Author: admin

ಬಿಬಿಎಂಪಿ ದಾಸರಹಳ್ಳಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಸ್ಥಳಾಂತರಿಸುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ‘ಈ ಕಚೇರಿ ಸ್ಥಳಾಂತರಿಸಬಾರದು ಎಂದು ಮಾಜಿ ಶಾಸಕ ಆರ್. ಮಂಜುನಾಥ್ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ’ ಎಂದು ವಿನಾಯಕ ಭಟ್ ನೇತೃತ್ವದಲ್ಲಿ ಸ್ಥಳೀಯರು ಶನಿವಾರ ದಾಸರಹಳ್ಳಿ ವಲಯದ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದರು. ‘ಶಾಸಕ ಆರ್. ಮುನಿರಾಜು ಅವರ ಕಚೇರಿಗೆ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಎಚ್‌ಎಂಟಿ ಬಡಾವಣೆಯಿಂದ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈಗ ವಿಶಾಲವಾದ ಕಟ್ಟಡದಲ್ಲಿ ತೊಂದರೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಕೆಲವೊಂದು ಗುತ್ತಿಗೆದಾರರು ದಾರಿ ತಪ್ಪಿಸಿ, ಈ ಕಚೇರಿಯನ್ನು ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಸ್ಥಳಾಂತರಿಸುವಂತೆ ಮಾಡುತ್ತಿದ್ದಾರೆ’ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ಈ ಕಚೇರಿಯನ್ನು ಪ್ರಸ್ತುತ ಇರುವಲ್ಲಿಯೇ ಮುಂದುವರಿಸಬೇಕು. ಸ್ಥಳಾಂತರಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರ ಸೇವಾವಧಿ ಇದೇ 19ಕ್ಕೆ ಮುಕ್ತಾಯಗೊಳ್ಳಲಿದೆ. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಇದೇ ಸೋಮವಾರ ಸಭೆ ನಡೆಯಲಿದ್ದು, ಮಂಜುನಾಥ್ ಅವರ ಮುಂದುವರಿಕೆ ಅಥವಾ ಹೊಸ ನಿರ್ದೇಶಕರ ನೇಮಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 2007ರಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ. ಸಿ. ಎನ್. ಮಂಜುನಾಥ್ ಕಾರ್ಯನಿರ್ವಹಿಸಿದ್ದಾರೆ. ಅವರ ಅವಧಿ ಕಳೆದ ವರ್ಷವೇ ಮುಕ್ತಾಯಗೊಂಡಿತ್ತು. ಆಸ್ಪತ್ರೆ ಸಿಬ್ಬಂದಿ ಒತ್ತಾಯದ ಮೇರೆಗೆ ಒಂದು ವರ್ಷ ಮುಂದುವರಿಸಲಾಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ನಗರದ ಸಮಗ್ರ ಅಭಿವೃದ್ಧಿಗೆ ರೂಪಿಸಲಾಗುತ್ತಿರುವ ‘ಬ್ಯಾಂಡ್ ಬೆಂಗಳೂರು’ ಯೋಜನೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ‘ಬ್ಯಾಂಡ್ ಬೆಂಗಳೂರು’  ರಚಿಸಲು ಪೋರ್ಟಲ್ ಮೂಲಕ ನಾಗರಿಕರಿಂದ ಬರುವ ಸಲಹೆಗಳನ್ನು ಒಟ್ಟುಗೂಡಿಸಲು ಶೈಕ್ಷಣಿಕ ಸಂಸ್ಥೆಗಳನ್ನೂ ನೋಡಲ್ ಅಧಿಕಾರಿಗಳೊಂದಿಗೆ ಪಾಲುದಾರರನ್ನಾಗಿಸಿಕೊಳ್ಳಲಾಗಿದೆ. ಇವರು ಎಲ್ಲ ಸಲಹೆಗಳನ್ನು ಥೀಮ್‌ ವಾರು ಒಟ್ಟುಗೂಡಿಸಿ, ಅವುಗಳನ್ನು ಪ್ರಕಟಿಸಬೇಕು. ಅಲ್ಲದೆ, ವಿಚಾರ ಸಂಕಿರಣಗಳನ್ನು ನಡೆಸಿ ಮಾಹಿತಿಗಳನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ‘ಬ್ಯಾಂಡ್ ಬೆಂಗಳೂರು’ ಥೀಮ್‌ ಗಳನ್ನು ನಿಗದಿಪಡಿಸಿ, ಬಿಬಿಎಂಪಿ, ಬಿಎಂಟಿಸಿ, ಬಿಡಬ್ಲ್ಯುಎಸ್‌ ಎಸ್‌ ಬಿ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ.  ಶೈಕ್ಷಣಿಕ ಸಂಸ್ಥೆಗಳನ್ನೂ ಗುರುತಿಸಿ, ಜುಲೈ 14ರಂದು ಸುತ್ತೋಲೆ ಹೊರಡಿಸಿದ್ದಾರೆ. www.brandbengluru. karnataka. gov. in pre ನಾಗರಿಕರು, ಸಂಘ-ಸಂಸ್ಥೆಗಳು ಜುಲೈ 20ರವರೆಗೆ ಸಲಹೆಗಳನ್ನು ಸಲ್ಲಿಸಬಹುದು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ವಿವಿಧ ವಿರೋಧ ಪಕ್ಷಗಳು ತಮ್ಮ ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಬೇಕೆಂದು ಏಕೈಕ ಉದ್ದೇಶದೊಂದಿಗೆ ಹೊರಟಿದ್ದಾರೆ. ಅದಕ್ಕಾಗಿ ಇದೇ 18 ರಂದು ವಿಪಕ್ಷಗಳ ಸಭೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಕ್ಷೇಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಜಿ ಅವರು 2047ರ ವೇಳೆಗೆ ಪ್ರಪಂಚದಲ್ಲಿ ಭಾರತವನ್ನು ನಂಬರ್ 1 ರಾಷ್ಟ್ರವಾಗಿ ಮಾಡುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಭಾರತವನ್ನು ಪರಿವರ್ತಿಸುವ ಒಂದೇ ಕನಸು ಮೋದಿಜಿ ಅವರದು. ಪಾರ್ಟಿ ಬೆಳೆಸುವುದು, ಮತಬ್ಯಾಂಕ್ ದೃಢೀಕರಣದ ಉದ್ದೇಶ ಅವರದಲ್ಲ. ಅಂಥ ದುರುದ್ದೇಶದ ಚಿಂತನೆ ವಿಪಕ್ಷಗಳದು ಎಂದು ಟೀಕಿಸಿದರು. ನಿಸ್ವಾರ್ಥ ಮತ್ತು ದೂರದೃಷ್ಟಿಯ ಸಮರ್ಥ ನಾಯಕತ್ವವನ್ನು ಮೋದಿಜಿ ಕೊಡುತ್ತಿದ್ದು, ಅದನ್ನು ಜನರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ನುಡಿದರು. ಮತ್ತೊಮ್ಮೆ ನರೇಂದ್ರ ಮೋದಿಜಿ ಅವರು ಪ್ರಧಾನಿ ಆಗಬೇಕೆಂಬ ಆಶಯ, ಅಭಿಲಾಶೆ ಜನರದು. ಅವರಿಗೆ…

