Subscribe to Updates
Get the latest creative news from FooBar about art, design and business.
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
- ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
- ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
Author: admin
ಪರೀಕ್ಷಾ ಕೊಠಡಿ ಪ್ರವೇಶಿಸುವ ವೇಳೆ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ಈ ಘಟನೆ ನಡೆದಿದೆ. ಶಾಂತಬಾ ಗಜೇರ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ರಾಜೋಸರ ಮೃತಪಟ್ಟವಳು. ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಪರೀಕ್ಷಾ ಕೊಠಡಿಗೆ ಪ್ರವೇಶಿಸುತ್ತಿದ್ದಾಗ ಸಾಕ್ಷಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ. ಸಾವಿಗೆ ಹೃದಯಾಘಾತ ಕಾರಣ ಎಂದು ವರದಿಯಾಗಿದೆ. ಗುಜರಾತಿನಲ್ಲಿ ಹೃದಯ ಸಂಬಂಧಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ರಾಜ್ಯ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ವೈದ್ಯಕೀಯ ತಜ್ಞರೊಂದಿಗೆ ವಿಶೇಷವಾಗಿ ಹೃದ್ರೋಗ ತಜ್ಞರೊಂದಿಗೆ ಸಭೆ ಕರೆದಿದ್ದರು.
ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಛತ್ತೀಸ್ ಗಢ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾದೇವ್ ಗೇಮಿಂಗ್ ಆ್ಯಪ್ ಹಗರಣ ಪ್ರಕರಣದ ಆರೋಪಿಗಳೊಂದಿಗೆ ಮುಖ್ಯಮಂತ್ರಿ ಭೂಪೇಶ್ ಬಾಗಲ್ ಅವರ ಸಂಪರ್ಕವನ್ನು ವಿವರಿಸಬೇಕು. ಛತ್ತೀಸ್‌ಗಢ ಚುನಾವಣಾ ಪ್ರಚಾರಕ್ಕಾಗಿ ಬೆಟ್ಟಿಂಗ್ ಆಪ್ ಪ್ರವರ್ತಕರು ನೀಡಿದ ಹವಾಲಾ ಹಣವನ್ನು ಕಾಂಗ್ರೆಸ್ ಬಳಸುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಛತ್ತೀಸ್‌ಗಢದ ದುರ್ಗ್‌ನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಛತ್ತೀಸ್‌ಗಢ ಸರ್ಕಾರ ಜನರನ್ನು ಲೂಟಿ ಮಾಡಿ ವಂಚಿಸಿದೆ. ಮತ್ತು ನಿಮ್ಮನ್ನು ದೋಚಲು ಇತರರಿಗೆ ಅವಕಾಶವನ್ನು ನೀಡುವುದು. ಭ್ರಷ್ಟಾಚಾರದ ಮೂಲಕ ಬೊಕ್ಕಸ ತುಂಬಿಸುವುದೇ ಕಾಂಗ್ರೆಸ್ ಪಕ್ಷದ ಗುರಿ. ಇದಕ್ಕಾಗಿ ಅವರು ‘ಮಹಾದೇವ’ನ ಹೆಸರನ್ನೂ ಬಿಟ್ಟಿಲ್ಲ- ಮೋದಿ ಹೇಳಿದರು. ಎರಡು ದಿನಗಳ ಹಿಂದೆ ರಾಯಪುರದಲ್ಲಿ ಪ್ರಮುಖ ಕಾರ್ಯಾಚರಣೆ ನಡೆದಿದೆ. ಕರೆನ್ಸಿ ನೋಟುಗಳ ಭಾರೀ ಸಂಗ್ರಹ ಪತ್ತೆಯಾಗಿದೆ. ಈ ಹಣ ಜೂಜುಕೋರರು ಮತ್ತು ಬೆಟ್ಟಿಂಗ್‌ದಾರರಿಗೆ ಸೇರಿದ್ದು ಎಂದು ಜನರು ಹೇಳುತ್ತಾರೆ. ಈ ಲೂಟಿಯ ಹಣದಿಂದ ಕಾಂಗ್ರೆಸ್ ನಾಯಕರು ಮನೆ ತುಂಬಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ…
