ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಂಬರುವ ದಿನಗಳಲ್ಲಿ ಪೌರತ್ವ ದೃಢೀಕರಿಸುವ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಭಾರತೀಯ ಮತದಾರರನ್ನು ಅಧಿಕೃತಗೊಳಿಸುವ ಈ ಪ್ರಕ್ರಿಯೆಯಲ್ಲಿ ಪ್ರತಿ ಮತದಾರರು ತಪ್ಪದೇ ಪಾಲ್ಗೊಳ್ಳಬೇಕು ಎಂದು ಉದ್ಯಮಿ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಫೂರ್ತಿ ಚಿದಾನಂದ್ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲಾಡಳಿತದಿಂದ ಬೂತ್ ಮಟ್ಟಕ್ಕೆ ಶಿಕ್ಷಕರು, ಅಧಿಕಾರಿಗಳನ್ನು ಎಸ್ ಐಆರ್ ಪ್ರಕ್ರಿಯೆಗೆ ನಿಯೋಜಿಸಿದ್ದು, ಆಧಾರ್ ನಷ್ಟೇ ಎಸ್ ಐಆರ್ ಮಹತ್ವ ಪಡೆದಿದೆ. ನಿಮ್ಮ ಮನೆ ಬಾಗಿಲಿಗೆ ಬಂದಂತಹ ಬಿಎಲ್ ಒಗಳಿಗೆ ನಿಮ್ಮ ಕುಟುಂಬದ ಪ್ರತಿ ಮತದಾರರ ದಾಖಲಾತಿ ಕೊಟ್ಟು ಎಸ್ ಐಆರ್ ಖಾತ್ರಿ ಪಡಿಸಬೇಕು. ಈ ಎಸ್ ಐಆರ್ ಮುಂದಿನ ದಿನಗಳಲ್ಲಿ ಪೌರತ್ವ ದೃಢೀಕರಿಸುವ ಮಹತ್ವದ ದಾಖಲೆಯಾಗಲಿದ್ದು, ಈಗ ಅದನ್ನು ನಿರ್ಲಕ್ಷಿಸದೆ ಪ್ರತಿ ಮತದಾರರು ಎಸ್ ಐಆರ್ ನಲ್ಲಿ ಭಾಗಿಯಾಗುವಂತೆ ಪುನರುಚ್ಚರಿಸಿ ಮನವಿ ಮಾಡಿದ್ದಾರೆ.
ಎಸ್ ಐಆರ್ ಅರ್ಜಿ ತುಂಬುವಲ್ಲಿ ಗೊಂದಲಗಳನ್ನು ಏರ್ಪಡಿಸಿಕೊಳ್ಳುವುದು ಬೇಡ. ಮತದಾರರು ಹಾಗೂ ಕುಟುಂಬಸ್ಥರು ಹಿಂದೆ ಭಾರತೀಯ ಮತದಾರರು ಆಗಿದ್ದರೆ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಿಕೊಳ್ಳುವ ಸಲುವಾಗಿ 2002ರ ಮತಪಟ್ಟಿಯ ವಿವರವನ್ನು ದಾಖಲಿಸಲು ಅರ್ಜಿಯಲ್ಲಿ ಕೋರಲಾಗಿದೆ. ಈ ಬಗ್ಗೆ ಯಾವುದೇ ಗೊಂದಲವಿದ್ದಲ್ಲಿ ಬಿಎಲ್ ಒಗಳ ಬಳಿ ವಿಚಾರಿಸಿ ಭರ್ತಿ ಮಾಡಿ. ಅಪೂರ್ಣ ಮಾಹಿತಿ, ಉದಾಸೀನದಿಂದ ಅರ್ಜಿ ಸಲ್ಲಿಸದೇ ಇರಬೇಡಿ ಎಂದು ವಿನಂತಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