Read More

ಕಂದಾಯ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸಮೀಕ್ಷೆ ನಡೆಸುವ ಮೂಲಕ ಕಾನೂನು ವ್ಯಾಪ್ತಿಯಲ್ಲಿ  ಹಕ್ಕುಪತ್ರದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಪಾಲ್ಗೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಜನರ ಅಹವಾಲಿಗೆ ಸ್ಪಂದಿಸಿದರು. ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ 12 ಕುಟುಂಬಗಳು ಅರಣ್ಯ ವಾಸಿಗಳು ಎಂಬ ಬಗ್ಗೆ ಇರುವ ಗೊಂದಲದ ಕುರಿತಂತೆ  ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ಶೀಘ್ರವೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ನಡೆಸಿ, ಇಂತಹ ಸಮಸ್ಯೆ ಇರುವ ರಾಜ್ಯದ ಎಲ್ಲಾ ಹಾಡಿ, ಮುಳುಗಡೆ ಪ್ರದೇಶದ ಸಂತ್ರಸ್ತರ ಜಮೀನುಗಳ  ಕುರಿತಂತೆ ಪರ್ಯಲೋಚಿಸುವುದಾಗಿ ಸಚಿವರು ತಿಳಿಸಿದರು. ಅನಿಲ್ ಚಿಕ್ಕಮಾದು ಅವರು ತಮ್ಮ ಕ್ಷೇತ್ರದಲ್ಲಿ ಆನೆಗಳ ಹಾವಳಿ ಇದ್ದು ಕನಿಷ್ಠ 72 ಕಿಲೋಮೀಟರ್ ರೈಲ್ವೆ ಬ್ಯಾರಿಕೆಡ್ ನಿರ್ಮಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಒಂದೇ ವರ್ಷದಲ್ಲಿ 72 ಕಿಲೋಮೀಟರ್ ಒಂದೇ ಭಾಗದಲ್ಲಿ  ನಿರ್ಮಿಸಲು…

Read More

ಪತ್ರಿಕಾರಂಗದಲ್ಲಿ ಇರುವವರು ಆರ್ಥಿಕವಾಗಿ ಇದ್ದಾರೆ ಎಂದುಕೊಂಡಿದ್ದಾರೆ. ಆದರೆ ಅವರು ಪಡುವ ಕಷ್ಟವನ್ನು ನಾನು ಕಾಣ್ಣಾರೆ ನೋಡಿದ್ದೇನೆ. ಹಾಗೆಯೇ ಕೋವಿಡ್ ಸಮಯದಲ್ಲಿ ಅವರ ಕಷ್ಟ, ನೋವು ಹೇಳತೀರದು. ಪತ್ರಕರ್ತರ ಉತ್ತಮ ಜೀವನ ಮತ್ತು ಅನಾನುಕೂಲಗಳಿಗೆ ಸ್ಪಂದಿಸುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ನ ಸಿದ್ದರಾಮಯ್ಯ ನವರ ಸರ್ಕಾರ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹೇಳಿದ್ರು.. ಹಾಸನ ನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮಗಳ ಪಿಂಚಣಿಯನ್ನು ಹೆಚ್ಚಿಸಿದ್ದು, ಸಿದ್ದರಾಮಯ್ಯನವರು, ಇಂದಿನ ದಿನಗಳಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಹಾಗೆಯೇ ನಿಮ್ಮ ಬರಹ ಆರೋಗ್ಯಕವಾಗಿರಲಿ, ಮುಂದಿನ ದಿನಗಳಲ್ಲಿ ಯಶಸ್ವಿನಿ ಯೋಜನೆಯ ಲಾಭಗಳು ಪತ್ರಿಕೋದ್ಯಮದ ಮಿತ್ರರಿಗೂ ಸಿಗುವ ಹಾಗೆ ಪ್ರಯತ್ನ ಮಾಡುತ್ತೇನೆ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್,  ಶಾಸಕರಾದ ಶಿವಲಿಂಗೇ ಗೌಡ, ಸ್ವರೂಪ್ ಪ್ರಕಾಶ್, ಶಿವಾನಂದ ತಗಡೂರು, ಶ್ರೇಯಸ್ ಪಟೇಲ್ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.…

Read More

ಮಂಜುಸ್ವಾಮಿ ಎಂ.ಎನ್., ಕೊರಟಗೆರೆ. ಕೊರಟಗೆರೆ: ಕಲ್ಪತರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 102ಹಾಸ್ಟೆಲ್‍ನಲ್ಲಿ 40ಕಡೆ ಮಾತ್ರ ಖಾಯಂ ವಾರ್ಡನ್‍ಗಳ ನೇಮಕ.. ಬರೋಬ್ಬರಿ 62 ವಸತಿ ನಿಲಯಗಳ ವಾರ್ಡನ್ ಹುದ್ದೆಯೇ ಖಾಲಿ.. 102 ವಸತಿ ಶಾಲೆಗಳಿಗೆ ಕಾವಲುಗಾರನ ನೇಮಕ ಇದ್ರು ಭದ್ರತೆಯೇ ಮರೀಚಿಕೆ.. ನಿಲಯದ ಕಟ್ಟಡಗಳಲ್ಲಿ ನೆಪಮಾತ್ರಕ್ಕೆ ಸಿಸಿಟಿವಿ ಲಭ್ಯವಿದ್ರು ನಿರ್ವಹಣೆಯೇ ಇಲ್ಲದಾಗಿ ಭಯವೇ ಇಲ್ಲದಾಗಿದೆ. ತುಮಕೂರು ಜಿಲ್ಲೆಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ 102 ವಸತಿ ನಿಲಯಗಳಿವೆ. ಸರಕಾರಿ ಮೆಟ್ರಿಕ್ ನಂತರದ ಮತ್ತು ಪೂರ್ವದ 102 ವಸತಿ ಶಾಲೆಗಳಲ್ಲಿ 62 ಕಡೆ ಖಾಲಿಯಿವೆ. ವಾರ್ಡನ್ ಮತ್ತು ಕಾವಲಗಾರನ ಕೊರತೆಯಿಂದ ನಿರ್ವಹಣೆಗೆ ಸಮಸ್ಯೆಯಾಗಿದೆ. ವಾರ್ಡನ್ ಇಲ್ಲದಿರುವ ವಸತಿ ಶಾಲೆಗಳ ನಿರ್ವಹಣೆಗೆ ಎರಡು ಕಡೆ ಒಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಇನ್ನೂ ಕೇಲವು ಕಡೆ ಇಲಾಖೆಯ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ವಾರ್ಡನ್ ನೇಮಕಾತಿ ಕೊರತೆಯಿಂದ…

