Author: admin

ತುಮಕೂರು: ಇತ್ತೀಚೆಗೆ ಬಾಲಕಿಯ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತುಮಕೂರು ತಾಲೂಕಿನ ಚಿಕ್ಕಬೆಳ್ಳಾವಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದ ಚಿರತೆಯು ಸ್ಥಳದಿಂದ ಪರಾರಿಯಾಗಿತ್ತು. ಚಿರತೆಯನ್ನು ಬಂಧಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮದ ಹೊರವಲಯದ ಕೋಳಿ ಫಾರ್ಮ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಇಂದು ಬೆಳಗಿನ ಜಾವ ಸುಮಾರು ಮೂರು- ನಾಲ್ಕು ವರ್ಷದ ಗಂಡು ಚಿರತೆಯಾಗಿದೆ. ಬೆಳ್ಳಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ದಾಳಿ ನಡೆಸುತ್ತಾ ಸಾರ್ವಜನಿಕರನ್ನು ಕಂಗೆಡಿಸಿದ್ದ ಚಿರತೆಯನ್ನು ಆರ್ ಎಫ್ಓ ಪವಿತ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.

Read More

ತುಮಕೂರು: ತುಮಕೂರು ನಗರದಲ್ಲಿ ಹೆಚ್ಚಿದ ಪುಂಡರ ಹಾವಳಿ ಹೆಚ್ಚಾಗಿದ್ದು, ಬ್ಲೇಡ್ ಮಚ್ಚಿನಿಂದ ದಾಳಿ ಮಾಡಲಾಗುತ್ತಿದೆ. ಇದೀಗ ಹಿಡಿಯಲು ಹೋದ ಪೊಲೀಸರ ಮೇಲೆಯೂ ಪುಂಡರು ಹಲ್ಲೆ ಯತ್ನ ನಡೆಸಿದ್ದಾರೆ. ತುಮಕೂರು ನಗರದ ಪಿ.ಎಚ್ ಕಾಲೋನಿಯ ಅಜಾದ್ ಪಾರ್ಕ್ ಬಳಿ ಘಟನೆ ನಡೆದಿದ್ದು ಗುರುವಾರ ರಾತ್ರಿ 8.30ರ ಸಮಯದಲ್ಲಿ ಆರೋಪಿ ಸಾಜಿದ್ ಹಾಗೂ ಸ್ನೇಹಿತರಿಂದ ಹಲ್ಲೆ ಮಾಡಲಾಗಿದೆ. ಮಹಮದ್ ರಫೀಕ್ ಎಂಬುವರ ಮೇಲೆ ಬ್ಲೇಡಿನಿಂದ ಹಲ್ಲೆ ನಡೆಸಿದ ಆರೋಪಿಗಳು. ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ಮಹಮದ್ ರಫೀಕ್ ಎಂಬುವರ ಮೇಲೆ ದಾಳಿಯಾಗಿದ್ದು, ಏಕಾಏಕಿ ದಾಳಿ ನಡೆಸಿ ಬ್ಲೇಡಿನಿಂದ ಹಲ್ಲೆ ಮಾಡಿದ ಪುಂಡರ ಗುಂಪು ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ತಿಲಕ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಈ ವೇಳೆ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾರೆ. ನಂತರ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುರುವೇಕೆರೆ ಪಟ್ಟಣದಲ್ಲಿರುವ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಮಿತಿಯ ಕಚೇರಿಯಲ್ಲಿ ವೀರ ವನಿತೆ ಓಬವ್ವಳ ಜಯಂತಿಯನ್ನು ಆಚರಿಸಲಾಯಿತು. ಕಚೇರಿಯಲ್ಲಿ ಓಬವ್ವಳ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ದಬ್ಬೇಘಟ್ಟ ಗ್ರಾಮದ ತಮಟೆ ಕಲಾವಿದೆ ಭಾಗ್ಯಮ್ಮ ರವರನ್ನು ಆದಿಜಾಂಭವ ಕ್ಷೇಮಾಭಿವೃದ್ಧಿ ಸಮಿತಿಯ ಸಂಸ್ಥಾಪಕರಾದ ಸಿ ಎಸ್ ಮೂರ್ತಿ ಹಾಗೂ ಗಣ್ಯರು ನೀಲಿಯ ಪೇಟವನ್ನು ತೊಡಿಸಿ ಶಾಲು ಹಾರ ಹಾಕಿ ಸನ್ಮಾನಿಸಿದರು. ಡಿಎಸ್ಎಸ್ ತಾಲೂಕು ಸಂಚಾಲಕರಾದ ಕುಣಿಕೆನಹಳ್ಳಿ ಜಗದೀಶ್ ರವರು ಒನಕೆ ಓಬವ್ವ ರವರ ಕಿರುಪರಿಚಯನ್ನು ಮಾಡಿಕೊಟ್ಟರು ಮತ್ತು ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ , ಡೊಂಕಿಹಳ್ಳಿ ರಾಮಯ್ಯನವರು ಓಬವ್ವಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ, ಪ್ರಗತಿ ಪರ ಹೋರಾಟಗಾರ ತುರುವೇಕೆರೆ ಸತೀಶ್ ,ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ,ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಚನ್ನಕೇಶವ, ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಮಿತಿಯ ಕಚೇರಿಯ ಸಹಾಯಕರಾದ ಕುಮಾರಿ ಅಮೃತ ,ಪುರ ರಾಮಚಂದ್ರು ಸೇರಿದಂತೆ…

Read More

ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿ ಇಡೀ ದೇಶಾದ್ಯಂತ ಆಚರಣೆ ಮಾಡಲು ಜನರು ಕಾತರದಿಂದ ಕಾಯುತ್ತಿದ್ದರೇ ಈ 6 ಊರುಗಳು ಮಾತ್ರ ಹಬ್ಬವನ್ನು ಒಂದು ವಾರ ಮುಂದಕ್ಕೆ ಹಾಕಿದ್ದಾರೆ.‌ ಹೌದು…, ಅಚ್ಚರಿಯಾದರೂ ಸತ್ಯ. ದೀಪಾವಳಿ ಬಂತೆಂದರೆ ಸಡಗರ-ಸಂಭ್ರಮ, ಚಿಣ್ಣರಿಗೆ ಪಟಾಕಿ ಹಚ್ಚುವ ಖುಷಿ, ಹಿರಿಯರಿಗೆ ದೀಪ ಬೆಳುಗುವ ಸಂತಸ. ಆದರೆ ಮಂಗಳವಾರ ದೇಶಾದ್ಯಂತ ಆಚರಿಸುವ ಸಂಭ್ರಮದ ಬೆಳಕಿನ ಹಬ್ಬವನ್ನು ಗುಂಡ್ಲುಪೇಟೆ ತಾಲೂಕಿನ 6 ಊರುಗಳು ಹಬ್ಬದ ನಂತರ ವಾರದಲ್ಲಿ ಬುಧವಾರ ಆಚರಿಸುತ್ತವೆ. ಗುಂಡ್ಲುಪೇಟೆ ತಾಲೂಕಿನ 6 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ. ಕಾರಣ ಈ ಬಾರಿ ಹಬ್ಬ ಮಂಗಳವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ದೀಪಾವಳಿಯ ಬಲಿ ಪಾಡ್ಯಮಿ ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸಲಿದ್ದು, ಇಲ್ಲದಿದ್ದರೆ ಮುಂದಿನ ಬುಧವಾರವೇ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ದೀಪಾವಳಿ ಹಬ್ಬದ ಸಂಭ್ರಮ, ಹೊಸ ಬಟ್ಟೆ ತೊಡುವುದು, ಪಟಾಕಿ ಸಿಡಿಸುವುದು, ಮನೆಯಲ್ಲಿ ಸಿಹಿ ಊಟ ಎಲ್ಲವೂ ಬುಧವಾರವೇ…

