Subscribe to Updates
Get the latest creative news from FooBar about art, design and business.
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
- ತೋವಿನಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಸೈಟ್ ಹಂಚಿಕೆಯಲ್ಲಿ ಅಕ್ರಮ: ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
- ತುಮಕೂರು ಜಿಲ್ಲೆಯಲ್ಲಿ 19.39 ಲಕ್ಷ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ
- ‘ಮತ್ಸ್ಯವಾಹಿನಿ’ ಇ–ತ್ರಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾನ
- ಮಧ್ಯಾಹ್ನದ ಊಟದ ರುಚಿ ಹೆಚ್ಚಿಸಲು ಇಲ್ಲಿವೆ 6 ಸುಲಭ ಚಟ್ನಿ ರೆಸಿಪಿಗಳು!
Author: admin
ತುರುವೇಕೆರೆ: ಶಾಸಕ ಎಂ.ಟಿ.ಕೃಷ್ಣಪ್ಪನವರೇ ನಿಮ್ಮ ಅಧಿಕಾರಾವಧಿ 20 ವರ್ಷಗಳಲ್ಲಿ ತುರುವೇಕೆರೆ ತಾಲ್ಲೂಕಿನ ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲದಿರುವುದು ದುರಂತ. ಕೆಟ್ಟ ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸಿ ಎಂದು ಸಿ.ಎಸ್. ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಮೇಲನಹಳ್ಳಿ ಮಂಜಯ್ಯ ಆಕ್ರೋಶ ವ್ಯಕ್ತಪಡಿಸಿದರು. ಬೆಮೆಲ್ ಕಾಂತರಾಜು ಅವರ ವಿರುದ್ಧ ವರ್ಗಾವಣೆ ದಂಧೆ ಆಪಾದನೆಯ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ ಅವರು, ಕೃಷ್ಣಪ್ಪನವರ ಬೆಂಬಲಿಗರು ಬೆಮೆಲ್ ಕಾಂತರಾಜುರವರ ಬಗ್ಗೆ ಆರೋಪಗಳು ಹಾಗೂ ಹಗುರವಾಗಿ ಮಾತನಾಡಿದ್ದಾರೆ. ಇದು ಖಂಡನೀಯವಾಗಿದೆ. ಕಾಂತರಾಜುರವರು ಈ ತಾಲ್ಲೂಕಿನ ಶಾಸಕರಲ್ಲ, ತಾಲ್ಲೂಕು ಆಡಳಿತ ಕೃಷ್ಣಪ್ಪನವರ ಕೈನಲ್ಲಿ ಇದೆಯೇ ವಿನಃ ಕಾಂತರಾಜುರವರ ಬಳಿ ಇಲ್ಲ. ಅವರು ವರ್ಗಾವಣೆಯ ದಂಧೆಮಾಡುತ್ತಿಲ್ಲ, ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವವಂತ ಕಾರ್ಯಕರ್ತ. ನೀವು ಶಾಸಕರಾಗಿ ಇಂತಹ ಕೆಳಮಟ್ಟದ ಆಪಾದನೆಗಳನ್ನು ಮಾಡಬೇಡಿ ಎಂದರು. ತಾಲ್ಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ನಿಮ್ಮ ಬೆಂಬಲಿಗರು ಮೂರು ನಾಲ್ಕು ಬೋರ್ವೆಲ್ ಗಳನ್ನು ಓರ್ವ ವ್ಯಕ್ತಿಯೇ ಕೊರೆಸಿಕೊಂಡಿದ್ದಾರೆ. ಇದನ್ನೇ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ…
ತುಮಕೂರು: ಗ್ಯಾಸ್ ಕಟ್ಟರ್ ಬಳಸಿ ಜ್ಯುವೆಲರಿ ಅಂಗಡಿ ಕಳ್ಳತನಕ್ಕೆ ಯತ್ನಿಸಿರೋ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ನಲ್ಲಿ ನಡೆದಿದೆ. ಲಕ್ಷ್ಮೀ ಜ್ಯುವೆಲರಿ ಶಾಪ್ ನಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿರುವ ಚೋರರು ಜ್ಯುವೆಲರಿ ಅಂಗಡಿಯ ಬಾಗಿಲು ಮುರಿದಿದ್ದಾರೆ. ಸ್ಥಳೀಯರನ್ನು ಕಂಡು ಖದೀಮರು ಬೈಕ್ ಹಾಗೂ ಗ್ಯಾಸ್ ಕಟ್ಟರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಇದೇ ರೀತಿ ಕಳ್ಳತನ ನಡೆದಿತ್ತು. ಕೆ.ಜಿ ಟೆಂಪಲ್ ಭವಾನಿ ಜ್ಯುವೆಲರಿ ಶಾಪ್ ನಲ್ಲಿ ಕಳ್ಳತನ ನಡೆದಿತ್ತು. 6 ಕೆಜಿ ಬೆಳ್ಳಿ ಆಭರಣ ದೋಚಲಾಗಿತ್ತು. ಇದೀಗ ಮತ್ತೊಂದು ಕಳ್ಳತನ ಯತ್ನ ಪತ್ತೆಯಾಗಿದ್ದು ವ್ಯಾಪಾರಸ್ಥರು ಆತಂಕದಲ್ಲಿದ್ದಾರೆ.
ತುಮಕೂರು: ಮಾನಸಿಕ ಅಸ್ವಸ್ಥನಿಂದ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿರವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಅನಿಲ್ ದೊಣ್ಣೆಯಿಂದ ಹಲ್ಲೆ ನಡೆಸಿದ್ದ ಮಾನಸಿಕ ಅಸ್ವಸ್ಥನಾಗಿದ್ದು ಶಂಕರಪ್ಪ ಎಂಬುವರಿಗೆ ದೊಣ್ಣೆಯಿಂದ ಥಳಿಸಿದ್ದನು. ತೀವ್ರ ರಕ್ತ ತ್ರಾವದಿಂದ. ಶಂಕರಪ್ಪ ಮೃತಪಟ್ಟಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥ ಅನಿಲ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 6 ವರ್ಷದ ಹಿಂದೆ ತಂದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿಕೊಲೆ ಮಾಡಿದ್ದ ಅನಿಲ್, ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಬಳಿಕ ಮಾನಸಿಕ ಅಸ್ವಸ್ಥನಾಗಿ ಕೊರಟಗೆರೆಯಲ್ಲಿ ಅಲೆದಾಡುತ್ತಿದ್ದನು. ನಿನ್ನೆ ರಾತ್ರಿ ಶನಿಮಹಾತ್ಮ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಶಂಕರಪ್ಪ ಮೇಲೆ ಹಲ್ಲೆ ಮಾಡಿದ್ದನು. ಹಿಂದಿನಿಂದ ಬಂದು ದೊಣ್ಣೆಯಿಂದ ಶಂಕರಪ್ಪ ತಲೆಗೆ ಬಲವಾಗಿ ಹೊಡೆದಿದ್ದನು. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ಭಾನುವಾರ ಸಂಭವಿಸಿದ ಕಾರು ಮತ್ತು ಟ್ರಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ತುಮಕೂರಿನ ನಿವಾಸಿಗಳಾದ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರಿನ ಜಯನಗರದ ನಿವಾಸಿಗಳಾದ ಚನ್ನಪ್ಪ, ಮಲ್ಲ, ಮಣಿಕಂಠ, ಹೇಮಂತ್ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಇಂದು ಒಂದೇ ಕುಟುಂಬದ ಏಳು ಮಂದಿಯ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ವಿಷಯ ತಿಳಿದು ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಅವರು ಸೋಮವಾರ ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು. ಒಂದೇ ಕುಟುಂಬದ ಏಳು ಮಂದಿ ದಾರುಣ ಸಾವು ಕಂಡ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ರೋಧನೆ ಮುಗಿಲು ಮುಟ್ಟಿತ್ತು.
