Subscribe to Updates
Get the latest creative news from FooBar about art, design and business.
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
- ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
- ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
Author: admin
ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಯುವಕನೊಬ್ಬಈಜಲು ಹೋಗಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಲಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆಯ ಭದ್ರಾ ನದಿಯಲ್ಲಿ ಮಂಗಳವಾರ ವದಿಯಾಗಿದೆ. ಮೃತ ಯುವಕನನ್ನು ಬೆಂಗಳೂರಿನ ಶ್ರೀನಗರದ ನಿವಾಸಿ ಗೋಕುಲ್(25) ಎಂದು ಗುರುತಿಸಲಾಗಿದ್ದು, ಕಳಸ ಪೊಲೀಸರು, ಮುಳುಗು ತಜ್ಞರ ಸಹಾಯದಿಂದ ಯುವಕನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ ಮತ್ತು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ಜೈಲರ್ ಸಿನಿಮಾ ನಟ ವಿನಾಯಗನ್ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಕೊಚ್ಚಿ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಜೈಲರ್ ನಟ ವಿನಾಯಗನ್ ಬಂಧನ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅ.24ರಂದು ನಟನನ್ನು ಬಂಧಿಸಲಾಗಿದೆ. ನಟ ವಿನಾಯಗನ್ ತನ್ನ ಅಪಾರ್ಟೆಂಟ್ ನಲ್ಲಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ಹಾಗಾಗಿ ವಿನಾಯಗನ್ ಅವರನ್ನು ಬಂಧಿಸಲಾಗಿದೆ ಎಂದು ಕೇರಳದ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಏರ್ ಇಂಡಿಯಾ ಬೆಂಗಳೂರು ಮತ್ತು ಸಿಂಗಾಪುರ ನಡುವೆ ತಡೆರಹಿತ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಹೊಸ ಸೇವೆಯು ಬೆಂಗಳೂರು ಹಾಗೂ ಸಿಂಗಾಪುರ ನಡುವೆ ನೇರ ಸಂಪರ್ಕ ಹೊಂದಿದೆ. ಏ ಇಂಡಿಯಾದ AI392 ವಿಮಾನವು ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹಾರಾಟ ಆರಂಭಿಸಲಿದೆ. ಮರುದಿನ ಬೆಳಗ್ಗೆ 5.30ಕ್ಕೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ರಿಟರ್ನ್ ಫೈಟ್ AI393 ವಿಮಾನ ಸಿಂಗಾಪುರದಿಂದ ಬೆಳಿಗ್ಗೆ 6.40 ಕ್ಕೆ ಹೊರಟು ರಾತ್ರಿ 8.35 ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ.
ಭಾರತೀಯ ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ 150 ಯುವಕರಿಗೆ ಒಂದು ಕೋಟಿ ರೂ. ವಂಚಿಸಿರುವ ಅತಿದೊಡ್ಡ ಹಗರಣವನ್ನು ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ಜಂಟಿಯಾಗಿ ಬಯಲಿಗೆಳಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಜ್ ವಟಗಲ್ ಮತ್ತು ಆತನ ಪತ್ನಿ ಭೀಮವ್ವ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬಂಧಿತರಿಂದ ನಕಲಿ ಗುರುತಿನ ಚೀಟಿಗಳು ಮತ್ತು ಸೇನಾ ನೇಮಕಾತಿಗೆ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾಜಿ ಸಚಿವ ಹೆಚ್. ಡಿ ರೇವಣ್ಣ ಆಪ್ತ ಅಶ್ವಥ್ ನಾರಾಯಣ್ ಗೌಡನ ಅಪಹರಣ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇನ್ಸ್ ಪೆಕ್ಟರ್ ಅಶೋಕ್, ಭೂಗತ ಪಾತಕಿ ಬಾಂಬೆ ರವಿ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಹಫ್ತಾ ವಸೂಲಿ, ಬಡ್ಡಿ ವ್ಯವಹಾರ, ಬೆದರಿಕೆ ಹಾಕಿರುವ ಆರೋಪ ಕೂಡ ಇನ್ಸ್ ಪೆಕ್ಟರ್ ಅಶೋಕ್ ವಿರುದ್ಧ ಕೇಳಿ ಬಂದಿದೆ. ರೇವಣ್ಣ ಆಪ್ತನ ಅಪಹರಣ ಯತ್ನ ಪ್ರಕರಣದಲ್ಲಿ ಲೊಕೇಷನ್ ಸೇರಿದಂತೆ ಪ್ರತಿ ವಿಚಾರದಲ್ಲೂ ಆರೋಪಿಗಳಿಗೆ ಇನ್ಸ್ ಪೆಕ್ಟರ್ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು 8 ವಿದೇಶಿಗರು ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ಕಾಡುಗೋಡಿ, ಕೆ. ಆರ್. ಪುರ, ಸೋಲದೇವನಹಳ್ಳಿ, ಎಚ್ ಎಸ್ ಆರ್ ಲೇಔಟ್, ವೈಟ್ ಫೀಲ್ಡ್, ಬಾಣಸವಾಡಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ 10 ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.
ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಬಿದನಗೆರೆ ಶನೇಶ್ವರ ಸ್ವಾಮಿ ಅರ್ಚಕ ಧನಂಜಯ ಗುರೂಜಿ ಬಿದನಗೆರೆ ಕೊರಳಿನಲ್ಲಿ ಹುಲಿಯ ಉಗುರು ಧರಿಸಿರುವ ಬಗ್ಗೆ ಪರಿಶೀಲನೆ ನಡೆಸಿ ವನ್ಯಜೀವಿ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಜೆಟ್ಟಿ ಅಗ್ರಹಾರ ನಾಗರಾಜು ಒತ್ತಾಯಿಸಿದ್ದಾರೆ. ರಾಜ್ಯದ್ಯಂತ ಹುಲಿ ಉಗಿರಿನ ಬಗ್ಗೆ ಚರ್ಚೆ ಆಗುತ್ತಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಬ್ಬ ಆರೋಪಿಯನ್ನ ಬಂಧಿಸಿ ರಾಜ್ಯದ ಅರಣ್ಯ ಅಧಿಕಾರಿಗಳು ಸಾರ್ವಜನಿಕರ ಮನೆಗೆದ್ದು ಉತ್ತಮ ಸೇವೆ ಮಾಡಿದ್ದಾರೆ. ಇದು ಸಂತಸ ವಿಷಯವಾಗಿದೆ. ಹಾಗೆಯೇ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಬಿದನಗೆರೆ ಶನೇಶ್ವರ ಸ್ವಾಮಿ ಅರ್ಚಕ ಧನಂಜಯ ಗುರೂಜಿ ಬಿದನಗೆರೆ ಕೊರಳಿನಲ್ಲಿ ಕೂಡ ಹುಲಿ ಉಗುರನ್ನು ಧರಿಸಿದ್ದು, ಅವರ ಕೊರಳಿನಲ್ಲಿ ಹಾಕಿರುವ ಚಿನ್ನಾಭರಣಗಳ ಜೊತೆ ಸಾರ್ವಜನಿಕರ ಮುಂದೆ ತೋರ್ಪಡಿಸಿರುತ್ತಾರೆ ಅದು ಅಸಲಿಯೋ ? ನಕಲಿಯೋ ? ಪರಿಶೀಲಿಸಿ ವನ್ಯಜೀವಿ ಕಾಯ್ದೆ ಇಡಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು…
ತುಮಕೂರು: ಎಲ್ಲಿ ನೋಡಿದರಲ್ಲಿ ಬೂದು ಕುಂಬಳಕಾಯಿ ರಾಶಿಗಳು. ಫುಟ್ಪಾತ್ ಗಳಲ್ಲಿ, ರಸ್ತೆಗಳಲ್ಲಿ ಗ್ರಂಥಾಲಯದ ಮುಂಭಾಗದಲ್ಲಿ, ಸಾರ್ವಜನಿಕ ಶೌಚಾಲಯಗಳ ಮುಂಭಾಗದಲ್ಲಿ ರಾಶಿ ರಾಶಿ ಬೂದುಗುಂಬಳಗಾಯಿ ಅಚ್ಚರಿ ಸೃಷ್ಟಿಸಿತು. ರಸ್ತೆ ಬದಿಯಲ್ಲಿ ರಾಶಿರಾಶಿಯಾಗಿ ಬೂದುಗುಂಬಳಕಾಯಿ ಯಾಕೆ ಸುರಿಯಲಾಗಿದೆ ಎನ್ನುವುದು ಗೊತ್ತಿಲ್ಲ, ಸಾರ್ವಜನಿಕರಂತೂ ಈ ದೃಶ್ಯ ಕಂಡು ಅಚ್ಚರಿಗೊಳಗಾಗಿದ್ದಾರೆ. ತುಮಕೂರು ನಗರದ ಹೃದಯ ಭಾಗವಾದ ಸಿರಾ ಗೇಟ್ ಬಳಿ ಮತ್ತು ಸಾರ್ವಜನಿಕ ಗ್ರಂಥಾಲಯ ಹಾಗೂ ಸಾರ್ವಜನಿಕ ಶೌಚಾಲಯದ ಬಳಿ ಹೀಗೆ ಬೂದು