Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು (ಕೆಎಸ್‌ಸಿಎಸ್‌ಟಿ) 2022 ಮತ್ತು 2023ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗೆ, ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಂದ ಅರ್ಜಿ ಆಹ್ವಾನಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಇಬ್ಬರು ಸಾಧಕರಿಗೆ ನೀಡುವ ‘ಸರ್. ಎಂ. ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ’ಯು ತಲಾ 12 ಲಕ್ಷ ನಗದು, ನೆನಪಿನ ಕಾಣಿಕೆ ಒಳಗೊಂಡಿದೆ. ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 71. 50 ಲಕ್ಷ ನಗದು ಒಳಗೊಂಡಿರುವ ‘ರಾಜಾ ರಾಮಣ್ಣ ಪ್ರಶಸ್ತಿ’ಯನ್ನು ಇಬ್ಬರಿಗೆ ನೀಡಲಾಗುತ್ತದೆ. ಐದು ವಿಜ್ಞಾನಿಗಳಿಗೆ ‘ಸರ್. ಸಿ. ವಿ. ರಾಮನ್ ವಿಜ್ಞಾನಿ ಪ್ರಶಸ್ತಿ’, ನಾಲ್ಕು ಎಂಜಿನಿಯರ್ ಗಳಿಗೆ ‘ಸತೀಶ್ ಧವನ್ ಎಂಜಿನಿಯರ್ ಪ್ರಶಸ್ತಿ’, ಇಬ್ಬರು ಮಹಿಳಾ ಸಾಧಕರಿಗೆ ‘ಕಲ್ಪನಾ ಚಾವ್ಹಾ ಮಹಿಳಾ ವಿಜ್ಞಾನಿ-ಎಂಜಿನಿಯರ್ ಪ್ರಶಸ್ತಿ’ ನೀಡಲಾಗುತ್ತದೆ. ಈ ಮೂರು ಪ್ರಶಸ್ತಿಗಳು ತಲಾ 1 ಲಕ್ಷ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರ ಒಳಗೊಂಡಿವೆ. ಅರ್ಜಿ ಸಲ್ಲಿಕೆಗೆ ಆ. 21 ಕೊನೆ ದಿನ. ಕಾರ್ಯದರ್ಶಿಗಳು,…
ಇದೇ 17 ಮತ್ತು 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಯುಪಿಎ ವಿಪಕ್ಷಗಳ ಸಭೆಗೆ ಆಗಮಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕರುಗಳನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ಜನಪ್ರಿಯ ಅರವಿಂದ್ ಕೇಜ್ರಿವಾಲ್ ರವರ ದೆಹಲಿ ಸರ್ಕಾರದ ವಿರುದ್ಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಬೆಂಬಲಿಸಿರುವ ನಡೆ ಉತ್ತಮವಾದದ್ದು. ಬಿ ಜೆ ಪಿ ಯ ನಿರಂಕುಶ ಪ್ರಭುತ್ವವನ್ನು ರಾಷ್ಟ್ರದಿಂದ ಹೊಡೆದೋಡಿಸುವ ನಿಟ್ಟಿನಲ್ಲಿ ರಾಷ್ಟ್ರದ ವಿಪಕ್ಷಗಳೆಲ್ಲ ಒಂದುಗೂಡಿ ನಡೆಸುತ್ತಿರುವ ಹೋರಾಟಕ್ಕೆ, ಆಮ್ ಆದ್ಮಿ ಪಕ್ಷ ಸದಾ ಕೈ ಜೋಡಿಸುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ‘ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಯು ಈ ರಾಷ್ಟ್ರದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಂದಾಗಿ ಹೋರಾಟ ಮಾಡಿ ಮೋದಿ ಪ್ರಭುತ್ವವನ್ನು ರಾಷ್ಟ್ರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲಿದೆ ‘ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಸರಕು ಸಾಗಣೆ ವಾಹನದ ಕಂಪಾರ್ಟ್‌ಮೆಂಟ್ ಕೆಳಗೆ ರಹಸ್ಯ ಪೆಟ್ಟಿಗೆ ನಿರ್ಮಿಸಿ ಗಾಂಜಾ ಸಾಗಿಸುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ‘ರಾಜಸ್ಥಾನದ ಚಂದ್ರಬಾನು ಬಿಸ್ಟೋಯಿ, ಆಂಧ್ರಪ್ರದೇಶದ ಲಕ್ಷ್ಮಿಮೋಹನ್ ದಾಸ್ ಹಾಗೂ ಸಲ್ಮಾನ್ ಬಂಧಿತರು. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 112 ಕೋಟಿ ಮೌಲ್ಯದ 1, 500 ಕೆ. ಜಿ ಗಾಂಜಾ ಹಾಗೂ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಚಾಮರಾಜಪೇಟೆ ಬಳಿ ಆರೋಪಿ ಸಲ್ಮಾನ್, ಗಾಂಜಾ ಮಾರುತ್ತಿದ್ದ. ಈತನನ್ನು ಬಂಧಿಸಿ, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಎಲ್ಲಿಂದ ಗಾಂಜಾ ತರುತ್ತಿದ್ದ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿತ್ತು. ವಿಚಾರಣೆ ನಡೆಸಿದಾಗ, ಗಾಂಜಾ ಸಾಗಣೆ ಜಾಲದ ಬಗ್ಗೆ ಬಾಯ್ದಿಟ್ಟಿದ್ದ’ ಎಂದು ಹೇಳಿದರು. ಮೂರು ವಾರ ಕಾರ್ಯಾಚರಣೆ: ‘ಆರೋಪಿ ಚಂದ್ರಬಾನು, ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಲಕ್ಷ್ಮಿಮೋಹನ್ ದಾಸ್, ಬಿ. ಎ ಪದವೀಧರ. ಇಬ್ಬರು ಒಟ್ಟಿಗೆ ಸೇರಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನ ಹಲವು…
ಡಿಜಿಟಲ್ ಕ್ರಾಂತಿಯಾದಂತೆ ಅದೇ ವೇಗದಲ್ಲಿ ಸೈಬರ್ ಅಪರಾಧ ಪ್ರಕರಣಗಳೂ ದೇಶದಾದ್ಯಂತ ಹೆಚ್ಚುತ್ತಿವೆ. 45 ಬಗೆಯ ಸೈಬರ್ ವಂಚನೆ ಪ್ರಕರಣಗಳು ನಡೆಯುತ್ತಿವೆ’ ಎಂದು ಸಿಐಡಿ ಡಿಜಿಪಿ ಡಾ. ಎಂ. ಎ. ಸಲೀಂ ಹೇಳಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ‘ಸೈಬರ್ ಅಪರಾಧಗಳು ಹಾಗೂ ಕೃತಕ ಬುದ್ಧಿಮತ್ತೆ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ‘ಒಟಿಪಿ ವಂಚನೆ, ಒಎಲ್‌ಎಕ್ಸ್ ಹಾಗೂ ಇತರೆ ವಸ್ತುಗಳ ಮಾರಾಟ ಜಾಲತಾಣ, ಫೇಸ್‌ಬುಕ್ ಹಾಗೂ ವಾಟ್ಸ್ ಆ್ಯಪ್ ವಿಡಿಯೊ ಕರೆ, ಡೆಬಿಟ್- ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್, ಲಿಂಕ್ ಕಳುಹಿಸಿ ವಂಚನೆ, ಉಡುಗೊರೆ ಆಮಿಷ, ಹೂಡಿಕೆ, ಟ್ರೇಡಿಂಗ್ ಆ್ಯಪ್ ವಂಚನೆ, ವೈವಾಹಿಕ ಜಾಲತಾಣ ವಂಚನೆ, ಎನಿ ಡೆಸ್ಕ್, ಟೀಮ್ ವೀವರ್, ಕ್ವಿಕ್ ಸಪೋರ್ಟ್, ಉದ್ಯೋಗದ ಹೆಸರಿನಲ್ಲಿ, ಸಿಮ್ ಕಾರ್ಡ್ ಬ್ಲಾಕ್, ನಕಲಿ ಖಾತೆ ಸೃಷ್ಟಿಸಿ ವಂಚನೆ. ಹೀಗೆ ನಾನಾ ಸ್ವರೂಪದಲ್ಲಿ ವಂಚನೆ ಪ್ರಕರಣಗಳು ನಡೆಯುತ್ತಿವೆ. ಇದರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು’ ಎಂದು ಸಲೀಂ ಹೇಳಿದರು. ‘ಶೇ…
ಪಾನಮತ್ತರಾಗಿ ಚಾಲನೆ ಮಾಡಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದ ಪಳನಿವೇಲ್ ಮುತುವೇಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು, ಔಡಿ ಕಾರು ಜಪ್ತಿ ಮಾಡಿದ್ದಾರೆ. ಕಾರು ಜಪ್ತಿ ವಿಚಾರವಾಗಿ ಸಂಚಾರ ಪೊಲೀಸರು ಹಾಗೂ ಸ್ಥಳೀಯರ ನಡುವೆ ಜಟಾಪಟಿ ನಡೆದಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ಜಟಾಪಟಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ರಾಜಕಾರಣಿಯೊಬ್ಬರಿಂದ ಕಾನ್ ಸ್ಟೆಬಲ್ ಗೆ ಕರೆ ಮಾಡಿಸಿದ್ದ ಪಳನಿವೇಲ್, ಪಾನಮತ್ತ ಸ್ಥಿತಿಯಲ್ಲಿ ಕಾರು ಸಮೇತ ಸ್ಥಳದಿಂದ ಹೊರಟು ಹೋಗಲು ಪ್ರಯತ್ನಿಸಿದ್ದ. ಇದಕ್ಕೆ ಕೆಲ ಪೊಲೀಸರು ಸಹಕರಿಸಿದ್ದರು. ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯವೇ? ‘ ಎಂದು ಸ್ಥಳೀಯರು ದೂರು ನೀಡಿದ್ದಾರೆ. ಪ್ರತಿದೂರು ನೀಡಿರುವ ಪೊಲೀಸರು, ‘ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಕೆಲ ಸ್ಥಳೀಯರು, ಮಾಧ್ಯಮದವರ ಹೆಸರು ಹೇಳಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಾವು ಪುನೀತ್ ಕೆರೆಹಳ್ಳಿ ಕಡೆಯವರೆಂದು ಅವರೆಲ್ಲ ಹೇಳುತ್ತಿದ್ದರು’ ಎಂದು ಆರೋಪಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಪರಾರಿಗೆ ಯತ್ನ: ‘ಆಸ್ಪತ್ರೆಯೊಂದರ ವಿಭಾಗದ ಮುಖ್ಯಸ್ಥರೆಂದು…
ಜನರ ಮನೆ ಬಾಗಿಲಿಗೇ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೀಘ್ರ ಜಾರಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಶನಿವಾರ ಬ್ಯಾಂಡ್ ಬೆಂಗಳೂರು ಕುರಿತು ನಡೆದ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಮಖ್ಯಮಂತ್ರಿಯಾಗಿದ್ದ ಎಸ್. ಎಂ ಕೃಷ್ಣ ಅವರ ಅವಧಿಯಲ್ಲಿ ರೈತರ ಮನೆಬಾಗಿಲಿಗೆ ಪಹಣಿ ನೀಡುವ ‘ಭೂಮಿ’ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದೇ ಮಾದರಿಯಲ್ಲಿ ಬೆಂಗಳೂರಿನ ನಾಗರಿಕರಿಗೂ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಮಾಹಿತಿ ಹಾಗೂ ತೆರಿಗೆ ಪಾವತಿಯ ಸ್ಪಷ್ಟ ಚಿತ್ರಣ ದೊರಕಲಿದೆ. ಕಾನೂನು ಪ್ರಕಾರ ತೆರಿಗೆ ಕಟ್ಟುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ತೆರಿಗೆ ವಂಚನೆ ತಡೆಗಟ್ಟಿ, ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಅಗತ್ಯ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದರು. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಇದುವರೆಗೆ ಸಾರ್ವಜನಿಕರು, ಸಂಘಸಂಸ್ಥೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ವಾರ್ಡ್ ವಾರು ಸಭೆಗಳನ್ನು ಆಯೋಜಿಸಲಾಗುವುದು. ಆ ಮೂಲಕ ಸ್ಥಳೀಯ…
ಬಂಧಿಸಲು ಹೋಗಿದ್ದ ಲೋಕಾಯುಕ್ತ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ ಆಹಾರ ನಿರೀಕ್ಷಕ ಮಹಾಂತೇಗೌಡ ಬಿ. ಕಡಬಾಳು ಅವರನ್ನು ಬೆನ್ನಟ್ಟಿ ಬಂಧಿಸಲಾಗಿದೆ. ಉದ್ದಿಮೆ ಪರವಾನಗಿ ಪರಿಶೀಲನೆಗೆ 143 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರು ಉತ್ತರ ತಾಲ್ಲೂಕಿನ ಆಹಾರ ನಿರೀಕ್ಷಕ ಕಡಬಾಳು ಅವರನ್ನು ಸೆರೆ ಹಿಡಿಯಲು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ತುಮಕೂರು ರಸ್ತೆಯ ಮಂಜುನಾಥ್ ನಗರದ ಶೋಭಾ ಅಪಾರ್ಟ್ ಮೆಂಟ್ ಬಳಿ ಹಣ ಪಡೆಯುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ರಂಗಧಾಮಯ್ಯ ಅವರ ಬಳಿ ಉದ್ದಿಮೆ ಪರವಾನಗಿ ಪರಿಶೀಲನೆಗಾಗಿ ಮಹಾಂತೇಗೌಡ, 11 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 712 ಸಾವಿರವನ್ನು ಮುಂಗಡವಾಗಿ ಪಡೆದುಕೊಂಡಿದ್ದರು. ಬಾಕಿ ಮೊತ್ತವನ್ನು ಶುಕ್ರವಾರ ನೀಡುವಂತೆ ಆರೋಪಿ ಒತ್ತಾಯಿಸಿದ್ದರು. ರಂಗಧಾಮಯ್ಯ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು. ಶುಕ್ರವಾರ ರಂಗಧಾಮಯ್ಯ ಅವರಿಂದ 143 ಸಾವಿರ ಲಂಚದ ಹಣ ಪಡೆದುಕೊಂಡಾಗ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಅದನ್ನು ತಿಳಿದ ಮಹಾಂತೇಗೌಡ ಕಾರು ಏರಿ ಪರಾರಿಯಾಗಲು ಯತ್ನಿಸಿದ್ದರು.…
BJPಯ ‘ಬಿ ಟೀಂ’ JDS ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ HDK ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. JDS ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಕೋಮುವಾದಿ ಪಕ್ಷ BJP ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ JDS ಗೆ ಯಾವ ಸಿದ್ಧಾಂತವಿದೆ? ಅದೊಂದು ಅವಕಾಶವಾದಿ ಪಕ್ಷ, ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೇರಿ JDS ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006 ರಲ್ಲಿ BJP ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ HDK ಎಳ್ಳು ನೀರು ಬಿಟ್ಟಿದ್ದರು. ಆಗಲೇ JDSನ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ JDS ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯಾತೀತ ಸಿದ್ಧಾಂತವೇ ಕಾರಣ. BJPಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ HDK, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ…
30 ಲಕ್ಷ ಸಾಲ ವಾಪಸ್ ನೀಡಲು ಸತಾಯಿಸುತ್ತಿದ್ದ ಕಾರಣಕ್ಕೆ ವ್ಯಕ್ತಿಗಳಿಬ್ಬರನ್ನು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದ ಏಳು ಮಂದಿ ಆರೋಪಿಗಳನ್ನು ಎಚ್. ಎಸ್. ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ನಂದನ್ ಹಾಗೂ ಕಾರ್ತಿಕ್ ಅವರನ್ನು ಶುಕ್ರವಾರ ರಾತ್ರಿ ಅಪಹರಣ ಮಾಡಲಾಗಿತ್ತು. ಇದರ ವಿಡಿಯೊವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು. ತ್ವರಿತ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಇಬ್ಬರನ್ನೂ ರಕ್ಷಿಸಲಾಗಿದೆ. ಆರೋಪಿ ಮಧುಸೂದನ್ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ದೂರುದಾರ ಹಾಗೂ ಆರೋಪಿಗಳ ನಡುವೆ ಹಣಕಾಸು ವ್ಯವಹಾರವಿತ್ತು. 30 ಲಕ್ಷ ಸಾಲ ಪಡೆದಿದ್ದ ದೂರುದಾರ, ವಾಪಸು ಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಶುಕ್ರವಾರ ರಾತ್ರಿ ಸಂಧಾನ ನಡೆದಿತ್ತು. ಹಣ ಸಿಗದಿದ್ದಾಗ ಆರೋಪಿಗಳು, ದೂರುದಾರ ಹಾಗೂ ಆತನ ಸ್ನೇಹಿತನ್ನು ಅಪಹರಿಸಿದ್ದರು ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬಾಣಸವಾಡಿ ಕೆರೆ ಒತ್ತುವರಿ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ದಾಖಲಿಸಿಕೊಂಡು, ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಗೆ ನೋಟಿಸ್ ಜಾರಿ ಮಾಡಿದೆ. ಜೂನ್ 30 ರಂದು ಬಾಣಸವಾಡಿ ಕೆರೆ ಮತ್ತೊಮ್ಮೆ ಒತ್ತುವರಿ ಶೀರ್ಷಿಕೆಯಡಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಇದನ್ನು ಪರಿಗಣಿಸಿರುವ ನ್ಯಾಯಾಲಯ, ಕೃಷ್ಣರಾಜಪುರ ಬಾಣಸವಾಡಿ ಸರ್ವೆ ನಂ. 211ರಲ್ಲಿ 42 ಎಕರೆ 38 ಗುಂಟೆ ಕೆರೆ ಅಂಗಳದಲ್ಲಿ ಮೂರನೇ ಬಾರಿಗೆ ಒತ್ತುವರಿಯಾಗಿದೆ. ಕಟ್ಟಡಗಳು ನಿರ್ಮಾಣವಾಗಿವೆ. ಈ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸದೆ. ಕೆರೆ ಅಂಗಳದ ಅತಿಕ್ರಮಣದ ಬಗ್ಗೆ, ಅತಿಕ್ರಮಣ ಮಾಡಿದ ವ್ಯಕ್ತಿಗಳು ಮತ್ತು ಪ್ರತಿಯೊಬ್ಬರ ಒತ್ತುವರಿಯ ವಿಸ್ತೀರ್ಣ ಹಾಗೂ ಸವಿವರವಾದ ಸರ್ವೆ ಸ್ಕೆಚ್ ಜೊತೆಗೆ ಆ. 18ರೊಳಗೆ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ತಹಶೀಲ್ದಾರ್ ಗೆ ಸೂಚಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…