ತುರುವೇಕೆರೆ: ತಾಲ್ಲೂಕಿನ ಲಕ್ಕಸಂದ್ರ ಗ್ರಾಮದ ಶಿವಗಂಗಮ್ಮ ಎಂಬ ವಯೋವೃದ್ದೆ ತನ್ನ ಗಂಡನ ಮರಣದ ನಂತರ ತನ್ನ ಗಂಡನ ಪಿತ್ರಾರ್ಜಿತ ಜಮೀನನ್ನು ಖಾತೆ ಮಾಡಿಸಲು ತಹೀಶೀಲ್ದಾರ್ ಕಚೇರಿಗೆ ತೆರಳಿದಾಗ ತನ್ನ ಅರಿವಿಗೆ ಬಾರದೆ ತನ್ನ ಗಂಡ ಜಮೀನನ್ನು ಬೇರೊಬ್ಬರ ಹೆಸರಿಗೆ ತಾನು ತೀರಿ ಹೋಗುವ ಮುನ್ನ ಮರಣ ಸಮರ್ಥನಾ ಪತ್ರ ಮಾಡುವ ಮೂಲಕ ಜಮೀನನ್ನು ಚರಿತ ಎಂಬುವವರ ಹೆಸರಿಗೆ ಬರೆದದ್ದು ತಿಳಿದು ದಿಕ್ಕು ತೋಚದಂತಾಗಿ ಕೊನೆಗೆ ತನ್ನ ತಂಗಿ ಮಕ್ಕಳ ಸಹಾಯದಿಂದ ಕೋರ್ಟ್ ಮೆಟ್ಟಿಲೇರಿರುವ ಈಕೆ ಕೋರ್ಟ್ ಮೂಲಕ ಖಾತೆ ಬದಲಾವಣೆ ಮಾಡದಂತೆ ಸ್ಟೇ ಆರ್ಡರ್ ಪಡೆದಿದ್ದು ತಹಶಿಲ್ದಾರ್ ಎದುರು ಕೋರ್ಟ್ ದಾಖಲೆಯನ್ನಿಡಿದು ಖಾತೆ ಬದಲಾವಣೆ ಮಾಡದಂತೆ ಗಳಗಳನೆ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಿವಗಂಗಮ್ಮ, ಈ ಜಮೀನು ನಮಗೆ ಪಿತ್ರಾರ್ಜಿತ ಆಸ್ಥಿಯಾಗಿದ್ದು ನನ್ನ ಗಂಡನನ್ನು ಪುಸಲಾಯಿಸಿ ಮರಣ ಸಮರ್ಥನಾ ಪತ್ರ ಬರೆಹಿಸಿಕೊಂಡಿದ್ದಾರೆ. ಎಲ್ಲಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಹೊಡೆಯುವ ಹುನ್ನಾರ ಮಾಡಿದ್ದಾರೆ. ನನಗೆ ಇರುವ ಈ…
ಬೆಂಗಳೂರು: ಸುಧಾರಿತ ರೈತ ಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಕಾರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಸೂಚನೆ ನೀಡಿದ್ದಾರೆ ನಿಗಮದ ಅಧ್ಯಕ್ಷರೂ ಅಗಿರುವ ಸಚಿವರು ಅ17 ರಂದು ನಿಗಮದ ಕಚೇರಿಯಲ್ಲಿ 310ನೇ ನಿರ್ದೇಶಕ ಮಂಡಳಿ ಸಭೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು. ರೈತರ ಶ್ರೇಯೋಭಿವೃದ್ದಿಗೆ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಕೃಷಿ ಚಟುವಟಿಕೆಗೆ ಬಲ ತುಂಬುವಂತೆ ಸಚಿವರು ತಿಳಿಸಿದರು. ನಿಗಮದ ಯೋಜನೆಗಳನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಿರ್ದೇಶಕ ಮಂಡಳಿ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದೂ ಸಚಿವರು ಸಲಹೆ ನೀಡಿದರು. ಕೃಷಿಕರಿಗೆ ಉತ್ತಮ ಬೀಜ ಪೂರೈಕೆ ಮಾಡುವ ಜೊತೆಗೆ ಹೊಸ ಸ್ವರೂಪದ ನೆರವು ಯೋಜನೆಗಳನ್ನು ಅನುಷ್ಠಾನ ಗೊಳಿಸಿ ಅದರ ಅನುಕೂಲ ನೇರವಾಗಿ ಫಲಾನುಭವಿಗಳಿಗೆ ತಲುವಂತೆ ನಿಗಾ ವಹಿಸಿ ಎಂದು ಸಚಿವರು ನಿರ್ದೇಶನ ನೀಡಿದರು. ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್ ಪಾಟೀಲ್, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೇವರಾಜ್, ನಿರ್ದೇಶಕ ರುಗಳಾದ ಡಿ.ಎಲ್ ನಾಗರಾಜ್ .ಎನ್…
