Subscribe to Updates
Get the latest creative news from FooBar about art, design and business.
- ಮಧುಗಿರಿ: ದಲಿತರ ಸಮಾಧಿ ರಕ್ಷಣೆಗೆ ಆಗ್ರಹ
- ತುಮಕೂರು: ಕಾರ್ಮಿಕನ ಮೇಲೆ ಲಾರಿ ಹರಿದು ಸಾವು
- ಓಟಿಪಿ ಪಡೆದು ಮಹಿಳೆಯ ಖಾತೆಯಿಂದ 41 ಸಾವಿರ ಹಣ ದೋಚಿದ ಸೈಬರ್ ಕಳ್ಳರು!
- ರೈತರ ಸಮಸ್ಯೆಗಳ ಕುರಿತು ಸಿಎಂಗೆ ಮನವಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಿರ್ಧಾರ
- ಮಧುಗಿರಿ: ಮೇ ನಲ್ಲಿ 2 ತಿಂಗಳ ಪಡಿತರ ವಿತರಣೆ
- ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ: ಮೇ 19ರಂದು ತುಮಕೂರಿನಲ್ಲಿ ಸಾಧನಾ ಸಮಾವೇಶ
- ಕೆರೆಯ ಮಣ್ಣೆತ್ತಲು ರೈತರಿಗೆ ಅಡ್ಡಿಪಡಿಸುವಂತಿಲ್ಲ: ಜಿಲ್ಲಾಧಿಕಾರಿಗೆ ವಿ.ಸೋಮಣ್ಣ ಸೂಚನೆ
- ಗುರು ಶಿಷ್ಯರು: ಈ ದಿನದ ಕಥೆ
Author: admin
ಅಮೆರಿಕದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವೊಂದಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಸುಳ್ಳು ಹೇಳಿಕೊಂಡು, ಅವರ ಫೋಟೊ ಬಳಸಿ ವಂಚಿಸಿದ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸುಧಾ ಮೂರ್ತಿಯವರ ಎಕ್ಸಿಕ್ಯುಟಿವ್ ಅಸಿಸ್ಟೆಂಟ್ ಮಮತಾ ಸಂಜಯ್ ಎಂಬವರು ನೀಡಿದ ದೂರಿನನ್ವಯ ಲಾವಣ್ಯ ಹಾಗೂ ಶೃತಿ ಎಂಬಿಬ್ಬರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನ್ನೇಕೊಳಲು ಬಳಿಯ ವಸಂತನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ ಗಾಯಗೊಂಡಿದ್ದ ಸುಧಾಬಾಯಿ (32) ಅವರು ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ‘ಸೆ.17ರಂದು ಸಂಭವಿಸಿದ್ದ ಸ್ಫೋಟದಲ್ಲಿ ಸುಧಾಬಾಯಿ, ಅವರ ಪತಿ ಸೆಲ್ವಕುಮಾರ್ (54), ಮಕ್ಕಳಾದ ನಂದಿತಾ (15) ಹಾಗೂ ಮನೋಜ್ (12) ಗಾಯಗೊಂಡಿದ್ದರು. ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಸುಧಾಬಾಯಿ ಅಸುನೀಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ
ಬೆಂಗಳೂರು: ಪಾರ್ಟಿಯೊಂದರಲ್ಲಿ ಖಾಸಗಿಯಾಗಿ ಪಾಲ್ಗೊಂಡಿದ್ದ 19 ಪೊಲೀಸರು, ನೃತ್ಯ ಮಾಡಿ ಅಶಿಸ್ತಿನಿಂದ ವರ್ತಿಸಿದ್ದರೆಂದು ಹೇಳಲಾಗುತ್ತಿದ್ದು, ಈ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿದೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ 14 ಹಾಗೂ ಮಾಗಡಿ ರಸ್ತೆ ಸಂಚಾರ ಠಾಣೆಯ 5 ಪೊಲೀಸರು ಅಶಿಸ್ತು ತೋರಿರುವ ಆರೋಪವಿದೆ. ಈ ಬಗ್ಗೆ ವಿಚಾರಣೆ ಆರಂಭಿಸಲಾಗಿದ್ದು, ತಪ್ಪು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.
