Subscribe to Updates
Get the latest creative news from FooBar about art, design and business.
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
- ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
- ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
Author: admin
ಬೆಂಗಳೂರು: ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುತ್ತಿರುವ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕ ಉಚಿತ ಆಟೋ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿದೆ. ವಕೀಲ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಯುವಘಟಕದ ಅಧ್ಯಕ್ಷ ಲೋಹಿತ್ ಜಿ. ಹನುಮಾಪುರ ಅವರ ನೇತೃತ್ವದಲ್ಲಿ ನೂರಕ್ಕು ಹೆಚ್ಚು ಆಟೋಗಳು ನಗರದಾದ್ಯಂತ ಉಚಿತ ಪ್ರಯಾಣ ಸೌಲಭ್ಯವನ್ನು ನೀಡುತ್ತಿವೆ. ಶನಿವಾರ ಬೆಂಗಳೂರು ನಗರದಾದ್ಯಂತ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಕಾಲದಲ್ಲಿ ಉಚಿತ ಸೌಲಭ್ಯ ಸಿಕ್ಕಿರುವುದರಿಂದ ವಿದ್ಯಾರ್ಥಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸೌಲಭ್ಯ ಅಕ್ಟೋಬರ್ 29, ಭಾನುವಾರವು ಲಭ್ಯವಿರುವುದಾಗಿ ಲೋಹಿತ್ ಜಿ. ತಿಳಿಸಿದ್ದಾರೆ.
ಬೆಂಗಳೂರು: ಮನುಷ್ಯನ ಸಾರ್ಥಕ ಬದುಕಿಗೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯವು ಮಾರ್ಗದರ್ಶನ ನೀಡುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ|| ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣವು ಎಂದೆಂದೂ ಪ್ರಸ್ತುತ ಎಂದರು. ಪವಿತ್ರ, ಅಮರ ಮಹಾಕಾವ್ಯವನ್ನು ಮಹರ್ಷಿ ವಾಲ್ಮೀಕಿ ಅವರು ಜನತೆಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮಹರ್ಷಿ ವಾಲ್ಮೀಕಿಯವರ ಸ್ಮರಣೆ, ಅವರಿಗೆ ಗೌರವ ನೀಡುವ ಕಾರ್ಯ ಪ್ರತಿನಿತ್ಯ, ಪ್ರತಿಕ್ಷಣವೂ ನಡೆಯಲಿ ಎಂದು ಆಶಿಸಿದರು. ಹಿಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸರಕಾರವೇ ಆಚರಿಸಲು ಮತ್ತು ರಜಾದಿನವಾಗಿ ಪ್ರಕಟಿಸಿದ್ದಾಗಿ ಅವರು ನೆನಪಿಸಿದರು. ಯಡಿಯೂರಪ್ಪ ಅವರು ಮತ್ತು ಅಂದಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಪ್ರಯತ್ನದಿಂದ ಈ ಗೌರವ ಸಲ್ಲುತ್ತಿದೆ ಎಂದು ವಿವರಿಸಿದರು. ರಾಮಾಯಣವನ್ನು ಪ್ರಶ್ನಿಸುವ, ನಂಬಿಕೆಗಳಿಗೆ ಅನುಮಾನ ಬರುವಂತೆ ಕೇಳುವ ಕಾರ್ಯ ನಡೆದಿದೆ.…
ಅಮೆರಿಕದ ಮೈನ್ ನ ಲೆವಿಸ್ಟನ್ ನಲ್ಲಿರುವ ರೆಸ್ಟೋರೆಂಟ್ ನಲ್ಲಿ ರಾಬರ್ಟ್ ಕಾರ್ಡ್ ಎಂಬಾತ ನಡೆಸಿದ ಗುಂಡಿನ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ ಎಂದು ತಿಳಿದಿದೆ. ಆದರೆ ಆತನಿಗಾಗಿ ಹುಡುಕಾಟ ನಡೆಸಿದ ಪೊಲೀಸರಿಗೆ ರಾಬರ್ಟ್ ಶವವಾಗಿ ಪತ್ತೆಯಾಗಿದ್ದಾನೆ. ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹದ ಬಳಿ ಡೆತ್ ನೋಟ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆತ ಆತ್ಮಹತ್ಯೆ ಪತ್ರದಲ್ಲಿ ಏನು ಬರೆದಿದ್ದಾನೆ ಎಂಬುದನ್ನು ಅಮೆರಿಕ ಪೊಲೀಸರು ಬಹಿರಂಗಪಡಿಸಿಲ್ಲ.
ಒಡಿಶಾದ ಗಂಜಾಂ ಜಿಲ್ಲೆಯ ಶೆರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕೃತ್ಯ ನಡೆದಿದೆ. ಮಂಗಳಾ ಭೂಯಾ ಅಲಿಯಾಸ್ ಬಯಾ(25) ಈ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೆಲವರು ಕಲ್ಲು, ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮಂಗಳಾ ಭೂಯಾ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಕೊಲೆ ಪ್ರಕರಣದಲ್ಲಿ ಲಂಜಿಯಾಪಲ್ಲಿ ಗ್ರಾಮದ ಐವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ಭೋವಿ ಜನಾಂಗದ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಸಮಾಜದ ಮುಖಂಡರು ಮಾತನಾಡಿ ಸಾಮಾಜಿಕ ಶ್ರೇಯೋಭಿವೃದ್ಧಿಗೆ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆ ಯಾಗಿದ್ದು, ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ, ವಿಧಾನಪರಿಷತ್ ಸದಸ್ಯ ಸ್ಥಾನ ದೊರಕಬೇಕು ಎಂದು ಬೇಡಿಕೆ ಇಟ್ಟರು. ಭೋವಿ ಸಮಾಜದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಕುರಿತು ಪಕ್ಷದ ವರಿಷ್ಠರೊಂದಿಗೆ ಗಂಭೀರವಾಗಿ ಚರ್ಚೆ ಮಾಡಲಾಗುವುದು, ವಸ್ತು ಸ್ಥಿತಿ ವಿವರಿಸಲಾಗುವುದು ಎಂದು ಭರವಸೆ ನೀಡಿದರು. ಭೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಮಾಜ ಕಲ್ಯಾಣ ಸಚಿವ ಡಾ: ಹೆಚ್ .ಸಿ ಮಹದೇವಪ್ಪ, ಮಾಜಿ ಸಚಿವ ವೆಂಕಟರಮಣನಪ್ಪ, ಶಾಸಕ ವೆಂಕಟೇಶ್ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು: ಪತಿಯೇ ಪತ್ನಿ ಹೆಸರಿನಲ್ಲಿ ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆಗೆದು ಖಾಸಗಿ ಫೋಟೊ ಅಪ್ ಲೋಡ್ ಮಾಡಿರುವ ಆರೋಪ ಕೇಳಿ ಬಂದಿದೆ. ಶರವಣ್ ಕುಮಾರ್ ಎಂಬಾತನ ವಿರುದ್ಧ ಪತ್ನಿ ಗರೀಮಾ ಕುಮಾರಿ ಎಂಬುವವರು ದೂರು ನೀಡಿದ್ದಾರೆ. ಇತ್ತೀಚೆಗೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಶರವಣ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗ ಪತ್ನಿ ಹೆಸರಿನಲ್ಲಿ ನಕಲು ಖಾತೆ ತೆರೆದು ವೈಯಕ್ತಿಕ ಫೋಟೊ, ವಿಡಿಯೊ ಪೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಲು ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿತು. ಗಾಜಾದಲ್ಲಿ ತಕ್ಷಣದ ಕದನ ವಿರಾಮದ ಬೇಡಿಕೆಯನ್ನು ಒಳಗೊಂಡಿರುವ ನಿರ್ಣಯವನ್ನು ಹೆಚ್ಚಿನ ಬಹುಮತದಿಂದ ಅಂಗೀಕರಿಸಲಾಯಿತು. ಜೋರ್ಡಾನ್ ತಂದ ನಿರ್ಣಯವನ್ನು 120 ದೇಶಗಳು ಬೆಂಬಲಿಸಿದವು. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಸೇರಿದಂತೆ 14 ದೇಶಗಳು ನಿರ್ಣಯವನ್ನು ಒಪ್ಪಲಿಲ್ಲ. ಭಾರತ ಸೇರಿದಂತೆ 45 ದೇಶಗಳು ಮತದಾನದಿಂದ ದೂರ ಉಳಿದಿವೆ. ಗಾಜಾಕ್ಕೆ ನೆರವು ತಲುಪಿಸಲು ಇರುವ ಅಡೆತಡೆಯನ್ನು ತಕ್ಷಣ ತೆಗೆದುಹಾಕಬೇಕೆಂದು ನಿರ್ಣಯವು ಕರೆ ನೀಡುತ್ತದೆ. ಆದರೆ ಹಮಾಸ್ ದಾಳಿಯನ್ನು ಖಂಡಿಸುವ ಕೆನಡಾದ ತಿದ್ದುಪಡಿಯು ಅಂಗೀಕಾರವಾಗಲಿಲ್ಲ. USA, ಆಸ್ಟ್ರಿಯಾ, ಕ್ರೊಯೇಷಿಯಾ, ಫಿಜಿ, ಹಂಗೇರಿ, ಇಸ್ರೇಲ್, ಮಾರ್ಷಲ್ ದ್ವೀಪಗಳು, ಪಪುವಾ ನ್ಯೂ ಗಿನಿಯಾ ಭಾರತ, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಗ್ರೀಸ್, ಇರಾಕ್, ಇಟಲಿ, ಜಪಾನ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ವೀಡನ್, ಟುನೀಶಿಯಾ, ಉಕ್ರೇನ್, ಯುಕೆ ಸೇರಿದಂತೆ ದೇಶಗಳು ಮತದಾನದಿಂದ ದೂರ ಉಳಿದಿವೆ. ನಿರ್ಣಯದ ಪ್ರಮುಖ ಬೇಡಿಕೆಗಳು ಗಾಜಾಕ್ಕೆ ನಿರಂತರ ಸೇವೆ ಮತ್ತು ಗಾಜಾದ ಜನರ ರಕ್ಷಣೆ.…
ಇಡೀ ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಸಂಸತ್ ನ ಪರಿಕಲ್ಪನೆ ನೀಡಿದವರು ಬಸವಣ್ಣ. ಕರ್ನಾಟಕ ರಾಜ್ಯಕ್ಕೆ ಬಸವಣ್ಣನ ನಾಡು ಎಂಬ ಹೆಸರಿಡುವ ಬೇಡಿಕೆ ಸ್ವಾಭಾವಿಕ, ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನು ಇಡೀ ಮೆಟ್ರೋ ಸಂಪರ್ಕ ಜಾಲಕ್ಕೂ ಬಸವಣ್ಣ ಎಂದು ಹೆಸರಿಡುವ ಬೇಡಿಕೆ ಇದೆ. ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನ ಹೆಸರಿಡಬೇಕು ಎಂಬ ವಾದವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.
ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ಸಾಲು ಸಾಲು ಜನರಿಗೆ ಕಂಟಕ ಶುರುವಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹುಲಿ ಉಗುರು ಧರಿಸಿದ್ದ ಸಾಲು ಸಾಲು ಜನರ ಬಂಧನವಾಗ್ತಿದೆ. ಖಾಂಡ್ಯಾದ ಇತಿಹಾಸ ಪ್ರಸಿದ್ಧ ಮಾರ್ಕಂಡೇಯ ದೇವಸ್ಥಾನದ ಇಬ್ಬರು ಅರ್ಚಕರು ಬಂಧನವಾಗಿರುವ ಬೆನ್ನಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು. ಈ ಪ್ರಕರಣದಲ್ಲಿ ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಯೇ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೊ ವೈರಲ್ ಆಗಿದೆ. ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಡಿ.ಆರ್.ಎಫ್.ಓ ದರ್ಶನ್ ಎನ್ನುವವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಹುಲಿ ಉಗುರಿನ ಹುರುಳಲ್ಲಿ ಸಿಲುಕಿದ್ದ ಕಳಸದ ಅರಣ್ಯ ಅಧಿಕಾರಿ ದರ್ಶನ್ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಕೊಪ್ಪ ಡಿಎಫ್ ಓ ನಂದೀಶ್ ಆದೇಶ ಹೊಡಿಸಿದ್ದರು. ಅಮಾನತು ಮಾಡಿದ ಮೇಲೂ ವಿಚಾರಣೆಗೆ ಹಾಜರಾಗದ ದರ್ಶನ್‌ಅನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಮಗ ಮೃತಪಟ್ಟರೆ ಅವನ ಆಸ್ತಿಯಲ್ಲಿ ತಾಯಿಗೂ ಪಾಲಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಆದರೆ, ಅದು ಮಗನಿಗೆ ಸಿಕ್ಕಿದ ಪಿತ್ರಾರ್ಜಿತ ಆಸ್ತಿಯಾಗಿರಬೇಕು ಮತ್ತು ತಾಯಿ ಮೊದಲನೇ ವರ್ಗದ ವಾರೀಸುದಾರರಾಗಿಬೇಕು. ಹಿಂದೂ ಉತ್ತರಾಧಿಕಾರಿ ಕಾಯಿದೆ ಅಡಿ ಮೃತ ಪುತ್ರನ ಆಸ್ತಿಗೆ ತಾಯಿಯೂ ಪಾಲುದಾರರಾಗಲಿದ್ದಾರೆ. ಒಂದು ವೇಳೆ ಗಂಡ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಬಹುದು ಎಂದು ತಿಳಿಸಿದೆ.