ಮಣಿಪುರದಲ್ಲಿ. ಅಪರಿಚಿತ ಬಂದೂಕುಧಾರಿಗಳು ಮೈಥೆಯ್ ಸಂಘಟನೆಯ ನಾಯಕನ ಮೇಲೆ ದಾಳಿ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಮೈತೆಯ್ ಲೀಪುನ್ ಮುಖ್ಯಸ್ಥ ಮಾಯಾಂಗ್ಬಾಮ್ ಪ್ರಮೋತ್ ಸಿಂಗ್ ಮೇಲೆ ದಾಳಿ ಮಾಡಲಾಯಿತು. ಪ್ರಮೋತ್ ಸಿಂಗ್ ಮತ್ತು ಚಾಲಕ ಲಾಂಗೋಲ್‌ನಲ್ಲಿರುವ ಮೈಥೆ ಲೀಪುನ್ ಕಚೇರಿಯಲ್ಲಿ ಸಭೆಗೆ ಹೋಗುತ್ತಿದ್ದರು. ಲಾಂಗೋಲ್‌ನ ಆಸ್ಪತ್ರೆಯೊಂದರ ಬಳಿ ಕಾರಿನಲ್ಲಿ ಬಂದ ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರು ಆರು ಬಾರಿ ಗುಂಡು ಹಾರಿಸಿದ್ದಾರೆ. ಇಬ್ಬರಿಗೂ ಗಾಯಗಳಾಗಿಲ್ಲ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಫೋರೆನ್ಸಿಕ್ ತಂಡವು ಸ್ಥಳದಿಂದ ಮಾದರಿಗಳು ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ದಾಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ
ಬಿಬಿಎಂಪಿಯ ಮುಖ್ಯ ಇಂಜಿನಿಯರಿಂಗ್ ಚೀಫ್ ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಖಾಸಗಿಯಾಗಿ ಭೇಟಿಯಾಗಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇಂಜಿನಿಯರಿಂಗ್ ಛಿಫ್ ಪ್ರಹ್ಲಾದ್ ಇರುವವರೆಗೂ ಬಿಬಿಎಂಪಿ ಉದ್ಧಾರ ಆಗಲ್ಲ. ಹಿರಿತನದ ಆಧಾರದ ಮೇಲೆ ಹಣ ಕೊಡುವಂತೆ ಮನವಿ ಮಾಡಿಕೊಂಡಿದ್ದೇನೆ. ಸ್ವಲ್ಪ ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ತೃಪ್ತಿ ಇದೆ ಎಂದು ಹೇಳುವುದಿಲ್ಲ, ಗುತ್ತಿಗೆದಾರರ ಹಣವನ್ನು ಪೂರ್ಣ ಪ್ರಮಾಣದಲ್ಲಿ ಕ್ಲಿಯರ್ ಮಾಡುವಂತೆ ಮನವಿ ಮಾಡಿದ್ದೇನೆ. ಡಿಸೆಂಬರ್ ಒಳಗಡೆ ಪ್ರಯತ್ನ ಮಾಡುತ್ತೇವೆಂದು ಹೇಳಿದ್ದಾರೆ. ಡಿಕೆ.ಶಿವಕುಮಾರ್ ಅವರನ್ನು ಖಾಸಗಿ ವಿಚಾರವಾಗಿ ಭೇಟಿ ಮಾಡಿದ್ದೇನೆ ಅಷ್ಟೇ” ಎಂದು ತಿಳಿಸಿದರು. ಇದೇ ವೇಳೆ ಬಿಬಿಎಂಪಿ ಚೀಫ್ ಇಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮೇಲೆ ಕೆಂಪಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಪ್ರಹ್ಲಾದ್ ಇರುವವರೆಗೂ ಬಿಬಿಎಂಪಿ ಉದ್ಧಾರ ಆಗಲ್ಲ ಎಂದು ಹೇಳಿದರು.
