Subscribe to Updates
Get the latest creative news from FooBar about art, design and business.
- ಡಿ.14ರಂದು ಬಂಜಾರ ಭವನ ಅದ್ಧೂರಿ ಉದ್ಘಾಟನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮನ
- ಮನೆಯ ಬಾಗಿಲು ಒಡೆದು ಕಳ್ಳರ ಕೈಚಳಕ: ನಗನಗದು ದೋಚಿ ಪರಾರಿ
- ಸರಗೂರು | ಶ್ರೀ ಹನುಮ ಜಯಂತ್ಯೋತ್ಸವ ಮೆರವಣಿಗೆ: ಕರಪತ್ರ ಬಿಡುಗಡೆ
- ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಗ್ರಂಥಾಲಯಗಳು ಮೂಲಾಧಾರ: ಬಿಡುಗಲು ಶಿವಣ್ಣ
- ಹುಲಿ ಕಾಣಿಸಿಕೊಂಡರೂ ಕೂಂಬಿಂಗ್ ಕಾರ್ಯಾಚರಣೆ ಇಲ್ಲ: ರೊಚ್ಚಿಗೆದ್ದ ರೈತರಿಂದ ರಸ್ತೆ ತಡೆದು ಪ್ರತಿಭಟನೆ
- ಶೀಲ ಶಂಕಿಸಿ ಪತ್ನಿ, 5 ವರ್ಷದ ಮಗನ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ, 50 ಸಾವಿರ ರೂ. ದಂಡ
- ತುಮಕೂರು | ಬೀದಿ ನಾಯಿಗಳ ಮಾಹಿತಿ ನೀಡಲು ಪಾಲಿಕೆ ಸೂಚನೆ
- ಕೃಷಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Author: admin
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ಬಿಜೆಪಿ ಸದಸ್ಯ ಅಭಯ್ ಪಾಟೀಲ್ ಸಂಬಂಧಿಸಿ ವಿಧಾನಸೌಧದಲ್ಲಿ ಪ್ರಸ್ತಾಪಿಸಿದ್ದು ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಜೈನಮುನಿಗಳ ಕೊಲೆ ಹಲವು ಸಂಶಯಗಳಿಗೆ ಕಾರಣವಾಗಿದೆ. ತನಿಖೆ ಪೂರ್ಣವಾಗದೆ ಮಾಹಿತಿ ಸೋರಿಕೆ ಆಗಿದೆ. ಪ್ರಕರಣದ ಮೊದಲನೇ ಆರೋಪಿ ಹೆಸರನ್ನು ಮಾತ್ರ ಹೇಳುತ್ತಿದ್ದಾರೆ. ಎರಡನೇ ಆರೋಪಿಯ ಹೆಸರು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತುಮಕೂರು: ನಿನ್ನ ತಂದೆ– ತಾಯಿಗೆ ಅಪಘಾತವಾಗಿದೆ ಎಂದು ಹೇಳಿ, ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಸಂಬಂಧಿಕನೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ ಪೋಕ್ಸೋ ನ್ಯಾಯಾಲವು ಅಪರಾಧಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ದಿನಾಂಕ 24/06/21ರಂದು ರಾತ್ರಿ 1 ಗಂಟೆಯ ವೇಳೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಪೊಲೀಸ್ ಠಾಣಾ ಸರಹದ್ದಿನ ಹೊಯ್ಸಳ ಕಟ್ಟೆಯಲ್ಲಿ ಇರುವ ನೊಂದ ಬಾಲಕಿಯ ಮನೆಗೆ ಬಂದ ಅಪರಾಧಿ, ಬಾಲಕಿಯ ಸಂಬಂಧಿಕ ಸಯ್ಯದ್ ಸಾದತ್ ನಿನ್ನ ತಂದೆ ತಾಯಿಗೆ ಅಪಘಾತವಾಗಿದೆ ಎಂದು ನಂಬಿಸಿ ತನ್ನ ಇನ್ನೋವಾ ಕಾರಿನಲ್ಲಿ ಬಾಲಕಿಯನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪಟ್ರೇಹಳ್ಳಿ ಗ್ರಾಮದ ಬಳಿ ಇರುವ ಫಾರೆಸ್ಟ್ ಸಮೀಪದ ಶ್ರೀ ತಂಗಮಲೈ ಮುರುಗನ್ ದೇವಸ್ಥಾನದ ಬಳಿಯ ಪ್ರವಾಸೋದ್ಯಮ ಇಲಾಖೆ ಯೋಜನೆಯಡಿಯಲ್ಲಿರುವ ತಂಗುದಾಣ ಕಟ್ಟಡದ ಮುಂಭಾಗದಲ್ಲಿ ನೊಂದ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ…
ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ರೆಡ್ಡಿಹಳ್ಳಿಯ ಸಮೀಪದ ಗೋಮುಖ ಗೋಶಾಲೆಯಲ್ಲಿ ದುರ್ಘಟನೆ ನಡೆಯುತ್ತಿದೆ. ಮಧುಗಿರಿ ಪುರುವಾರ ಹೋಬಳಿ ಸುಣ್ಣವಾಡಿ ಗ್ರಾಮದ ಸರ್ವೇ.೧೫ರ ಸರಕಾರಿ ಗೋಮಾಳದ ಜಮೀನಿನಲ್ಲಿ ದಾರಿಯಿದೆ. ಕೊರಟಗೆರೆ ತಾಲೂಕಿನ ರೆಡ್ಡಿಯಲ್ಲಿ ಗ್ರಾಮದ ಸರ್ವೇ ನಂ.೪೩/೮ರ ೧ಎಕರೇ ೩೧ಗುಂಟೆ ಜಮೀನಿನಲ್ಲಿ ಗೋಮುಖ ಗೋಶಾಲೆ ಇದೆ. ಗೋಮುಖ ಗೋಶಾಲೆಯು ೨೦೨೩ರ ಮಾ.೯ರಂದು ಪ್ರಾರಂಭ ಆಗಿದೆ. ಗೋಶಾಲೆಯಲ್ಲಿ ಪ್ರಸ್ತುತ ಒಟ್ಟು ೩೫ಎಮ್ಮೆ ಮತ್ತು ೧೪ಹಸು ಸೇರಿ ಒಟ್ಟು ೪೯ರಾಸುಗಳಿವೆ. ಪಾವಗಡ, ಮಧುಗಿರಿ, ಮಡಕಶಿರಾದ ಪೊಲೀಸ್ ಇಲಾಖೆಯಿಂದ ಚಿನ್ನಮಲ್ಲಣ್ಣಹಳ್ಳಿಯ ಸುರಭಿ ಗೋಶಾಲೆ ಮೂಲಕ ರೆಡ್ಡಿಯಲ್ಲಿಯ ಗೋಮುಖ ಗೋಶಾಲೆಗೆ ಹಸ್ತಾಂತರ ಆಗಿವೆ. ಗೋಶಾಲೆಗೆ ಪರವಾಗಿ ನೀಡಬೇಕಾದ ವೇಳೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸದ ಪರಿಣಾಮ ಸಮಸ್ಯೆಯು ದ್ವೀಗುಣವಾಗಲು ಕಾರಣವಾಗಿದೆ. ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ: ತುಮಕೂರು ಜಿಲ್ಲಾಧಿಕಾರಿ, ಪೊಲೀಸ್ ಉಪಅಧೀಕ್ಷರ ಕಚೇರಿ, ಮಧುಗಿರಿ ಕಂದಾಯ ಮತ್ತು ಕೊರಟಗೆರೆ ಪೊಲೀಸ್ ಠಾಣೆಗೆ ಜು.೧ರಂದು ಶನಿವಾರವೇ ಗೋಮುಖ ಗೋಶಾಲೆಯ ಟ್ರಸ್ಟ್…
ಭಾರತೀಯ ವಾಯುಪಡೆಯ ಸಾಫ್ಟ್ ವೇರ್ ಡೆವಲಪ್ ಮೆಂಟ್ ಇನ್‌ಸ್ಟಿಟ್ಯೂಟ್ ನ (ಎಸ್‌ಡಿಐ) ಕಮಾಂಡೆಂಟ್ ಆಗಿ ಏರ್ ವೈಸ್ ಮಾರ್ಷಲ್ ಕೆ. ಎನ್. ಸಂತೋಷ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರಿನವರೇ ಆಗಿರುವ ಸಂತೋಷ್ ಅವರು, ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿದ್ದರು. ನಂತರ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ‘ಯುದ್ಧ ನಿರ್ವಹಣೆ ಮತ್ತು ರಕ್ಷಣಾ ಅಧ್ಯಯನ’ದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಎಸ್ ಡಿಐನ ಆರಂಭಿಕ ದಿನಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಯುದ್ಧ ಮುಂಚೂಣಿ ಕೇಂದ್ರದಲ್ಲಿ ಮುಖ್ಯ ಎಂಜಿನಿಯರ್ ಆಗಿ, ವಾಯು ಸೇನಾ ಮುಖ್ಯಾಲಯದಲ್ಲಿ ಎಸ್ ಯು-30 ಯೋಜನಾ ನಿರ್ದೇಶಕರಾಗಿ, ಯುದ್ಧ ಸಂಬಂಧಿತ ನೆಟ್ ವರ್ಕ್ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮಾಸ್ಕೋದ ಭಾರತೀಯ ದೂತಾವಾಸದಲ್ಲಿ ವೈಮಾನಿಕ ಸಾಫ್ಟ್ ವೇರ್ ವಿಶೇಷ ತಜ್ಞರಾಗಿಯೂ ಕೆಲಸ ಮಾಡಿದ್ದರು ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಯಶವಂತಪುರದ ಸೀಗೇಹಳ್ಳಿ ಘನ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟಕ ಇನ್ನೂ ಕಾರ್ಯಾರಂಭ ಮಾಡದಿರುವುದನ್ನು ಗಮನಿಸಿದರು. ಇದುವರೆಗೂ ಅಧಿಕಾರಿಗಳು ಪರಿಶೀಲನೆ ಮಾಡದ ದುರ್ವಾಸನೆಯಿಂದ ಕೂಡಿದ ಘಟಕಗಳಿಗೆ ಹೋಗಿ ಪರಿಶೀಲನೆ ನಡೆಸಿ ಅಲ್ಲಿನ ದಾಖಲೆ, ಕಾರ್ಯವೈಖರಿ ಪರಿಶೀಲಿಸಿದರು. ನಂತರ ಕನ್ನಹಳ್ಳಿ ಘನ ತ್ಯಾಜ್ಯ ಸಂಸ್ಕರಣೆ, ಇಂಧನ ಉತ್ಪಾದನೆ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಮೇಲ್ವಿಚಾರಕರಿಂದ ಮಾಹಿತಿ ಪಡೆದರು. ಪ್ರವೇಶದ್ವಾರದ ರಿಜಿಸ್ಟರ್ ಪುಸ್ತಕದಲ್ಲಿ ಆಗಿರುವ ದಾಖಲೆ ಮತ್ತು ಒಳಗೆ ಬಂದಿರುವ ಕಸ ಲಾರಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಗಮನಿಸಿದರು. ಇಂಧನ ಉತ್ಪಾದನೆ ಆಗದಿರುವುದನ್ನು ಗಮನಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಮನ್ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ಮತ್ತು ಬೆಂಗಳೂರು ಪರಿಸರ ಸಂಘಟನೆ (ಇಎಬಿ) ಜಂಟಿಯಾಗಿ ‘ನಗರ ನಿರ್ವಹಣೆ ಮತ್ತು ಜಲ ಸಂರಕ್ಷಣೆ’ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ರಾಷ್ಟ್ರೀಯ ದೂರಸಂವೇದಿ ಕೇಂದ್ರದ ನಿರ್ದೇಶಕ ಡಾ. ಪ್ರಕಾಶ್ ಚೌಹಾಣ್ ಮಾತನಾಡಿ, ಇಲ್ಲಿನ ರಾಮನ್ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ಮತ್ತು ಬೆಂಗಳೂರು ಪರಿಸರ ಸಂಘಟನೆ (ಇಎಬಿ) ಶನಿವಾರ ಜಂಟಿಯಾಗಿ ‘ನಗರ ನಿರ್ವಹಣೆ ಮತ್ತು ಜಲ ಸಂರಕ್ಷಣೆ’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲೂ ತಾಪಮಾನ ಹೆಚ್ಚುತ್ತಿದೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ತಾಪಮಾನವೂ ಸರಾಸರಿ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ’ ಎಂದು ವಿವರಿಸಿದರು. ‘ಬೆಂಗಳೂರು ಸೇರಿದಂತೆ ಎಲ್ಲ ಪ್ರಮುಖ ನಗರಗಳು ಹಲವು