Subscribe to Updates
Get the latest creative news from FooBar about art, design and business.
- ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
- ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
- ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
- ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
- ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
- ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
- ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
- ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
Author: admin
ನೆಲಮಂಗಲ: ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ನೆಲಮಂಗಲದ ಬಳಿ ಇರುವ ಲೀಲಾವತಿ ಅವರ ನಿವಾಸಕ್ಕೆ ನಟ ದರ್ಶನ್ ಮತ್ತು ನಟ ಅಭಿಷೇಕ್ ಅಂಬರೀಶ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಲೀಲಾವತಿ ಅವರಿಗೆ ಈಗ ಮಾತನಾಡಲೂ ಕಷ್ಟವಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿತ್ರ ರಂಗದ ಹಿರಿಯರು ಒಬ್ಬರ ಹಿಂದೊಬ್ಬರಂತೆ ಆಗಮಿಸಿ ಪುತ್ರ ವಿನೋದ್ ರಾಜ್ ಗೆ ಧೈರ್ಯ ತುಂಬುತ್ತಿದ್ದಾರೆ.
ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯವಾಗಿ ಬಡ್ಡಿ ದಂಧೆ ಕೋರರಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರು ನಗರದ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಶವಗಳ ಅಂತಿಮ ದರ್ಶನ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೃತಪಟ್ಟಿರುವ ಕುಟುಂಬದ ಯಜಮಾನ ಗರೀಬ್ ಸಾಬ್ ಎಂಬವರು ಶಿರಾದಿಂದ ತುಮಕೂರು ನಗರಕ್ಕೆ ವಲಸೆ ಬಂದಿದ್ದರು. ತುಮಕೂರು ನಗರದಲ್ಲಿ ಚಿಕನ್ ಕಬಾಬ್ ಸೆಂಟರ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೆ ವ್ಯಾಪಾರ ವಹಿವಾಟಿಗಾಗಿ ಒಂದುವರೆ ಲಕ್ಷ ರೂಗಳನ್ನು ಸಾಲವಾಗಿ ಪಡೆದಿದ್ದರೂ. ಅಲ್ಲದೆ ಪ್ರತಿ ತಿಂಗಳು ಬಡ್ಡಿ ಹಣವನ್ನು ಕಟ್ಟುತ್ತಿದ್ದರು. ಆದರೆ ಇವರ ವ್ಯಾಪಾರದಲ್ಲಿ ಹಿನ್ನಡೆಯಾಗಿದ್ದರಿಂದ ಬಡ್ಡಿ ಹಣವನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಆದರೆ ಬಡ್ಡಿ ದಂಧೆ ಕೋರರು ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂಬುದು ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು. ಡೆತ್ ನೋಟ್ ನಲ್ಲಿ ಗರೀಬ್ ಸಾಬ್ ಎಂಬುವವರು ಬರೆದಿಟ್ಟಿರುವ…
ನೆಹರು ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದೇ ಕಾಂಗ್ರೆಸ್ ಪಕ್ಷದ ಗುರಿ. ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಶವಸಂಸ್ಕಾರವನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ. ರಾಜ್ಯ ಎಸ್.ಸಿ. ಮೋರ್ಚಾ ವತಿಯಿಂದ ಏರ್ಪಡಿಸಿದ್ದ ‘ಸಂವಿಧಾನ ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ಸಿಗರಿಂದ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಬಿಜೆಪಿಯವರಿಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು. ನಗರದಲ್ಲಿ ರಾಜ್ಯ ಎಸ್.ಸಿ. ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಸ್ಮಾರಕಕ್ಕೆ 30 ಎಕರೆ, ಇಂದಿರಾ ಗಾಂಧಿ ಅವರ ಸ್ಮಾರಕಕ್ಕೆ 20 ಎಕರೆ ನೀಡಿದ್ದರು. ಆದರೆ, ಸಂವಿಧಾನ ನೀಡಿದ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಿಲ್ಲ? ಅವರ ನೆನಪಾಗಲಿಲ್ಲವೇ ಎಂದರು.
ಸಾಮಾನ್ಯವಾಗಿ ಕಂಬಳದ ಬಳಿಕ ಕರಾವಳಿಯಲ್ಲಿ ಕೋಳಿ ಅಂಕ ನಡೆಯುತ್ತದೆ. ಆದರೆ ಬೆಂಗಳೂರು ಕಂಬಳದಲ್ಲಿ ಕೋಳಿ ಅಂಕವಿಲ್ಲ. ಆದರೆ ಫೈಟರ್ ಹುಂಜದ ಲಕ್ಕಿಡಿಪ್ ಕೌಂಟರ್ ತೆರೆಯಲಾಗಿದೆ. ವಿಜೇತರಿಗೆ ರುಚಿಯಾದ ಅಂಕದ ಕೋಳಿ ಸಿಗುತ್ತಿದೆ. ಸಿಲಿಕಾನ್ ಸಿಟಿಯವರಿಗೆ ಅಂಕದ ಕೋಳಿಯ ರುಚಿ ತೋರಿಸಲು ಕರಾವಳಿ ಭಾಗದಿಂದ 300ಕ್ಕೂ ಅಧಿಕ ಅಂಕದ ಹುಂಜಗಳನ್ನು ತರಲಾಗಿದೆ. ಕೋಳಿ ಅಂಕದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಕೋಳಿಗೆ ಬಂಟೆ ಹಾಗೂ ಸೋತ ಕೋಳಿಗೆ ಒಟ್ಟೆ ಎಂದು ಕರೆಯಲಾಗುತ್ತದೆ.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಸರ್ಕಾರಕ್ಕೆ ಹೊಡೆತ ನೀಡಿದೆ. ರೈತರಿಗೆ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಲು ಸರ್ಕಾರ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗ ಹಿಂಪಡೆದಿದೆ. ರಾವ್ ಅವರ ಸಂಪುಟದಲ್ಲಿರುವ ಹಣಕಾಸು ಸಚಿವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ‘ಋತು ಬಂಧು’ ರಬಿ ರೈತರಿಗೆ ಆರ್ಥಿಕ ನೆರವು ವಿತರಿಸುವ ಯೋಜನೆಯಾಗಿದೆ. ನವೆಂಬರ್ 28 ರ ಮೊದಲು ಯೋಜನೆಯಡಿ ಮೊತ್ತವನ್ನು ವಿತರಿಸಲು ಇಸಿ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ನೀತಿ ಸಂಹಿತೆ ಅವಧಿಯಲ್ಲಿ ಯೋಜನೆ ಮುಂದುವರಿಸಲು ಆಯೋಗ ಷರತ್ತುಗಳನ್ನು ಪ್ರಸ್ತಾಪಿಸಿತ್ತು. ನಿಧಿಯ ವಿತರಣೆಯನ್ನು ಜಾಹೀರಾತು ಮಾಡಬಾರದು ಎಂಬುದು ಷರತ್ತುಗಳಲ್ಲಿ ಪ್ರಮುಖವಾಗಿತ್ತು. ಆದರೆ ರೈತರಿಗೆ ಆರ್ಥಿಕ ನೆರವು ವಿತರಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಬಹಿರಂಗ ಘೋಷಣೆ ಮಾಡಿದ್ದರು. ಸೋಮವಾರದಿಂದ ಹಣ ವಿತರಣೆ ಆರಂಭವಾಗಲಿದೆ. ಬೆಳಗಿನ ಉಪಾಹಾರ, ಚಹಾ ಮುಗಿಸುವ ಮುನ್ನವೇ ರೈತರ ಖಾತೆಗೆ…
ಗುಜರಾತಿನಲ್ಲಿ ಸಿಡಿಲು ಬಡಿದು 20 ಮಂದಿ ಬಲಿ ಭಾನುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಹಲವಾರು ಹಾನಿಗಳು ವರದಿಯಾಗಿವೆ. ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಸೂರತ್, ಸುರೇಂದ್ರನಗರ, ಖೇಡಾ, ತಾಪಿ, ಬಹರುಚ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಗುಜರಾತ್‌ನ 252 ತಾಲ್ಲೂಕುಗಳಲ್ಲಿ 234 ಭಾರಿ ಮಳೆಯಾಗಿದೆ. ರಾಜ್ಯದಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದೇಶದ ನಾಲ್ಕು ರಾಜ್ಯಗಳಲ್ಲಿ ಎನ್ ಐಎ ದಾಳಿ ಕೇರಳ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಎನ್ ಐಎ ತಪಾಸಣೆ ನಡೆಸಿದೆ. NIA ಮೊಬೈಲ್ ಫೋನ್ ಸಿಮ್ ಕಾರ್ಡ್ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. 2022 ದೆಹಲಿಯಲ್ಲಿ ದಾಖಲಾದ ಪ್ರಕರಣವನ್ನು ಆಧರಿಸಿ ದಾಳಿ ನಡೆಸಲಾಗಿದೆ. 14 ಜುಲೈ 2022 ರಂದು ಪಾಟ್ನಾ ಪೊಲೀಸರು ದಾಖಲಿಸಿದ ಪ್ರಕರಣವನ್ನು NIA ವಹಿಸಿಕೊಂಡಿದೆ. ಎನ್ ಐಎ ಕ್ರಮವು ನಿಷೇಧಿತ ಸಂಘಟನೆ ಘಜ್ವಾ-ಎ-ಹಿಂದ್ ಗೆ ಸಂಬಂಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮದುವೆಗಳನ್ನು ಭಾರತದ ನೆಲದಲ್ಲಿ ಆಯೋಜಿಸಬೇಕು ಮತ್ತು ವಿದೇಶದಲ್ಲಿ ಅಲ್ಲ. ಭಾರತದ ಕೆಲವು ಶ್ರೀಮಂತ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ಆಯೋಜಿಸುತ್ತಿವೆ ಎಂದು ಪ್ರಧಾನಿ ಮನ್ ಕಿ ಬಾತ್ ಹೇಳಿದ್ದಾರೆ ಮತ್ತು ಈ ಪ್ರವೃತ್ತಿಯ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ. ಮದುವೆಗಾಗಿ ಶಾಪಿಂಗ್ ಮಾಡುವಾಗ, ಜನರು ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಹೇಳಿದರು. ‘ಭಾರತದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನಡೆಯಲಿದೆ ಎಂದು ಕೆಲವು ಉದ್ಯಮ ಸಂಸ್ಥೆಗಳು ಅಂದಾಜಿಸುತ್ತವೆ. ಹಾಗಾಗಿ ಮದುವೆಯ ಶಾಪಿಂಗ್ ಮಾಡುವಾಗ ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಬಳಸಬೇಕು’ – ಮೋದಿ ಹೇಳಿದರು. ಮದುವೆಯ ವಿಷಯ ಬಂದಿದ್ದರಿಂದಲೇ… ಕೆಲವು ದಿನಗಳಿಂದ ನನಗೆ ಏನೋ ತೊಂದರೆಯಾಗುತ್ತಿದೆ. ನನ್ನ ಮನದಾಳದಲ್ಲಿರುವ ನೋವನ್ನು ಮನೆಯವರಿಗೆ ಹೇಳದಿದ್ದರೆ ಬೇರೆ ಯಾರಿಗೆ ಹೇಳಲಿ? ಈಗ ದೊಡ್ಡ ಭಾರತೀಯ ಕುಟುಂಬಗಳು ವಿದೇಶದಲ್ಲಿ ಮದುವೆಯಾಗುವ ಪ್ರವೃತ್ತಿಯನ್ನು ಪ್ರಾರಂಭಿಸಿವೆ. ಅದು ಅಗತ್ಯವೇ?’ ಎಂದು ಪ್ರಧಾನಿ ಪ್ರಶ್ನಿಸಿದರು. ಭಾರತದಲ್ಲಿ ಮದುವೆಯಂತಹ ಆಚರಣೆಗಳನ್ನು ಆಯೋಜಿಸಿದರೆ…
ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮವು ಗಮನಾರ್ಹವಾಗಿ ಬೆಳೆದಿದ್ದು, ಅನೇಕ ಯುವಕರು ಗೇಮಿಂಗ್ ವೃತ್ತಿಯನ್ನಾಗಿ ಆರಿಸಿಕೊಳ್ಳುತ್ತಿದ್ದಾರೆ. ಎಚ್ ಪಿ ಗೇಮಿಂಗ್ ಸ್ಟಡಿ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಈ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದವರಲ್ಲಿ ಅರ್ಧದಷ್ಟು ಜನರು ವಾರ್ಷಿಕವಾಗಿ 6 ಲಕ್ಷದಿಂದ 12 ಲಕ್ಷ ರೂಪಾಯಿಗಳವರೆಗೆ ಗಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 3500 ಜನರನ್ನು (75 ಪ್ರತಿಶತ ಪುರುಷರು ಮತ್ತು 25 ಪ್ರತಿಶತ ಮಹಿಳೆಯರು) ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಭಿಕ್ಷುಕನೊಬ್ಬ ಪ್ರತಿದಿನ ಭಿಕ್ಷೆ ಬೇಡುವ ಮೂಲಕ ಕೋಟ್ಯಂತರ ರೂಪಾಯಿ ಸಂಪತ್ತನ್ನು ಸಂಪಾದಿಸಿದ್ದಾನೆ. ಭಿಕ್ಷಾಟನೆಯ ಮೂಲಕವೇ ಮುಂಬೈನ ಭರತ್ ಜೈನ್ ಎಂಬರು 7.5 ಕೋಟಿ ರೂ. ಸಂಪಾದಿಸಿದ್ದಾರೆ. ಇವರ ತಿಂಗಳ ಗಳಿಕೆ 60 ರಿಂದ 75 ಸಾವಿರದವರೆಗೂ ಇದೆ ಎನ್ನುತ್ತಿವೆ ವರದಿಗಳು. ವಿಶ್ವದ ಶ್ರೀಮಂತ ಭಿಕ್ಷುಕ ಎನಿಸಿಕೊಂಡಿರುವ ಭರತ್ ಜೈನ್ ಮುಂಬೈ ಹಾಗೂ ಪುಣೆಯಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದಾರೆ. ಮುಂಬೈನಲ್ಲಿಯೇ ಈತನಿಗೆ 1.2 ಕೋಟಿ ಮೌಲ್ಯದ ಎರಡು ಬಿ ಎಚ್ ಕೆ ಫ್ಲಾಟ್ ಗಳಿವೆ. ಥಾಣೆಯಲ್ಲಿ ಕೋಟ್ಯಂತರ ಮೌಲ್ಯದ 2 ಅಂಗಡಿಗಳಿವೆ. ಕುಟುಂಬದವರು ಎಷ್ಟೇ ಹೇಳಿದರೂ ಇವರು ಇಂದಿಗೂ ಭಿಕ್ಷೆ ಬೇಡುತ್ತಿದ್ದಾರೆ ಎನ್ನಲಾಗಿದೆ.