Author: admin

ಕಲಬುರಗಿ: ಬುರ್ಖಾ ಧರಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬಸ್ ಹತ್ತಲು ಬಿಡದ ಬಸ್‌ ಚಾಲಕನನ್ನ ಅಮಾನತುಗೊಳಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಹಿಜಬ್‌ದಾರಿ ಶಾಲಾ‌ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಬಸ್ ಚಾಲಕನನ್ನ ಅಮಾನತುಗೊಳಿಸಲಾಗಿದೆ. ಕಲಬುರಗಿ ಬಸ್ ಡಿಪೋ-3ರ ಚಾಲಕ ಮೆಹಬೂಬ್ ಪಟೇಲ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೇ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ KKRTC ಕಲಬುರಗಿ ವಿಭಾಗದ ಡಿಸಿ ಚಾಲಕನನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಎರಡು ದಿನಗಳ ಹಿಂದೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ಹಿಜಬ್‌ದಾರಿ ವಿದ್ಯಾರ್ಥಿನಿಯರು ತಮ್ಮೂರಿಗೆ ಹೊರಟಿದ್ದರು. ಈ ವೇಳೆ ಚಾಲಕ ನೀನು ಮುಸ್ಲಿಂ ಇದಿಯಲ್ವ.. ಬುರ್ಖಾ ಧರಿಸಿ ಬಾ.. ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ ಎಂದು ಹೇಳಿದ್ದ. ಆಗ ಶಿಕ್ಷಕರು ಮತ್ತು ಬಸ್‌ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗುಡ್ಡ ಕುಸಿತವಾಗಿದೆ. ಇಂದಿನಿಂದ ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರಸ್ತೆ ತೆರವು ಕಾರ್ಯ ಹಿನ್ನೆಲೆ ಜು.28ರವರೆಗೆ ಪ್ರವಾಸಿಗರಿಗೆ ನಿರ್ಬಂಧವಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ, ಕೆಮ್ಮಣ್ಣುಗುಂಡಿ, ಸೀತಾಳಯ್ಯನಗಿರಿ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರಿನ ಮಹದೇವಪುರದ ಫುಟ್‌ ಪಾತ್‌ ಗಳಿಂದ ಬಹುದೊಡ್ಡ ಪ್ರಮಾಣದ ತ್ಯಾಜ್ಯವನ್ನು ತೆರವು ಮಾಡಲಾಯಿತು. ಸಿಜಿಐ ತಂಡವು ಫುಟ್‌ ಪಾತ್‌ ಗಳಿಂದ ಬಹುದೊಡ್ಡ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಿದ್ದಲ್ಲದೆ, ಎಚ್ಎಎಲ್ ನ ಕಾಂಪೌಂಡ್ ಮೇಲೆ ಪೇಂಟಿಂಗ್ ಮಾಡಿ ಅದರ ಸೌಂದರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಹೇಳಿದ್ದಾರೆ. ಸಮಾನಾಂತರವಾಗಿ ಬಿಬಿಎಂಪಿಯು ಮಳೆ ನೀರು ಸರಾಗವಾಗಿ ಹರಿದು ಪ್ರವಾಹ ತಗ್ಗುವಂತೆ ಮಾಡಲು ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಪ್ರಾರಂಭಿಸಿದೆ. ಇದೇ ಸಂದರ್ಭದಲ್ಲಿ, ಬಿಬಿಎಂಪಿ, ಎಸ್ ಡಬ್ಲ್ಯು ಡಿ ಇಲಾಖೆ ಮತ್ತು ಬಿಬಿಎಂಪಿಯ ಆರ್ ಐ ಇಲಾಖೆ ಕೂಡ ರಸ್ತೆ ಸ್ವಚ್ಛತೆಗೆ ಕೈಜೋಡಿಸಿದೆ ಎಂದು ಶಾಸಕಿ ಮಂಜುಳಾ ಲಿಂಬಾವಳಿ ತಿಳಿಸಿದರು. ಸ್ವಚ್ಛ ಮತ್ತು ಹಸಿರು ಮಹದೇವಪುರಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಕರೆ ನೀಡಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಓಲ್ಡ್ ಏರ್‌ ಪೋರ್ಟ್‌ ರಸ್ತೆಯಿಂದ ದಿವ್ಯಶ್ರೀ ಮತ್ತು ಅದರಾಚೆಗಿನ ಪಾದಚಾರಿ ಮಾರ್ಗವನ್ನು ಸುರಕ್ಷಿತ, ಸ್ವಚ್ಛ ಮತ್ತು ಅನಾಯಾಸವಾಗಿ…

Read More

ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಮಾರ್ವೇಶ್ (19) ಸಾವಿನ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಇದೊಂದು ಕೊಲೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಸ್ಥಳೀಯ ನಿವಾಸಿ ಮಾರ್ವೇಶ್, ಬಿ. ಕಾಂ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಇವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ರೌಡಿ ಹಾಗೂ ಈತನ ಸಹಚರರು ಕೃತ್ಯ ಎಸಗಿರುವ ಅನುಮಾನವಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದ ಮಾರ್ವೇಶ್, ಪರಿಚಯಸ್ಥ ಯುವತಿಯೊಬ್ಬರ ಮೊಬೈಲ್‌ ಗೆ ಸಂದೇಶ ಕಳುಹಿಸಿದ್ದರೆಂದು ಗೊತ್ತಾಗಿದೆ. ಯುವತಿಯ ಸ್ನೇಹಿತನಾಗಿರುವ ರೌಡಿ, ಸಂದೇಶ ನೋಡಿ ಕೋಪಗೊಂಡಿದ್ದ.’ ‘ಕಾಲೇಜು ಬಳಿ ಮಾರ್ವೇಶ್‌ ನನ್ನು ಅಡ್ಡಗಟ್ಟಿದ್ದ ರೌಡಿ ಹಾಗೂ ಇತರರು, ಹಲ್ಲೆ ಮಾಡಿದ್ದರು. ಪೈಪ್‌ ಗಳಿಂದ ಹೊಡೆದಿದ್ದರು. ತೀವ್ರ ಗಾಯಗೊಂಡಿದ್ದ ಮಾರ್ವೇಶ್ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಮೂಲಗಳು ತಿಳಿಸಿವೆ. ‘ರಸ್ತೆಯಲ್ಲಿ ಬಿದ್ದಿದ್ದ ಮಾರ್ವೇಶ್ ಅವರನ್ನು ಸ್ನೇಹಿತರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು.…

Read More

ನೆಲ ಸ್ವಚ್ಛಗೊಳಿಸುವ ದ್ರಾವಣ ಸೇವಿಸಿ, ಅನ್ನನಾಳಕ್ಕೆ ಹಾನಿ ಮಾಡಿಕೊಂಡಿದ್ದ ಬೆಂಗಳೂರು ನಗರದ 6 ವರ್ಷದ ಬಾಲಕಿಗೆ ನಗರದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೆಲ ಸ್ವಚ್ಛಗೊಳಿಸುವ ದ್ರಾವಣವನ್ನು ಬಾಲಕಿ ಸೇವಿಸಿದ್ದಳು. ಇದರಿಂದ ಆಕೆಯ ಅನ್ನನಾಳ ಹಾಗೂ ಸಣ್ಣ ಕರುಳಿನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಹಾನಿಗೊಳಗಾದ ಅನ್ನನಾಳವನ್ನು ತೆಗೆದು, ಕೊಳವೆ ಮೂಲಕ ಅವಳ ಸಣ್ಣ ಕರುಳಿಗೆ ನೇರವಾಗಿ ಆಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದೂ ಸಹ ಆಕೆಗೆ ಕಷ್ಟವಾಗುತ್ತಿತ್ತು. ಹೀಗಾಗಿ, ಉದರ ತಜ್ಞ ಡಾ. ಮನೀಶ್ ಜೋಶಿ ತಂಡವು ಸಂಪೂರ್ಣವಾಗಿ ಸುಟ್ಟು ಕಿರಿದಾಗಿದ್ದ ಅನ್ನನಾಳವನ್ನು ತೆಗೆದು, ಕೊಳವೆಯನ್ನು ನೇರವಾಗಿ ಬಾಲಕಿಯ ಸಣ್ಣ ಕರುಳಿಗೆ ಅಳವಡಿಸಿತು. ಈ ಮೂಲಕ ಅನ್ನನಾಳವನ್ನು ಮರು ನಿರ್ಮಾಣ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ‘ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಅನ್ನನಾಳವನ್ನು ಮರುನಿರ್ಮಾಣ ಮಾಡಲಾಗಿದೆ. ಇದರಿಂದ ಇದೀಗ ಬಾಲಕಿಯು ಬಾಯಿಯ ಮೂಲಕ ಆಹಾರ ಸೇವಿಸಬಹುದಾಗಿದೆ’ ಎಂದು ಡಾ. ಮನೀಶ್ ಜೋಶಿ…

