Author: admin

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಈಶ್ವರ್ ಖಂಡ್ರೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಜಾನೇಂದ್ರ ಅವರನ್ನು ಬಂಧಿಸುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಸದಾಶಿವನಗರ ಠಾಣೆಗೆ ದೂರು ನೀಡಿದೆ. ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಆರಗ ಅವರು ಜನಾಂಗೀಯ ನಿಂದನೆ ಹಾಗೂ ಪ್ರಾಂತ್ಯವಾರು ಭೇದವನ್ನು ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಪ್ರಾಂತ್ಯವಾರು ಘರ್ಷಣೆ ಮೂಡಿಸಲು ಮುಂದಾಗಿದ್ದಾರೆ ಎಂದು ಮಹಾಸಭಾದ ಕಾರ್ಯದರ್ಶಿ ಎಚ್. ಎಂ. ರೇಣುಕ ಪ್ರಸನ್ನ ದೂರಿನಲ್ಲಿ ತಿಳಿಸಿದ್ದಾರೆ. ಅನರ್ಹಗೊಳಿಸಿ: ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಕಾರಣರಾಗಿರುವ ಆರಗ ಜ್ಞಾನೇಂದ್ರ ಅವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ರೇಣುಕ ಪ್ರಸನ್ನ ವಿಧಾನಸಭೆ ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಕೆರೆಗಳಲ್ಲಿ ತೇಲುವ ಜಲಕಳೆ ಹಾಗೂ ತ್ಯಾಜ್ಯವನ್ನು ತೆರವು ಮಾಡಲು ಬಿಬಿಎಂಪಿ ನೀಡಿರುವ ನಿರ್ದಿಷ್ಟ ಅಂಶಗಳ ಆಧಾರದಲ್ಲಿ ಸಿಎಸ್‌ಐಆರ್- ಎನ್‌ಎಎಲ್, ‘ಜಲ್‌ದೋಸ್ತ್-ಏರ್‌ಬೋಟ್ ಎಂಕೆ-2’ ಉನ್ನತೀಕರಿಸಿದ ಬೋಟ್ ಅನ್ನು ತಯಾರಿಸಿದೆ. ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)- ರಾಷ್ಟ್ರೀಯ ವೈಮಾಂತರೀಕ್ಷ ಪ್ರಯೋಗಾಲಯ (ಎನ್ಎಎಲ್) ಈ ಏರ್‌ಬೋಟ್ ಉತ್ಪಾದನೆ ಆರಂಭಿಸಿದೆ. ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಇವುಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ಎನ್ಎಲ್ ನಿರ್ದೇಶಕ ಅಭಯ್ ಪಶಿಲ್ಕರ್ ಸುದ್ದಿಗಾರರಿಗೆ ತಿಳಿಸಿದರು. ಹಲಸೂರು ಕೆರೆಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಲಾಗುತ್ತದೆ. ಶ್ರೀವಾರಿ ಎಂಜಿನಿಯರಿಂಗ್ ಸಿಸ್ಟಮ್ಸ್ ವತಿಯಿಂದ ಬಿಬಿಎಂಪಿಯ ಅಗತ್ಯಕ್ಕೆ ಅನುಗುಣವಾಗಿ ವಿತರಣೆ ಮಾಡಲಾಗುತ್ತದೆ ಎಂದರು. ‘ಜಲ್‌ದೋಸ್ತ್’ ಏರ್‌ಬೋಟ್ ಸ್ಟೀಲ್-ಮೆಸ್ ಹೊಂದಿದ್ದು, ಬೆಲ್ಟ್ ವ್ಯವಸ್ಥೆಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. ದಡಕ್ಕೆ ಬಂದು ತ್ಯಾಜ್ಯವನ್ನು ಸುರಿಯಲಾಗುತ್ತದೆ. ಮೂರು ಟನ್ ತ್ಯಾಜ್ಯವನ್ನು ಬೋಟ್‌ ನಲ್ಲಿ ಸಂಗ್ರಹಿಸಬಹುದು. ಒಂದು ಎಕರೆ ಪ್ರದೇಶವನ್ನು 8 ಗಂಟೆಗಳಲ್ಲಿ ಸ್ವಚ್ಛಗೊಳಿಸುತ್ತದೆ. ಒಂದು ಗಂಟೆಗೆ ಐದು ಲೀಟರ್ ಡೀಸೆಲ್ ಅಗತ್ಯವಿದೆ’ ಎಂದು ಮಾಹಿತಿ ನೀಡಿದರು. ನಮ್ಮತುಮಕೂರು.ಕಾಂನ…