ನವದೆಹಲಿ: ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಎಲ್ವಿಶ್ ಯಾದವ್ ಹಾವು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಡ್ರಗ್ ಕಾರ್ಟೆಲ್ ತನಿಖೆ ನಡೆಸುತ್ತಿರುವ ಸಂಸ್ಥೆ ತನ್ನ ತನಿಖೆಯಲ್ಲಿ ಹಾವುಗಳ ಕಳ್ಳಸಾಗಣೆ ಮತ್ತು ಅವುಗಳ ವಿಷದಿಂದ ತಯಾರಿಸಿದ ಮಾದಕವಸ್ತುಗಳ ಬಗ್ಗೆ ದೊಡ್ಡ ರಹಸ್ಯ ಬಹಿರಂಗಪಡಿಸಿದೆ. ಮಾದಕ ವ್ಯಸನಿಗಳು ಏಜೆನ್ಸಿಯನ್ನು ವಂಚಿಸಲು ವಿಶೇಷ ಕೋಡ್ ಪದಗಳನ್ನು ಬಳಸುತ್ತಾರೆ ಎಂದು ತನಿಖೆಯ ವೇಳೆ ಏಜೆನ್ಸಿಗಳಿಗೆ ತಿಳಿದು ಬಂದಿದೆ. ಯಾವ ಕೋಡ್ ವರ್ಡ್‌ಗಳನ್ನು ಬಳಸಲಾಗಿದೆ? ರಾಜ: ನಾಗರ ಹಾವು ವೈಟ್ ಕಿಂಗ್: ವಿಷದಿಂದ ಮಾಡಿದ ಪುಡಿ ಅಥವಾ ಟ್ಯಾಬ್ಲೆಟ್ ವಾಟರ್ ಕಿಂಗ್: ವಿಷದ ಹನಿ ರಾಜ: 24 ಸ್ನ್ಯಾಕ್ ಬೈಟ್ಸ್ ಥಾಯ್ಲೆಂಡ್ ನ ಅಂತಾರಾಷ್ಟ್ರೀಯ ರಾಕೆಟ್ ಕೂಡ ಬಯಲಾಗಿದೆ: ಥಾಯ್ಲೆಂಡ್ ನಿಂದ ಅಂತಾರಾಷ್ಟ್ರೀಯ ದಂಧೆ ನಡೆಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಥೈಲ್ಯಾಂಡ್ ನಿಂದ, ಹಾವು ಅಥವಾ ಅದರ ವಿಷವು ಬಾಂಗ್ಲಾದೇಶ ಅಥವಾ ನೇಪಾಳದ ಮೂಲಕ ಭಾರತವನ್ನು ತಲುಪುತ್ತದೆ. ಸ್ಥಳೀಯ ಜಾಲವು ಗುಜರಾತ್, ಬಂಗಾಳ ಮತ್ತು ರಾಜಸ್ಥಾನದ ಸ್ಥಳೀಯ…
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರ ಹಳ್ಳಿಯ ನಾಡಪ್ರಭು ಕೆಂಪೇಗೌಡ ಕ್ರೀಡಾಂಗಣದಲ್ಲಿ ಇಂದು ಆಶಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ರೀಡಾಕೂಟ ಹಾಗೂ 2 km ಮ್ಯಾರಥಾನ್ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಕ್ರೀಡಾಕೂಟ ಉದ್ಘಾಟನೆ ಮಾಡಿ ಮ್ಯಾರಥಾನ್ ನಡಿಗೆ ಜಾಥಾಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಕೆ ಗೋಪಾಲಯ್ಯ ರವರು, ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಹಾಗೂ ಬುದ್ಧಿವಂತಿಕೆ ಇರಲಿದ್ದು, ಯಾರು ಕೂಡ ಪೋಷಕರು ಎದೆಗುಂದಬಾರದು. ಎಷ್ಟೋ ಜನಕ್ಕೆ ಮಕ್ಕಳೇ ಇಲ್ಲ, ದೇವರ ಮೊರೆ ಹೋಗಿ ಮಕ್ಕಳನ್ನು ಕರುಣಿಸು ಎಂದು ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಇವರು ದೇವರು ಸಮಾನ, ಇವರ ಇಟ್ಟು ಕೊಂಡು ಇದರ ಸದುಪಯೋಗ ಪಡೆದುಕೊಂಡು ಸಾಧನೆ ಗೈಯ್ಯುವ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕೆಂದು ಹೇಳಿದ ಅವರು, ಯಾವುದೇ ನೂನ್ಯತೆ ಇಲ್ಲದೇ ಎಲ್ಲಾ ರೀತಿಯಲ್ಲೂ ಚೆನ್ನಾಗಿರುವ ಮಕ್ಕಳಿಗೆ ಚಂಚಲತೆ ಇರುತ್ತದೆ.…
ಬೆಂಗಳೂರು: ಬೆಂಗಳೂರಿನ ಹಲಸೂರು ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ, ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ ಮಾಡಲಾಗಿದೆ. ಬಂಧಿತರಿಂದ 3 ದ್ವಿಚಕ್ರ ವಾಹನ, ಲೆನೋವಾ ಲ್ಯಾಪ್ ಟಾಪ್, ವಿವಿಧ ಕಂಪನಿಯ 9 ಮೊಬೈಲ್ ಫೋನ್ ಗಳು ಹಾಗೂ ಒಟ್ಟು 15,50,000/- ಮೌಲ್ಯದ ಒಂದು ಸ್ಮಾರ್ಟ್ ವಾಚ್ ವಶಪಡಿಸಿಕೊಂಡಿದ್ದಾರೆ. ಕಳೆದ ಅ.17 ರಂದು ಹಲಸೂರು ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಹಲಸೂರು ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 15,50,000/- ಮೌಲ್ಯದ 3 ದ್ವಿಚಕ್ರ ವಾಹನ, ಲೆನೋವಾ ಲ್ಯಾಪ್ ಟಾಪ್, ವಿವಿಧ ಕಂಪನಿಯ 9 ಮೊಬೈಲ್ ಫೋನ್ ಗಳು ಹಾಗೂ ಒಂದು ಸ್ಕಾರ್ಟ್ ವಾಡ್ ನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಗಳನ್ನು, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಹಲಸೂರು ಪೊಲೀಸ್ ಠಾಣೆಯು ಒಟ್ಟು ಮೂರು ಪ್ರಕರಣಗಳು, ಕೋರಮಂಗಲ ಪೊಲೀಸ್ ಠಾಣೆಯ ಒಂದು ಪ್ರಕರಣ ಮತ್ತು ರಾಮಮೂರ್ತಿ…
ಬೆಂಗಳೂರು: ಕನ್ನಡ ನಾಡಿನ ಪ್ರಸಿದ್ಧ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯವಾಗಿದ್ದು, ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿರುವುದಾಗಿ ಅವರ ಆಪ್ತ ವಲಯ ತಿಳಿಸಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಮಳೆಯಲ್ಲಿ ನೆನೆದಿದ್ದರಿಂದ ಹೆಚ್ಚು ಸುಸ್ತು ಕಂಡು ಬಂದಿತ್ತು. ಅವರಿಗೆ ಸುಸ್ತಾಗುತ್ತಿದ್ದಂತೆಯೇ ಕೂಡಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರು ಅವರಿಗೆ ನಿನ್ನೆಯೇ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದ್ದಾರೆ. ಸದ್ಯ ಮನೆಯಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ತಪಾಸಣೆ ನಂತರ ಆತಂಕ ಪಡುವಂಥಹದ್ದೇನಿಲ್ಲ ಎನ್ನಲಾಗಿದೆ. ಈ ಹಿಂದೆ ಶಿವಣ್ಣಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಮೂಡಿತ್ತು.
ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುತ್ತಲೇ ಅಭಿವೃದ್ಧಿ ಸಾಧಿಸುವುದೇ ಸುಸ್ಥಿರ ಅಭಿವೃದ್ಧಿಯಾಗಿದ್ದು, ಜೀವರಾಶಿಯೂ ಉಳಿಯಬೇಕು, ಜೀವನೋಪಾಯವೂ ಇರಬೇಕು, ಇದರ ಜೊತೆಗೆ ಪ್ರಗತಿ ಸಾಧಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿಂದು ನಡೆದ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಬೆಂಗಳೂರು ಘೋಷಣೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಕೃತಿ ಮತ್ತು ಪರಿಸರ, ಅರಣ್ಯ ಉಳಿದಾಗ ಮಾತ್ರ ಮಾನವ ಕುಲ ಉಳಿಯಲು ಸಾಧ್ಯ. ಹೀಗಾಗಿ ನಾವು ನೀವೆಲ್ಲರೂ ಭೂಗ್ರಹದ ರಕ್ಷಕರಾಗಬೇಕು ಎಂದು ಕರೆ ನೀಡಿದರು. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾದ ಬೆಂಗಳೂರು, ತಾಂತ್ರಿಕ ನಾವೀನ್ಯತೆಯ ಕೇಂದ್ರ ಮಾತ್ರವಲ್ಲ, ಸುಸ್ಥಿರ ಅಭಿವೃದ್ಧಿಯ ಅನ್ವೇಷಣೆಯಲ್ಲಿಯೂ ಮುಂಚೂಣಿಯಲ್ಲಿದೆ. ಜಗತ್ತು ಇಂದು ಎದುರಿಸುತ್ತಿರುವ ಸವಾಲುಗಳಿಗೆ ಕರ್ನಾಟಕ ಅದರಲ್ಲೂ ಬೆಂಗಳೂರಿನ ಉದ್ಯಮಿಗಳು ಪರಿಹಾರ ಸಂಶೋಧಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಈ ಶೃಂಗಸಭೆ ಸಕಲ ಜೀವರಾಶಿಗಳೂ ಬದುಕಲು ಇರುವ ಏಕೈಕ ಭೂಗ್ರಹ ಮತ್ತು ಅದರ ಎಲ್ಲಾ…
ಗುಟ್ಕಾ (ತಂಬಾಕು) ಸೇವಿಸಿದ್ದಕ್ಕೆ ಶಿಕ್ಷಕರಿಂದ ಛೀಮಾರಿ ಹಾಕಿಸಿಕೊಂಡ 17 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಉತ್ತರ ಪ್ರದೇಶದ ಮಹೋಬಾದಲ್ಲಿ ಈ ಘಟನೆ ನಡೆದಿದೆ. ತಂದೆಯ ಮುಂದೆ ಅವಮಾನಿತನಾದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆ ಬುಧವಾರ ನಡೆದಿದೆ. ಮಹೋಬಾದ ಕಬ್ರಾಯ್ ಪ್ರದೇಶದ ಬದ್ರಿ ಸಿಂಗ್ ಕನ್ಯಾ ಇಂಟರ್ ಕಾಲೇಜಿನ 11 ನೇ ತರಗತಿ ವಿದ್ಯಾರ್ಥಿ ಸಾಹು (17) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕ ಗುಟ್ಕಾ ಬಳಸುತ್ತಿದ್ದುದನ್ನು ಶಾಲೆಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆಯನ್ನು ಶಾಲೆಗೆ ಕರೆಸಲಾಗಿತ್ತು. ಬಹಳ ಹೊತ್ತಾದರೂ ಬಾಲಕ ಹೊರಗೆ ಬಾರದೆ ಇದ್ದಾಗ ಮನೆಯವರು ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಾಲಕನನ್ನು ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.