Read More

ಮಲ್ಲಸಂದ್ರ ಪೈಪ್‌ ಲೈನ್ ರಸ್ತೆಯ ಪಾರ್ಕ್ ಪಕ್ಕದ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ದಾಸರಹಳ್ಳಿ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೀದಿ ಬದಿ ವ್ಯಾಪಾರಿಗಳು ಮತ್ತೆ ಪಾದಚಾರಿ ಮಾರ್ಗದಲ್ಲೇ ವಹಿವಾಟು ಆರಂಭಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳ ಗುರುತಿಸದ ಕಾರಣ ಮಲ್ಲಸಂದ್ರ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ವ್ಯಾಪಾರ ಮಾಡಲು ಬರುವ ಜನರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದುದರಿಂದ ಬೇರೆ ವಾಹನ ಸವಾರರಿಗೆ ತೊಂದರೆಯುಂಟಾಗಿತ್ತು. ಈ ಬಗ್ಗೆ ದೂರುಗಳು ಬಂದಿದ್ದರಿಂದ ಬೀದಿ ಬದಿ ವ್ಯಾಪಾರಿಗಳ ವಿರೋಧದ ನಡುವೆಯೇ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದರು. ಈಗ ಮತ್ತೆ ಬೀದಿ ಬದಿಯಲ್ಲೇ ವ್ಯಾಪಾರ ನಡೆಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ‘ವಾಹನ ಸವಾರರು ವ್ಯಾಪಾರಿಗಳ ಎದುರಿನ ರಸ್ತೆಗೆ ಗಾಡಿ ನಿಲ್ಲಿಸಿ ತರಕಾರಿ ಖರೀದಿಸುತ್ತಾರೆ. ಈ ವೇಳೆ ಹಿಂದೆಯಿಂದ ಬರುವ ವಾಹನಗಳಿಗೆ ಕಿರಿಕಿರಿಯಾಗಿ ಸಂಚಾರ ದಟ್ಟಣೆಯಾಗುತ್ತದೆ. ಇದನ್ನು ನೋಡಿದರೂ ಕೂಡ ಅಧಿಕಾರಿಗಳು…

Read More

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೂಪದರ್ಶಿ ವಿದ್ಯಾಶ್ರೀ (25) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಜಿಮ್ ತರಬೇತುದಾರ ಅಕ್ಷಯ್‌ ನನ್ನು (27) ಪೊಲೀಸರು ಬಂಧಿಸಿದ್ದಾರೆ. ‘ಕೆಂಪಾಪುರದ ನಿವಾಸಿ ವಿದ್ಯಾಶ್ರೀ, ಜುಲೈ 21ರಂದು ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮರಣ ಪತ್ರ ಸಿಕ್ಕಿದೆ. ಮದುವೆಯಾಗುವುದಾಗಿ ಹೇಳಿ ವಂಚಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಸ್ನೇಹಿತ ಅಕ್ಷಯ್‌ ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಎಂಸಿಎ ಪದವೀಧರರಾದ ವಿದ್ಯಾಶ್ರೀ, ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದರ ಜೊತೆ, ರೂಪದರ್ಶಿಯೂ ಆಗಿದ್ದರು. ‘ಮಿಸ್ ಆಂಧ್ರ’ ಕಿರೀಟವನ್ನೂ ಪಡೆದಿದ್ದರು. ಕೆಂಪಾಪುರದಲ್ಲಿ ತಾಯಿ ಜೊತೆ ವಾಸವಿದ್ದರು’ ಎಂದು ಮೂಲಗಳು ತಿಳಿಸಿವೆ. ‘ಆರೋಪಿ ಅಕ್ಷಯ್, ಮಂಡ್ಯದವ. ಪೋಷಕರ ಜೊತೆ ನಗರಕ್ಕೆ ಬಂದಿದ್ದ. ಬಸವೇಶ್ವರ ನಗರದಲ್ಲಿರುವ ಜಿಮ್‌ ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಈತನ ಕುಟುಂಬ ಸದ್ಯ ಕೆಂಗೇರಿ ಗೇಟ್ ಪ್ರದೇಶದಲ್ಲಿ ವಾಸವಿದೆ’ ಎಂದು ಹೇಳಿವೆ. ಫೇಸ್‌ಬುಕ್‌ನಲ್ಲಿ ಸ್ನೇಹ: ‘ಸಾಮಾಜಿಕ ಮಾಧ್ಯಮ ಫೇಸ್‌ ಬುಕ್‌…

Read More

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ‌ಲ್ಲಿರುವ ಕೆ ಆರ್ ಎಸ್ ಜಲಾಶಯದಲ್ಲಿ ನೀರು ನಾಯಿಗಳು ಪ್ರತ್ಯಕ್ಷವಾಗಿವೆ. ತುಂಬುತ್ತಿರುವ ಡ್ಯಾಂನ ಹಿನ್ನೀರಿನಲ್ಲಿ ನೀರು ನಾಯಿಗಳು ಕಂಡು ಬಂದಿದ್ದು, ಕ್ಯಾಮರಾ ಕಂಡೊಡನೆ ನೀರಿನಲ್ಲಿ ಮರೆಯಾಗಿವೆ. ಈ ಪೈಕಿ ಒಂದು ನೀರು ನಾಯಿ, ನೀರಿನಲ್ಲಿ ಮುಳಗಿ ಮತ್ತೆ ಮೇಲೆ ಬಂದು ಕ್ಯಾಮರಾ ನೋಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ರಾಜ್ಯ ಕಾಂಗ್ರೆಸ್  ಹಿರಿಯ ನಾಯಕರಿಗೆ ಹೈಕಮಾಂಡ್ ನಾಯಕರು ಬುಲಾವ್ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದ ಮುಖಂಡರಿಗೆ ಹೈಕಮಾಂಡ್ ನಾಯಕರು ಬುಲಾವ್ ನೀಡಿದ್ದು, ಬುಲಾವ್ ಹಿನ್ನೆಲೆಯಲ್ಲಿ ಆಗಸ್ಟ್ 2 ರಂದು ದೆಹಲಿಗೆ ರಾಜ್ಯದ ನಾಯಕರು ತೆರಳಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವರು ತೆರಳಲಿದ್ದಾರೆ. ಸಚಿವ ಸ್ಥಾನ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ಪರಿಷತ್ ಸದಸ್ಯ ಹರಿಪ್ರಸಾದ್ ಕೂಡ ಸಭೆಗೆ ಆಹ್ವಾನ ನೀಡಿದ್ದು ಕುತೂಹಲ ಕೆರಳಿಸಿದೆ. ಅಂದೇ ಸಚಿವ ಸಂಪುಟದ ಎಲ್ಲ ಸದಸ್ಯರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ವಿದ್ಯುತ್ ತಂತಿ ಮೇಲೆ ಹಾವು ಕಾಣಿಸಿಕೊಂಡಿದೆ. ಕೆರೆ ಹಾವೊಂದು ವಿದ್ಯುತ್ ತಂತಿಗೆ ಸುತ್ತಿಕೊಂಡು ಕೆಳಗಿಳಿಯಲು ಪರದಾಡಿದೆ. ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿದ್ದ ಬಳ್ಳಿ ಮೂಲಕ ತಂತಿ ಮೇಲೆ ಸಾಗಿ ಬಂದ ಕೆರೆಹಾವು ನಂತರ ಕೆಳಗಿಳಿಯಲಾಗದೆ ತಂತಿಗೆ ಸುತ್ತಿಕೊಂಡಿದೆ. ವಿದ್ಯುತ್ ತಂತಿ ಮೇಲೆ ನಿಧಾನವಾಗಿ ಸಾಗಿ ಕೆಳಗಿಳಿಯಲು ಯತ್ನಿಸಿದೆ. ಕೆರೆ ಹಾವು ವಿದ್ಯುತ್ ತಂತಿ ಮೇಲೆ ಓಡಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More