೆ. 41 ಡೈವರ್ ಗಳು ಸುರಂಗದಲ್ಲಿ ಸಿಲುಕಿ 14 ದಿನಗಳಾಗಿವೆ. ಸುರಂಗದೊಳಗಿನ ಕಾರ್ಮಿಕರು…
ಮಲಯಾಳಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಇಂದು ಶಿಕ್ಷೆ ಪ್ರಕಟ. 15 ವರ್ಷಗಳ ಕಾನೂನು ಹೋರಾಟದ ಬಳಿಕ ತೀರ್ಪು ಹೊರಬಿದ್ದಿದ್ದು, 18ರಂದು ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲಿಕ್, ಅಜಯ್ ಕುಮಾರ್ ಮತ್ತು ಅಜಯ್ ಸೇಥಿ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಮೊದಲ 4 ಆರೋಪಿಗಳ ಮೇಲೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧಗಳನ್ನು ಆರೋಪಿಸಲಾಗಿದೆ. ಶಿಕ್ಷೆಗೆ ಮುನ್ನ ಆರೋಪಿಗಳ ಹಿನ್ನೆಲೆ ಹಾಗೂ ಜೈಲಿನಲ್ಲಿ ಅವರ ನಡತೆ ವಿವರಗಳನ್ನು ಒಳಗೊಂಡ ಶಿಕ್ಷೆಯ ಪೂರ್ವ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿತ್ತು. ಸಾಕೇತ್ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಎಸ್.ರವೀಂದರ್ ಕುಮಾರ್ ಪಾಂಡೆ ಶಿಕ್ಷೆಯ ವಿಚಾರಣೆ ಮುಗಿದ ನಂತರ ಪ್ರಕರಣವನ್ನು ಇಂದಿಗೆ ಮುಂದೂಡಿದರು. ನಾಲ್ವರು ಆರೋಪಿಗಳ ಮೇಲೆ ಕೊಲೆ ಹಾಗೂ ಒಬ್ಬರ ವಿರುದ್ಧ ಮಕೋಕಾ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ. ದರೋಡೆ ಸಂದರ್ಭದಲ್ಲಿ ಕೊಲೆ ಮಾಡಿದ್ದಾನೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ವಾದಿಸಿತ್ತು. ಸೆಪ್ಟೆಂಬರ್ 30, 2008 ರಂದು, ಸೌಮ್ಯ ವಿಶ್ವನಾಥನ್…
ಬ್ಯಾಟರಾಯನಪುರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ದೂರು ದಾಖಲಿಸಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ತನಿಖೆಗಾಗಿ ಎಸಿಪಿ ಭರತ್ ಎಸ್ ರೆಡ್ಡಿ, ಬ್ಯಾಟರಾಯನಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ಇನ್ಸ್ ಪೆಕ್ಟರ್ ಶಂಕರ್ ನಾಯ್ಡ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉದ್ಯಮಿಯ ಚಾಲಕನಿಂದ ಕದ್ದ 75 ಲಕ್ಷ ರೂ. ಹಣವನ್ನು ವನ್ನು ದೋಚುವ ಏಕೈಕ ಉದ್ದೇಶದಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ 668 ಕೋಟಿ ರೂಪಾಯಿ ವೆಚ್ಚದಲ್ಲಿ ಕಮಾಂಡ್ ಸೆಂಟರ್ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂಥ ಸೌಲಭ್ಯಗಳು ಜನರಿಗೆ ತಲುಪಿದಾಗ, ಉಪಯೋಗಕ್ಕೆ ಬಂದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು. ನಿರೀಕ್ಷಿತ ಫಲ ಸಿಕ್ಕದೇ ಹೋದರೆ ಕಷ್ಟ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಮಹಿಳೆಯರ ಮೇಲೆ ದೌರ್ಜನ್ಯ, ಒಂಟಿ ಮನೆಗಳಿರುವಲ್ಲಿ, ವೃದ್ಧರು ಒಂಟಿಯಾಗಿರುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ಅಪರಾಧವಾದ ನಂತರ ಶಿಕ್ಷೆ ಕೊಡುವುದು ಒಂದು ಭಾಗ. ಆದರೆ ಅಪರಾಧಗಳು ನಡೆಯದ ರೀತಿ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಬೆಂಗಳೂರು ನಗರದಲ್ಲಿ ಮೊದಲ ಬಾರಿ ಕಮಾಂಡ್ ಸೆಂಟರ್ ಸ್ತಾಪನೆಯಾಗಿದ್ದು, ಅವಶ್ಯಕತೆ ಇರುವವರಿಗೆ ಇದರ ಪ್ರಯೋಜನ ದೊರಕಲಿ ಎಂದು ಹೇಳಿದರು. ಬೆಂಗಳೂರಿನಲ್ಲಿ ಸರಗಳ್ಳತನ ಹಾಗೂ ಮಹಿಳೆಯರ ಮೇಲೆನ ದೌರ್ಜನ್ಯ ಹೆಚ್ಚಾಗಿದೆ ಹಾಗೂ ಕೊಲೆಗಳೂ ಕೂಡ ನಡೆಯುತ್ತಿವೆ ಎಂದು…
ಮಹಾನಗರ ಪಾಲಿಕೆ ಸದಸ್ಯ ಅಜಿತ್ ತಿವಳೇಕರ್ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಗುರುವಾರ ಸಂಜೆ ತಳಕವಾಡಿ ಪೊಲೀಸ್ ಠಾಣಾ ಎದುರು ಭಾರತೀಯ ಜನತಾ ಪಕ್ಷದ ಮಹಾನಗರ ಪಾಲಿಕೆ ಸದಸ್ಯರಗಳು ಆರೋಪಿಗಳನ್ನು ಬಂಧಿಸಬೇಕು ಹಾಗೂ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಧರಣಿ ಸತ್ಯಾಗ್ರ ಮಾಡಿದರು. ಪೊಲೀಸ್ ಠಾಣಾ ಎದುರುಗಡೆ ವಿರುದ್ಧ ಘೋಷಣೆ ಹಾಕಿದರು. ಪೊಲೀಸರು ಪ್ರಕರಣ ದಾಖಲೆ ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ ಕಾರಣ ಏನಿದೆ ಎಂಬ ಪ್ರಶ್ನೆ ಮೇಲಿಂದ ಮೇಲೆ ಮಹಾನಗರ ಪಾಲಿಕೆ ಸದಸ್ಯರಗಳು ಪೊಲೀಸ್ ಅಧಿಕಾರಿಗಳನ್ನು ಕೇಳುತ್ತಿದ್ದರು. ಪೋಲೀಸ್ ಹಿರಿಯ ಅಧಿಕಾರಿಗಳು ಎಷ್ಟೇ ಸಂಜಾಯಿಸಿದರು ಕೂಡ ಪಾಲಿಕೆ ಸದಸ್ಯರು ಸ್ಥಳದಿಂದ ಹೋಗಲಿಲ್ಲ. ಕಡೆಗೆ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಸದಸ್ಯರು ಧರಣಿ ಸತ್ಯಾಗ್ರಹವನ್ನು ಮುಗಿಸಿ ಆರೋಪಿಗಳ ಬಂಧನ ಆಗುವವರಿಗೆ ಪೊಲೀಸ್ ಠಾಣಾ ಎದುರುಗಡೆನೇ ನಿಲ್ಲುತ್ತೇವೆ ಎಂದು ನಿರ್ಣಯ ಕೈಗೊಂಡರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ…
ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂಬರ್ 42 ಭಾಗ್ಯನಗರ್ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ವಿಷಯದ ಕುರಿತು ಹಲ್ಲೆಗೆ ಒಳಗಾದ ಸದಸ್ಯ ಅಜಿತ್ ತೆವಳೇಕರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂದರ್ಭ ದಲ್ಲಿ ಘಟನೆಯ ಮಾಹಿತಿ ಕುರಿತು ಮಾಹಿತಿ ನೀಡಿದ್ದಾರೆ. ವಾರ್ಡ್ ನಂಬರ್ 42 ಭಾಗ್ಯನಗರದಲ್ಲಿ ರಮೇಶ್ ಪಾಟೀಲ್ ಎಂಬುವರ ಮನೆಯ ಮೇಲೆ ಮೊಬೈಲ್ ಟವರ್ ಅಳವಡಿಸಲು ವಿವಾದ ನಡೆದಿತ್ತು. ವಾರ್ಡ್ ನಂಬರ್ 42 ಜನರು ಈ ಮೊಬೈಲ್ ಟವರ್ ಅನ್ನು ಅಳವಡಿಸುವ ಕುರಿತು ವಿರೋಧ ವ್ಯಕ್ತಪಡಿಸಿ ನನಗೆ ದೂರು ನೀಡಿದ್ದರು. ಈ ವಿಷಯವಾಗಿ ರಮೇಶ್ ಪಾಟೀಲ್ ಎಂಬುವವರ ಮನೆಯ ಮೇಲೆ ಅಳವಡಿಸಲಾಗುತ್ತಿರುವ ಮೊಬೈಲ್ ಟವರನ್ನು ಅಳವಡಿಸಬಾರದೆಂದು ಅವರಿಗೆ ತಿಳಿಸಲಾಗಿತ್ತು. ಹಾಗೂ ಸಂಬಂಧಪಟ್ಟ ಕಚೇರಿಗಳಿಂದ ಯಾವುದೇ ದಾಖಲಾತಿಗಳು ಅಥವಾ ಪರವಾನಿಗೆ ಇರದೇ ಇರುವುದು ಕೂಡ ಈ ವಿಷಯದ ಮುಖ್ಯ ವಿಷಯವಾಗಿತ್ತು. ಆದ್ದರಿಂದ ಸಾರ್ವಜನಿಕರ ಮೊಬೈಲ್ ಟವರ್ ಅಳವಡಿಸುವುದು ಕುರಿತು ವಿರೋಧಿಸುತ್ತಾ ಇದ್ದರು ಈ ವಿಷಯದವಾಗಿ ರಮೇಶ್ ಪಾಟೀಲ್ ಎಂಬುವರಿಗೆ…
ಇಂದು, ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ಕಂಬಳ ನಡೆಯಲಿದೆ. ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಹೆಸರಿನಲ್ಲಿ ಕಂಬಳ ನಡೆಯುತ್ತಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇಂದು ಬೆಳಗ್ಗೆ 10.30ಕ್ಕೆ ಐತಿಹಾಸಿಕ ಕಂಬಳದ ಜೋಡು ಕರೆ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಜೆ 6 ಗಂಟೆಗೆ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ಅರಮನೆ ಮೈದಾನದ ಗೇಟ್ ನಂ.1, 2, 3,4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಆಗೋದಿಲ್ಲ, ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರು ಆಡಿಕೊಂಡಿದ್ದರು. ಈಗ ನಾಡು ಶತಕೋಟಿ ಸಂಭ್ರಮ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಸಾರಿಗೆ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಕಾರ್ಯಕಮವನ್ನು ಉದ್ಘಾಟಿಸಿ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿದರು. ದೇಶದ ಯಾವ ಸರ್ಕಾರಗಳೂ ಹಿಂದೆಂದೂ ಮಾಡದ ಸಾಧನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಸಾಧಿಸಿ ತೋರಿಸಿದೆ. ಇದು ಕಣ್ಣ ಮುಂದಿದೆ. ಆದರ ದಾಖಲೆ ಕಣ್ಣ ಮುಂದಿದೆ. ಬಿಜೆಪಿಯವರು ನಿರ್ಲಜ್ಜವಾಗಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದರು. ಜೂನ್ 11 ಕ್ಕೆ ಶಕ್ತಿ ಯೋಜನೆ ಜಾರಿ ಆಯಿತು. ನವೆಂಬರ್ 23 ಕ್ಕೆ 100 ಕೋಟಿ 47 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ದಾಖಲೆಗಳು ಕಣ್ಣ ಮುಂದಿವೆ. ಆದರೂ ಈ ಬಿಜೆಪಿ ನಾಯಕರು…