ಬೆಂಗಳೂರು: ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರಿಗಾಗಿ ಶಿರಾ ವಿಧಾನಸಭಾ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದರು . ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳಾದ ಸಂಜೀವ್ ರಾಜು, ಮೂಡಲ ಗಿರಿಯಪ್ಪ ಪ್ರಭಾಕರ್ ಸೇರಿದಂತೆ ಹಲವಾರು ಇಂಜಿನಿಯರ್ ಗಳು ಸಭೆಯಲ್ಲಿ ಭಾಗವಹಿಸಿದ್ದರು. EA Technologies ಮುಖ್ಯಸ್ಥ ರಂಗನಾಥ್ ಅವರು ಸಹ ಸಭೆಯಲ್ಲಿ ಭಾಗವಹಿಸಿದ್ದರು. ಎತ್ತಿನಹೊಳೆ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ಪಾಯಿಂಟ್ 514 ಟಿಎಂಸಿ ನೀರು ಒದಗಿಸಲಾಗಿದೆ. ಈ ನೀರನ್ನು ಕೆರೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರಿಗಾಗಿ ಬಳಸಲು ಯೋಜನೆ ರೂಪಿಸಬೇಕು ಹಾಗೂ ಇದಕ್ಕೆ ಅಗತ್ಯ ಹಣಕಾಸಿನ ನೆರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆಯಬೇಕು ಎಂದು ಟಿ.ಬಿ. ಜಯಚಂದ್ರ ಅವರು ಇದೇ ವೇಳೆ ತಿಳಿಸಿದರು. ಈ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. EA Technologies ಮುಖ್ಯಸ್ಥ ರಾದ…
ಬರ ಹಿನ್ನೆಲೆ; ಕಬ್ಬು ಇಳುವರಿ ಕಡಿಮೆ ಸಾಧ್ಯತೆ ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಂಭವ ರೈತರಿಗೆ ಒಂದು ರೂಪಾಯಿಯೂ ಬಾಕಿ ಇಲ್ಲ ಸದ್ಯಕ್ಕೆ ಕಾರ್ಖಾನೆಗಳ ಅಂತರ ನಿಗದಿ ಇಲ್ಲ ವಿದ್ಯುನ್ಮಾನ ಮಾಪನ ಯಂತ್ರ ಕಡ್ಡಾಯ ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯುವಿಕೆ ಶುರುವಾಗಲಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು. ನವೆಂಬರ್ ಒಂದರಿಂದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಬರದ ಹಿನ್ನೆಲೆಯಲ್ಲಿ ಒಂದು ವಾರ ಅಂದರೆ ಇದೇ ತಿಂಗಳ 25ರಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ ಎಂದು ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು ಕಂಗಲಾಗಿದ್ದಾರೆ. ಬಹಳಷ್ಟು ಕಡೆ ಕಬ್ಬು ಒಣಗುತ್ತಿದೆ. ಹಂಗಾಮಿಗೆ ಬೇಗನೆ ಕಬ್ಬು ಅರೆಯುವಿಕೆ ಶುರು ಮಾಡುವಂತೆ ಬೆಳಗಾರರು ಮನವಿ ಮಾಡಿದ್ದಾರೆ. ಹೀಗಾಗಿ ಒಂದು ವಾರಕ್ಕೆ ಮುನ್ನ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದರು. ಮುಖ್ಯಮಂತ್ರಿಗಳ…
