Subscribe to Updates
Get the latest creative news from FooBar about art, design and business.
- ಸಾಲ ಸೌಲಭ್ಯ : ಪರಿಶಿಷ್ಟ ಪಂಗಡದವರಿಂದ ಅರ್ಜಿ ಆಹ್ವಾನ
- ದಲಿತ ಗೃಹಮಂತ್ರಿ, ಡಿಸಿಎಂ, ಉಸ್ತುವಾರಿ ಸಚಿವರಿದ್ದರೂ ಮಧುಗಿರಿಯಲ್ಲಿ ದಲಿತರ ಕಗ್ಗೊಲೆ!: ಸಿಂಹಾದ್ರಿ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ
- ತುಮಕೂರು-ಅರಸೀಕೆರೆ ರೈಲು ಪ್ರಯಾಣಿಕರ ಸಮಸ್ಯೆ ಇತ್ಯರ್ಥ ಪ್ರಯತ್ನ: ರೈಲು ಪ್ರಯಾಣಿಕರ ವೇದಿಕೆ ಮಹಾಸಭೆ
- ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಅಬ್ದುಲ್ ಮನ್ನಾನ್ ಸೇಠ್ ನೇಮಕ: ಗಣ್ಯರಿಂದ ಅಭಿನಂದನೆ
- ಖೇಣಿ ‘ಚಿನ್ನದ ಕರಡಿಗೆ’ ಹೇಳಿಕೆ ಸುಳ್ಳು: ಸಿದ್ಧಗಂಗಾ ಮಠ ಸ್ಪಷ್ಟನೆ
- ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಸ್ಫೋಟ ಪ್ರಕರಣ: ಹೈಕೋರ್ಟ್ ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್
- ರೇಣುಕಾಸ್ವಾಮಿ ಕೊಲೆ ಕೇಸ್: ಮುಚ್ಚಿದ ಕೊಠಡಿಯಲ್ಲಿ ಪ್ರದೋಷ್ ‘ಮಾಫಿ’ ಸಾಕ್ಷ್ಯ ದಾಖಲು!
- ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ
Author: admin
ಸರಗೂರು: ಚರಂಡಿ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಪ್ರತಿ ದಿನ ತೊಂದರೆಗೀಡಾಗುತ್ತಿರುವ ಘಟನೆ ಸರಗೂರಿನ ಮುಖ್ಯ ರಸ್ತೆಯಲ್ಲಿರುವ ಶಿವಲೀಲಾ ಗೊಬ್ಬರ ಅಂಗಡಿಯ ಮುಂಭಾಗದಲ್ಲಿ ನಡೆಯುತ್ತಿದ್ದು, ಅಂಗಡಿ ಮಾಲಿಕರು, ಸಾರ್ವಜನಿಕರು ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅಂಗಡಿಯ ಮುಂಭಾಗದಲ್ಲಿಯೇ ಚರಂಡಿಯ ನೀರು ಹರಿಯುತ್ತಿದೆ. ಈ ಭಾಗ ಹೆಚ್ಚಾಗಿ ಜನ ಸಂಚಾರದ ಪ್ರದೇಶವಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲರೂ ಇದೇ ಕೊಳಚೆ ನೀರನ್ನು ತುಳಿದುಕೊಂಡು ನಡೆದುಕೊಂಡು ಹೋಗುವಂತಾಗಿದೆ. ಇನ್ನೊಂದೆಡೆ ಅಂಗಡಿಗೆ ಆಗಮಿಸುವ ಗ್ರಾಮಸ್ಥರ ಪಾಡು ಹೇಳತೀರದು. ಇದೇ ಚರಂಡಿ ನೀರನ್ನು ತುಳಿದುಕೊಂಡು ಬರುವ ದುಸ್ಥಿತಿ ಗ್ರಾಹಕರದ್ದಾಗಿದೆ. ಚರಂಡಿಯ ದುರ್ವಾಸನೆಯಿಂದಾಗಿ ಈ ಭಾಗಕ್ಕೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಅಂಗಡಿ ಮಾಲಿಕರಿಗೆ ನಷ್ಟ ಉಂಟಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದ ಶಿವಲೀಲಾ ಗೊಬ್ಬರದ ಅಂಗಡಿಯ ಮಾಲೀಕ ಮಂಜು ಪ್ರಸಾದ್, ಮುಖ್ಯ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿಯೇ ಸರಿಯಾದ ಒಳಚರಂಡಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರು ಸಹ ಇದರ ಬಗ್ಗೆ ಗಮನ ಹರಿಸಲಿಲ್ಲ. ಹೀಗಾಗಿ ಸತತ…
ತುರುವೇಕೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಯಲ್ಲಿ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿಯ ಡೊಂಕಿಹಳ್ಳಿ ಗ್ರಾಮದ ಡಿ.ಪಿ.ರಾಜು ಆಯ್ಕೆಯಾಗಿದ್ದು, ಅವರ ಪದಗ್ರಹಣ ಸಮಾರಂಭವನ್ನು ತುರುವೇಕೆರೆ, ಪಟ್ಟಣದ ಸರಸ್ವತಿ ಕಾಲೇಜಿನಲ್ಲಿ ನಡೆಸಲಾಯಿತು. ಈ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ನಂರಾಜು ಅವರಿಂದ ಕನ್ನಡ ಬಾವುಟ ಪಡೆಯುವುದರೊಂದಿಗೆ ಅಧಿಕಾರ ಸ್ವೀಕರಿಸಿದರು ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಆರ್.ಜಯರಾಮ್ ವಕೀಲರಾದ ಧನಪಾಲ್, ಕೃಷ್ಣಮೂರ್ತಿ ಮತ್ತಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ರೈತ ದಿನದಂದು ವಿಜಯ ಕರ್ನಾಟಕ ಪತ್ರಿಕೆಯವರು ಆಯೋಜಿಸಿದ್ದ ಸೂಪರ್ ಸ್ಟಾರ್ ರೈತ ಕಾರ್ಯಕ್ರಮವನ್ನು ತುಮಕೂರು ರಾಮಕೃಷ್ಣ ಮಠದ ಪೂಜ್ಯ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಸಿ ಇ ಓ ಡಾ.ವಿದ್ಯಾಕುಮಾರಿ, ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್, ಗುಬ್ಬಿ ದಿಲೀಪ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುರುವೇಕೆರೆ: ವೈ.ಟಿ.ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಜಿಲ್ಲಾ ನಿರ್ದೇಶಕ, ಈ ಡಿಜಿಟಲ್ ಸೇವಾ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಗ್ರಾಮಾಭಿವೃದ್ಧಿ ಸಂಘದ ಕಚೇರಿಗಳಲ್ಲಿ ತೆರೆಯಲು ನಮ್ಮ ಸಂಸ್ಥೆ ಚಿಂತನೆ ನಡೆಸಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ತುರುವೇಕೆರೆ ಗ್ರಾಮಾಂತರ ಯೋಜನಾಧಿಕಾರಿ ಅನಿತಾ, ಅಧ್ಯಕ್ಷರಾದ ಶಾಂತಕುಮಾರ್, ಒಕ್ಕೂಟದ ಅಧ್ಯಕ್ಷರಾದ ನಾಗರಾಜು, ಜೊತೆಗೆ ಎಲ್ಲಾ ವಲಯಗಳ ಮೇಲ್ವಿಚಾರಕರು ಸೇವಾ ಪ್ರತಿನಿಧಿ ಗಳು ಹಾಗೂ ಫಲಾನುಭವಿಗಲು ಹಾಜರಿದ್ದರು. ವರದಿ: ಸುರೇಶ್ ಬಾಬು. ಎಂ.ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಮಣಿಕಿಕೆರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಭವನಕ್ಕೆ ಎಂದು ಮೀಸಲಿಟ್ಟ ಜಾಗದಲ್ಲಿ ಹಾಕಲಾಗಿದ್ದ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಇಂದು ಏಕಾಏಕಿ ಬಂದ ಕಿಡಿಗೇಡಿಗಳ ತಂಡ, ಅಂಬೇಡ್ಕರ್ ನಾಮಫಲಕವನ್ನು ಕಿತ್ತು ಹಾಕಿ ಧ್ವಂಸಗೊಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ: ಮಂಜು ಗುರುಗದಹಳ್ಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಆರೋಪ ಬಗ್ಗೆ ಸ್ಪಷ್ಟಿಕರಣ ನೀಡಿದರು. ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿರುವ ದಲಿತ ಸಮುದಾಯದ ಕೆ.ಎಲ್.ರವಿಕುಮಾರ್ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂತರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಗ್ರಾಮ ಅಭಿವೃದ್ಧಿ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇದನ್ನು ಸಹಿಸದೇ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್, ಶಿವನಂದಯ್ಯ, ಸಿದ್ದರಾಜು ಇತರರು ಉದ್ದೇಶ ಪೂರ್ವಕವಾಗಿ ಪಂಚಾಯಿತಿ ಮುಂಭಾಗದಲ್ಲಿ ಅಂಗಡಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ಸಹಿಸಲಾಗದೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಈ ಆರೋಪದಲ್ಲಿ ಹುರುಳಿಲ್ಲ ಎಂದರು. ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಗೆ ಒಳಪಡುವ ಮಾಂಸದ ಅಂಗಡಿ ಶಿಧಿಲವಾಗಿದ್ದು ಪರ್ಯಾಯವಾಗಿ ಅಂಗಡಿ ಮಳಿಗೆ…
ತುಮಕೂರು: ತಮ್ಮ ವಿರುದ್ಧ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ರವರು ಏಕಾಏಕಿ ನಿಂದಿಸಿ ಅವಮಾನಗೊಳಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ನಮಗೆ ರಕ್ಷಣೆ ನೀಡಬೇಕೆಂದು ಅಲೆಮಾರಿ ಜನಾಂಗದ ಕುಟುಂಬಸ್ಥರು ಎಸ್.ಪಿ.ರವರಿಗೆ ದೂರು ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಕಳೆದ ತಿಂಗಳು ಸುರಿದ ಕುಂಭದ್ರೋಣ ಮಳೆಯಿಂದಾಗಿ ಚಿ.ನಾ.ಹಳ್ಳಿ ತಾಲ್ಲೋಕಿನ ಕಡೆಗೆಹಳ್ಳಿ ಗ್ರಾಮದ ಗುಂಡು ತೋಪಿನಲ್ಲಿ ಅಲೆಮಾರಿ ಜನಾಂಗದವರು ವಾಸಿಸುತ್ತಿದ್ದ ಗುಡಿಸಲುಗಳು ಜಲಾವೃತವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಸೂರು ಕಲ್ಪಿಸಲಾಗಿತ್ತು. ನಂತರ ಕೆಲ ದಿನಗಳ ನಂತರ ಪುರಸಭೆ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್ ಬಂದು ಕೂಡಲೇ ತಮ್ಮ ಗುಡಿಸಲುಗಳಿಗೆ ತೆರಳುವಂತೆ ಒತ್ತಡ ಹೇರಿದ್ದಾರೆ. ಇದಕ್ಕೂ ಮುನ್ನ ಅಲೆಮಾರಿ ಜನಾಂಗದ ಪರಮೇಶ್ ಎಂಬಾತ ತಹಶೀಲ್ದಾರ್ ರವರಿಗೆ ಮಳೆಯಿಂದಾಗಿ ಗುಡಿಸಲು ನಾಶವಾಗಿದೆ, ಈಗ ಗುಡಿಸಲಿಗೆ ಹೋಗಲು ಸಾಧ್ಯವಾಗುವುದಿಲ್ಲ, ಕನಿಷ್ಠ ಅದಕ್ಕೆ ಪರಿಹಾರ ನೀಡಿದರೆ ಗುಡಿಸಲು ಮರು ನಿರ್ಮಾಣ ಮಾಡಿಕೊಂಡು ಬದುಕುತ್ತೇವೆಂದು ಮನವಿ ಸಲ್ಲಿಸಿರುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕಚೇರಿಗೆ ಬಂದು ಪರಿಹಾರದ ಚೆಕ್ ಪಡೆದುಕೊಂಡು…
ತಿಪಟೂರು: ನಗರ ಪೊಲೀಸ್ ಠಾಣಾ ವತಿಯಿಂದ ತಿಪಟೂರು ನಗರದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀಶೈಲಮೂರ್ತಿ, ಸಬ್ ಇನ್ಸ್ ಪೆಕ್ಟರ್ ದಾಕ್ಷಾಯಿಣಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವರ್ಗದವರು ಹಾಜರಿದ್ದರು. ಈ ಕಾರ್ಯಕ್ರಮದಲ್ಲಿ ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಪರಾಧಗಳು ನಡೆಯದಂತೆ ಮುನ್ಸೂಚನಾ ಕ್ರಮಗಳನ್ನು ಅನುಸರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ದಾವಣಗೆರೆ: ಎದುರಿಗೆ ಬಂದ ಬೈಕ್ ಗೆ ದಾರಿ ಬಿಡಲು ಹೋಗಿ, ಖಾಸಗಿ ಬಸ್ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ತಾಲೂಕಿನ ಎಲೆಬೇತೂರ ಗ್ರಾಮದ ಬಳಿ ಘಟನೆ ನಡೆದಿದೆ. ಅಪಘಾತವಾದ ಬೆನ್ನಲ್ಲೇ ಬಸ್ ರಸ್ತೆ ಪಕ್ಕದ ಅಡಕೆ ತೋಟದಲ್ಲಿ ಪಲ್ಟಿಯಾಗಿದ್ದು, ವಿದ್ಯುತ್ ಇಲ್ಲದ ಕಾರಣ ಭಾರಿ ದುರಂತ ತಪ್ಪಿದೆ. 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿನಾಯಕ ಹೆಸರಿನ ಖಾಸಗಿ ಬಸ್ ದಾವಣಗೆರೆಯಿಂದ ಜಗಳೂರು ಕಡೆ ಸಂಚರಿಸುತ್ತಿದ್ದಾಗ, ಎಲೆಬೇತೂರು ಕ್ರಾಸ್ ಬಳಿ ಅನಿರೀಕ್ಷಿತ ವಾಗಿ ಅಡ್ಡ ಬಂದ ಬೈಕ್ ಸವಾರನಿಗೆ ದಾರಿ ಬಿಡಲು ಹೋಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಬಹುತೇಕರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಗಾಯಳುಗಳನ್ನು ಹತ್ತಿರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಪೋಲಿಸರು ಘಟನ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವರದಿ: ಆನಂದ್…
ಬೆಳಗಾವಿ: ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಬಿಲ್ ನ್ನು ಸಂಪೂರ್ಣವಾಗಿ ವಿರೋಧಿಸಲು ನಿರ್ಧರಿಸಿದೆ. ಎರಡೂ ಸದನಗಳಲ್ಲಿಯೂ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಲು ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಎಲ್ಲ ಶಾಸಕರು ಸದನದಲ್ಲಿ ಕಡ್ಡಾಯ ಹಾಜರಿಗೆ ವಿಪ್ ಜಾರಿ ಮಾಡಲಾಗಿದೆ. ಇದೊಂದು ಅನಗತ್ಯವಾದ ಬಿಲ್ ಆಗಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕಿತ್ತು. ರಾಜ್ಯ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಬಿಟ್ಟು, ಬಿಜೆಪಿ ಮತಾಂತರ ನಿಷೇಧ ಬಿಲ್ ತರುವ ಮೂಲಕ ಸದನವನ್ನು ಡೈವರ್ಟ್ ಮಾಡಲು ಯತ್ನಿಸಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy