Author: admin

ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ಡಾ. ತೇಜಸ್ವಿನಿ ಅನಂತ್‌ ಕುಮಾರ್‌ ಗೆ ಕಾಂಗ್ರೆಸ್ ತೆರೆಮರೆಯಲ್ಲಿ ಗಾಳ ಹಾಕುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. 2024ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನೇರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ತರಬೇಕೆಂಬ ಕಾರಣಕ್ಕೆ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿವಂಗತ ಅನಂತಕುಮಾರ್ ಅವರ ಪತ್ನಿ ಡಾ. ತೇಜಸ್ವಿನಿ ಅನಂತಕುಮಾರ್ ಅವರನ್ನು ಕಾಂಗ್ರೆಸ್‌ ನತ್ತ ಸೆಳೆಯಲು ವೇದಿಕೆ ಸಿದ್ಧಪಡಿಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಕೇವಲ ಅನಂತ್‌ ಕುಮಾರ್ ಅವರ ಹೆಸರಿನಿಂದ ಮಾತ್ರವಲ್ಲದೆ, ಬಿಜೆಪಿಯಲ್ಲಿ ಅನಂತ್‌ ಕುಮಾರ್ ಅವರ ಕುಟುಂಬ ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ರಾಜಕೀಯವಾಗಿ ಅವರನ್ನು ಮೇಲೆ ಬರಲು ಬಿಡುತ್ತಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಆಪರೇಷನ್ ಹಸ್ತ ಶುರು ಮಾಡಿದೆ ಎಂಬ ಚರ್ಚೆಗಳು ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಡಾ. ತೇಜಸ್ವಿನಿ ಅನಂತ್‌ಕುಮಾರ್ ಅವರನ್ನು ಪಕ್ಷಕ್ಕೆ ಸೆಳೆದು, ಅದೇ ಚುನಾವಣೆಯಲ್ಲಿ ಡಾ. ತೇಜಸ್ವಿನಿ ಅನಂತಕುಮಾರ್…

Read More

ಮನೆಯಲ್ಲಿ ಗಂಡು ಬೀದಿಯಲ್ಲಿ ಹೆಣ್ಣಿನ ವೇಷ, ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ಹಾಕುತ್ತಿದ್ದ ಐನಾತಿಯನ್ನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ಮಕ್ಕಳಿದ್ದರೂ ಬೀದಿಯಲ್ಲಿ ಮಂಗಳಮುಖಿ ವೇಷ ಧರಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಚೇತನ್ ಎಂಬಾತನನ್ನ ಬಂಧಿಸಲಾಗಿದೆ. ಮದುವೆಯಾಗಿ ಪತ್ನಿ, ಮಕ್ಕಳಿದ್ದರೂ ಸಹ ಅಚ್ಚುಕಟ್ಟಾಗಿ ಜೀವನ ಮಾಡುವ ಬದಲು, ಐಷಾರಾಮಿ ಜೀವನದ ಗೀಳಿಗೆ ಬಿದ್ದಿದ್ದ ಆರೋಪಿ, ಹಣಕ್ಕಾಗಿ ಹೆಣ್ಣಿನ ವೇಷ ಹಾಕಿ ಬಿಕ್ಷಾಟನೆ ಮಾಡುತ್ತಿದ್ದ. ಮನೆಯಲ್ಲಿ ವಿಷಯ ಗೊತ್ತಾಗಬಾರದು ಅಂತ ಪ್ರತ್ಯೇಕವಾಗಿ ರೂಂ ಮಾಡಿಕೊಂಡಿದ್ದ. ಹಣಕ್ಕಾಗಿ ಹೆಣ್ಣಿನ ವೇಷ ಧರಿಸಿ ಮಂಗಳಮುಖಿಯರ ಸಲುಗೆ ಬೆಳೆಸಿಕೊಂಡು ಬಿಕ್ಷಾಟನೆ ಮಾಡುತ್ತಿದ್ದ. ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ದಿನನಿತ್ಯ ಬಿಕ್ಷಾಟನೆ ಮಾಡುತ್ತಿದ್ದ, ಹಣ ಕೊಡದಿದ್ರೆ ಬೆದರಿಕೆ ಹಾಕುತ್ತಿದ್ದ. ನಾಗಸಂದ್ರ ಮೆಟ್ರೋ ನಿಲ್ದಾಣದ ಜಾಗದಲ್ಲಿ ಆರೋಪಿ ಅಕ್ರಮವಾಗಿ ಶೆಡ್ ನಿರ್ಮಿಸಲು ಮುಂದಾದಾಗ ಜುಲೈ 13ರಂದು BMRCL ಅಧಿಕಾರಿಗಳು, ಸ್ಥಳಿಯರು ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಗಲಾಟೆ ಮಾಡಿದ್ದ ಆರೋಪಿ ಸ್ಥಳೀಯ ಮಹಿಳೆಯೊಬ್ಬರ ಸೀರೆ ಎಳೆದಾಡಿ ವಿಕೃತಿ ಮೆರೆದಿದ್ದ. ಈ…

Read More

ಸಾರಿಗೆ ಹಾಗೂ ಮುಜರಾಯಿ ಸಚಿವರು ಮತ್ತು ಅಧ್ಯಕ್ಷರು, ಕರಾರಸಾ ನಿಗಮ ರವರು ನಿಗಮದ ಕೇಂದ್ರ ಕಛೇರಿಯಲ್ಲಿ ನಿಗಮವು ತನ್ನ ಸಿಬ್ಬಂದಿ ಹಾಗೂ ಅವರ ಅವಲಂಬಿತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಯೋಜನೆಯಡಿ ರೂ. 1 ಕೋಟಿ ಅಪಘಾತ ಪರಿಹಾರ ವಿಮೆಯ ಚೆಕ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೆ. ಎಸ್. ಆರ್. ಟಿ. ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗೆ ರೂ. 1 ಕೋಟಿ ಮೊತ್ತದ ಅಪಘಾತ ವಿಮೆಯನ್ನು ( On duty & Of Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ ರೂ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ವಾರ್ಷಿಕ ರೂ. 885/- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ. 50 ಲಕ್ಷಗಳ ವಿಮೆಯು ಒಳಗೊಂಡಿರುತ್ತದೆ. ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ…

Read More

ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅವರ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಖಾತೆ ಎಂದು ಕರೆಯುವ ಬದಲು ಅದಕ್ಕೆ ಬೇರೆ ಹೆಸರು ಇಟ್ಟು, ಎಲ್ಲ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು, ಎಸ್. ಎಂ ಕೃಷ್ಣ ಅವರ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಾಣಿಗಳನ್ನು ನೀಡುವ “ಭೂಮಿ” ವ್ಯವಸ್ಥೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಗಿಲಲ್ಲೇ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು. ಬ್ರಾಂಡ್ ಬೆಂಗಳೂರು ಸಂವಾದದ ನಂತರ ಮಾತನಾಡಿದ ಅವರು, ಇನ್ನು ಆಸ್ತಿ ತೆರಿಗೆ ವಿಚಾರವಾಗಿ ಇಂದಿನ ಸಭೆಯಲ್ಲಿ ಚರ್ಚೆಯಾಗಿದ್ದು, ಕಾನೂನು ರೀತಿಯಲ್ಲಿ ತೆರಿಗೆ ಕಟ್ಟುತ್ತಿರುವವರಿಗೆ ತೊಂದರೆಯಾಗುತ್ತಿದ್ದು, ತೆರಿಗೆ ಕಟ್ಟದವರಿಗೆ ರಕ್ಷಣೆ ಸಿಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಲಾಯಿತು. ನಾವು ಮನೆ ಬಾಗಿಲಲ್ಲೇ ಆಯಾ ಆಸ್ತಿ ದಾಖಲೆಗಳನ್ನು ತಲುಪಿಸಿದರೆ, ಯಾರ…

Read More

ಎಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ, ‘ಎ’ ಕಂಡಿಕೆಯಲ್ಲಿ ಸೀಟು ಬಯಸಿರುವ ಅಭ್ಯರ್ಥಿಗಳಿಗೆ ಕೊನೆಯದಾಗಿ ಜುಲೈ 17ರಂದು ಅಂತಿಮ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, “15 ದಿನಗಳಿಂದ ಅಭ್ಯರ್ಥಿಗಳ ವ್ಯಾಸಂಗ ಪ್ರಮಾಣಪತ್ರ ಮತ್ತಿತರ ದಾಖಲೆಗಳ ಪರಿಶೀಲನೆಯು ಬಿಇಒ ಕಚೇರಿಗಳಲ್ಲಿ ನಡೆದಿದ್ದು, ಇಂದು ಕೊನೆ ದಿನವಾಗಿತ್ತು. ಆದರೂ ಕೆಲವು ವಿದ್ಯಾರ್ಥಿಗಳು ಈ ಪ್ರಕ್ರಿಯೆ ಪೂರೈಸಿಲ್ಲ. ಆದ್ದರಿಂದ ಈಗ ಕೊನೆಯ ಅವಕಾಶವನ್ನು ಕೊಡಲಾಗುತ್ತಿದೆ. ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲು ಇದು ಕಡ್ಡಾಯವಾಗಿದೆ ” ಎಂದಿದ್ದಾರೆ. ಎಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪಥಿ, ವೆಟರ್ನರಿ, ಕೃಷಿ ವಿಜ್ಞಾನ, ಬಿ. ಫಾರ್ಮ ಮತ್ತು ಡಿ. ಫಾರ್ಮ ಕೋರ್ಸುಗಳಿಗೆ ಈ ಪ್ರಕ್ರಿಯೆ ಅನ್ವಯಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಡೆಯುತ್ತಿರುವ ಕೊಲೆಗಳು, ಸರ್ಕಾರದ ಪೋಷಿತ ಎಂಬ ಗಂಭೀರ ಆರೋಪವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಡಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನ್ನಾಡಿದ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಬೀಗುತ್ತಿದೆ. ಆದ್ರೆ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಕೊಲೆಗಳೆಲ್ಲಾ ಕಾಂಗ್ರೆಸ್ ಸರ್ಕಾರದ ಪೋಷಿತವೇ ಹೊರತು, ಬೇರೇನೂ ಅಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ನಾಯಕರನ್ನು ಕೇಳಿದ್ರೆ 136 ಸ್ಥಾನ ಬಂದಿದೆ ಎಂದು ಬೀಗುತ್ತಾರೆ. ಈ ಕೊಲೆಗಳಿಗೆಲ್ಲಾ ಮುಂದೆ ನೀವೇ ಉತ್ತರಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ರಾಜ್ಯಸಭಾ ಸದಸ್ಯರಾಗುವುದು ಬಹುತೇಕ ಖಚಿತ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ರಾಜ್ಯದಲ್ಲೂ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಹ ಉಸ್ತುವಾರಿಯಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವ ಹೊಂದಿರುವ ಅಣ್ಣಾಮಲೈ ಅವರನ್ನು ಈಗ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರೆ, ಅದು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ, ಅವರನ್ನೀಗ ರಾಜ್ಯಸಭೆಗೆ ಆಯ್ಕೆ ಮಾಡಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಮತ್ತೊಂದು ವಿಶೇಷ ಅಂದರೆ, ಅಣ್ಣಾಮಲೈ ರಾಜಸ್ಥಾನ ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಮಂಜುಸ್ವಾಮಿ ಎಂ.ಎನ್. ಕೊರಟಗೆರೆ. ಕೊರಟಗೆರೆ : ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸೀಗಲೆಂದು ಪೋಷಕರು ಹಗಲುರಾತ್ರಿ ಎನ್ನದೇ ದುಡಿದು ಕಷ್ಟಪಡ್ತಾರೇ.. ಶಾಲಾ–ಕಾಲೇಜಿನಲ್ಲಿ ಶಿಕ್ಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶ್ರಮಿಸ್ತಾರೇ. ಆದರೇ ಇಲ್ಲೊಂದು ವಸತಿ ಶಾಲೆಯಲ್ಲಿ ತಡರಾತ್ರಿ ವಿದ್ಯಾರ್ಥಿಯೇ ಗೇಟ್ ಹತ್ತಿ ಹೊರಗಡೆ ಹೋಗ್ತಾಳೇ.. ರಾತ್ರಿಯಿಡಿ ಹೊರಗಡೆ ಇದ್ದು ಮತ್ತೇ ಅದೇ ನಿಲಯಕ್ಕೆ ಯಾರ ಭಯವು ಇಲ್ಲದೇ ಮುಂಜಾನೇ ವಾಪಸ್ ಬರ್ತಾಳೇ.. ಹಾಗಾದ್ರೇ ಸಮಾಜ ಕಲ್ಯಾಣ ಇಲಾಖೆಯ ಪಾತ್ರವೇನು ಎಂಬುದೇ ಯಕ್ಷಪ್ರಶ್ನೆ..? ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿನ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ 11ಗಂಟೆ 21 ನಿಮಿಷಕ್ಕೆ ಇಂತಹದೊಂದು ಘಟನೆ ನಡೆದಿದೆ. ವಸತಿ ನಿಲಯದ ವಾರ್ಡನ್ ಶೃತಿ.ಜಿ ತಮ್ಮ ಕರ್ತವ್ಯ ಮುಗಿಸಿ 6ಗಂಟೆಗೆ ಮನೆಗೆ ಹೋದ ನಂತರ ಕಾವಲುಗಾರ ಇರುವ ವೇಳೆ ಲೋಪ ಉಂಟಾಗಿದೆ. ಖಾಸಗಿ ವ್ಯಕ್ತಿ ಚಿತ್ರಿಕರಣ ಮಾಡಿರುವ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಿದ್ಯಾರ್ಥಿನಿಗಾಗಿ ರಾತ್ರಿಯಿಡಿ ಹುಡುಕಾಟ.. ವಿದ್ಯಾರ್ಥಿ ನಿಲಯದಿಂದ ಎಸ್ಕೇಪ್ ಆದ ಕೇಲವೇ ಕ್ಷಣದಲ್ಲಿಯೇ…

Read More

ಬೆಂಗಳೂರು: ಕೊಡವ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು  ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡವ ರಾಷ್ಟ್ರೀಯ ಮಂಡಳಿಯ ನಿಯೋಗವು ಇಂದು  ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಕೊಡಗರು  ಎಂದು ನಮೂದಾಗಿರುವ ಕೊಡವ ಸಮುದಾಯದ ಹೆಸರನ್ನು ಕೊಡವ ಎಂದು ತಿದ್ದುಪಡಿ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲು ಕೂಡ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೊಡವ ರಾಷ್ಟ್ರೀಯ ಮಂಡಳಿ  ಎನ್.ಯು ನಾಚಪ್ಪ ಅವರ ನೇತೃತ್ವದ 30 ಜನರ ನಿಯೋಗ ಹಾಗೂ  ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ, ಕೆ.ಟಿ.ಪೆಮ್ಮಯ್ಯ,  ಉಪಾಧ್ಯಕ್ಷರಾದ  ಕರ್ನಲ್ ವಿವೇಕ್ ಮುತ್ತಣ್ಣ, ಮತ್ತಿತರರು  ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಶಾಲೆಯೊಂದರ ಗೋಡೆಗಳ ಮೇಲೆ ಹುಡುಗಿಯರ ಬಗ್ಗೆ ಅಶ್ಲೀಲವಾದ ಬರಹಗಳನ್ನು ಬರೆದಿರುವ ಬಗ್ಗೆ ಶನಿವಾರ ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಅವಾಚ್ಯ ಶಬ್ದಗಳು ಬರೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಗಂಗಾವತಿ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಕೊಪ್ಪಳ ಎಸ್ಪಿ ಯಶೋದಾ ವಂಟಗೋಡಿ ಅವರು ತಿಳಿಸಿದ್ದಾರೆ. ಕೃತ್ಯದಲ್ಲಿ ಇಬ್ಬರು ಬಾಲಕರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು, ಸುಮಾರು 15 ಬಾಲಕರನ್ನು ಈ ಬಗ್ಗೆ ಪ್ರತ್ಯೇಕವಾಗಿ  ವಿಚಾರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಾಲಾ  ಆವರಣದಲ್ಲಿ ಸಿಸಿ ಟಿವಿ ಅಳವಡಿಸಲು ನಿರ್ದೇಶನ ಮಾಡಲಾಗಿದೆ. ಇನ್ನೂ ಘಟನೆಯಲ್ಲಿ ಹೊರಗಿನವರ ಕೈವಾಡವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಈ ಘಟನೆ ಇದು ಮೊದಲಲ್ಲ ಹಿಂದೆಯೂ ನಡೆದಿದೆ. ವಿಶೇಷವಾಗಿ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಅಶ್ಲೀಲ ಬರಹ ಬರೆದಿದ್ದಾರೆ. ಇದರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು…

Read More