Author: admin

ಮುಂಬೈ: ತರಬೇತಿ ವೇಳೆ ವಿಮಾನವೊಂದು ಪತನಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಪುಣೆಯ ಗೊಜುಬಾವಿ ಎಂಬಲ್ಲಿ ನಡೆದಿದೆ. ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ತರಬೇತಿಯಲ್ಲಿದ್ದ ಪೈಲಟ್ ಮತ್ತು ತರಬೇತಿ ನೀಡುತ್ತಿದ್ದ ಶಿಕ್ಷಕ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More

ಮೈಸೂರು: ಪ್ರತಿಷ್ಠಿತ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ವೈಮಾನಿಕ ಪ್ರದರ್ಶನ ಅಕ್ಟೋಬರ್‌ 23 ರಂದು ನಡೆಯಲಿದೆ. ಏರ್‌ ಶೋನಲ್ಲಿ ಲೋಹದ ಹಕ್ಕಿಗಳ ಹಾರಾಟದೊಂದಿಗೆ ಸೈನಿಕರ ನಾನಾ ಸಾಹಸಗಳನ್ನು ಜನರು ಕಣ್ತುಂಬಿಕೊಳ್ಳಬಹುದಾಗಿದೆ. ಅ.23ರಂದು ನಡೆಯುವ ಏರ್‌ ಶೋನ ರಿಹರ್ಸಲ್‌ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ. 5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಲೋಕದ ಹಕ್ಕಿಗಳ ಆರ್ಭಟ ಶುರುವಾಗುತ್ತಿದ್ದು, ಬಾನಂಗಳದಲ್ಲಿ ಭಾರತೀಯ ವಾಯುಸೇನೆ ಶಕ್ತಿ ಪ್ರದರ್ಶನ ತೋರಲಿದೆ. ಅ.23 ರಂದು (ಸೋಮವಾರ) ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್‌ ಶೋ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ .23ರಂದು ನಡೆಯುವ ಏರ್‌ ಶೋನ ರಿಹರ್ಸಲ್‌ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ. ರಿಹರ್ಸಲ್‌ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೂರುಗಂಟೆ ಒಳಗೆ ವೀಕ್ಷಣೆಗೆ ಬಂದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಸುಮಾರು 1 ಗಂಟೆಗಳ ಕಾಲ ಸಾಹಸ ಪ್ರದರ್ಶನ ನಡೆಯಲಿದೆ.

Read More

ಚೈತ್ರಾ ಕುಂದಾಪುರ ಕೋಟಿ ಡೀಲ್ ಕೇಸ್ ಬೆನ್ನಲ್ಲೇ ಮತ್ತೊಂದು ಕೋಟಿ ಡೀಲ್ ಕೇಸ್ ಬಯಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2.3 ಕೋಟಿ ವಂಚನೆ ಮಾಡಿರುವ ಆರೋಪದಡಿ ಪುತ್ತೂರು ಮೂಲದ ಬಿಜೆಪಿಯಲ್ಲಿದ್ದ ಸ್ಥಳೀಯ ಮುಖಂಡನ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿದ್ದಾರೆ. ವಿಜಯಪುರದ ರೇವಣ್ಣ ಸಿದ್ದಪ್ಪ, ಪುತ್ತೂರಿನ ಶೇಖರ್ ಎನ್.ಪಿ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Read More

ಮಧುಗಿರಿ: ಮಧುಗಿರಿ ವಲಯ ವ್ಯಾಪ್ತಿಯಲ್ಲಿ ನಕಲಿ ಮದ್ಯ/ಕಳ್ಳಭಟ್ಟಿ ಸಾರಾಯಿ/ಸೇಂದಿ/ಅಕ್ರಮ ಮದ್ಯ ಮಾರಾಟ,ಹೊಂದುವಿಕೆ, ಸರಬರಾಜು ಇಂತಹ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖಾ ಸಿಬ್ಬಂದಿಯು ನಿರಂತರವಾಗಿ ಮಾಹಿತಿ ಸಂಗ್ರಹಿಸಿ ಗಸ್ತು ಕಾರ್ಯ ನಡೆಸುತ್ತಿದ್ದು,  ಖಚಿತ ಮಾಹಿತಿ ಮೇರೆಗೆ ದಿನಾಂಕ: 22-10-2023 ರಂದು ಬೆಳಗ್ಗೆ 10.00 ಸಮಯದಲ್ಲಿ ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ನೀರಕಲ್ಲು ಗ್ರಾಮದಿಂದ ಚಿನ್ನೇನಹಳ್ಳಿ ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯಲ್ಲಿ ದಾಳಿ ನಡೆಸಲಾಯಿತು. ಆರೋಪಿತನು KA-06-EP-2998 ಟಿ.ವಿ.ಎಸ್. ಸಿವಿಟಿ ದ್ವಿಚಕ್ರ ವಾಹನದಲ್ಲಿ ಮಾರಾಟದ ಸಲುವಾಗಿ ಅಕ್ರಮವಾಗಿ ಕರ್ನಾಟಕ ರಾಜ್ಯದಲ್ಲಿ ನಿಷೇಧವಿರುವ 15 ಲೀಟರ್ ಸೇಂದಿಯನ್ನು ನೆರೆಯ ರಾಜ್ಯ ಆಂಧ್ರ ಪ್ರದೇಶದ ಯರಬೊಮ್ಮನಹಳ್ಳಿಯಿಂದ ಚಿನ್ನೇನಹಳ್ಳಿ ಗ್ರಾಮಕ್ಕೆ ಸಾಗಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು, ಆರೋಪಿಯಾದ ರಂಗನಾಥ್  ಬಿನ್ ಮಾರಣ್ಣ, 26 ವರ್ಷ,  ಚಿನ್ನೇನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ,ಮಧುಗಿರಿ ತಾಲ್ಲೂಕು ಇವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ-1965ರಸೆಕ್ಷನ್-11,12,14,13(1)(ಎ),34 ಮತ್ತು 38(ಎ)ರಡಿಯಲ್ಲಿ ನಡೆಸಿ ಮುಂದಿನ ಕ್ರಮ ಘೋರ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುವುದು.  ಜಪ್ತು ಪಡಿಸಿದ…

Read More

ತುರುವೇಕೆರೆ:  ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 ಎ ನಲ್ಲಿ ಪೊಲೀಸ್ ಠಾಣೆಯ ಎದುರಿನಲ್ಲಿರುವ ಸಿಟಿ ಎಲೆಕ್ಟ್ರಾನಿಕ್ಸ್ ಎಂಬ ಗೃಹ ಉಪಯೋಗಿ ವಸ್ತುಗಳ ಮಳಿಗೆಗೆ ಕಳ್ಳರು ನುಗ್ಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ನಗದು ಕಳವು ಮಾಡಲಾಗಿದೆ. ಸುಮಾರು ರಾತ್ರಿ 1:10 ಸಮಯದಲ್ಲಿ ಕಳ್ಳರು ಅಂಗಡಿಯ ಹಿಂಬದಿಯ ಶೀಟ್ ಮುರಿದು ಒಳಗೆ ನುಗ್ಗಿ ಸುಮಾರು ಏಳರಿಂದ ಎಂಟು ಲಕ್ಷ ರೂ.ಗಳ ಮೌಲ್ಯದ ಮೊಬೈಲ್ ಗಳು ಹಾಗೂ 12 ರಿಂದ 13 ದೊಡ್ಡ ಪರದೆಯ ಪ್ರತಿಷ್ಠಿತ ಕಂಪನಿಗಳ ಎಲ್ ಇಡಿ ಟಿವಿಗಳು ಮತ್ತು ಸುಮಾರು 12 ಸಾವಿರ ಬೆಲೆಬಾಳುವ ಎರಡು ಗ್ಲಾಸ್ ಸ್ಟೌಗಳನ್ನು ಅಂಗಡಿಯ ಕ್ಯಾಷ ಟೇಬಲ್ ನಲ್ಲಿದ್ದ 3000 ನಗದು ಮತ್ತು ಬ್ಯಾಂಕುಗಳ ಕಾರ್ಡುಗಳನ್ನು ನ ಕಳವು ಮಾಡಿದ್ದಾರೆ.. ಎಂದಿನಂತೆ ಬೆಳಗ್ಗೆ  ಕೆಲಸಗಾರರು ಅಂಗಡಿಯ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ಸ್ಥಳಕ್ಕೆ ಪಟ್ಟಣದ ಪಿಎಸ್ ಐ ಗಣೇಶ್. ಮತ್ತು ಪೊಲೀಸ್…

Read More

ತುಮಕೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ನೆನ್ನೆ ರಾತ್ರಿ ನಡೆದಿದೆ. ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಮೂಲದ ಮಾರುತಿ ಅಲಿಯಾಸ್ ಫೋಲಾರ್ಡ್ (34) ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ಮಧ್ಯರಾತ್ರಿ ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ನಾಲೈದು ಮಂದಿ ದುಷ್ಕರ್ಮಿಗಳು ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಮಾರುತಿ ತುಮಕೂರಿನ ಮಂಚಲಕುಪ್ಪೆ ಬಳಿ ಪತ್ನಿ ಜೊತೆ ವಾಸವಾಗಿದ್ದನು. ಶನಿವಾರ ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದಾಗ ರೌಡಿಶೀಟರ್ ಮಾರುತಿ ಮೇಲೆ ದುಷ್ಕರ್ಮಿಗಳಿಂದ ದಾಳಿ ಮಾಡಲಾಗಿದೆ. ಅನೇಕ ವರ್ಷಗಳ ಹಿಂದೆ ನಡೆದಿದ್ದ ರೌಡಿ ಶೀಟರ್ ಹಟ್ಟಿ ಮಂಜನ ಕೊಲೆ ಕೇಸ್ ಸೇರಿದಂತೆ ಹಲವು ಕೇಸ್‌ಗಳಲ್ಲಿ ಮಾರುತಿ ಆರೋಪಿಯಾಗಿದ್ದನು. ರೌಡಿಶೀಟರ್ ಮಂಜುನಾಥ್ ಅತ್ತೆಯ ಪ್ರತಿಕಾರ ತೀರಿಸಿಕೊಳ್ಳಲು ಆತನ ಕಡೆಯವರೇ ಮಾರುತಿ ಮೇಲೆ ಹಲ್ಲೆ ನಡೆಸಿ…

Read More

ಜೆ.ಎನ್.ಯು ನಲ್ಲಿ ಕನ್ನಡ ಅಧ್ಯಯನ ಪೀಠವನ್ನು ಮುಖ್ಯಮಂತ್ರಿಯವರ ಹಿಂದಿನ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ಅದರ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದರು ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳು ಭಿನ್ನ ಅವಧಿಗೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಅನಾನುಕೂಲವಾಗುವುದರಿಂದ, ಏಕರೂಪದ ಕ್ಯಾಲೆಂಡರ್‌ ಆಫ್‌ ಇವೆಂಟ್ಸ್‌ ಜಾರಿಗೊಳಿಸಲು ಸೂಚಿಸಿದರು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ತು ಕಾರ್ಯನಿರತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಶಿಕ್ಷಣ ಕ್ಷೇತ್ರದ ಗುಣಮಟ್ಟ ಕಾಯ್ದುಕೊಳ್ಳಲು ಬೋಧಕ ಸಿಬ್ಬಂದಿ ನೇಮಕ ಅತಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡುವಂತೆ ಹಾಗೂ ನಂತರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಆದ್ಯತೆಗಳನ್ನು ಗುರುತಿಸಿ ಕ್ರಮ ವಹಿಸುವಂತೆ ಹಣಕಾಸು ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್.ಎಂ.ಎಸ್. ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ವಿತರಿಸುವ ಬಗ್ಗೆ, ಪಿ.ಎಚ್‌.ಡಿ. ವಿದ್ಯಾರ್ಥಿಗಳಿಗೆ ಸ್ಟೈಫೆಂಡ್‌ ನೀಡುವ…

Read More

ಕಸವನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸ್ಕಾವೆಂಜಿಂಗ್ ಅನ್ನು ನಿಷೇಧಿಸಬೇಕು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವಾಗ ಉಂಟಾಗುವ ಸಾವುಗಳಿಗೆ ಪರಿಹಾರವನ್ನು 30 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. 2013ರ ಪುನರ್ವಸತಿ ಕಾಯಿದೆಯ ಅನುಷ್ಠಾನದ ಬಗ್ಗೆ ಸರ್ಕಾರಗಳು ಗಮನ ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ, ಅದು ಇನ್ನೂ ಮನುಷ್ಯರಿಂದ ಕಸವನ್ನು ನಿಷೇಧಿಸುತ್ತದೆ. ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳ ಸಾಂವಿಧಾನಿಕ ಭರವಸೆಯನ್ನು ಈಡೇರಿಸುವ ಅಗತ್ಯವನ್ನು ನ್ಯಾಯಾಲಯ ಸೂಚಿಸಿದೆ. ‘ನಮ್ಮದು ಸಂಪತ್ತು ಮತ್ತು ಅಧಿಕಾರಕ್ಕಾಗಿ ಹೋರಾಟವಲ್ಲ, ಸ್ವಾತಂತ್ರ್ಯಕ್ಕಾಗಿ, ಪ್ರತ್ಯೇಕತೆಯ ಚೇತರಿಕೆಗಾಗಿ’ ಎಂದು ಅಂಬೇಡ್ಕರ್ ಹೇಳಿರುವುದನ್ನು ನ್ಯಾಯಾಲಯದ ಆದೇಶವು ಉಲ್ಲೇಖಿಸಿದೆ. ಕೊಳಚೆ ನೀರಿನಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಶಾಶ್ವತ ಅಂಗವೈಕಲ್ಯಕ್ಕೆ 20 ಲಕ್ಷ ಪರಿಹಾರ. ಇತರ ರೀತಿಯ ದೋಷಗಳಿದ್ದಲ್ಲಿ, 10 ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದ ಪರಿಹಾರವನ್ನು ಒದಗಿಸಲಾಗುತ್ತದೆ. ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠದಿಂದ ಈ ಆದೇಶ ಹೊರಬಿದ್ದಿದೆ.

Read More

ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೊಮ್ಮಾಯಿ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯ ಅಧಿಕೃತ ಹೇಳಿಕೆ ಪ್ರಕಾರ, ಪ್ರಾಥಮಿಕ ಆರೋಗ್ಯ ತನಿಖೆಯಲ್ಲಿ ಬೊಮ್ಮಾಯಿ ಅವರ ಹೃದಯದಲ್ಲಿ ಅನೇಕ ತೊಂದರೆ ಇರುವುದು ಕಂಡುಬಂತು. ನಂತರ ಅವರನ್ನು ಅಕ್ಟೋಬರ್ 15 ರಂದು ಹೃದ್ರೋಗ ತಜ್ಞ ಡಾ. ವಿವೇಕ್ ಜವಳಿ ನೇತೃತ್ವದಲ್ಲಿ ಸಂಪೂರ್ಣ ತಪಾಸಣೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಜಿಯೋಗ್ರಾಮ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ಪರಿಧಮನಿಯಲ್ಲಿ ಸಮಸ್ಯೆ ಇರುವುದು ಪತ್ತೆಯಾಯಿತು. ಇದು ಮುಂದಿನ ದಿನಗಳಲ್ಲಿ ಸಂಭವನೀಯ ಹೃದಯಾಘಾತಕ್ಕೆ ಕಾರಣವಾಗುತ್ತಿತ್ತು. ಇದನ್ನು ಬೈಪಾಸ್ ಮಾಡಲು, ಡಾ. ಜವಳಿ ನೇತೃತ್ವದ ತಂಡವು ಸಿಎಬಿಜಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಸದ್ಯ ಬೊಮ್ಮಾಯಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ತಿಳಿಸಿದೆ.

Read More

ತಿರುವನಂತಪುರಂ: ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಪಿಣರಾಯಿ ವಿಜಯನ್ ಅವರು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂಬ ಎಚ್‌.ಡಿ.ದೇವೇಗೌಡರ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೌಡರ ಹೇಳಿಕೆ ಸಂಪೂರ್ಣ ಅಸಂಬದ್ಧ ಎಂದಿರುವ ಪಿಣರಾಯಿ, ದೇವೇಗೌಡರಂತಹ ಹಿರಿಯ ರಾಜಕಾರಣಿ ಈ ರೀತಿ ಆಧಾರ ರಹಿತ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಇಂದು ನಡೆದ ಸಿಪಿಎಂ ಸೆಕ್ರೆಟರಿಯೇಟ್ ಸಭೆಯಲ್ಲಿ ಮಾತನಾಡಿದ ಪಿಣರಾಯಿ, ಗೌಡರು ಹೇಳಿಕೊಂಡಂತೆ ನಾನು ಜೆಡಿಎಸ್- ಬಿಜೆಪಿ ಮೈತ್ರಿಗೆ ಒಪ್ಪಿಗೆ ನೀಡಿಲ್ಲ ಎಂದು ಪಿಣರಾಯಿ ವಿವರಿಸಿದರು.

Read More