Read More

ನಿಮ್ಮಲ್ಲಿ ಕನಸು ಕಾಣುವ ಸಾಮರ್ಥ್ಯವಿದೆ. ಎಂದಾದರೆ ಏನನ್ನಾದರೂ ಸಾಧಿಸುವ ಸಾಮರ್ಥ ನಿಮ್ಮಲ್ಲಿದೆ ಎಂದರ್ಥ ಇತರರ ಸಾಧನೆಗೆ ನೀವು ನೆರವು ನೀಡಿದ್ದೀರಿ ಎಂದಾದರೆ ನಿಮ್ಮ ಜೀವನದಲ್ಲಿ ನೀವು ಬಯಸಿದ್ದನ್ನು ಪಡೆಯಲು ಶಕ್ತರಿದ್ದೀರಿ ಎಂದರ್ಥ. ಕುಮಾರ್ ಪೆರ್ನಾಜಿ ಅವರ ನಿರ್ದೇಶನದಲ್ಲಿ ಗ್ರಾಮೀಣ ಪ್ರತಿಭೆಗಳ ವೈವಿಧ್ಯಮಯ ಕಲಾಪ್ರಕಾರವನ್ನು ಪ್ರದರ್ಶಿಸುವ ಸಿಂಚನ ಕಲಾ ತಂಡದಲ್ಲಿ ಸಿಂಚನ ಲಕ್ಕಿ ಕೊಡಂದೂರು ಓದು, ಸಂಗೀತ, ನೃತ್ಯಗಳ ಬಹುಮುಖ ಪ್ರತಿಭೆ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಭರತನಾಟ್ಯದಲ್ಲಿ ಉನ್ನತ ಶ್ರೇಣಿಯಲ್ಲಿ ಜೂನಿಯರ್ ಸೀನಿಯರ್ ಆಗಿದ್ದು, ಸಂಗೀತದಲ್ಲೂ ಜೂನಿಯರ್ ನಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದ್ದು ಸೀನಿಯರ್ ಪರೀಕ್ಷೆಯ ಸಿದ್ಧತೆಯಲ್ಲಿದ್ದು ನೃತ್ಯ ಹಾಡು ಕಲೆಯನ್ನು ಉಣಿಸುವ ಇವಳು ರಘುರಾಮ್ ಶಾಸ್ತ್ರಿ ಕೋಡಂದೂರು ಮತ್ತು ಸವಿತಾ ಕೋಡಂದೂರು,  ಸ್ವರ ಸಿಂಚನ ಕಲಾ ಶಿಕ್ಷಕಿಯ ಪುತ್ರಿ. ಇವರ ಅಭಿರುಚಿಯನ್ನು ಮಕ್ಕಳಲ್ಲಿ ಮೂಡಿಸುವ ಪ್ರಯತ್ನದಲ್ಲಿ ಸ್ವರ ಸಿಂಚನ ಸಂಸ್ಥೆ ಅವಿರತ ಶ್ರಮಿಸುತ್ತದೆ ವೈವಿಧ್ಯಮಯ ಕಾರ್ಯಕ್ರಮಗಳಾದ ಶಾಸ್ತ್ರೀಯ ಸಂಗೀತ, ಗಾಯನ, ಗಾನವೈಭವ, ಸಪ್ತಮಾತೃಕೆಯರ ಗೀತಗಾಯನ, ನಗೆಹಬ್ಬ ಅದರ ಜೊತೆ…

Read More

ಹೆಚ್.ಡಿ.ಕೋಟೆ: ಮೃತಪಟ್ಟ 15 ದಿನಗಳ ಬಳಿಕ ಹೊರದೇಶದಿಂದ ಹಕ್ಕಿಪಿಕ್ಕಿ ಸಮುದಾಯದ ವ್ಯಕ್ತಿಯ ಮೃತದೇಹ ಸ್ವಗ್ರಾಮಕ್ಕೆ ತರಿಸಿ ಶಾಸಕ ಅನಿಲ್ ಚಿಕ್ಕಮಾದು ಮಾನವೀಯತೆ ಮೆರೆದಿದ್ದಾರೆ. ಜೀವನೋಪಾಯಕ್ಕಾಗಿ ಮಸಾಜ್ ಕೆಲಸ ಬಯಸಿ ಆಫ್ರಿಕಾ ದೇಶಕ್ಕೆ ತೆರಳಿದ್ದ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದ ಇಫ್ರಾಹಿಂ (20) ಮೃತ ವ್ಯಕ್ತಿಯಾಗಿದ್ದಾರೆ. ಮಸಾಜ್ ಕೆಲಸಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ಆಫ್ರಿಕಾ ದೇಶಕ್ಕೆ ಹೋಗಿ ಅಲ್ಲೆ ನೆಲೆಸಿದ್ದ ಇಫ್ರಾಹಿಂಗೆ ಜು.2ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಆಫ್ರಿಕಾ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆವರು ಮೃತಪಟ್ಟಿದ್ದರು. ಕುಟುಂಬದಲ್ಲಿ ಏಕೈಕ ಗಂಡು ಮಗನಾಗಿದ್ದ ಇಫ್ರಾಹಿಂ ಬಡತನದ ಬೇಗೆಯಲ್ಲೂ ಹತ್ತು ಮಂದಿ ಕುಟುಂಬಸ್ಥರ ಜೀವನದ ನಿರ್ವಹಣೆ ಹೊರೆ ಹೊತ್ತಿದ್ದ. ಇಫ್ರಾಹಿಂನನ್ನು ಕಳೆದುಕೊಂಡ ಕುಟುಂಬ ಮೃತ ದೇಹದ ಅಂತಿಮ ದರ್ಶನ ಪಡೆದು ಸ್ವಗ್ರಾಮದಲ್ಲೇ ಸಂಸ್ಕಾರ ಮಾಡುವ ಹಂಬಲ ಇತ್ತು. ಹೀಗಾಗಿ ಆತನ ಮೃತದೇಹವನ್ನು ಭಾರತಕ್ಕೆ ಕರೆತರಲು ಶಾಸಕ ಅನಿಲ್ ಚಿಕ್ಕಮಾದು ಅವರ ಮೂಲಕ ಸರ್ಕಾರದ ಮೊರೆ ಹೋಗಿದ್ದರು.…

Read More

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಆಖಾಡಕ್ಕೆ ಇಳಿದಿರುವ ಎನ್‌ ಡಿಎ, ತಮ್ಮ ಮೈತ್ರಿ ಪಕ್ಷಗಳ ಜೊತೆಗೆ ಮಾತುಕತೆ ನಡೆಸಲು ಇದೇ ತಿಂಗಳ 18 ರಂದು ದೆಹಲಿಯಲ್ಲಿ ಸಭೆ ಸೇರಲಿದ್ದು, ಆ ಸಭೆಗೆ ರಾಜ್ಯದ ಜೆಡಿಎಸ್‌ ನ ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಅವರು ಕೂಡ ತೆರಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಬಿಜೆಪಿ 66 ಕ್ಷೇತ್ರಗಳಲ್ಲಿ ಜಯಗಳಿಸಿದ್ರೆ, ಇತ್ತ ಜೆಡಿಎಸ್ ಕೇವಲ 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ನಿರ್ಧರಿಸಿರುವ ಕಾರಣ, ಈ ತಿಂಗಳ 18 ರಂದು ನಡೆಯುವ ಸಭೆಗೆ ಕುಮಾರಸ್ವಾಮಿ ತೆರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More