Author: admin

ಬೆಂಗಳೂರು: ನೈತಿಕತೆ ಇಲ್ಲದ ಯಶಸ್ಸು,ದುಡಿಮೆ ಇಲ್ಲದ ಸಂಪತ್ತು  ಹಾಗೂ ಚಾರಿತ್ರ್ಯ ಇಲ್ಲದ ಜ್ಞಾನ ನಿಷ್ಪ್ರಯೋಜಕ ಅವುಗಳಿಂದ ಮನುಕುಲಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ.ಮಹಾತ್ಮ ಗಾಂಧೀಜಿಯವರು ಬೋಧಿಸಿದ ನೈತಿಕತೆಗಳು ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದರು. ಇಲ್ಲಿನ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಸಂಸ್ಥಾಪನಾ ಸಪ್ತಾಹ(Foundation Week )ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಯುವಸಮುದಾಯ ಜಗತ್ತಿನ ಕುರಿತು ನೇತ್ಯಾತ್ಮಕ ಭಾವನೆಗಳನ್ನಿಟ್ಟುಕೊಂಡು ಆರೋಪಿಸುವ ಮನಸ್ಥಿತಿ ಬೆಳೆಸಿಕೊಳ್ಳಬಾರದು.ಪರಸ್ಪರ ಸೌಹಾರ್ದತೆ,ಸದಾಶಯಗಳಿಂದ ದೇಶವನ್ನು ಕಟ್ಟಬೇಕು. ಭವಿಷ್ಯದ ಸಂಪತ್ತನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಐಐಎಂ ನಂತಹ ರಾಷ್ಟ್ರೀಯ ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಕಾಡೆಮಿಕ್ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಪಾಲನೆಯನ್ನೂ ರೂಢಿಸಿಕೊಳ್ಳಬೇಕು.ಮಹಾತ್ಮ ಗಾಂಧೀಜಿಯವರ ಆಶಯಗಳನ್ನು  ಅಳವಡಿಸಿಕೊಳ್ಳಬೇಕು. ನೀತಿಯಿಲ್ಲದ ವ್ಯಾಪಾರ,ಮಾನವೀಯತೆಯಿಲ್ಲದ ವಿಜ್ಞಾನ ಬೇಕಿಲ್ಲ.ಅಪಾರವಾದ ಬುದ್ಧಿಮತ್ತೆ,ಜ್ಞಾನ,ಪ್ರತಿಭೆ ಹೊಂದಿರುವ ಈ ಪೀಳಿಗೆಯ ವಿದ್ಯಾರ್ಥಿಗಳು ದೇಶದ ಮುಂದಿನ ದಾರಿಗೆ ಬೆಳಕಾಗಬೇಕು. ಬೆಂಗಳೂರಿನ ಐಐಎಂ ಸಂಸ್ಥೆಯು 50…

Read More

ಕೊಳಚೆ ನೀರು ಬಳಸಿ ಬೆಳೆಯಲಾಗುತ್ತಿರುವ ತರಕಾರಿಗಳಲ್ಲಿ ಭಾರ ಲೋಹದ ಸಾಂದ್ರತೆ ಹೆಚ್ಚಾಗಿದ್ದು, ಇಂಥ ತರಕಾರಿ ತಿನ್ನುವುದರಿಂದ ಮಾನವನ ದೇಹಕ್ಕೆ ವಿಷಕಾರಿ ಅಂಶ ಸೇರ್ಪಡೆಯಾಗುವ ಅಪಾಯವನ್ನು ಹೆಚ್ಚಿಸಿದೆ ಎಂದು ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಅಧ್ಯಯನ ತಿಳಿಸಿದೆ. ವಿವಿಧ ಭಾಗಗಳಲ್ಲಿರುವ ಮಾರುಕಟ್ಟೆ, ಸೂಪರ್ ಮಾರುಕಟ್ಟೆ ಮಳಿಗೆಗಳು, ಹಾಪ್‌ ಕಾಮ್ಸ್, ಸಾವಯವ ಮಳಿಗೆಗಳಿಂದ 10 ತರಕಾರಿಗಳ 400 ಮಾದರಿಗಳನ್ನು ಸಂಗ್ರಹಿಸಿ ಎಂಪ್ರಿ ಅಧ್ಯಯನ ನಡೆಸಿದೆ. ಬೆಂಗಳೂರು ನಗರದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಭಾರ ಲೋಹಗಳ ಸಾಂದ್ರತೆ ಅಧ್ಯಯನ’ ಎಂಬ ವರದಿಯನ್ನು ಎಂಪ್ರಿ 2022ರ ನವೆಂಬರ್‌ನಲ್ಲಿ ಪ್ರಕಟಿಸಿದೆ. ಡಾ. ಎನ್. ಹೇಮಾ, ಪಿ.ಬಿ. ಐಶ್ವರ್ಯ, ಡಿ.ಆರ್. ದಿವ್ಯಾ ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಬದನೆಕಾಯಿ, ಟೊಮೆಟೊ, ದೊಡ್ಡ ಮೆಣಸಿನಕಾಯಿ, ಬೀನ್ಸ್, ಕ್ಯಾರಟ್, ಹಸಿ ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ, ಪಾಲಕ್ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಮಾರುಕಟ್ಟೆಗಳಿಂದ ಸಂಗ್ರಹಿಸಲಾಗಿದೆ. ನುವಾನ್- ಅಲ್ಪಾ ಮೈಕ್ರೋವೇವ್ ಡೈಜೆಷನ್ ಎಕ್ಸ್‌ ಟ್ರಾಕ್ಷನ್ ಸಿಸ್ಟಮ್‌ ನಲ್ಲಿ…

Read More

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ನ ಆದರ್ಶನಗರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಟು ಮೃತದೇಹ ಪತ್ತೆಯಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ನಿವಾಸಿ 25 ವರ್ಷದ ಧನಲಕ್ಷ್ಮೀ ಶವ ಪತ್ತೆಯಾಗಿದೆ. ಕಳೆದ 5 ವರ್ಷಗಳಿಂದ ಆದರ್ಶನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕಾಡುಗೋಡಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಧನಲಕ್ಷ್ಮೀ, ಮಂಗಳವಾರ ಮೈಸೂರು ದಸರಾ ನೋಡಿಕೊಂಡು ಬಂದಿದ್ದರು. 3 ಬಾರಿ ಅಂತಾರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಂದೆ, ತಮ್ಮ ಮನೆಯಲ್ಲಿರುವಾಗಲೇ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.

Read More

ಬೆಂಗಳೂರು: ಹುಲಿ ಉಗುರು ಧರಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರಿನ ಅರಣ್ಯ ಭವನ ಬಳಿ ವಾಟಾಳ್‌ ನಾಗರಾಜ್ ಪ್ರತಿಭಟನೆ ನಡೆಸಿದರು. ಹುಲಿ ಚರ್ಮ ಬಣ್ಣದ ಶಾಲು ಧರಿಸಿ ವಾಟಾಳ್ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ. ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Read More

ಬೆಂಗಳೂರು: ನಾಯಿ ಕಚ್ಚಿದಕ್ಕೆ ದೂರು ನೀಡಿದವರ ಬೈಕ್ ಗಳಿಗೆ ಬೆಂಕಿ ಹಚ್ಚಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಾಯಿ ಮಾಲೀಕನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ನಂಜುಂಡಬಾಬು ಬಂಧಿತ ಆರೋಪಿ. ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯ ಮನೆಯಲ್ಲಿ ಘಟನೆ ನಡೆದಿದೆ. ಇದೇ ತಿಂಗಳ 23ರಂದು ಘಟನೆ ನಡೆದಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಗೆ ನಾಯಿ ಕಚ್ಚಿತ್ತು. ಈ ಸಂಬಂಧ ಮಹಿಳೆ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಕೊಟ್ಟವರ ಸುಮ್ಮನೆ ಬಿಡುವುದಿಲ್ಲ ಎಂದು ನಾಯಿ ಮಾಲೀಕ ಬೆದರಿಕೆ ಹಾಕಿದ್ದನಂತೆ.

Read More

ಬೆಂಗಳೂರು: ಕುಡಿದ ಅಮಲಿನಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ವಿಭೂತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿಭೂತಿಪುರದ ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಈಜಲು ಹೋಗುವುದಾಗಿ ಮನೆಯವರಿಗೆ ತಿಳಿಸಿ ಹೊರಟ ಸ್ಯಾಮ್ಯುಯೆಲ್ ಮದ್ಯ ಸೇವಿಸಿದರು ಎಂಬುದು ತಿಳಿದುಬಂದಿದೆ. ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ದಾರಿಹೋಕರು ರಕ್ಷಣೆಗೆ ಬಂದರೂ ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್ ‌ಎಎಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Read More

ಪಡಿತರ ವಿತರಣೆ ಹಗರಣ ಪ್ರಕರಣದಲ್ಲಿ ಬಂಗಾಳದ ಅರಣ್ಯ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಬಂಧನ. ಜ್ಯೋತಿಪ್ರಿಯಾ ಮಲ್ಲಿಕ್ ಅವರ ಮನೆಯಲ್ಲಿ ಒಂದು ಗಂಟೆಗಳ ಕಾಲ ದಾಳಿ ನಡೆಸಿ ಇಡಿ ಅವರನ್ನು ಬಂಧಿಸಿದೆ. ಆದರೆ ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ ಎಂದು ಸಚಿವರು ಬಂಧನಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಳೆದ ಮಮತಾ ಸಂಪುಟದಲ್ಲಿ ಜ್ಯೋತಿಪ್ರಿಯಾ ಮಲ್ಲಿಕ್ ಅವರು ಆಹಾರ ಸಚಿವರಾಗಿದ್ದಾಗ ಅವರ ಮನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ನ್ಯಾಯಬೆಲೆ ಅಂಗಡಿಗಳ ಮೂಲಕ ಪೂರೈಕೆಯಾಗಬೇಕಿದ್ದ ಗೋಧಿಯನ್ನು ಹೆಚ್ಚಿನ ಆಫ್ ನೆಟ್ ಮಾರುಕಟ್ಟೆಗೆ ತಿರುಗಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೋಲ್ಕತ್ತಾದ ಸಾಲ್ಟ್ ಲೇಕ್ ನಲ್ಲಿರುವ ಮಲ್ಲಿಕ್ ಅವರ ಎರಡು ಫ್ಲಾಟ್‌ಗಳು ಸೇರಿದಂತೆ ಎಂಟು ಸ್ಥಳಗಳಲ್ಲಿ ನಿನ್ನೆ ಬೆಳಿಗ್ಗೆ ಎಂಟು ಗಂಟೆಗೆ ಹುಡುಕಾಟ ಪ್ರಾರಂಭವಾಯಿತು. ಪಡಿತರ ಹಗರಣದ ಆರೋಪಿ ಬಾಕಿಬುರ್ ರೆಹಮಾನ್ ವಿಚಾರಣೆ ವೇಳೆ ಜ್ಯೋತಿಪ್ರಿಯಾ ಮಲ್ಲಿಕ್ ಪಾತ್ರ ಬೆಳಕಿಗೆ ಬಂದಿದೆ. ನಗರಬಜಾರ್ ‌ನಲ್ಲಿರುವ ಅಮಿತ್ ಡೇ ಅವರ ಎರಡೂ ನಿವಾಸಗಳಲ್ಲಿ ಸಚಿವರ ಆಪ್ತ ಸಿಬ್ಬಂದಿ ಶೋಧ ನಡೆಸಿದ್ದಾರೆ. ಇಡಿಯಿಂದ…

Read More

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ್ ಗುರೂಜಿ ಹುಲಿ ಉಗುರು ಧರಿಸಿದ್ದಾರೆ ಎಂಬ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಯಾವುದೇ ರೀತಿಯ ಹುಲಿ ಉಗುರು ಪತ್ತೆಯಾಗಿಲ್ಲ. ನಾಗರಾಜು ಎಂಬುವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಧನಂಜಯ ಅವರಿಗೆ ಸೇರಿಗೆ ಸ್ಥಳಗಳಲ್ಲಿ ತಪಾಸಣೆ ನಡೆಸಿ ಹುಲಿ ಉಗುರು ಧರಿಸಿದ್ದ ಬಗ್ಗೆ ಮಾಹಿತಿ ಪಡೆದುಕೊಂಡರು. ಶನೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಧನಂಜಯ ಗುರೂಜಿ ಅವರ ಬಳಿ ಇರುವ ಒಡವೆಗಳನ್ನು ಪರಿಶೀಲಿಸಿದರು. ಯಾವುದೇ ಹುಲಿ ಉಗುರಿನ ಪೆಂಡೆಂಟ್ ಸಿಗಲಿಲ್ಲ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಧನಂಜಯ್ ಗುರೂಜಿ, ನನಗೆ ಈ ಹಿಂದೆ 2019 ರಲ್ಲಿ ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಅಪರಿಚಿತರೊಬ್ಬರು ಇದನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ನಂತರ ಅದನ್ನು ನಾನು ಕೆಲ ದಿನಗಳ ಕಾಲ ಧರಿಸಿದ್ದೆ ಆನಂತರ ಹುಲಿಯೂರು ಮಾದರಿಯಾಗಿರುವ ಅದು ಕಂದು ಬಣ್ಣಕ್ಕೆ ತಿರುಗಿದ…

Read More

ತುಮಕೂರು: ರಾಜ್ಯಾದ್ಯಂತ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದ ಸದ್ದು ಜೋರಾಗಿರೋ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲೂಕಿನ ಮಾರನಾಯಕನಪಾಳ್ಯದ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತ ಆರೋಪಿಗಳಾಗಿದ್ದಾರೆ. ಅನೇಕ ದಿನಗಳಿಂದ ನವಿಲುಗಳನ್ನ ಕೊಂದು ಭಕ್ಷಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 1.5 ಕೆ.ಜಿ. ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು,ಬೇಯಿಸಿದ ಮಾಂಸ, ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಉರುಳುಗಳು, ಮಾಂಸ ಬೇಯಿಸಿದ್ದ ಪಾತ್ರೆ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮಾಂಸವನ್ನ ವಿಧಿ ವಿಜ್ಞಾನ ಪ್ರಯೋಗಾಲಾಯಕ್ಕೆ ಕಳುಹಿಸಿದ್ದು ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ನವಿಲು ಬೇಟೆಯಾಡುವ ಪ್ರಕರಣಗಳು ಕಂಡುಬರುತ್ತಿದ್ದವು. ಕಳೆದ ನಾಲ್ಕು ಐದು ವರ್ಷಗಳಿಂದ ನವಿಲುಗಳ ಸಂತತಿ…

Read More

ಬೀದರ್: ಜಿಲ್ಲೆಯ ಐದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ, ಮನೆ ಕಳ್ಳತನ, ಅಕ್ರಮ ಗಾಂಜಾ ಪ್ರಕರಣಗಳನ್ನು ಕಳೆದ 10 ದಿನಗಳಲ್ಲಿ ಪತ್ತೆ ಪೊಲೀಸರು ಪತ್ತೆ ಮಾಡಿದ್ದು, 94 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಡಿ.ಎಸ್ಪಿ ನ್ಯಾಮೆಗೌಡ, ಶಿವನಗೌಡ ಪಾಟೀಲ್, ಶಿವಾನಂದ ಪವಾಡಶೆಟ್ಟಿ ರವರ ನೇತೃತ್ವದಲ್ಲಿ ತಮ್ಮ ತಮ್ಮ ಉಪ-ಭಾಗದ ವೃತ್ತ ನಿರೀಕ್ಷಕರಾದ ಮಹೇಶ ಗೌಡ ಪಾಟೀಲ್, ಫುಲಯ್ಯಾ ರಾಠೋಡ್, ರಘುವೀರಸಿಂಗ್ ಠಾಕೂರ್, ಹನುಮರೆಡ್ಡೆಪ್ಪಾ ಪಿ.ಐ ರವರ ತಂಡವನ್ನು ಈ ಕಾರ್ಯಾಚರಣೆ ನಡೆಸಿದೆ. ಬೇಮಳಖೇಡಾ ಠಾಣೆಯ ದರೋಡೆ ಪ್ರಕರಣದಲ್ಲಿ ಕೇವಲ 48 ಗಂಟೆಗಳಲ್ಲಿ ಕಳುವಾದ 694 ಜಿ.ಎಮ್ ಕಂಪನಿಯ ಫ್ಯಾನ ಬಾಕ್ಸ್, ಒಂದು ಕಂಟೆನರ್ ಅಃಕಿಃ 50,76,156=00 ರೂಪಾಯ ಮೌಲ್ಯದವುಗಳನ್ನು ವಶಪಡಿಸಿಕೊಳ್ಳಲಾಯಿತು. ಬೀದರ ನಗರ ಠಾಣೆಯ ದರೋಡೆ, ಕೊಲೆ ಯತ್ನ, ಆಮ್ಸ್ ಪ್ರಕರಣದಲ್ಲಿ ನಗದು ಹಣ, ಒಂದು ಕಾರ್, ಮೊಬೈಲ್, (ಮಹಾರಾಷ್ಟ್ರ ಪೊಲೀಸರು ವಶ ಪಡಿಸಿಕೊಂಡ ನಾಡ ಪಿಸ್ತೂಲ್, 2 ಜೀವಂತ ಗುಂಡುಗಳು) ಅ:ಕಿ 5,00,000 ರೂಪಾಯಿ…

Read More