ರೀತಿಯ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಗರಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆಯೂ ನಿರಂತವಾಗಿ ಹೆಚ್ಚುತ್ತಿದೆ. ಸಂಪನ್ಮೂಲಗಳಿಗಾಗಿ ಮತ್ತಷ್ಟು ಒತ್ತಡ ಹೆಚ್ಚಲಿದೆ’ ಎಂದರು. ಆರ್‌ಆರ್‌ಐ ನಿರ್ದೇಶಕ ಪ್ರೊ. ತರುಣ್ ಸೌರದೀಪ್, ‘ಪರಿಸರ ಸಮಸ್ಯೆಗಳನ್ನು ನಿವಾರಿಸುವುದು ಅತಿ ದೊಡ್ಡ ಸವಾಲು’…
ಜನಮನ ಪ್ರತಿಷ್ಠಾನ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ‘ಪ್ರಬುದ್ಧ ಕರ್ನಾಟಕ: ಜನಮನ ಸಮಾವೇಶ ಇಂದಿಲ್ಲಿ ಜರುಗಿತು. ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಸಾಹಿತ್ಯ ಕಲೆಗಳಿಗೆ ಉತ್ತೇಜನ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆ’ ಕುರಿತು ವಿಷಯ ಮಂಡಿಸಿದರು. ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವೆಂದು ಕರೆದರು. ಆದರೆ, ಮತೀಯ ಶಕ್ತಿಗಳು ಅದನ್ನು ಒಪ್ಪದೇ ತಮ್ಮ ರಾಜಕೀಯ ಕಾರಣಕ್ಕಾಗಿ ರಾಜ್ಯದಲ್ಲಿ ಶಾಂತಿ ಕದಡುತ್ತಿವೆ. ಅಲ್ಲದೇ ಸೌಹಾರ್ದ ವಾತಾವರಣವನ್ನೇ ನಾಶ ಮಾಡಲು ಹೊರಟಿವೆ’ ಎಂದು ಆಪಾದಿಸಿದರು. ಶಿಕ್ಷಣ ತಜ್ಞ ಪ್ರೊ. ವಿ. ಪಿ. ನಿರಂಜನಾರಾಧ್ಯ ಅವರು ‘ಪ್ರಾಥಮಿಕ ಶಿಕ್ಷಣವನ್ನು ಮಕ್ಕಳ ಜ್ಞಾನ ವಿಕಸನ ನೆಲೆಯಲ್ಲಿ ಪರಿಣಾಮಕಾರಿ ಮಾರ್ಗೋಪಾಯಗಳು’ ಕುರಿತು ಮಾತನಾಡಿ, ‘ಎಲ್ಲರಿಗೂ ಶಿಕ್ಷಣದ ಹಕ್ಕು ಪರಿಣಾಮಕಾರಿ ಹಾಗೂ ಪ್ರಾಮಾಣಿಕವಾಗಿ ಜಾರಿಗೊಳ್ಳಬೇಕಿದೆ’ ಎಂದರು. ಸಾಹಿತಿ ಜಿ. ರಾಮಕೃಷ್ಣ ಮಾತನಾಡಿ, ‘ಸಮಾವೇಶದಲ್ಲಿ ಮಂಡನೆಯಾದ ವಿಷಯಗಳ ಸಂಕ್ಷಿಪ್ತ ಸಾರವನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಹುಡುಕುವ ಭರವಸೆ ಇದೆ’…
ನಂಜಪ್ಪ ವೃತ್ತದಲ್ಲಿರುವ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಹಾಕಿದ್ದ ಮುಕುಟವನ್ನು ಕಳ್ಳತನ ಮಾಡಿದ್ದ ಆರೋಪದಡಿ ರವಿ ನಾಯ್ಡು (70) ಅವರನ್ನು ವಿ. ವಿ. ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಸ್ಥಳೀಯ ನಿವಾಸಿ ರವಿ ನಾಯ್ಡು, ಜೂನ್ 28ರಂದು ರಾತ್ರಿ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದ. ದೇವಸ್ಥಾನ ಹಾಗೂ ಸುತ್ತಮುತ್ತಲಿನ 280 ಸಿ. ಸಿ. ಟಿ. ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಸುಳಿವು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು. ‘ಸಾಮಾಜಿಕ ಕಳಕಳಿ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರವಿ ನಾಯ್ಡು, ದೇಶದ ಹಲವು ರಾಜ್ಯಗಳಲ್ಲಿ ಸೈಕಲ್ ಜಾಥಾ ನಡೆಸಿದ್ದ. ಈತನ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಕೆಲ ವರ್ಷಗಳಿಂದ ರವಿ ನಾಯ್ಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಜೀವನ ಸಾಗಿಸಲು ಚಿಂದಿ ಆಯುವ ಕೆಲಸ ಸಹ ಮಾಡುತ್ತಿದ್ದ. ”ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತ, ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ. ಅದೇ ರೀತಿ ದೇವಸ್ಥಾನದೊಳಗೆ ಹೋಗಿ,…
ಒಕ್ಕಲಿಗ ಸಮುದಾಯದ ಉಪ ಪಂಗಡವಾಗಿರುವ ಹಳ್ಳಿಕಾರ್ ಒಕ್ಕಲಿಗರು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಮುದಾಯದ ಬೇಡಿಕೆಯಾಗಿರುವ ಹಿಂದುಳಿದ ವರ್ಗದ 3-ಎ ಪ್ರವರ್ಗದಿಂದ ಅತಿ ಹಿಂದುಳಿದ ವರ್ಗದ ಪ್ರವರ್ಗ -1 ಅಡಿ ಸೇರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. ಆರ್. ಎಂ. ಆರ್. ಫೌಂಡೇಷನ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಜಯನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಳ್ಳಿಕಾರ್ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ಸಣ್ಣ ಸಮುದಾಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ಹೊಂದಿದ್ದು, ಆ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ-1ರ ಅಡಿ ಸೇರಿಸಬೇಕೆಂಬ ಸಮುದಾಯದ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ರಂಗದಲ್ಲಿ ತುಂಬಾ ಹಿಂದುಳಿದಿರುವ ಸಮಾಜ ಮುಂದೆ ಬರಲು…
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜತೆ ಕ್ರೀಡಾ ಚಟುವಟಿಕೆಗಳು ಬಹು ಮುಖ್ಯವಾಗಿದೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ ಹೇಳಿದರು. ದೈಹಿಕ ಹಾಗೂ ಮಾನಸಿಕ ಸಮತೋಲನವನ್ನು ಕಾಪಾಡುವ ಜೊತೆ ಸದಾ ಸಕಾರಾತ್ಮಕವಾಗಿ ಮುನ್ನಡೆಯಲು ಇಂತಹ ಸ್ಪರ್ಧೆಗಳು ನೆರವಾಗಲಿದೆ ಎಂದು ಹೇಳಿದರು. ಆರೋಗ್ಯವಂತ ದೇಹ ಹಾಗೂ ಆರೋಗ್ಯವಂತ ಮನಸ್ಸುಳ್ಳ ಯುವ ಪೀಳಿಗೆಯಿಂದ ಸಧೃಡ ಸಮಾಜ ಕಟ್ಟಲು ಸಾಧ್ಯ. ಈ ದಿಶೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ದೈಹಿಕ ಚಟುವಟಿಕೆಗಳನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy