Author: admin

ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ಕೊರಟಗೆರೆ:- ಕಲ್ಲುಕ್ವಾರೆ ನಡೆಸಲು 3ವರ್ಷದಿಂದ ಪಟ್ಟುಹಿಡಿದ ಕಾದುಕುಳಿತ ಗಣಿಮಾಲೀಕ.. ಕಲ್ಲು ಗಣಿಗಾರಿಕೆ ನಡೆಸಲು ರಸ್ತೆ ಗುರುತಿಸಲು ಬಂದ ಮಧುಗಿರಿ ಎಸಿ.. ಗಣಿಗಾರಿಕೆ ಪ್ರಾರಂಭ ಮಾಡದಂತೆ ಒತ್ತಾಯ ಮಾಡಿದ ಸ್ಥಳೀಯ ರೈತಾಪಿವರ್ಗ.. ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶ ಮತ್ತು ನಾಮದ ಚಿಲುಮೆ ಪ್ರವಾಸಿ ಕ್ಷೇತ್ರ ಉಳಿವಿಗೆ ಸ್ಥಳೀಯರ ಆಗ್ರಹ. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ತಂಗನಹಳ್ಳಿ ಸರ್ವೇ ನಂ.32ರಲ್ಲಿ 6ಎಕರೇ ಮತ್ತು  ನೀಲಗೊಂಡನಹಳ್ಳಿ ಗ್ರಾಪಂಯ ಮಣ್ಣೂರು ತಿಮ್ಮನಹಳ್ಳಿ ಸರ್ವೆ ನಂ.4ರಲ್ಲಿ 40ಎಕರೇ ಸರಕಾರಿ ಗೋಮಾಳದ ಜಮೀನು ಬೆಂಗಳೂರು-ಬಳ್ಳಾರಿ ಮೂಲದ ಖಾಸಗಿ ವ್ಯಕ್ತಿಗೆ 25ವರ್ಷದ ಅವಧಿಗೆ 3ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿದೆ. ಮಣ್ಣೋರು ತಿಮ್ಮನಹಳ್ಳಿ ಕರಡಿಗುಟ್ಟೆ ಮತ್ತು ತಂಗನಹಳ್ಳಿಯ ವಡ್ಡರಹಳ್ಳಿ ಕಲ್ಲುಗುಟ್ಟೆಯ ಸರಿಸುಮಾರು 50ಎಕರೇ ಗೋಮಾಳದ ಕಬಳಿಸಲು ಹುನ್ನಾರವೇ ನಡೆದಿದೆ. ಸ್ಥಳೀಯ ರೈತಾಪಿವರ್ಗ, ಪರಿಸರ ಪ್ರೇಮಿಗಳು, ಶ್ರೀಮಠದ ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳು ಎಷ್ಟೇ ಹೋರಾಟ ನಡೆಸಿದ್ರು ತೆರೆಮರೆಯಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಸ್ಥಳೀಯ ಕಂದಾಯ…

Read More

ಮಧುಗಿರಿ: ಪಟ್ಟಣದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಎನ್ ಹನುಮಂತರಾಯಪ್ಪ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಸ್ಥಿರ ಠೇವಣಿ ಮಾಡಿದ ಖಾತೆ ಪುಸ್ತಕವನ್ನು ಪೋಷಕರ ಸಮೂಹದಲ್ಲಿ ವಿದ್ಯಾರ್ಥಿನಿಯರಿಗೆ ವಿತರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಈ ಶಾಲೆಯ ಶಿಕ್ಷಕಿ ಶೋಭಾ ಎಂ.ಎಲ್. ಕಾಳಜಿ, ನೇತೃತ್ವದಲ್ಲಿ ಶಾಲಾ ಶಿಕ್ಷಕರ ಹಾಗೂ ದಾನಿಗಳ ಸಹಕಾರದಿಂದ ಶಾಲೆಯ ಇಬ್ಬರು ಬಡ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಉಳಿತಾಯ ಯೋಜನೆ ಅಡಿಯಲ್ಲಿ ತಲಾ 15 ಸಾವಿರ ಸ್ಥಿರ ಠೇವಣಿ ಮಾಡಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಿರುವುದು ತುಂಬಾನೇ ಒಳ್ಳೆಯ ವಿಚಾರ ಇಂತಹ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಹಕಾರ ಎಂದಿಗೂ ಸಹ ಇರುತ್ತದೆ ಎಂದು ತಿಳಿಸಿದರು. ನಾವು ಬದುಕಿರುವಾಗಲೇ ಸಾರ್ಥಕವಾಗುವ ರೀತಿಯಲ್ಲಿ ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು ಸಮಾಜಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ದಾನ ಮಾಡುವುದು ತುಂಬಾನೇ ಶ್ರೇಷ್ಠ, ಅಂದು ಸಿದ್ದಗಂಗೆಯ ಡಾ.ಶ್ರೀ ಶಿವಕುಮಾರ್ ಸ್ವಾಮಿಯವರು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ್ದರಿಂದ ಆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಗಳಿಸಿ…

Read More

ಶಿವಮೊಗ್ಗ: ಜೈನ ಮುನಿ ಹತ್ಯೆಯನ್ನು ಕೇವಲ ಒಬ್ಬರು, ಇಬ್ಬರು ಮಾಡಿರಲು ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ದೇಶದ ನಾಗರೀಕರ ಅಭಿಪ್ರಾಯವಾಗಿದೆ. ರಾಜ್ಯದ ಪೊಲೀಸರ ಬಗ್ಗೆ ಗೌರವ ಇದೆ. ಪೊಲೀಸ್ ತನಿಖೆ ಒಂದು ಕಡೆ ನಡೆಯಲಿ. ಅದರಂತೆ ಸಿಬಿಐ ತನಿಖೆ ಸಹ ನಡೆಯಲಿ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಪ್ರೇಮ್ ಸಿಂಗ್‍ಗೆ ಚಾಕು ಇರಿತ ಪ್ರಕರಣ ನಡೆದಾಗ ಪೊಲೀಸ್ ತನಿಖೆ ನಡೆಯುವಾಗಲೇ ಎನ್‍ಐಎ ತನಿಖೆಗೆ ವಹಿಸಲಾಗಿತ್ತು. ಎನ್‍ಐಎ ತನಿಖೆ ನಂತರ ದೇಶದಲ್ಲಿ ದುಷ್ಕøತ್ಯ ನಡೆಸುವ ಸಂಘಟನೆಗಳ ಹುನ್ನಾರ ಬಹಿರಂಗವಾಗಿತ್ತು. ಈ ಎರಡೂ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸಲಾಗುತ್ತಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ವಿಧಾನಸಭೆಯ ಕಲಾಪದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಗಮನ ಸೆಳೆಯುವ ಸೂಚನೆ ಅಡಿಯಲ್ಲಿ, ಆರ್. ಆರ್. ನಗರ ಅಧಿಕಾರಿಗಳ ಅಮಾನತ್ತು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸದನದಲ್ಲಿ ಮಾತನ್ನಾಡಿದ ಅವರು ಡಿಸಿಎಂ ಸದನದಲ್ಲಿ ಖುದ್ದಾಗಿ ಹಾಜರಿದ್ದಿದ್ರೆ ಉತ್ತಮವಾಗಿತ್ತು. ಆರ್. ಆರ್ ನಗರದಲ್ಲಿ ಅಧಿಕಾರಿಗಳ ಅಮಾನತು ಕಾರ್ಯ ಪ್ರಾರಂಭವಾಗಿದೆ. ಸುಮಾರು ೧೧೮ ಕೋಟಿ ಹಗರಣ ಅಂತ ಅಧಿಕಾರಿಗಳ ಅಮಾನತು ಮಾಡಿದ್ದಾರೆ. ಒಂದು ಕ್ಷೇತ್ರದಲ್ಲಿ ೧೧೮ ಕೋಟಿ ಹಗರಣ ಅಂದ್ರೆ ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ೩ ಸಾವಿರ ಕೋಟಿ ಹಗರಣ ಅಂತಾಯ್ತು. ಎಲ್ಲ ಕ್ಷೇತ್ರ ಬಿಟ್ಟು ಒಂದೇ ಕ್ಷೇತ್ರದ ಮೇಲೆ ಯಾಕೆ ದ್ವೇಷ? ರಾಜಕಾರಣಿಗಳು ಶಾಮೀಲಾಗಿದ್ದಾರೆ ಅಂತ ಉತ್ತರದಲ್ಲಿ ಹೇಳುತ್ತಾರೆ. ಯಾರು ರಾಜಕಾರಣಿಗಳು ಅಂತ ಉತ್ತರ ಕೊಡಬೇಕಲ್ಲವಾ? ಇದು ಬೆಂಗಳೂರು ನಗರಕ್ಕೆ ಸಂಬಂಧಿಸಿದ್ದು. ದಯವಿಟ್ಟು ನನಗೆ ಡಿಸಿಎಂ ಇರುವ ಸಂದರ್ಭದಲ್ಲಿ ಅರ್ಧ ಗಂಟೆಗೆ ಚರ್ಚೆಗೆ ಅವಕಾಶ ನೀಡಿ. ಇದು ಬಹಳ ಗಂಭೀರವಾದ ಪ್ರಶ್ನೆ. ಒಬ್ಬರು ಇಬ್ಬರು ಅಮಾನತು ಆದ್ರೆ ಓಕೆ, ಮೂವತ್ತು ದಿನಗಳಲ್ಲಿ…

Read More

ಸಂಚಾರ ಪೊಲೀಸರು ಒನ್ ವೇ ಸಂಚಾರ, ನೋ ಪಾರ್ಕಿಂಗ್, ಫುಟ್ ಪಾತ್ರಗಳಲ್ಲಿ ಪಾರ್ಕಿಂಗ್ ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ದ ಸವಾರರ ವಿರುದ್ಧ ಕಳೆದ ಆರು ತಿಂಗಳಲ್ಲಿ 5, 280 ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಲು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡಿರುವ ಸಂಚಾರ ಪೊಲೀಸರು, ಆತ್ಯಾಧುನಿಕ ಕ್ಯಾಮರಾಗಳ ಮೂಲಕ ಸಂಪರ್ಕರಹಿತವಾಗಿ ಉಲ್ಲಂಘನಾ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ನಗರದಲ್ಲಿ ನೋ ಎಂಟ್ರಿಯಲ್ಲಿ ವಾಹನ ಸಂಚಾರ, ನೋ ಪಾರ್ಕಿಂಗ್ ಹಾಗೂ ಫುಟ್ ಪಾತ್‌ ನಲ್ಲಿ ವಾಹನ ಸಂಚಾರದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗಿವೆ. ಕಳೆದ ಆರು ತಿಂಗಳಲ್ಲಿ ಸಂಭವಿಸಿದ 2, 354 ಅಪಘಾತಗಳಲ್ಲಿ 414 ಮಂದಿ ಬಲಿಯಾಗಿದ್ದಾರೆ. 2096 ವಾಹನ ಸವಾರರು ಗಾಯಗೊಂಡಿದ್ದಾರೆ. ಪ್ರತಿ ತಿಂಗಳು ಸರಾಸರಿ 70 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ. ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿಸಿಕೊಂಡರೂ ಎಚ್ಚೆತ್ತುಕೊಳ್ಳದ ಸವಾರರ ವಿರುದ್ಧ ಕ್ರಿಮಿನಲ್…

Read More

ಬಿಬಿಎಂಪಿ ಹಿರಿಯ ಆರೋಗ್ಯ ಪರಿವೀಕ್ಷದ ಶಿವಲಿಂಗಯ್ಯ ಹಾಗೂ ಮಾರುತಿ ಪೀಸೆಟ್ ಅವರನ್ನು ಬೆಂಗಳೂರು ದಕ್ಷಿಣ ವಲಯದಿಂದ ರಾಜರಾಜೇಶ್ವರಿನಗರ ವಲಯಕ್ಕೆ ವರ್ಗಾಯಿಸಲಾಗಿದೆ. ಬೊಮ್ಮನಹಳ್ಳಿಯ ಯಲಚೇನಹಳ್ಳಿ ವಾರ್ಡ್ ನ ಕರೀಗೌಡ, ಪಶ್ಚಿಮ ವಲಯದ ವಿಶ್ವನಾಥ್ ಅವರುಗಳನ್ನು ರಾಜರಾಜೇಶ್ವರಿನಗರ ವಲಯಕ್ಕೆ ವರ್ಗಾವಣೆ ಮಾಡಿದ್ದಾರೆ. ಕಂದಾಯ ಪರಿವೀಕ್ಷಕ ಹನುಮಂತರಾಯಪ್ಪ ಅವರನ್ನು ಶ್ರೀರಾಮ ಉಪವಲಯ ಕೇಂದ್ರದಿಂದ ಕೆಂಗೇರಿ ಉಪವಲಯಕ್ಕೆ, ಹಿರಿಯ ಆರೋಗ್ಯ ಪರಿವೀಕ್ಷಕ ರಮೇಶ್ ಅವರನ್ನು ಆರ್‌ ಆ‌ಗರದಿಂದ ಹೊರಭಾಗಕ್ಕೆ ಹಾಗೂ ಡಿ. ಎಲ್. ನಾರಾಯಣ ಅವರನ್ನು ಬೆಂಗಳೂರಿನಿಂದ ಬೇರೆಡೆಗೆ ವರ್ಗಾಯಿಸುವಂತೆ ಡಿಕೆಶಿ ಸೂಚಿಸಿದ್ದಾರೆ. ಆ‌ಆರ್ ನಗರದ ಹಿರಿಯ ಆರೋಗ್ಯ ಪರಿವೀಕ್ಷಕ ಮಂಜುನಾಥ ಅವರನ್ನು ಬೆಂಗಳೂರಿನಿಂದ ಬೇರೆ ಕಡೆಗೆ ಹಾಗೂ ಹೇರೋಹಳ್ಳಿ ಉಪವಲಯದ ಕಂದಾಯ ಪರಿವೀಕ್ಷಕ ಕುಮಾರ್ ಅವರನ್ನು ಖಾಲಿ ಇರುವ ಜಾಗಕ್ಕೆ ವರ್ಗಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜತೆಗೆ ನನ್ನ ಗಮನಕ್ಕೆ ತಾರದೆ ಯಾವುದೇ ಅಧಿಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡದಂತೆಯೂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್…

Read More

ಬೆಂಗಳೂರು: ಕೇಂದ್ರ ಸರ್ಕಾರ ಕೊಡುವ ಅಕ್ಕಿಯಲ್ಲೂ ಕಾಂಗ್ರೆಸ್ ಸರ್ಕಾರ 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತ ಮಾಡಲಾಗಿದೆ. ಕಾಂಗ್ರೆಸ್ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ದೋಖಾ ಮಾಡಿದೆ. ಇದು ಅನ್ನಭಾಗ್ಯ ಯೋಜನೆಯಲ್ಲ, ಕನ್ನ ಭಾಗ್ಯ ಎಂದು ವ್ಯಂಗ್ಯ ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರು ವರ್ಗಾವಣೆ ವಿಚಾರವಾಗಿ ರೇಟ್ ಫಿಕ್ಸ್ ದಾಖಲೆ ಕೊಟ್ಟಿದ್ದಾರೆ. ಅದಕ್ಕೂ ಮುಂಚೆಯೇ ನಾನು ಈ ವಿಚಾರ ಪ್ರಸ್ತಾಪಿಸಿದ್ದೆ. ಎಲ್.ಹೆಚ್, ವಿಧಾನಸೌಧ, ಕೆಕೆ ಗೆಸ್ಟ್ ಹೌಸ್‍ನಲ್ಲಿ ಜನರ ದಂಡು ಸೇರುತ್ತಿದೆ ಎಂದಿದ್ದೆ.ಈಗ ಅವರು ಒಂದು ಇಲಾಖೆಯ ದರ ಪಟ್ಟಿಯನ್ನೇ ಕೊಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಜು.26, 27ರವರೆಗೆ ಅರ್ಜಿ ಸಲ್ಲಿಸಬಹುದು. ಜುಲೈ ತಿಂಗಳ ಬಿಲ್ ಮುಂದಿನ ತಿಂಗಳ ಮೊದಲ ವಾರ ಬರುತ್ತದೆ. ಇನ್ನೆರಡು ತಿಂಗಳಲ್ಲಿ ಕೆಇಬಿ ಕಚೇರಿಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು. ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರೆಂಟಿಗಳಲ್ಲಿ ಒಂದಾದ “ಗೃಹ ಜ್ಯೋತಿ” ಯೋಜನೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಕೆ. ಜೆ. ಜಾರ್ಜ್ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದವರಿಗಾಗಿ ಈ ಅದಾಲತ್ ಪ್ರಾರಂಭಿಸುತ್ತೇವೆ. ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದರು. ಸದನದಲ್ಲಿ ಮಾತನಾಡಿದ ಅವರು ಯಾರೆಲ್ಲಾ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂದ ಬಿಟ್ಟು ಹೋಗಿದ್ದಾರೋ ಅವರಿಗಾಗಿ ಈ ಅದಾಲತ್. ಅದಕ್ಕಾಗಿಯೇ ನಾವು ಈ ಯೋಜನೆಗೆ ಕಟ್ ಆಫ್ ಡೇಟ್ ಇನ್ನೂ ಕೊಡಲಿಲ್ಲ. ಆದಷ್ಟು ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ಇಂದು…