ಕುಂಬಳಕಾಯಿ ಬಿದ್ದಿರುವುದು ಕಂಡು ಬಂತು. ಸಿರಾ ಗೇಟ್ ನಿಂದ ತುಮಕೂರು ಮಾರುಕಟ್ಟೆ ವರೆಗೂ ಇದೇ ರೀತಿ ರಸ್ತೆಗೆ ಮತ್ತು ಚರಂಡಿಗೆ ಬೂದುಗುಂಬಳಕಾಯಿ ಸುರಿಯಲಾಗಿದೆ. ಹಬ್ಬದ ಪ್ರಯುಕ್ತ ರಾಶಿ ರಾಶಿ ಬೂದುಗುಂಬಳಕಾಯಿ ತರಲಾಗಿದ್ದು, ಆದ್ರೆ ವ್ಯಾಪಾರವಿಲ್ಲದೇ ಇಲ್ಲಿಯೇ ಸುರಿದು ಹೋಗಿರುವ ಶಂಕೆ ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ಸುರಿಯಲಾಗಿರುವ ಬೂದುಗುಂಬಳಕಾಯಿ ಕೊಳೆತರೆ ನಗರದ ಸ್ಥಿತಿ ಏನಾಗಬಹುದು ಎನ್ನುವ ಮಾತುಗಳು ಕೂಡ ಕೇಳಿ ಬಂದವು. ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಶಿರಾಶಿ ಬೂದುಗುಂಬಳಕಾಯಿ ಸುರಿಯಲಾಗಿದ್ದರೂ, ಅದನ್ನು…
ಹಣಕಾಸಿನ ವಿಚಾರವಾಗಿ ಅಪಹರಿಸಿದ್ದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಭಿಲಾಷ್ ಎಂಬುವರನ್ನು ಬೆಂಗಳೂರಿನಿಂದ ಅಪಹರಿಸಿ ರಾಮನಗರ ಗೋಡೌನ್ ನಲ್ಲಿ ಇರಿಸಿದ್ದರು. ಅಪಹರಣಕಾರರು ಊಟಕ್ಕೆ ತೆರಳಿದ್ದಾಗ ಪೊಲೀಸರಿಗೆ ಅಭಿಷೇಕ್ ಕರೆ ಮಾಡಿ ಕಿಡ್ನಾಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ ಅಭಿಷೇಕ್ ನನ್ನು ರಕ್ಷಿಸಿ, ನಾಲ್ವರನ್ನು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಪ್ರಕರಣದ ತನಿಖೆ ವರ್ಗಾವಣೆ ಮಾಡಲಾಗಿದೆ.
ಹೋಟೆಲ್ ಬಗ್ಗೆ ಆನ್ ಲೈನ್ ನಲ್ಲಿ ಒಳ್ಳೆಯ ಅನಿಸಿಕೆ(ರಿವ್ಯೂ) ಬರೆದರೆ ಹಣ ನೀಡುವುದಾಗಿ ಹೇಳಿ ವಂಚಿಸಲಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ‘ಸ್ಥಳೀಯ ನಿವಾಸಿಯೊಬ್ಬರು ವಂಚನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ದೂರುದಾರರಿಗೆ ಆನ್ ಲೈನ್ ಮೂಲಕ ಆರೋಪಿ ಪರಿಚಯವಾಗಿತ್ತು. ‘ಹೋಟೆಲ್ ಬಗ್ಗೆ ಆನ್ ಲೈನ್‌ನಲ್ಲಿ ಒಳ್ಳೆಯ ರೀತಿಯಲ್ಲಿ ಅನಿಸಿಕೆ ಬರೆದರೆ ಹಣ ನೀಡಲಾಗುವುದು’ ಎಂದಿದ್ದ.