ಮುಸ್ಲಿಂ ಸಮುದಾಯದ ಕೈದಿಗಳಿಗೆ ಜಿಹಾದಿ ಬೋಧನೆ ಹಾಗೂ ಅನ್ಯಧರ್ಮೀಯರ ಮತಾಂತರಕ್ಕೆ ಯತ್ನ ಸೇರಿದಂತೆ ಅಕ್ರಮ ಚಟುವಟಿಕೆಗಳ ಆರೋಪ ಹಿನ್ನಲೆಯಲ್ಲಿ ಜೈಲಿನಲ್ಲಿರುವ ಶಂಕಿತ ಭಯೋತ್ಪಾದಕರ ಮೇಲಿನ ಕಣ್ಣಾವಲಿಗೆ ಅಧೀಕ್ಷಕರ (ಸೂಪರಿಂಟೆಂಡೆಂಟ್) ಸಾರಥ್ಯದಲ್ಲಿ ವಿಶೇಷ ತಂಡವನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯಸ್ಥರು ನೇಮಿಸಿದ್ದಾರೆ. ಈ ಮೊದಲು ಶಂಕಿತ ಉಗ್ರರ ಬ್ಯಾರಕ್ ಗಳ ಮೇಲುಸ್ತುವಾರಿಯನ್ನು ಜೈಲರುಗಳು ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಗಳು ನಿರ್ವಹಿಸುತ್ತಿದ್ದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತಿಯ ಪಿಯುಸಿ ವಾರ್ಷಿಕ ಮೂರನೇ ಪರೀಕ್ಷೇಯ ಮಾರ್ಗಸೂಚಿ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯಿಂದ ಪ್ರಕಟ. 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಕ್ರಮವಹಿಸಲು ಸೂಚನೆ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ವಾರ್ಷಿಕ ಹಾಜರಾತಿ ಶೇಕಡಾ 75 ರಷ್ಟು ಕಡ್ಡಾಯವಾಗಿ ಇರಬೇಕು. ಒಂದು ವೇಳೆ ಶೇ. 75ಕ್ಕಿಂತ ಕಡಿಮೆ ಹಾಜರಾತಿ ಹೊಂದಿದಲ್ಲಿ ಪರೀಕ್ಷೆ ಬರೆಯಲು ಅರ್ಹರಿರುವುದಿಲ್ಲ ಎಂದು ಮಂಡಲಿಯಿಂದ ತಿಳಿಸಿದ್ದಾರೆ.
ಕಾವೇರಿಗಾಗಿ ಪ.26ರಂದು (ಮಂಗಳವಾರ) ಕರೆ ನೀಡಿರುವ ‘ಬೆಂಗಳೂರು ಬಂದ್’ ಗೆ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿದೆ. ಹೋರಾಟಕ್ಕೆ ಕೈ ಜೋಡಿಸುವಂತೆ ಪಕ್ಷದ ಕಾರ್ಯಕರ್ತರಿಗೂ ಕರೆ ನೀಡಿದೆ. ಬಂದ್ ಗೆ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಜೊತೆ ರಾಜಕೀಯ ಪಕ್ಷದ ಬಲವೂ ಸಿಕ್ಕಿದಂತಾಗಿದೆ. ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಹಾಗು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಒಕ್ಕೂಟಗಳು, ಹೋಟೆಲ್ ಸಂಘ ಸಂಸ್ಥೆಗಳು, ಕೆಲವು ಖಾಸಗಿ ಶಾಲೆಗಳು, ಇನ್ನು ಹಲವಾರು ವಿಭಾಗದಿಂದ ವ್ಯಾಪಕ ಬೆಂಬಲ ಸೂಚಿಸಿದ್ದಾರೆ.
ಸೆಪ್ಟೆಂಬರ್ 28 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅರಮನೆ ಮೈದಾನದ ಆವರಣದಲ್ಲಿ ವಿಶ್ವ ಕಾಫಿ ಸಮ್ಮೇಳನ-2023 ನಡೆಯಲಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 5ನೇ ವಿಶ್ವ ಕಾಫಿ ಸಮ್ಮೇಳನ ಏರ್ಪಾಡಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಕರ್ನಾಟಕ ಸರ್ಕಾರ ಮತ್ತು ಕಾಫಿ ಉದ್ಯಮದ ಸಹಯೋಗದೊಂದಿಗೆ ಸಮ್ಮೇಳನ ನಡೆಯಲಿದೆ.
ಬೆಂಗಳೂರು: ಆಟೋ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು 3.36 ಲಕ್ಷ ರೂ ದಂಡ ವಿಧಿಸಿದ್ದಾರೆ. ಸೆ.14ರಿಂದ 23ರವರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 670 ಪ್ರಕರಣ ದಾಖಲಿಸಿಕೊಂಡು, 3.36 ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ. ಹೆಚ್ಚಿನ ದರ ಪಡೆಯುತ್ತಿದ್ದ ಆಟೋ ಚಾಲಕರಿಗೆ ಪೊಲೀಸರು ದಂಡದ ಬರೆ ಎಳೆದಿದ್ದಾರೆ. ಈಶಾನ್ಯ ಉಪ ವಿಭಾಗದಲ್ಲಿಹೆಚ್ಚು ಹಣ ಪಡೆದ ಆರೋಪದಡಿ ಒಟ್ಟು 141 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, 72,000 ರೂ ದಂಡ ಹಾಕಲಾಗಿದೆ.
ಕೊರಟಗೆರೆ: ಸಮಿಶ್ರ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ದೇವೇಗೌಡರು ತುಮಕೂರಿಗೆ ಬಂದ್ರೆ ಸ್ವಾಗತ. ಮಾಜಿ ಪ್ರಧಾನಿ ದೇವೇಗೌಡರನ್ನು ಗೆಲ್ಲಿಸಿದ್ರೆ ನಮ್ ತುಮಕೂರು ಕ್ಷೇತ್ರಕ್ಕೆ ಹೆಮ್ಮೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಮುಳುಗುವ ಹಡಗು ಎಂದರು. ಬಿಜೆಪಿ ಪಕ್ಷವು ದೇವೇಗೌಡರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟರೆ, ಬಹಳ ಸಂತೋಷ ಎಂದು ಇದೇ ವೇಳೆ ಹೇಳಿದರು. ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖ ಮಠಕ್ಕೆ ಸೌಹಾರ್ದಯುತ ಭೇಟಿ ನೀಡಿದ ಕೆ.ಎನ್. ರಾಜಣ್ಣರವರಿಗೆ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿ ಆಶೀರ್ವಾದಿಸಿದರು. ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ಬೆಂಗಳೂರು : ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ಬಿಜೆಪಿ ನಿರಂತರವಾಗಿ, ಚರಿತ್ರೆಯುದ್ದಕ್ಕೂ ಜನದ್ರೋಹ ಎಸಗುತ್ತಿರುವ ಬಿಜೆಪಿ ಕಾವೇರಿ ನೀರಿನ ವಿಚಾರದಲ್ಲಿ ಮೊಸಳೆ ಕಣ್ಣೀರು ಹರಿಸುತ್ತಿದೆ ಎಂದು ಎಐವೈಸಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಖಂಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರೊಬ್ಬರು ಇಂದು ಬಾಯಿಗೆ ಮಣ್ಣು ಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕಳೆದ 9 ವರ್ಷಗಳಿಂದ ಕೇಂದ್ರ ಸರ್ಕಾರ ಕನ್ನಡಿಗರ ಬಾಯಿಗೆ ಮಣ್ಣು ಹಾಕುವ, ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಾ ಬಂದಿರುವುದನ್ನು ಬಿಜೆಪಿ ಕಾರ್ಯಕರ್ತ ಸಾಂಕೇತಿಕವಾಗಿ ಆಚರಿಸಿದ್ದಾನೆ ಎಂದು ಬಿ.ವಿ.ಶ್ರೀನಿವಾಸ್ ಟೀಕಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವರಾದರು. ಆದರೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗದಂತೆ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತಂತೆ ದೆಹಲಿಯಲ್ಲಿ ನಡೆದ ಸರ್ವ ಪಕ್ಷದ ಸಂಸದರು ಮತ್ತು ಸದಸ್ಯರ ಸಭೆಗೆ ನಿರ್ಮಲಾ ಸೀತಾರಾಮನ್ ಅವರು ನೆಪಕ್ಕಾದರೂ ಭಾಗವಹಿಸಲಿಲ್ಲ. ರಾಜ್ಯಕ್ಕೆ ಬರಬೇಕಾದ GST ಪಾಲಿನಲ್ಲಿ, 15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆದಾಗ ರಾಜ್ಯವನ್ನು ಪ್ರತಿನಿಧಿಸುವ 25…