Read More

ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ದರೋಡೆಕೋರ ಯಾಸರ್ ರೆಹಮಾನ್ ಅಲಿಯಾಸ್ ಫೋರ್‌ನ (21) ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಸದಾಶಿವನಗರದ ಅರಮನೆ ಮೈದಾನದ ಬಳಿ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಮುಂದಾದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಮೂಲಗಳು ಹೇಳಿವೆ. ಸುಲ್ತಾನ್ ಪಾಳ್ಯದ ಭುವನೇಶ್ವರಿ ನಗರದ ನಿವಾಸಿಯಾಗಿರುವ ಆರೋಪಿ, ಸುಲಿಗೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಅಶೋಕ ನಗರ, ವೈಯಾಲಿಕಾವಲ್, ರಾಜಾಜಿನಗರ, ಮಲ್ಲೇಶ್ವರಂ, ಸದಾಶಿವನಗರ, ಯಶವಂತಪುರ ಭಾಗದಲ್ಲಿ ಈತ ಸುಲಿಗೆ ನಡೆಸುತ್ತಿದ್ದ. ಒಂಟಿಯಾಗಿ ನಡೆದು ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಮೊಬೈಲ್ ಹಾಗೂ ಹಣ ದೋಚುತ್ತಿದ್ದ. ಹೆಚ್ಚಾಗಿ ಈತ ಮುಂಜಾನೆ ವೇಳೆ ಸುಲಿಗೆಗೆ ಇಳಿಯುತ್ತಿದ್ದ. ಮುಂಜಾನೆ ಸುಲಿಗೆ ಮಾಡುತ್ತಿದ್ದರಿಂದ ಒಂದು ವಾರದಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಆದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ…

Read More

ಬೆಂಗಳೂರಿನಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಚಾತುರ್ಮಾಸ್ಯ ಯತಿ ಸಮ್ಮೇಳನ ನಡೆಸಲಾಯಿತು. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಚಾತುರ್ಮಾಸ್ಯ ಯತಿ ಸಮ್ಮೇಳನದಲ್ಲಿ ಶಾಸಕ ಕೆ ಗೋಪಾಲಯ್ಯ ಭಾಗವಹಿಸಿದರು. ಈ ವೇಳೆ ಶ್ರೀಗಳ ಆಶೀರ್ವಾದ ಪಡೆದರು. ಹರಿಹರಪುರ ಮಠದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ರವರು ಇಲ್ಲಿ 90 ದಿನಗಳ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ತುಮಕೂರು ಆಶ್ರಮದ ಪೂಜ್ಯ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ, ಓಂಕಾರ ಆಶ್ರಮದ ಪೂಜ್ಯ ಶ್ರೀ ಶಾಂತಾನಂದ ಸ್ವಾಮೀಜಿ, ಇತರೆ ಮಠಗಳ ಶ್ರೀಗಳು, ಮಾಜಿ ಶಾಸಕ ನೆ. ಲ. ನರೇಂದ್ರ ಬಾಬು, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಎಸ್. ಹರೀಶ್, ಚಾತುರ್ಮಾಸ್ಯ ಸಮಿತಿಯ ರಾಘವೇಂದ್ರ ಭಟ್, ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಎನ್. ಜಯರಾಮಣ್ಣ, ವೆಂಕಟೇಶ್ ಮೂರ್ತಿ, ಎನ್. ವೆಂಕಟೇಶ್, ನಿಸರ್ಗ…

Read More