Read More

ಐಸ್‌ ಲೆಂಡ್‌: ಕಳೆದ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪನದಲ್ಲಿ 5.2ರಷ್ಟಿದ್ದ ತೀವ್ರತೆಯಿಂದಾಗಿ ಜ್ವಾಲಾಮುಖಿ ಸ್ಪೋಟಿಸುವ ಭೀತಿ ಎದುರಾಗಿದೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಲಾಗಿದೆ. ‘ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಭೂಮಿ ಕಂಪಿಸಿದೆ. ಉತ್ತರದ ಗ್ರಿಂಡ್‌ವಿಕ್‌ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಪೋಟಿಸುವ ಸಾಧ್ಯತೆ ಇದೆ’ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ. ‘ಗ್ರಿಂಡ್‌ ವಿಕ್‌ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರ ಜನರು ವಾಸಿಸುತ್ತಿದ್ದಾರೆ. ಇವರನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆ 5.30ರಿಂದ ಭೂಮಿ ಕಂಪಿಸಲು ಪ್ರಾರಂಭಿಸಿತು. ಕಳೆದ ಅಕ್ಟೋಬರ್‌ ನಿಂದ ಇಲ್ಲಿಯವರೆಗೆ ಸುಮಾರು 24 ಸಾವಿರ ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ. ಅದರಲ್ಲೂ ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ. ಇಂಥ…

Read More

ಗಡಿ ಭದ್ರತಾ ಪಡೆ (ಬಿಎಸ್‌ ಎಫ್) ಸಿಬ್ಬಂದಿ ಶುಕ್ರವಾರ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಮತ್ತು 56.5 ಲಕ್ಷ ರೂಪಾಯಿ ಮೌಲ್ಯದ ಎಂಟು ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಭಾರತೀಯ ಪ್ರಜೆಯನ್ನು ಸಹ ಬಿಎಸ್ ಎಫ್ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಗಡಿ ಹೊರ ಠಾಣೆಯಲ್ಲಿ, BSF ಸಿಬ್ಬಂದಿಗಳು ಕಳ್ಳಸಾಗಣೆದಾರರು ಬಾಂಗ್ಲಾದೇಶದ ಕಡೆಯಿಂದ ಭಾರತದ ಕಡೆಗೆ ಬೇಲಿಯ ಮೇಲೆ ಪ್ಯಾಕೆಟ್ ಅನ್ನು ಎಸೆದು ಓಡಿ ಹೋಗುವುದನ್ನು ನೋಡಿದರು. ಇದರ ನಂತರ, ಅವರು ಪ್ರದೇಶದ ಜವಾಬ್ದಾರಿಯುತ ಬಿಎಸ್‌ ಎಫ್ ‌ನ ಗಸ್ತು ತಂಡಕ್ಕೆ ಮಾಹಿತಿ ನೀಡಿದರು. ಕಳ್ಳಸಾಗಾಣಿಕೆದಾರನೊಬ್ಬ ಪ್ಯಾಕೆಟ್ ತೆಗೆದುಕೊಳ್ಳಲು ಬರುತ್ತಿದ್ದಂತೆ ಗಸ್ತು ತಿರುಗುತ್ತಿದ್ದ ತಂಡದ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಪ್ಯಾಕೆಟ್ ಪರಿಶೀಲಿಸಿದಾಗ ಎಂಟು ಚಿನ್ನದ ಬಿಸ್ಕತ್ತುಗಳು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದೆ. ವಿಚಾರಣೆ ವೇಳೆ, ಬಂಧಿತ ವ್ಯಕ್ತಿ ಗೌತಮ್ ರೈ, ಬಾಂಗ್ಲಾದೇಶದ ಸಿರಾಜುಲ್ಲಾ ಶೇಖ್ ಎಂಬುವರಿಂದ ಚಿನ್ನದ ಬಿಸ್ಕತ್ತುಗಳನ್ನು ತೆಗೆದುಕೊಂಡಿದ್ದಾಗಿ…

Read More

ಚೆನ್ನೈ  ಬಂದರಿನಲ್ಲಿ ನಿರ್ವಹಣೆ ವೇಳೆ ಹಡಗಿನಲ್ಲಿ ಸ್ಫೋಟ. ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಡಗಿನಲ್ಲಿ ಗ್ಯಾಸ್ ಪೈಪ್‌ ಲೈನ್ ಒಡೆದ ಕಾರಣ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಒಡಿಶಾದಿಂದ ಆಗಮಿಸಿದ್ದ ತೈಲ ಟ್ಯಾಂಕರ್ ‌ನಲ್ಲಿ ಈ ಅವಘಡ ಸಂಭವಿಸಿದೆ. ಅಕ್ಟೋಬರ್ 31ರಂದು ‘ಎಂಟಿ ಪೇಟ್ರಿಯಾಟ್’ ಹಡಗನ್ನು ದುರಸ್ತಿಗಾಗಿ ಚೆನ್ನೈ ಬಂದರಿಗೆ ತರಲಾಗಿತ್ತು. ಚೆನ್ನೈ ಬಂದರು ಕಾಂಪ್ಲೆಕ್ಸ್ ‌ನ ಕೋಸ್ಟಲ್ ವರ್ಕ್ ಪ್ಲೇಸ್‌ ನಲ್ಲಿ ನಿಲ್ಲಿಸಲಾಗಿದ್ದ ಹಡಗಿನ ಬೋಲ್ಟ್ ತೆಗೆಯುವಾಗ ಸಮೀಪದ ಗ್ಯಾಸ್ ಪೈಪ್‌ಲೈನ್ ಒಡೆದಿದೆ. ಕೆಲಸದಲ್ಲಿ ನಿರತರಾಗಿದ್ದ ಚೆನ್ನೈ ತಂಡೈಯಾರ್ ಪೇಟ್ ನಿವಾಸಿ ತಂಕರಾಜ್ ಮೃತರು. ಜೋಶುವಾ, ರಾಜೇಶ್ ಮತ್ತು ಪುಷ್ಪಾಲಿಂಗಮ್ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಬೆಂಗಳೂರು: ಮಾದಕ ವಸ್ತುಗಳ ಮಾರಾಟ ಜಾಲ ವೊಂದನ್ನು ಯಶಸ್ವಿಯಾಗಿ ಬೇಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ಯಶಸ್ವಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಮಾದಕ ವಸ್ತುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಆಫ್ರಿಕನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಲ್ಲದೇ, ಎಂಡಿಎಂಎ ತಯಾರಿಕೆಗೆ ಬಳಸಲಾದ ವಿವಿಧ ಕಚ್ಚಾ ವಸ್ತುಗಳು ಮತ್ತು ರಾಸಾಯನಿಕಗಳ ಜೊತೆಗೆ ಸುಮಾರು 10 ಕೋಟಿ ಮೌಲ್ಯದ 5 ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದರು.

Read More

ಬೆಂಗಳೂರು : ಲಾರಿಯೊಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದರಿಂದಾಗಿ ಆ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆನೇಕಲ್ ತಾಲೂಕಿನ ಹಳೆ ಚಂದಾಪುರ ಬಳಿ ಘಟನೆ ಸಂಭವಿಸಿದೆ. ಆದರೆ, ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಬೆಂಗಳೂರು-ಹೊಸೂರುರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಒರಿಸ್ಸಾ ಮೂಲದ ನಿರಂಜನ್ ಸಾವನ್ನಪ್ಪಿದ ವ್ಯಕ್ತಿ. ಹಳೆ ಚಂದಾಪುರಿಂದ ನಡೆದು ಬರುವಾಗ ನಿರಂಜನ್‌ಗೆ ಈಚರ್ ಲಾರಿ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಚಾಮರಾಜನಗರ: ದೀಪಾವಳಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಇದರಿಂದ ಸಂಚಾರ ದಟ್ಟಣೆಯಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ದ್ವಿಚಕ್ರ ವಾಹನ, ಆಟೋಗಳನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ದ್ವಿ ಚಕ್ರ ವಾಹನ ಹಾಗೂ ಆಟೋಗಳನ್ನು ತಾಳುಬೆಟ್ಟದಲ್ಲಿ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Read More