ಬೆಂಗಳೂರು: ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ವತಿಯಿಂದ ಆಯೋಜಿಸಲಾದ ವಿಲಕ್ಷಣ ಮತ್ತು ಕಡಿಮೆ ಶೋಷಣೆಗೊಳಗಾದ ತೋಟಗಾರಿಕಾ ಬೆಳೆಗಳು – ಆದ್ಯತೆಗಳು ಮತ್ತು ಉದಯೋನ್ಮುಖ ಪ್ರವೃತ್ತಿಗಳ ಕುರಿತು ಮೂರು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ರಾಜ್ಯಪಾಲರು, ಐಸಿಎಆರ್-ಐಐಎಚ್ ಆರ್ ಬೆಂಗಳೂರು, ವಿವಿಧ ತೋಟಗಾರಿಕಾ ಬೆಳೆಗಳಲ್ಲಿ ಮೂಲಭೂತ ಮತ್ತು ಅನ್ವಯಿಕ ಸಂಶೋಧನೆ ನಡೆಸಲು ಹೆಸರುವಾಸಿಯಾದ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳು ರೈತರಲ್ಲಿ ಜನಪ್ರಿಯವಾಗುತ್ತಿವೆ ಮತ್ತು ತೋಟಗಾರಿಕಾ ಕ್ಷೇತ್ರಕ್ಕೆ ವಾರ್ಷಿಕವಾಗಿ ಮೂವತ್ತು ಸಾವಿರ ಕೋಟಿ ರೂ.ಗೂ ಹೆಚ್ಚು ಕೊಡುಗೆ ನೀಡುತ್ತಿರುವುದನ್ನು ತಿಳಿದು ಸಂತೋಷವಾಗಿದೆ ಎಂದು ಹೇಳಿದರು. ಈ ಸಂಸ್ಥೆಯಲ್ಲಿ 54 ತೋಟಗಾರಿಕಾ ಬೆಳೆಗಳ ಮೇಲೆ ಸಂಶೋಧನಾ ಕಾರ್ಯವನ್ನು ಮಾಡಲಾಗುತ್ತಿದೆ ಮತ್ತು ಇದುವರೆಗೆ 300ಕ್ಕೂ ಹೆಚ್ಚು ಪ್ರಭೇದಗಳು ಮತ್ತು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂಸ್ಥೆಯಲ್ಲಿ ವಿಲಕ್ಷಣ ಹಣ್ಣುಗಳು, ಡ್ರ್ಯಾಗನ್ ಹಣ್ಣು, ಆವಕಾಡೊ, ಮ್ಯಾಂಗೋಸ್ಟೀನ್, ರಂಬುಟಾನ್‌ಗಳ ಕುರಿತು ಸಂಶೋಧನಾ…
ಬೆಂಗಳೂರು: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಬೆಂಗಳೂರು ವಿಶ್ವವಿದ್ಯಾಲಯ ಗೌರವಾನ್ವಿತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೌಗೂ ಹಾಗೂ ವಿಜ್ಞಾನಿ ಮತ್ತು ಇಸ್ರೋ ಅಧ್ಯಕ್ಷರಾದ ಶ್ರೀ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮವಾದ ಕೆಲಸಗಳನ್ನು ಮಾಡಿ ದೇಶದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಭಾರತದ ಮಾಜಿ ಪ್ರಧಾನಿ ಶ್ರೀ ದೇವೇಗೌಡರನ್ನು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯೊಂದಿಗೆ ಗೌರವಿಸಿರುವುದು ಸಂತೋಷದ ವಿಷಯ. ವಿಜ್ಞಾನಿ ಮತ್ತು ಇಸ್ರೋ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸೋಮನಾಥ್ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಕಾರಣಾಂತರಗಳಿಂದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಸಮಾಜಕ್ಕಾಗಿ ಈ ಇಬ್ಬರು ಮಹನೀಯರ ಕೊಡುಗೆ ನಿರಂತರವಾಗಿರಲಿ…