Read More

ಕಲಬುರಗಿ ಜಿಲ್ಲೆಯಲ್ಲಿ ದಿಢೀರನೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಲು ಸೊಳ್ಳೆ ವಿರೋಧಿ ಫಾಗಿಂಗ್ ಅಭಿಯಾನವನ್ನು ಕಲಬುರಗಿ ಜಿಲ್ಲಾಡಳಿತ ಆರಂಭಿಸಿದೆ. ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಮಾತನಾಡಿ, ಕಳೆದ ಎರಡು ವಾರಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ನೀರು ಅಲ್ಲಲ್ಲಿ ನಿಲ್ಲುತ್ತಿದೆ. ನಾವು ಈಗಾಗಲೇ ಫಾಗಿಂಗ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ವಿಶೇಷವಾಗಿ ತಗ್ಗು ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಗಮನ ಹರಿಸಲಾಗಿದೆ ಎಂದರು. ‘ನಾವು ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಲಾರ್ವಾ ಸಮೀಕ್ಷೆ ನಡೆಸಲು ನಮ್ಮ ಅಧಿಕಾರಿಗಳಿಗೆ ತರಬೇತಿ ನೀಡಿದ್ದೇವೆ. ಎರಡು ಅಥವಾ ಮೂರು ದಿನಗಳಿಗಿಂತ ಹೆಚ್ಚು ಕಾಲ ನೀರನ್ನು ಸಂಗ್ರಹಿಸದಂತೆ ನಾನು ಎಲ್ಲಾ ನಾಗರಿಕರಿಗೂ ವಿನಂತಿಸುತ್ತೇನೆ’ ಎಂದು ಅವರು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ನಮ್ಮ ಪಕ್ಷದ 23 ಕಾರ್ಯಕರ್ತರು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಿಕ್ಕ ವಯಸ್ಸಿನವರೆಲ್ಲ ಅಧ್ಯಕ್ಷ ಉಪಾಧ್ಯಕ್ಷರುಗಳಾಗಿದ್ದಾರೆ, ಅವರೆಲ್ಲರಿಗೂ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದ ಶಾಸಕರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಒಟ್ಟಿಗೆ ಕೆಲಸಗಳನ್ನು ಹಮ್ಮಿಕೊಂಡು ಎಲ್ಲರ ವಿಶ್ವಾಸ ಗಳಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ಎಂದು ಕಿವಿಮಾತು ಹೇಳಿದರು. ಜೆಡಿಎಸ್ ಮುಖಂಡ ಹೆಡಗಿಹಳ್ಳಿ ವಿಶ್ವನಾಥ್ ಮಾತನಾಡಿ, 34 ಗ್ರಾಮ ಪಂಚಾಯಿತಿಗಳಲ್ಲಿ 23 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರವನ್ನು ನಮ್ಮ ಜೆಡಿಎಸ್ ಪಕ್ಷ ಹಿಡಿದಿದೆ ಎಂದರೆ, ನಮ್ಮ ಶಾಸಕರಿಗೆ ಇದರ ಶ್ರೇಯಸ್ಸು ಲಭಿಸುತ್ತದೆ. ಇದು ಅವರ ಹೋರಾಟಕ್ಕೆ ಸಂದ ಜಯ ಎಂದರು. ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸೊಪ್ಪನಹಳ್ಳಿ ಮಧು ಸ್ವಾಗತಿಸಿದರು. ವೆಂಕಟಾಪುರ ಯೋಗೇಶ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಲೀಲಾವತಿ ಗಿಡ್ಡಯ್ಯ, ವಿಜಯೇಂದ್ರ,…

Read More

ಆಟ-ಗಲಾಟ ಸಂಸ್ಥೆಯು ಇದೇ 5 ಮತ್ತು 6ಕ್ಕೆ ಬೆಂಗಳೂರು ಕಾವ್ಯ ಉತ್ಸವ’ದ ಏಳನೇ ಆವೃತ್ತಿಯನ್ನು ಹಳೆ ಮದ್ರಾಸ್ ರಸ್ತೆಯಲ್ಲಿರುವ ಗೋಪಾಲನ್ ಮಾಲ್‌ ನಲ್ಲಿ ಹಮ್ಮಿಕೊಂಡಿದೆ. ಉತ್ಸವದಲ್ಲಿ ದೇಶದ ಹಳೆಯ ಮತ್ತು ಹೊಸ ತಲೆಮಾರಿನ ಬಹುಭಾಷಾ ಕವಿಗಳು, ಗೀತ ರಚನೆಕಾರರು, ಹಾಡುಗಾರರು, ಸಂಗೀತಗಾರರು ಭಾಗವಹಿಸಲಿದ್ದಾರೆ. ಉತ್ಸವವು ಕವಿತೆ, ಸಂವಾದ, ಭಾಷಣಗಳು ಹಾಗೂ ಕಾರ್ಯಾಗಾರಗಳನ್ನು ಒಳಗೊಂಡಿದೆ. ‘ಕವಿತೆಗಳಿಗೆ ವೇದಿಕೆಯಾಗಿ ಸಾಮಾಜಿಕ ಜಾಲತಾಣ’ ಎಂಬ ವಿಷಯದ ಮೇಲೆ ಅನುಕೃತಿ ಉಪಾಧ್ಯಾಯ, ಮೇಘಾ ರಾವ್, ಮೆಹಕ್ ಗೋಯಲ್ ಮತ್ತು ನಿಶಿ ಜಗವತ್ ಚರ್ಚಿಸಲಿದ್ದಾರೆ. ಕವಿ ಕೆ. ಸಚ್ಚಿದಾನಂದನ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಉತ್ಸವದ ನಿರ್ದೇಶಕಿ ಶೈನಿ ಆ್ಯಂಟನಿ ತಿಳಿಸಿದ್ದಾರೆ. ‘ಮಕ್ಕಳಿಗಾಗಿ ಎರಡೂ ದಿನ ಪ್ರತ್ಯೇಕ ವೇದಿಕೆಗಳನ್ನು ಒದಗಿಸಲಾಗುತ್ತದೆ. ಕಥೆ ಹೇಳುವಿಕೆ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಪ್ರತ್ಯೇಕ ಕಾರ್ಯಾಗಾರವೂ ಇರಲಿದೆ. ಎರಡು ದಿನಗಳ ಈ ಉತ್ಸವದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ಬಂಗಾಳಿ ಸೇರಿ ವಿವಿಧ…

Read More

ಬೆಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ವತಿಯಿಂದ ಪ್ರತಿ ವರ್ಷ ನಡೆಯುವ ಕಾರ್ಯಕ್ರಮದಂತೆ, 66 ನೇ ವರ್ಷದ ವಾರ್ಷಿಕೋತ್ಸವದಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಪದ್ಮಭೂಷಣ ಶ್ರೀ ಎಸ್ ಎಂ ಕೃಷ್ಣ ಅವರಿಗೆ, ಜೀವಮಾನದ ಸಾಧನೆ ಪ್ರಶಸ್ತಿಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಕ್ಲೀನ್ ‘ಸ್ ಗ್ಲೋಬಲ್ ಮ್ಯಾನೇಜ್ ಮೆಂಟ್ ಸೊಲ್ಯೂಷನ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ ಮಧುರಾಣಿ ಗೌಡ ಇವರು ಇಂದು ನಡೆದ ಸರಳ ಸಮಾರಂಭದಲ್ಲಿ ಪ್ರಧಾನ ಮಾಡಿದರು. ಇದೇ ಸಂಧರ್ಭದಲ್ಲಿ ಪದ್ಮಶ್ರೀ ಎಸ್ ಎನ್ ಗಿರೀಶ್, ಕಂಬಳದಲ್ಲಿ ವಿಶ್ವ ಧಾಖಲೆ ಸ್ಥಾಪಿಸಿದ ಶ್ರೀ ಶ್ರೀನಿವಾಸ ಗೌಡ ಹಾಗೂ ಇತರ 14 ಮಂದಿ ಪ್ರತಿಷ್ಠಿತರಿಗೆ ಪ್ರಶಸ್ತಿಯನ್ನು ಅಖಿಲ ಭಾರತ ಕೈಗಾರಿಕಾ ಮಹಾಮಂಡಳ ಇದರ ಅಧ್ಯಕ್ಷ ಶ್ರೀ ಉಲ್ಲಾಸ್ ಕಾಮತ್ ಅವರು ವಿತರಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಮಣಿಪುರದ ನರಮೇಧ ಹಾಗೂ ಮಹಿಳೆಯರ ಮೇಲಿನ ವೈಶಾಚಿಕ ಕೃತ್ಯವನ್ನು ಖಂಡಿಸಿ ತುರುವೇಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ಪಾದಯಾತ್ರೆ ಮೂಲಕ ತೆರಳಿದ ಪ್ರತಿಭಟನಾಕಾರರು, ತಾಲೂಕು ಕಚೇರಿ ಆವರಣ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಳೆದ ಎರಡು ಮೂರು ತಿಂಗಳಿನಿಂದ ಮಣಿಪುರದಲ್ಲಿ ಮಹಿಳೆಯರ ಮೇಲೆ ಅಮಾನುಷ ಕೃತ್ಯಗಳು, ಅತ್ಯಾಚಾರ, ನರಮೇಧಗಳು ನಡೆಯುತ್ತಿವೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಜೊತೆಗೆ ಸಹೋದರತ್ವ, ಸಹಬಾಳ್ವೆ, ಅಡಿಯಲ್ಲಿ ಜೀವಿಸುತ್ತಿರುವ ನಾವು ಇಂತಹ ಹೀನ ಕೃತ್ಯವನ್ನು ಖಂಡಿಸಲೇಬೇಕು ಎಂದು ಪ್ರತಿಭಟನಾಕಾರರು ಹೇಳಿದರು. ಮಣಿಪುರದಲ್ಲಿ ನಡೆದ ಅಮಾನವೀಯ ಕೃತ್ಯಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮಣಿಪುರದ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ದಲಿತ ಸಂಘರ್ಷ ಸಮಿತಿ, ಆದಿ…

Read More

ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಭದ್ರತಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಜಾರ್ಖಂಡ್ ರಾಜ್ಯದ ಜೆಮ್ಮೆಡ್‌ ನಗರದ ಆದಿತ್ಯ ಲೂಕ್ ಕುಜುರ್ (27) ಮೃತಪಟ್ಟವರು. ಇವರು 4-ಬಿ ಕಂಪನಿಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಜೆ. ಬಿ. ನಗರದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ನಗರದ 100 ಅಡಿ ರಸ್ತೆಯ ಮಂಗೋಲಿಯಾ ಬೇಕರಿ ಬಳಿ ಅಪಘಾತ ಸಂಭವಿಸಿದೆ. ‘ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 12. 30ರ ವೇಳೆಯಲ್ಲಿ ತಮ್ಮ ಬಿಎಂಡಬ್ಲ್ಯು ಬೈಕ್‌ ನಲ್ಲಿ ಹೆಲ್ಮಟ್ ಧರಿಸದೆ ವೇಗವಾಗಿ ತೆರಳುತ್ತಿದ್ದರು. ಬೇಕರಿ ಸಮೀಪ ರಸ್ತೆಯ ಮಧ್ಯದ ಸಿಮೆಂಟ್ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರು. ಹೆಲ್ಮಟ್  ಧರಿಸದಿರುವ ಕಾರಣಕ್ಕೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಸಿಎಂಎಚ್ ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದರು’ ಎಂದು ಸಂಚಾರ ಪೂರ್ವ ವಿಭಾಗದ ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

1 ಲಕ್ಷ ರೂ. ಲಂಚ ಸ್ವೀಕರಿಸುವಾಗ ಬಿಬಿಎಂಪಿ ಕಂದಾಯ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ಒಬ್ಬ ವ್ಯಕ್ತಿ ಪರಾರಿಯಾಗಿದ್ದಾರೆ. ಬಿಬಿಎಂಪಿ ವಾರ್ಡ್ ನಂ. 166 ರ ರೆವೆನ್ಯೂ ಇನ್ಸ್ ಪೆಕ್ಟರ್ ರಾಜಗೋಪಾಲ್ ಪರಾರಿಯಾಗಿದ್ದು, ಎಫ್‌ ಡಿ ಎ ರಾಘವೇಂದ್ರ, ಡಾಟಾ ಎಂಟ್ರಿ ಆಪರೇಟರ್ ಸುರೇಶ್ ದತ್ತಾರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಖಾತೆ ಬದಲಾವಣೆ ಮಾಡಿಕೊಡಲು ಮಾಚೋಹಳ್ಳಿಯ ಅರುಣ್ ಎಂಬಾತನಿಂದ 1 ಲಕ್ಷದ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧನ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಬ್ರಾಂಡ್ ಬ್ಯಾಂಕಿಂಗ್‌ ನಲ್ಲಿ ನಂದಿನಿ ದೇಶದಲ್ಲೇ ಆರನೇ ಸ್ಥಾನ ಪಡೆದಿದೆ. ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳದ (ಕೆಎಂಎಫ್) ‘ನಂದಿನಿ’ ದೇಶದ ಬಳಕೆದಾರ ಬ್ಯಾಂಡ್‌ ಗಳ ಪಟ್ಟಿಯಲ್ಲಿ ಈ ಬಾರಿ ಒಂದು ಸ್ಥಾನ ಮೇಲಕ್ಕೇರಿದೆ. ಕರ್ನಾಟಕ ಮಾರುಕಟ್ಟೆ ಸಂಶೋಧನಾ ಕಂಪನಿ ‘ಕಾಂಟರ್‌’ ಬಿಡುಗಡೆ ಮಾಡಿರುವ 2023ನೇ ಸಾಲಿನ ಬ್ರಾಂಡ್ ಫ್ರಟ್ ವರದಿಯಲ್ಲಿ ಈ ವಿವರ ನೀಡಲಾಗಿದೆ. ಡೇರಿ ಉತ್ಪನ್ನಗಳ ಪಟ್ಟಿಯಲ್ಲಿ ‘ಅಮೂಲ್’ ಹೊರತುಪಡಿಸಿದರೆ ನಂದಿನಿ ಮಾತ್ರ ಸ್ಥಾನ ಪಡೆದಿದೆ. ಪಾರ್ಲೆ ಪ್ರಥಮ ಸ್ಥಾನ, ಬ್ರಿಟಾನಿಯಾ ಎರಡನೇ ಸ್ಥಾನ, ಅಮೂಲ್ ಮೂರನೇ ಸ್ಥಾನ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನ ಹಾಗೂ ಟಾಟಾ ಐದನೇ ಸ್ಥಾನಗಳನ್ನು ಪಡೆದಿವೆ. 2021ರ ನವೆಂಬರ್‌ ನಿಂದ 2022ರ ಅಕ್ಟೋಬರ್ ಅವಧಿಯಲ್ಲಿನ ಮಾಹಿತಿ ಸಂಗ್ರಹಿಸಿ ಈ ಬ್ಯಾಂಕಿಂಗ್‌ ಗಳನ್ನು ನೀಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC…

Read More